• Home
  • »
  • News
  • »
  • national-international
  • »
  • Terror Attack: ಉಗ್ರ ಸಂಘಟನೆಗಳು ಬಾಲಾಪರಾಧಿಗಳನ್ನೇ ಹೆಚ್ಚು ಬಳಸಿಕೊಳ್ಳುತ್ತಿರುವುದೇಕೆ?

Terror Attack: ಉಗ್ರ ಸಂಘಟನೆಗಳು ಬಾಲಾಪರಾಧಿಗಳನ್ನೇ ಹೆಚ್ಚು ಬಳಸಿಕೊಳ್ಳುತ್ತಿರುವುದೇಕೆ?

ಐಸಿಸ್ ಉಗ್ರರು (ಇಂಟರ್‌ನೆಟ್ ಸಂಗ್ರಹ ಚಿತ್ರ)

ಐಸಿಸ್ ಉಗ್ರರು (ಇಂಟರ್‌ನೆಟ್ ಸಂಗ್ರಹ ಚಿತ್ರ)

ಇನ್ನು ಅಪ್ರಾಪ್ತರನ್ನೇ ಸಂಘಟನೆಗಳು ಏಕೆ ನೇಮಿಸಿಕೊಳ್ಳುತ್ತಿವೆ ಎಂಬುದನ್ನು ನೋಡೋದಾದ್ರೆ ಅಪ್ರಾಪ್ತರಿಗೆ ಶಿಕ್ಷೆಯ ಪ್ರಮಾಣದ ತೀವ್ರತೆ ಕಡಿಮೆ ಇರುತ್ತದೆ.

  • Share this:

ದೆಹಲಿ: ಭಯೋತ್ಪಾದಕ ದಾಳಿಗಳು (Terror Attack) ಭಾರತಕ್ಕೆ ಹೊಸದೇನಲ್ಲ. ಭಾರತದ ಶಕ್ತಿಯನ್ನು ಧೂಳೀಪಟ ಮಾಡಬೇಕು ಎಂಬುವ ಇಂಗಿತದಲ್ಲಿ ಭಯೋತ್ಪಾದಕ ಸಂಘಟನೆಗಳು ಎಷ್ಟೇ ಪ್ರಬಲವಾಗಿ ಭಾರತವನ್ನು (India)  ಗುರಿಯಾಗಿಸಿಕೊಂಡಿದ್ದರೂ ಅದನ್ನು ದೇಶದ ಕಾರ್ಯತಂತ್ರ ಕ್ಷಣಮಾತ್ರದಲ್ಲಿ ನಾಶಮಾಡಿಬಿಡುತ್ತದೆ ಹಾಗಾಗಿಯೇ ಉಗ್ರರು ಭಾರತ ಎಂಬ ಹೆಸರು ಕೇಳಿದೊಡನೆ ನಡುಗುತ್ತಾರೆ. ಇತ್ತೀಚೆಗೆ ಗುಪ್ತಚರ ಸಂಸ್ಥೆಗಳು ನೀಡಿರುವ ಮಾಹಿತಿಯ ಪ್ರಕಾರ ಇನ್ನಷ್ಟು ಉಗ್ರ ಸಂಘಟನೆಗಳು (Terrorist Organizations) ಭಾರತದ ಮೇಲೆ ದಾಳಿ ನಡೆಸುವ ಸಂಚು ರೂಪಿಸುತ್ತಿವೆ ಎಂದಾಗಿದೆ.


ಇಸ್ಲಾಮಿಕ್ ಸ್ಟೇಟ್, ಖಲಿಸ್ತಾನ್ ಭಯೋತ್ಪಾದಕ ಸಂಘಟನೆಗಳು ಮತ್ತು ದಿ ರೆಸಿಸ್ಟೆನ್ಸ್ ಫ್ರಂಟ್ (TRF) ನಂತಹ ಉಗ್ರ ಸಂಘಟನೆಗಳು ಅಪ್ರಾಪ್ತ ಬಾಲಾಪರಾಧಿಗಳನ್ನು ನೇಮಿಸಿಕೊಳ್ಳುತ್ತಿವೆ. ಭಾರತದ ಮೇಲೆ ದಾಳಿ ನಡೆಸುವ ಹೊಸ ಯೋಜನೆಗಳನ್ನು ರೂಪಿಸುತ್ತಿವೆ ಎಂದು ಗುಪ್ತಚರ ಸಂಸ್ಥೆ ವರದಿ ಮಾಡಿದೆ.


ಅಪ್ರಾಪ್ತರನ್ನೇ ಆರಿಸಿಕೊಳ್ಳುತ್ತಿರುವುದೇಕೆ?
ಇನ್ನು ಅಪ್ರಾಪ್ತರನ್ನೇ ಸಂಘಟನೆಗಳು ಏಕೆ ನೇಮಿಸಿಕೊಳ್ಳುತ್ತಿವೆ ಎಂಬುದನ್ನು ನೋಡೋದಾದ್ರೆ ಅಪ್ರಾಪ್ತರಿಗೆ ಶಿಕ್ಷೆಯ ಪ್ರಮಾಣದ ತೀವ್ರತೆ ಕಡಿಮೆ ಇರುತ್ತದೆ. ಗುಪ್ತಚರ ಏಜೆನ್ಸಿಗಳಿಂದ ತಪ್ಪಿಸಿಕೊಳ್ಳಲು ಅಪ್ರಾಪ್ತರ ನೇಮಕಾತಿ ಸುಲಭ ವಿಧಾನವಾಗಿದೆ ಎಂಬುದು ಇನ್ನೊಂದು ಕಾರಣವಾಗಿದೆ.


ಅಪ್ರಾಪ್ತರನ್ನು ಇಸ್ಲಾಮಿಕ್ ಪರವಾದ ಟೆಲಿಗ್ರಾಮ್ ಚಾನಲ್‌ನಲ್ಲಿ ನಿಯೋಜಿಸಿ, ಇವರು ವಿಶ್ವದಾದ್ಯಂತವಿರುವ IS ಕಾರ್ಯಕರ್ತರೊಂದಿಗೆ ಸಂಪರ್ಕ ಸಾಧಿಸುತ್ತಿದ್ದರು ಹಾಗೂ ತಮ್ಮ ಕೆಲವೊಂದು ಯೋಜನೆಗಳ ಮೂಲಕ ಸಾಮೂಹಿಕ ದಾಳಿಯನ್ನು ಉದ್ದೇಶಿಸಿದ್ದರು ಎಂದು ತಿಳಿದು ಬಂದಿದೆ.


ಅಪ್ರಾಪ್ತ ಬಾಲಾಪರಾಧಿಗಳ ಆಯ್ಕೆ ಮಾಡೋದು ಏಕೆ?
ಪಂಜಾಬ್‌ನಲ್ಲಿ ನಡೆದ ಭಯೋತ್ಪಾದನಾ ದಾಳಿಯ ತನಿಖೆಯ ಪ್ರಕಾರ, ಸಾಮಾಜಿಕ ಮಾಧ್ಯಮದಲ್ಲಿ ಅಪ್ರಾಪ್ತ ವಯಸ್ಸಿನ ಹುಡುಗರನ್ನು ಆರಿಸುತ್ತಾರೆ ಅಂತೆಯೇ ಹಣ ಮತ್ತು ಖ್ಯಾತಿಯ ಹೆಸರಿನಲ್ಲಿ ಇವರನ್ನು ಪ್ರೇರೇಪಿಸಲಾಗುತ್ತದೆ. ತಮ್ಮ ಯೋಜನೆಗಳಿಗೆ ಸಣ್ಣ ಬಾಲಕರನ್ನೇ ಉಗ್ರ ಸಂಘಟನೆಗಳು ಆಯ್ಕೆಮಾಡಿಕೊಳ್ಳುತ್ತಿದ್ದು ಶಿಕ್ಷೆಯ ಪ್ರಮಾಣ ಕಡಿಮೆ ಇರುತ್ತದೆ ಎಂಬುದು ಇವರ ಲೆಕ್ಕಾಚಾರವಾಗಿರುತ್ತದೆ.


