ಮುಂಬೈ ದಾಳಿ ರೂವಾರಿ ಹಫೀಜ್ ಸಯೀದ್ ಸಂಘಟನೆಗಳಿಗೆ ನಿಷೇಧ ಹೇರಿದ ಪಾಕ್

ಮತ್ತೊಂದೆಡೆ ಪಾಕ್​ ಸರ್ಕಾರ  ವಿವಿಧ ನಿಷೇಧಿತ ಉಗ್ರ ಸಂಘಟನೆಗಳಿಗೆ ಸೇರಿದ 44 ಮಂದಿಯನ್ನು ಬಂಧಿಸಿದೆ.

zahir | news18
Updated:March 6, 2019, 8:25 AM IST
ಮುಂಬೈ ದಾಳಿ ರೂವಾರಿ ಹಫೀಜ್ ಸಯೀದ್ ಸಂಘಟನೆಗಳಿಗೆ ನಿಷೇಧ ಹೇರಿದ ಪಾಕ್
ಉಗ್ರ ಹಫೀಜ್ ಸಯೀದ್
  • News18
  • Last Updated: March 6, 2019, 8:25 AM IST
  • Share this:
ಇಸ್ಲಾಮಾಬಾದ್: ಮುಂಬೈ ದಾಳಿಯ ರೂವಾರಿ ಹಫೀಜ್ ಸಯೀದ್​ಗೆ ಸೇರಿದ ಭಯೋತ್ಪಾದಕ ಸಂಘಟನೆ ಮೇಲೆ ಪಾಕ್ ಸರ್ಕಾರ ನಿಷೇಧ ಹೇರಿದೆ. ಇತ್ತೀಚೆಗೆ ನಡೆದ ಭಾರತದ ದಾಳಿ ಹಾಗೂ ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದ ಪಾಕಿಸ್ತಾನ, ಜಮಾತ್-ಉಲ್-ದವಾ (ಜೆಯುಡಿ) ಹಾಗೂ ಫಲಾ-ಇ-ಇನ್ಸಾನಿಯತ್ ಫೌಂಡೇಶನ್ (ಎಫ್‌ಐಎಫ್) ಸಂಘಟನೆಗಳನ್ನು ನಿಷೇಧಿಸಿದೆ.

ಪಾಕ್ ಸರ್ಕಾರ ಈ ಹಿಂದೆಯೇ ಹಫೀಜ್ ಸೈಯೀದ್‌ಗೆ ಸೇರಿದ ಉಗ್ರ ಸಂಘಟನೆಗಳನ್ನು ಎರಡು ವಾರಗಳ ಕಾಲ ನಿಗಾದಲ್ಲಿರಿಸಿತ್ತು. ಇದೀಗ ಪಾಕಿಸ್ತಾನ ಭಯೋತ್ಪಾದನಾ ನಿಗ್ರಹ ಕಾಯ್ದೆ 1997ರ ಅಡಿಯಲ್ಲಿ ರಾಷ್ಟ್ರೀಯ ಭಯೋತ್ಪಾದನೆ ನಿಗ್ರಹ ಪ್ರಾಧಿಕಾರ ಸಭೆ ನಡೆಸಿ, ಜೆಯುಡಿ ಹಾಗೂ ಅದರ ಅಂಗಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಫ್​ಐಎಫ್​ ಸಂಘಟನೆಗಳನ್ನು ನಿಷೇಧಿಸಲು ತೀರ್ಮಾನಿಸಲಾಗಿದೆ.

2001 ರಲ್ಲಿ ಭಾರತೀಯ ಸಂಸತ್ತಿನ ಮೇಲೆ ನಡೆದ ದಾಳಿ, 2006 ರಲ್ಲಿ ಮುಂಬಯಿ ಸರಣಿ ಬಾಂಬ್ ಸ್ಪೋಟ ಮತ್ತು 2008 ರಲ್ಲಿ ನಡೆದ ಭಯೋತ್ಪಾದಕ ದಾಳಿಯ ಹಿಂದಿನ ಮುಂದಾಳತ್ವವನ್ನು ಉಗ್ರ ಹಫೀಜ್ ಸಯೀದ್ ವಹಿಸಿಕೊಂಡಿದ್ದರು.​

ಭಾರತ 2008 ರ ಮುಂಬೈಯ ತಾಜ್ ಹೋಟೆಲ್​ ದಾಳಿಯ ರೂವಾರಿ ಹಫೀಜ್ ಸಯೀದ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಈ ಹಿಂದೆಯೇ ಪಾಕಿಸ್ತಾನಕ್ಕೆ  ತಿಳಿಸಿತ್ತು. ಆದರೆ ಸೂಕ್ತ ಸಾಕ್ಷ್ಯ ಆಧಾರವಿಲ್ಲದೆ ಕ್ರಮ ಕೈಗೊಳ್ಳಲಾಗುವುದಿಲ್ಲ ಎಂದು ಭಾರತ ಮನವಿಯನ್ನು ಪಾಕ್ ನಿರಾಕರಿಸುತ್ತಲೇ ಬಂದಿದೆ.

ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಮಾಹಿತಿ ಪ್ರಕಾರ, ಪಾಕಿಸ್ತಾನದ ಲಾಹೋರ್​ನಲ್ಲಿ ಉಗ್ರ ನಾಯಕ ಹಫಿಜ್ ಸಯೀದ್ ವಾಸಿಸುತ್ತಿದ್ದು, ಜಮ್ಮು ಮತ್ತು ಕಾಶ್ಮೀರದ ಯುವಕರನ್ನು ಭಾರತದ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಪ್ರೋತ್ಸಾಹ ನೀಡುತ್ತಿದ್ದಾರೆ.

ಪುಲ್ವಮಾ ದಾಳಿ ಬಳಿಕ ಪಾಕ್ ಆಶ್ರಯ ತಾಣ ಎಂಬ ಆರೋಪಗಳು ಮತ್ತೊಮ್ಮೆ ಅಂತರಾಷ್ಟ್ರೀಯ ಮಟ್ಟದಲ್ಲಿ ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ, ಯುನೈಟೆಡ್ ನೇಷನ್ಸ್ ಸೆಕ್ಯುರಿಟಿ ಕೌನ್ಸಿಲ್​ನಿಂದ ನಾಮನಿರ್ದೇಶನಗೊಂಡ ವ್ಯಕ್ತಿಗಳನ್ನು ಮತ್ತು ಸಂಸ್ಥೆಗಳ ವಿರುದ್ಧ ನಿಷೇಧಿಸಲು ಪಾಕಿಸ್ತಾನ ಸರ್ಕಾರ ನಿರ್ಧರಿಸಿದೆ. ಅಲ್ಲದೆ ಈ ಕುರಿತು ಪ್ರಕ್ರಿಯೆಯನ್ನು ಸುಗಮಗೊಳಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಆದೇಶ ನೀಡಿದೆ ಎಂದು ತಿಳಿಸಲಾಗಿದೆ.

ಮತ್ತೊಂದೆಡೆ ಪಾಕ್​ ಸರ್ಕಾರ  ವಿವಿಧ ನಿಷೇಧಿತ ಉಗ್ರ ಸಂಘಟನೆಗಳಿಗೆ ಸೇರಿದ 44 ಮಂದಿಯನ್ನು ಬಂಧಿಸಿದೆ. ಕಾಶ್ಮೀರದ ಪುಲ್ವಾಮದಲ್ಲಿ ಉಗ್ರ ದಾಳಿಯ ಹೊಣೆ ಹೊತ್ತಿದ್ದ ಜೈಷ್-ಎ-ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಅವರ ಸಹೋದರ ಮುಫ್ತಿ ಅಬ್ದುರ್ ಹಾಗೂ ಅದೇ ಸಂಘಟನೆಗೆ ಸೇರಿದ ಕಮಾಂಡರ್ ಹಮ್ಮದ್ ಅಜರ್ ಅವರೂ ಈ 44 ಬಂಧಿತರಲ್ಲಿ ಸೇರಿದ್ದಾರೆ.ಭಯೋತ್ಪಾದನೆ ವಿರುದ್ಧ ಪಾಕಿಸ್ತಾನ ನಡೆಸುತ್ತಿರುವ ಹೋರಾಟದ ಒಂದು ಭಾಗ ಮಾತ್ರ ಇದಾಗಿದ್ದು, ಯಾವುದೇ ಬಾಹ್ಯ ಒತ್ತಡದಿಂದ ಈ ಕ್ರಮ ಕೈಗೊಂಡಿಲ್ಲ ಎಂದೂ ಸಚಿವ  ಶೆಹರ್ಯಾರ್ ಖಾನ್ ಪಾಕ್​ ಸರ್ಕಾರದ ಹೊಸ ನಡೆಯ ಬಗ್ಗೆ ತಿಳಿಸಿದ್ದಾರೆ.

ಇದನ್ನೂ ಓದಿ: Pulwama Attack: ಹುತಾತ್ಮ ಯೋಧರ ಕುಟುಂಬಕ್ಕೆ 110 ಕೋಟಿ ರೂ. ನೆರವು ನೀಡಲು ಮುಂದಾದ ಅಂಧ ವಿಜ್ಞಾನಿ..!
First published: March 6, 2019, 8:18 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading