TikTok: ಅಶ್ಲೀಲ ವಿಡಿಯೋ; ಮತ್ತೊಮ್ಮೆ ಟಿಕ್​ಟಾಕ್​ ಬ್ಯಾನ್​ ಮಾಡಿದ ಪಾಕಿಸ್ತಾನದ ಸಿಂಧ್​ ಹೈ ಕೋರ್ಟ್​​

ಆ್ಯಪ್​ ಮೇಲಿನ ನಿಷೇಧವನ್ನು ತೆಗೆದುಹಾಕುವ ಮನವಿಯನ್ನು ಹೈಕೋರ್ಟ್ ಅಂಗೀಕರಿಸಿದ್ದು, ಜುಲೈ 8ರಂದು ಮುಂದಿನ ವಿಚಾರಣೆ ನಡೆಯಲಿದೆ. ಅಲ್ಲಿಯವರೆಗೆ ಪಾಕಿಸ್ತಾನದಲ್ಲಿ ಟಿಕ್​ಟಾಕ್ ಬ್ಯಾನ್ ಮಾಡುವಂತೆ ಸೂಚನೆ ನೀಡಲಾಗಿದೆ.

ಟಿಕ್​ ಟಾಕ್

ಟಿಕ್​ ಟಾಕ್

  • Share this:
    ಚೀನಾದ ಜನಮೆಚ್ಚುಗೆ ಪಡೆದಿದ್ದ ಟಿಕ್​ಟ್ಯಾಕ್​ ಆ್ಯಪ್​ ಮೇಲೆ ಎರಡನೇ ಬಾರಿ ನಿಷೇಧ ಹೇರಿ ಪಾಕಿಸ್ತಾನದ ಉನ್ನತ ನ್ಯಾಯಾಲಯ ಆದೇಶ ನೀಡಿದೆ. ಟಿಕ್​ಟಾಕ್​ ಆ್ಯಪ್​ ದೇಶದಲ್ಲಿ ಅನೈತಿಕತೆ ಮತ್ತು ಅಶ್ಲೀಲತೆ ಹರಡುತ್ತಿದೆ ಹರಡಲಾಗಿತ್ತಿದೆ ಎಂದು ಈ ಹಿಂದೆ ನಾಗರೀಕರು ನೀಡಿದ್ದ ದೂರಿನ ಹಿನ್ನಲೆ ಈ ಚೀನಾದ ಟಿಕ್​ಟಾಕ್​ ಆ್ಯಪ್​ ಅನ್ನು ನಿಷೇಧಿಸಲಾಗಿde. ಈ ಆದೇಶವನ್ನು ಪುನಃ ಪರಿಶೋಲಿಸಿ ಈ ಆ್ಯಪ್​ ಅನ್ನು ಸೇವೆಯನ್ನು ಪುನಃ ಸ್ಥಾಪಿಸಲು ಅವಕಾಶ ನೀಡುವಂತೆ ಸಲ್ಲಿಕೆಯಾದ ಅರ್ಜಿ ವಿಚಾರಣೆ ನಡೆಸಿದ ಸಿಂಧ್​ ಹೈ ಕೋರ್ಟ್​ ವಿಚಾರಣೆ ಮುಗಿಯುವವರೆಗೂ ದೇಶದಲ್ಲಿ ಟಿಕ್​ಟಾಕ್​ ಆ್ಯಪ್​​ ಅನ್ನು ನಿಷೇಧಿಸುವಂತೆ ಪಾಕಿಸ್ತಾನ ಟೆಲಿಕಮ್ಯೂನಿಕೆಷನ್​ ಅಥಾರಿಟಿಗೆ ತಿಳಿಸಿತು