ಇಸ್ಲಾಂ ಹೆಸರಿನಲ್ಲಿ ಹಣದ ಆಮಿಷ
ಸಣ್ಣ ಹುಡುಗರನ್ನು ತಮ್ಮ ಯೋಜನೆಗಳಲ್ಲಿ ಬಳಸಿಕೊಳ್ಳುವುದು ಜಮ್ಮು ಹಾಗೂ ಕಾಶ್ಮೀರದಲ್ಲಿ ಕೂಡ ನಡೆಯುತ್ತಿದೆ ಎಂಬುದು ವರದಿಯಾಗಿದೆ. ಬಾಲಾಪರಾಧಿಗಳು ಆನ್‌ಲೈನ್‌ನಲ್ಲಿ ಸುಲಭವಾಗಿ ದೊರೆಯುತ್ತಾರೆ. ಇಸ್ಲಾಂ ಹೆಸರಿನಲ್ಲಿ ಅಂತೆಯೇ ಹಣದ ಆಮಿಷವೊಡ್ಡಿ ಈ ಹುಡುಗರನ್ನು ಸಂಘಟನೆಗಳು ತಮ್ಮ ಕೃತ್ಯಗಳಿಗೆ ಸುಲಭವಾಗಿ ಬಳಸಿಕೊಳ್ಳುತ್ತಾರೆ ಎಂದು ಗುಪ್ತಚರ ಸಂಸ್ಥೆಗಳು ವರದಿ ಮಾಡಿವೆ.


ಬಾಲಾಪರಾಧಿಗಳೊಂದಿಗೆ ನಿಕಟರಾಗುವ ಉಗ್ರರು
ಪಾಕ್ ಮೂಲದ ಭಯೋತ್ಪಾದಕರು ತಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಬಾಲಾಪರಾಧಿಗಳು ಹಾಗೂ ಅಪ್ರಾಪ್ತರನ್ನೇ ಗುರಿಯಾಗಿಸಿಕೊಂಡಿದ್ದಾರೆ. ಬಾಲಾಪರಾಧಿಗಳನ್ನು ಆನ್‌ಲೈನ್‌ನಲ್ಲಿ ಗುರುತಿಸಿ ಅವರೊಂದಿಗೆ ಬಾಂಧವ್ಯ ಹಾಗೂ ವಿಶ್ವಾಸವನ್ನು ನಿರ್ಮಿಸಿಕೊಳ್ಳುತ್ತಾರೆ ಎಂಬುದು ಗುಪ್ತಚರ ಇಲಾಖೆ ಬಯಲು ಮಾಡಿರುವ ಸುದ್ದಿಯಾಗಿದೆ.


ಇದನ್ನೂ ಓದಿ: Global Terrorist: ಲಷ್ಕರ್-ಎ-ತೊಯ್ಬಾದ ಅಬ್ದುಲ್ ರೆಹಮಾನ್ ಮಕ್ಕಿ ಇನ್ಮೇಲೆ ಜಾಗತಿಕ ಭಯೋತ್ಪಾದಕ


ಕೆಲವೊಮ್ಮೆ ಬಾಲಾಪರಾಧಿಗಳನ್ನು ನೇರವಾಗಿ ವಾಟ್ಸಪ್​ನಲ್ಲಿ ಸಂಪರ್ಕಿಸಿ ಅವರೊಂದಿಗೆ ಸಂವಹನ ನಡೆಸುತ್ತಾರೆ. ಇನ್ನು ಕಾಶ್ಮೀರಿ ಕಣಿವೆಯ ಕೆಲವು ಬಾಲಾಪರಾಧಿಗಳಿಗೆ ಮಾದಕ ದ್ರವ್ಯಗಳನ್ನು ಈ ಉಗ್ರ ಸಂಘಟನೆಗಳು ಒದಗಿಸುತ್ತಿವೆ. ಈ ಮೂಲಕ ಅವರ ವಿಶ್ವಾಸವನ್ನು ಪಡೆದುಕೊಳ್ಳುತ್ತಿವೆ ಎಂಬುದಾಗಿ ವರದಿಯಾಗಿದೆ. ಅಪ್ರಾಪ್ತ ಬಾಲಾಪರಾಧಿಗಳನ್ನು ಬಳಸಿಕೊಂಡಿರುವ ಕೆಲವೊಂದು ಘಟನೆಗಳು ಹೀಗಿವೆ ನೋಡಿ
ಪಂಜಾಬ್ ಪೊಲೀಸ್ ಹೆಡ್‌ಕ್ವಾಟರ್ಸ್ ಮೊಹಾಲಿಯಲ್ಲಿ ನಡೆದ ಆರ್‌ಪಿಜಿ ದಾಳಿ
ದಾಳಿಯಲ್ಲಿ ಪಾಕಿಸ್ತಾನ ಮೂಲದ ದರೋಡೆಕೋರ ಹರ್ವಿಂದರ್ ಸಿಂಗ್ ರಿಂಡಾ ಮತ್ತು ಕೆನಡಾ ಮೂಲದ ದರೋಡೆಕೋರ ಲಖ್ಬೀರ್ ಸಿಂಗ್ ಬಾಲಾಪರಾಧಿಯನ್ನು ಬಳಸಿದ್ದು ಇವರುಗಳ ಆದೇಶದಂತೆ ಬಾಲಾಪರಾಧಿ ನಡೆದುಕೊಂಡಿದ್ದನು.


ಇದನ್ನೂ ಓದಿ: Republic Day 2023: ಈಜಿಪ್ಟ್ ಅಧ್ಯಕ್ಷ ಈ ವರ್ಷ ಗಣರಾಜ್ಯೋತ್ಸವದ ಅತಿಥಿ, 3 ಥೀಮ್​ಗಳಲ್ಲಿ ಕಂಗೊಳಿಸಲಿದೆ ಮೆರವಣಿಗೆ


ಡಿಎಸ್‌ಎಸ್ ಅನುಯಾಯಿ ಪ್ರದೀಪ್ ಕಟಾರಿಯಾ ಕೊಲೆ
ಶ್ರೀ ಗುರು ಗ್ರಂಥ ಸಾಹಿಬ್ ಹತ್ಯೆ ಪ್ರಕರಣದ ಆರೋಪಿ ಪರ್ದೀಪ್ ಕಟಾರಿಯಾ ಅವರನ್ನು 2022 ರ ನವೆಂಬರ್ 10 ರಂದು ಇಬ್ಬರು ಬಾಲಾಪರಾಧಿಗಳು ಸೇರಿದಂತೆ ಆರು ಶಸ್ತ್ರಸಜ್ಜಿತ ದಾಳಿಕೋರರ ತಂಡವು ಹತ್ಯೆಗೈದಿತು.


ತರ್ನ್ ತರನ್ ಜಿಲ್ಲೆಯ ಪಿಎಸ್ ಸರ್ಹಾಲಿ ಬಳಿಯ ಸಂಜ್ ಕೇಂದ್ರದಲ್ಲಿ ಆರ್‌ಪಿಜಿ ದಾಳಿ
ಡಿಸೆಂಬರ್ 10 ರಂದು ಇಬ್ಬರು ಬಾಲಾಪರಾಧಿಗಳು ದಾಳಿ ನಡೆಸಿರುವುದು ತನಿಖೆಯಿಂದ ತಿಳಿದು ಬಂದಿದೆ. ಹದಿಹರೆಯದ ಉಗ್ರನೊಬ್ಬ ತನ್ನ ನಾಲ್ವರು ಅಪ್ರಾಪ್ತ ಸ್ನೇಹಿತರ ಸಹಾಯದಿಂದ ಎಸ್‌ಐ, ಜೆಕೆಪಿ, ಪಾಂಪೋರ್ ಅವರನ್ನು ಹತ್ಯೆಗೈದಿರುವುದು.

Published by:ಗುರುಗಣೇಶ ಡಬ್ಗುಳಿ
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು