VIDEO: ಪಾಕ್​ ಸೈನಿಕರ ಕ್ರೌರ್ಯ: ನಿರಾಯುಧ ಯುವಕನ ಮೇಲೆ ಗುಂಡಿನ ಪ್ರಹಾರ

ಉಗ್ರರ ಉಪಟಳದಿಂದ ಶಿಕ್ಷಣ, ಸಾಮಾನ್ಯ ಮೂಲ ಸೌಕರ್ಯಗಳು ಬಲೂಚಿಸ್ತಾನದ ಜನರಿಗೆ ಮರೀಚಿಕೆ ಎಂದು ಅಲ್ಲಿನ ಕೆಲ ಸಂಘಟನೆಗಳು ವಾದಿಸುತ್ತಿದೆ. ಹಾಗೆಯೇ ಬಲೂಚಿಸ್ತಾನವನ್ನು ಬಲವಂತವಾಗಿ ಪಾಕಿಸ್ತಾನ ತನ್ನ ಪ್ರಾಂತ್ಯದಲ್ಲಿ ಸೇರಿಸಿಕೊಂಡಿದೆ ಎಂಬ ಅಪಾದನೆ ಇದೆ.

zahir | news18
Updated:February 15, 2019, 10:34 PM IST
VIDEO: ಪಾಕ್​ ಸೈನಿಕರ ಕ್ರೌರ್ಯ: ನಿರಾಯುಧ ಯುವಕನ ಮೇಲೆ ಗುಂಡಿನ ಪ್ರಹಾರ
@Baluch Sarmachar ಸಾಂದರ್ಭಿಕ ಚಿತ್ರ
zahir | news18
Updated: February 15, 2019, 10:34 PM IST
ಪಾಕಿಸ್ತಾನ ಸೈನಿಕರು ಬಲೂಚಿಸ್ತಾನ ಪ್ರಾಂತ್ಯದ ಜನರ ಮೇಲೆ ನಡೆಸುತ್ತಿರುವ ದೌರ್ಜನ್ಯಕ್ಕೆ  ಸಾಕ್ಷಿಯಾಗಿ ಮತ್ತೊಂದು ವಿಡಿಯೋ ಹೊರ ಬಂದಿದೆ. ಯಾವುದೇ ಆಯುಧವಿಲ್ಲದಿದ್ದರೂ, ಸೈನಿಕರು ಬಲೂಚಿ ಯುವಕನನ್ನು ನಿರ್ದಾಕ್ಷಿಣ್ಯವಾಗಿ ನಿರಂತರ ಗುಂಡು ಹಾರಿಸಿ ಕೊಲೆ ಮಾಡಿರುವ ವಿಡಿಯೋ ಈಗ ವೈರಲ್ ಆಗಿದೆ.

ಈ ಯುವಕ ನಾಗರಿಕ ಹೋರಾಟ ಸಂಘಟನೆಯೊಂದರ ಸದಸ್ಯ ಎನ್ನಲಾಗಿದ್ದು, ಈ ಹಿನ್ನೆಲೆಯಲ್ಲಿ ಸೈನಿಕರ ದೌರ್ಜನ್ಯವನ್ನು ಪ್ರಶ್ನಿಸುವುದನ್ನು ಮಟ್ಟಹಾಕಲು ಅವರನ್ನು ಕೊಲೆ ಮಾಡಲಾಗಿದೆ ಎಂದು ಹೇಳಲಾಗಿದೆ. ಮನೆಯಲ್ಲಿದ್ದ ಯುವಕನನ್ನು ಎಳೆದುಕೊಂಡು ಬಂದ ಸೈನಿಕರು, ಮನಸೋ ಇಚ್ಛೆ ಗುಂಡಿನ ದಾಳಿ ಮಾಡಿದ್ದಾರೆ. ಪಾಕ್ ಸೈನಿಕರ ಈ ವಿಕೃತಿ ಮನಸ್ಥಿತಿಯ ವಿಡಿಯೋವನ್ನು ಟ್ವಿಟರ್​ನಲ್ಲಿ ಶೇರ್ ಮಾಡಲಾಗಿದೆ.

ಹಲವು ವರ್ಷಗಳಿಂದ ಮಾನವ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವ ಬಲೂಚ್‌ ರಿಪಬ್ಲಿಕ್‌ ಪಾರ್ಟಿ, ಬಲೂಚ್‌ ನ್ಯಾಷನಲ್‌ ಮೂವ್‌ಮೆಂಟ್‌, ಫ್ರೀ ಬಲೂಚ್‌ ಮೂವ್‌ಮೆಂಟ್‌ ಸೇರಿದಂತೆ ಹಲವು ಸಂಘಟನೆಗಳ ಸದಸ್ಯರನ್ನು ಗುರಿಯಾಗಿಸಿ ದಾಳಿ ನಡೆಸಲಾಗುತ್ತಿದೆ. ಅಲ್ಲದೆ ಪಾಕ್​ ಸರ್ಕಾರದ ಅಥವಾ ಸೈನಿಕರ ದೌರ್ಜನ್ಯದ ಬಗ್ಗೆ ಧ್ವನಿಯೆತ್ತುವ ಹೋರಾಟಗಾರರು ಅಪಹರಿಸಿ ಹತ್ಯೆ ಮಾಡಲಾಗುತ್ತಿದೆ ಎಂಬ ಆರೋಪ ಕೂಡ ಬರುತ್ತಿರುತ್ತದೆ.



ಈ ಪ್ರಾಂತ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದರೂ, ಪಾಕ್​ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇಲ್ಲಿನ ನೆಲದಲ್ಲಿ ಹೇರಳ ಖನಿಜಗಳು ಮತ್ತು ತೈಲೋತ್ಪನ್ನಗಳ ಸಂಪತ್ತು ಹರಡಿಕೊಂಡಿದೆ. ಕಬ್ಬಿಣ, ತಾಮ್ರ, ಕ್ರೋಮೈಟ್, ಸಲ್ಫರ್, ಫ್ಲೋರೈಡ್, ಚಿನ್ನ ಹಾಗೂ ವಜ್ರದ ನಿಕ್ಷೇಪಗಳು, ನೈಸರ್ಗಿಕ ಅನಿಲ, ಕಚ್ಛಾ ತೈಲ ಈ ನೆಲದಲ್ಲಿ ಸಮೃದ್ಧವಾಗಿ ಸಿಗುತ್ತಿದೆ. ಆದರೆ ಇದೇ ಸಂಪತ್ತನ್ನು ಬಳಸಿ ಪಾಕಿಸ್ತಾನ ಇಲ್ಲಿ ಯಾವುದೇ ಅಭಿವೃದ್ಧಿ ಮಾಡುತ್ತಿಲ್ಲ ಎಂಬ ಕೊರಗು ಅಲ್ಲಿನ ಜನರಲ್ಲಿದೆ.

ಉಗ್ರರ ಉಪಟಳದಿಂದ ಶಿಕ್ಷಣ, ಸಾಮಾನ್ಯ ಮೂಲ ಸೌಕರ್ಯಗಳು ಬಲೂಚಿಸ್ತಾನದ ಜನರಿಗೆ ಮರೀಚಿಕೆ ಎಂದು ಅಲ್ಲಿನ ಕೆಲ ಸಂಘಟನೆಗಳು ವಾದಿಸುತ್ತಿದೆ. ಹಾಗೆಯೇ ಬಲೂಚಿಸ್ತಾನವನ್ನು ಬಲವಂತವಾಗಿ ಪಾಕಿಸ್ತಾನ ತನ್ನ ಪ್ರಾಂತ್ಯದಲ್ಲಿ ಸೇರಿಸಿಕೊಂಡಿದೆ ಎಂಬ ಅಪಾದನೆ ಇದೆ. ಹೀಗಾಗಿ ಪಾಕ್​ಗೆ ಸ್ವಾತಂತ್ರ್ಯ ಬಂದಾಗಿನಿಂದ ಬಲೂಚಿಸ್ತಾನದಲ್ಲಿ ಬಂಡುಕೋರರ ಹೋರಾಟ ಆರಂಭವಾಗಿದೆ.ಇಲ್ಲಿ ಸೇನೆ ಮತ್ತು ಬಂಡುಕೋರರ ಹೋರಾಟ ಜನ ಸಾಮಾನ್ಯರ ಜೀವನವನ್ನು ಅಕ್ಷರಶಃ ನರಕ ಸದೃಶವಾಗಿಸಿರುವುದು ಸುಳ್ಳಲ್ಲ. ಆದರೆ ಇಲ್ಲಿನ ದೌರ್ಜನ್ಯ, ಮಾನವ ಹಕ್ಕುಗಳ ಕಗ್ಗೊಲೆ ಹೊರ ಜಗತ್ತಿಗೆ ತಿಳಿಯದಂತೆ ಮರೆಮಾಚಲಾಗುತ್ತಿದೆ.

ಈ ಹಿಂದೆ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಬಲೂಚಿಸ್ತಾನದ ಪರವಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮಾತುಗಳನ್ನಾಡಿದ್ದರು. ಇದೀಗ ಕಾಶ್ಮೀರದ ಪುಲ್ವಾಮಾದಲ್ಲಿ ಸೈನಿಕರ ಮೇಲೆ ಉಗ್ರರು ದಾಳಿ ಮಾಡಿದ ಬೆನ್ನಲ್ಲೇ ಬಲೂಚಿಸ್ತಾನದ ದೌರ್ಜನ್ಯಗಳ ವಿಡಿಯೋ ಮಹತ್ವ ಪಡೆದುಕೊಂಡಿದೆ. ಅಲ್ಲದೆ ಪಾಕ್​ನ ಕೌರ್ಯವನ್ನು ಹಲವರು ಸಾಮಾಜಿಕ ಜಾಲಾತಾಣದಲ್ಲಿ ಖಂಡಿಸಿದ್ದಾರೆ.
First published:February 15, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...