    ಈ ಕುರಿತು ನ್ಯಾಯಾಲಯಕ್ಕೆ ತಿಳಿಸಿರುವ ಪಾಕಿಸ್ತಾನ ಟೆಲಿಕಮ್ಯೂನಿಕೆಷನ್​ ಅಥಾರಿಟಿ, ಈ ಅಪ್ಲಿಕೇಶನ್‌ನ್ನು ಈಗಾಗಲೇ ನಿರ್ಬಂಧಿಸಲಾಗಿದೆ. ಈ ಕುರಿತು ನ್ಯಾಯಾಲಯ ನೀಡಿರುವ ಆದೇಶವನ್ನು ಪರಿಶೀಲಿಸಲು ಮತ್ತು ಸೇವೆಗಳನ್ನು ಪುನಃಸ್ಥಾಪಿಸಲು ಅವಕಾಶ ನೀಡುವಂತೆ ನ್ಯಾಯಾಲಯವನ್ನು ಕೋರಿದೆ. ಟಿಕ್ ಟಾಕ್ ಅಶ್ಲೀಲ ವಿಡಿಯೋಗಳನ್ನು ನಿಯಂತ್ರಣ ಮಾಡಿ. ತೃಪ್ತಿದಾಯಕ ಕಾರ್ಯವಿಧಾನವನ್ನು ಅಳವಡಿಸಿಕೊಂಡರೆ ತಮ್ಮ ನಿರ್ಧಾರವನ್ನು ಪರಿಶೀಲಿಸುವುದಾಗಿ  ಪಾಕ್​ ಟೆಲಿಕಾಂ ಅಥಾರಿಟಿ ತಿಳಿಸಿದೆ.

    ಇದನ್ನು ಓದಿ: ಮೋದಿ ಸಂಪುಟದಲ್ಲಿ ಸಚಿವ ಸ್ಥಾನಪಡೆಯಲಿದ್ದಾರಾ ಸಂಸದ ಪ್ರತಾಪ್​ ಸಿಂಹ?

    ಆ್ಯಪ್​ ಮೇಲಿನ ನಿಷೇಧವನ್ನು ತೆಗೆದುಹಾಕುವ ಮನವಿಯನ್ನು ಹೈಕೋರ್ಟ್ ಅಂಗೀಕರಿಸಿದ್ದು, ಜುಲೈ 8ರಂದು ಮುಂದಿನ ವಿಚಾರಣೆ ನಡೆಯಲಿದ್ದು, ಅಲ್ಲಿಯವರೆಗೆ ಪಾಕಿಸ್ತಾನದಲ್ಲಿ ಟಿಕ್​ಟಾಕ್ ಬ್ಯಾನ್ ಮಾಡುವಂತೆ ಸೂಚನೆ ನೀಡಲಾಗಿದೆ.

    ಪಾಕಿಸ್ತಾನದಲ್ಲಿ ಎರಡು ಬಾರಿ ಈ ಟಿಕ್​​ಟ್ಯಾಕ್​ ಆ್ಯಪ್​ ಮೇಲೆ ನಿಷೇಧವನ್ನು ಹೇರಲಾಗಿತ್ತು. ಈ ವರ್ಷದ ಮಾರ್ಚ್​ನಲ್ಲಿ ಪೇಶಾವರ ಹೈ ಕೋರ್ಟ್​ ಈ ಆ್ಯಪ್​ನ್ನು ನಿಷೇಧಿಸುವ ಕುರಿತು ಆದೇಶಿಸಿತ್ತು. ಹಿಂದಿನ ವರ್ಷದ ಅಕ್ಟೋಬರ್​ನಲ್ಲಿಯೂ ಸುಮಾರು 10 ದಿನ ಟಿಕ್ ಟಾಕ್ ಬ್ಯಾನ್ ಆಗಿತ್ತು. ಈ ಆ್ಯಪ್​ನಲ್ಲಿ ಸಲಿಂಗ ಕಾಮದ ವಿಷಯ ಪ್ರಸಾರ ವಾಗುತ್ತಿರುವ ಹಿನ್ನಲೆ ಅನೇಕ ವಿರೋಧಗಳು ಕೂಡ ವ್ಯಕ್ತವಾಗಿದ್ದವು. ಅಲ್ಲದೇ ಪಾಶ್ಚತ್ಯ ಉಡುಪುಗಳು ಪೋಸ್ಟ್​ಗಳಿಗೂ ಇದರಲ್ಲಿ ವಿರೋಧ ವ್ಯಕ್ತವಾಗಿತ್ತು.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
    Published by:Seema R
    First published: