• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • Pakistan: ದಾವೂದ್ ಇಬ್ರಾಹಿಂನನ್ನು ಭಾರತಕ್ಕೆ ಹಸ್ತಾಂತರಿಸುತ್ತಾರಾ? ಬಿಲಾವಲ್ ಉತ್ತರದಿಂದ ಪಾಕ್​ ಬಣ್ಣ ಬಯಲು!

Pakistan: ದಾವೂದ್ ಇಬ್ರಾಹಿಂನನ್ನು ಭಾರತಕ್ಕೆ ಹಸ್ತಾಂತರಿಸುತ್ತಾರಾ? ಬಿಲಾವಲ್ ಉತ್ತರದಿಂದ ಪಾಕ್​ ಬಣ್ಣ ಬಯಲು!

ಬಿಲಾವಲ್ ಭುಟ್ಟೋ

ಬಿಲಾವಲ್ ಭುಟ್ಟೋ

ಭಾರತಕ್ಕೆ ಬಂದಿದ್ದ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಅವರಿಗೆ ಹಲವು ಪ್ರಶ್ನೆಗಳನ್ನು ಕೇಳಲಾಯಿತು. ಆದರೆ ಇದಕ್ಕವರು ಉತ್ತರಿಸುವಾಗ ಅಸಹನೀಯರಾಗಿದ್ದರು. ದಾವೂದ್ ಇಬ್ರಾಹಿಂನನ್ನು ಪಾಕಿಸ್ತಾನ ಭಾರತಕ್ಕೆ ಹಸ್ತಾಂತರಿಸುತ್ತದೆಯೇ ಎಂದು ಕೇಳಿದಾಗ? ಬಿಲಾವಲ್ ನೀಡಿದ ಉತ್ತರ ಪಾಕಿಸ್ತಾನದ ಅಸಲಿಯತ್ತು ಬಯಲು ಮಾಡಿದೆ.

ಮುಂದೆ ಓದಿ ...
 • Share this:

ನವದೆಹಲಿ(ಮೇ.06): ಶಾಂಘೈ ಸಹಕಾರ ಸಂಘಟನೆ (ಎಸ್‌ಸಿಒ) ಸಭೆಗೆಂದು ಭಾರತಕ್ಕೆ ಬಂದಿದ್ದ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಶುಕ್ರವಾರ ಕೇಳಿದ ಪ್ರಶ್ನೆಯೊಂದರಿಂದ ತಬ್ಬಿಬ್ಬಾಗಿದ್ದಾರೆ. ಅಲ್ಲದೇ ಅವರ ಉತ್ತರದಿಂದ ಪಾಕಿಸ್ತಾನದ ಅಸಲಿ ಮುಖ ಎಲ್ಲರ ಮುಂದೆ ಅನಾವರಣಗೊಂಡಿದೆ. ಬಿಲಾವಲ್ ಅನೇಕ ಪ್ರಶ್ನೆಗಳನ್ನು ಎದುರಿಸಬೇಕಾಯಿತು, ಆದರೆ ದಾವೂದ್ ಬಗ್ಗೆ ಕೇಳಿದಾಗ, ಬಿಲಾವಲ್ ಅಸಮಾಧಾನಗೊಂಡಿದ್ದಾರೆ. ಅವರ ವರ್ತನೆಯಯಲ್ಲೂ ಏಕಾಏಕಿ ಭಾರೀ ಬದಲಾವಣೆಯಾಗಿತ್ತು. ಸಭೆಯಲ್ಲಿ ಭಯೋತ್ಪಾದನೆಯನ್ನು ಬೆಂಬಲಿಸುವ ಪಾಕಿಸ್ತಾನದ ನೀತಿ, ಗಡಿಯಾಚೆಗಿನ ಭಯೋತ್ಪಾದನೆಯ ಪ್ರಶ್ನೆಗಳಿಗೆ ಉತ್ತರಿಸುವಷ್ಟರಲ್ಲಿ ಬಿಲಾವಲ್ ಬೆವರಿಳಿದಿತ್ತು.


ತಾನು ಮತ್ತು ತನ್ನ ದೇಶ ಭಯೋತ್ಪಾದನೆಯಿಂದ ನರಳುತ್ತಿದೆ ಎಂದು ಬಿಲಾವಲ್ ಭುಟ್ಟೋ ಹೇಳಿದ್ದಾರೆ. ಭಯೋತ್ಪಾದನೆ ದೊಡ್ಡ ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ. ಆದರೆ ಪಾಕಿಸ್ತಾನವು ಭಯೋತ್ಪಾದನೆಯನ್ನು ಬೆಂಬಲಿಸುತ್ತದೆಯೇ ಎಂಬ ಪ್ರಶ್ನೆಗೆ ಅವರಿಂದ ಉತ್ತರಿಸಲು ಸಾಧ್ಯವಾಗಲಿಲ್ಲ. ಆದರೆ ಪಾಕಿಸ್ತಾನ ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.


ಇದಕ್ಕೆ ಮರು ಪ್ರಶ್ನೆಯಾಗಿ, ಕರಾಚಿಯಲ್ಲಿ ಹಲವು ವರ್ಷಗಳಿಂದ ಫ್ರೀಜ್ ಆಗಿದ್ದ ಮೋಸ್ಟ್ ವಾಂಟೆಡ್ ಡಾನ್ ದಾವೂದ್ ಇಬ್ರಾಹಿಂ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲವೇ? ಮುಂಬೈ ಭಯೋತ್ಪಾದನಾ ದಾಳಿಯ ಈ ಅಪರಾಧಿಯನ್ನು ಪಾಕಿಸ್ತಾನ ಇನ್ನೂ ಭಾರತಕ್ಕೆ ಹಸ್ತಾಂತರಿಸಿಲ್ಲ, ಹಾಗಾದರೆ ಪಾಕಿಸ್ತಾನದ ಉದ್ದೇಶಗಳು ಸ್ಪಷ್ಟವಾಗಿವೆ ಎಂದು ನಾವು ಹೇಗೆ ನಂಬುವುದು? ಎಂದು ಕೇಳಲಾಗಿದೆ. ಈ ಪ್ರಶ್ನೆಗಳಿಂದ ಬಿಲಾವಲ್ ತಬ್ಬಿಬ್ಬಾಗಿದ್ದಾರೆ. ಅಲ್ಲದೇ ಅವರು ಕೊಟ್ಟ ಉತ್ತರ ಪಾಕಿಸ್ತಾನದ ಉದ್ದೇಶಗಳ ಮೇಲೆ ಹಲವು ಅನುಮಾನ ಹುಟ್ಟು ಹಾಕಿದೆ.


ಭಾರತದ ನೀತಿ ಮತ್ತು ಉಭಯ ದೇಶಗಳ ನಡುವಿನ ಸಂವಹನದ ಕೊರತೆಗೆ ಜವಾಬ್ದಾರರು

top videos


  ಭಾರತದ ಕಾಶ್ಮೀರ ನೀತಿ ಮತ್ತು ಭಾರತ ಮತ್ತು ಪಾಕಿಸ್ತಾನ ನಡುವಿನ ಮಾತುಕತೆಯ ಕೊರತೆಯ ಬಗ್ಗೆ ಗಮನ ಕೊಡಬೇಕೆಂದು ಬಿಲಾವಲ್ ಹೇಳಿದರು. ಭಾರತ ಏಕಪಕ್ಷೀಯವಾಗಿ ಅಂತಾರಾಷ್ಟ್ರೀಯ ಕಾನೂನು, ವಿಶ್ವಸಂಸ್ಥೆ ನಿರ್ಣಯಗಳನ್ನು ಉಲ್ಲಂಘಿಸಿದೆ. ಉಭಯ ದೇಶಗಳ ನಡುವೆ ಸಂವಹನದ ಕೊರತೆಯೇ 5 ಆಗಸ್ಟ್ 2019 ರ ಕ್ರಮದ ಫಲಿತಾಂಶವಾಗಿದೆ ಎಂದು ಅವರು ಹೇಳಿದರು. ಮೋಸ್ಟ್ ವಾಂಟೆಡ್ ಡಾನ್ ದಾವೂದ್ ಇಬ್ರಾಹಿಂನನ್ನು ಭಾರತಕ್ಕೆ ಹಸ್ತಾಂತರಿಸುವುದರಿಂದ ಉಭಯ ದೇಶಗಳ ನಡುವಿನ ಉದ್ವಿಗ್ನತೆ ಕಡಿಮೆಯಾಗುತ್ತದೆ ಎಂಬ ವಾದವನ್ನು ಬಿಲಾವಲ್ ನಿರಾಕರಿಸಿದ್ದಾರೆ.

  First published: