ನಿಷೇಧಿತ ಉಗ್ರ ಸಂಘಟನೆಯ ಪ್ರಮುಖ ನಾಲ್ವರು ಭಯೋತ್ಪಾದಕರನ್ನು ಬಂಧಿಸಿದ ಪಾಕಿಸ್ತಾನ

ಪ್ಯಾರಿಸ್​ನಲ್ಲಿ ಅಕ್ಟೋಬರ್ 12ರಿಂದ 15ರವರೆಗೆ ನಡೆಯಲಿರುವ ಹಣಕಾಸು ಕ್ರಿಯಾ ಕಾರ್ಯಪಡೆಯ ನಿರ್ಣಾಯಕ ಸಮಗ್ರ ಸಭೆಗೂ ಮುನ್ನ ಈ ಬೆಳವಣಿಗೆ ನಡೆದಿದೆ.

news18-kannada
Updated:October 10, 2019, 8:59 PM IST
ನಿಷೇಧಿತ ಉಗ್ರ ಸಂಘಟನೆಯ ಪ್ರಮುಖ ನಾಲ್ವರು  ಭಯೋತ್ಪಾದಕರನ್ನು ಬಂಧಿಸಿದ ಪಾಕಿಸ್ತಾನ
ಪಾಕ್​​ ಪ್ರಧಾನಿ ಇಮ್ರಾನ್​ ಖಾನ್​​
  • Share this:
ಲಾಹೋರ್: ಪಾಕಿಸ್ತಾನ ಕಾನೂನು ಜಾರಿ ಸಂಸ್ಥೆ ಗುರುವಾರ ನಿಷೇಧಿತ ಉಗ್ರ ಸಂಘಟನೆಗಳಾದ ಎಲ್​ಇಟಿ ಮತ್ತು ಜೆಯುಡಿಯ ನಾಲ್ವರು ಮುಖ್ಯ ನಾಯಕರನ್ನು ಬಂಧಿಸಿದೆ. 

ಬಂಧಿತರನ್ನು ಲಷ್ಕರ್​ ಎ ತೋಯ್ಬಾ ಹಾಗೂ ಜಮಾತ್ ಉದ್ ದವ್ಹಾ (ಜೆಯುಡಿ) ಸಂಘಟನೆಗೆ ಸೇರಿದ ಜಹಾರ್ ಇಕ್ಬಾಲ್, ಯಹ್ಯಾ ಅಜೀಜ್​, ಮುಹಮ್ಮದ್ ಆಶ್ರಫ್ ಮತ್ತು ಅಬ್ದುಲ್​ ಸಲಾಂ ಎಂದು ಗುರುತಿಸಲಾಗಿದೆ.


ಪ್ಯಾರಿಸ್ ಮೂಲದ ಕಾವಲು ಸಂಸ್ಥೆ ಕಳೆದ ವರ್ಷದ ಜೂನ್​ನಲ್ಲಿ ಪಾಕಿಸ್ತಾನಕ್ಕೆ ಗ್ರೇ (ಬೂದು) ಪಟ್ಟಿಯನ್ನು ನೀಡಿತ್ತು. ಮತ್ತು 2019ರ ಅಕ್ಟೋಬರ್​ ಒಳಗೆ ಹೇಳಿದಂತೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿತ್ತು. ​ಇಲ್ಲವಾದಲ್ಲಿ ಇರಾನ್ ಮತ್ತು ಉತ್ತರ ಕೋರಿಯಾ ಜೊತೆಗೆ ಪಾಕಿಸ್ತಾನ ಕಪ್ಪು ಪಟ್ಟಿಗೆ ಸೇರುವ ಇಕ್ಕಟ್ಟಿನಲ್ಲಿ ಸಿಲುಕಬೇಕಾಗಿತ್ತು.

ಇದನ್ನು ಓದಿ: ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿ ಬಳಿಕ 300ಕ್ಕೂ ಹೆಚ್ಚು ಕಲ್ಲು ತೂರಾಟ ಘಟನೆ: ಭದ್ರತಾ ಪಡೆ ವರದಿ

First published: October 10, 2019, 8:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading