ಭಾರತದಲ್ಲಿ ಬ್ಯಾನ್ ಆಗಿರುವ ಚೀನಾದ ಟಿಕ್ಟಾಕ್ ಆ್ಯಪ್ ಈಗ ಪಾಕಿಸ್ತಾನದಲ್ಲಿ 4ನೇ ಬಾರಿಗೆ ನಿಷೇಧವನ್ನು ಎದುರಿಸುತ್ತಿದೆ. ಅಶ್ಲೀಕ ವಿಷಯಗಳು ಇರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಪಾಕಿಸ್ತಾನ ಸರ್ಕಾರ ಸಾಮಾಜಿಕ ಜಾಲತಾಣ ಆ್ಯಪ್ಗೆ ನಿಷೇಧವೇರಿದೆ. 2020 ಅಕ್ಟೋಬರ್ನಲ್ಲಿ ಪಾಕಿಸ್ತಾನ ಮೊದಲ ಬಾರಿಗೆ ಟಿಕ್‌ಟಾಕ್‌ನ ಬ್ಯಾನ್ ಮಾಡಿತ್ತು. ತದನಂತರ ನಿಯಮಗಳನ್ನು ಸುಧಾರಿಸಿಕೊಳ್ಳುವ ಭರವಸೆ ನೀಡಿ ಪಾಕ್ನಿಂದ ಟಿಕ್ಟಾಕ್ ಅನುಮತಿ ಪಡೆದುಕೊಂಡಿತ್ತು. ಆದರೆ ಯಾವುದೇ ಸುಧಾರಣೆಗಳ ಕಂಡು ಬರದ ಹಿನ್ನೆಲೆಯಲ್ಲಿ ಪಾಕ್ ಸರ್ಕಾರ ಮತ್ತೆ ಚೀನಾ ಆ್ಯಪ್ನ ಬಂದ್ ಮಾಡಿದೆ.
ಕೆಲವೊಂದು ಆಕ್ಷೇಪಾರ್ಹ ವಿಡಿಯೋಗಳನ್ನು ತೆಗೆದು ಹಾಕದ ಹಿನ್ನೆಲೆಯಲ್ಲಿ ಆ್ಯಪ್ಗೆ ನಿಷೇಧವೇರಲಾಗಿದೆ ಎಂದು ಪಾಕ್ ದೂಪಸಂಪರ್ಕ ಇಲಾಖೆ ತಿಳಿಸಿದೆ. ಮೊದಲ ಬಾರಿ ಆ್ಯಪ್ಗೆ ನಿಷೇಧವೇರಿದಾಗ ವಿವಾದಿತ ಕಂಟೆಂಟ್ ತೆಗೆದು ಹಾಕಲಾಗುವುದು ಎಂದು ಭರವಸೆ ನೀಡಿ ಟಿಕ್ಟಾಕ್ 10 ದಿನಗಳೊಳಗೆ ಮತ್ತೆ ಅನುಮತಿ ಪಡೆದುಕೊಂಡಿತ್ತು. ಆದರೆ ಮತ್ತೆ ಅದೇ ತಪ್ಪುಗಳು ಮರುಕಳಿಸಿದ ಹಿನ್ನೆಲೆ ಪೇಶಾವರ ಕೋರ್ಟ್ ಆ್ಯಪ್ ಮೇಲೆ ನಿಷೇಧವನ್ನು ಹೇರಿತ್ತು.
ಪಾಕಿಸ್ತಾನದಲ್ಲಿ ಟಿಕ್ಟಾಕ್ಗೆ ಭಾರೀ ಬೇಡಿಕೆಯಿದ್ದು ಬರೋಬ್ಬರಿ 39 ಮಿಲಿಯನ್ ಬಳಕೆದಾರರನ್ನು ಟಿಕ್ಟಾಕ್ ಹೊಂದಿದೆ. ಆದರೆ ಟಿಕ್ಟಾಕ್ ವಿರೋಧಿ ಬಣವೂ ಪಾಕ್ನಲ್ಲಿ ದೊಡ್ಡದಿದೆ. ಡ್ರಗ್ಸ್, ಮಾರಾಕಾಸ್ತ್ರಗಳಿರುವ ವಿಡಿಯೋಗಳನ್ನು ಟಿಕ್ಟಾಕ್ ಉತ್ತೇಜಿಸುತ್ತಿದೆ ಎಂಬ ಆರೋಪವೂ ಚೀನಾ ಆ್ಯಪ್ ಮೇಲೆ ಇದೆ.
ಇದನ್ನೂ ಓದಿ: Pegasus snooping: ಗೂಢಚರ್ಯೆ ಮಾಡುತ್ತಿರುವ ಬಿಜೆಪಿಗೆ ಪ್ಲಾಸ್ಟರ್ ಹಾಕಬೇಕು: ಮಮತಾ ಬ್ಯಾನರ್ಜಿ ಆಕ್ರೋಶ
ಇನ್ನು ಈ ಮಧ್ಯೆ ಭಾರತದಲ್ಲಿ ಟಿಕ್ಟಾಕ್ ಮತ್ತೆ ಆರಂಭಗೊಳ್ಳುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. TikTok ಅಪ್ಲಿಕೇಶನ್ ಭಾರತದಲ್ಲಿ TickTock ಆಗಿ ಮರು-ಪ್ರಾರಂಭವಾಗಬಹುದು, ಕೇವಲ ಒಂದೆರಡು ಅಕ್ಷರಗಳನ್ನು ಬದಲಾಯಿಸಿಕೊಂಡು ಮತ್ತೆ ಕಾಲಿಡಲಿದೆ ಎನ್ನುವ ಸುಳಿವು ಸಿಕ್ಕಿದೆ. ಹೊಸ ಟ್ರೇಡ್‌ಮಾರ್ಕ್ ಪಡೆಯಲು ಅರ್ಜಿ ಸಲ್ಲಿಸಿರುವುದು ಈ ಸುಳಿವು ನೀಡಿದೆ. ಈ ವಿಚಾರವನ್ನು ಟಿಪ್ಸ್ ಗುರು ಮುಕುಲ್ ಶರ್ಮಾ ಅವರು ಟ್ವೀಟ್ ಮಾಡಿದ್ದಾರೆ, ಟಿಕ್‌ಟಾಕ್‌ನ ಮೂಲ ಸಂಸ್ಥೆ ಬೈಟ್‌ಡ್ಯಾನ್ಸ್ ಈ ತಿಂಗಳ ಆರಂಭದಲ್ಲಿ ಕಂಟ್ರೋಲರ್ ಜನರಲ್ ಆಫ್ ಪೇಟೆಂಟ್, ಡಿಸೈನ್ಸ್ ಮತ್ತು ಟ್ರೇಡ್ ಮಾರ್ಕ್ಸ್‌ನೊಂದಿಗೆ ಮತ್ತೆ ಭಾರತಕ್ಕೆ ಕಾಲಿಡಲು ಅರ್ಜಿ ಸಲ್ಲಿಸಿದೆ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