Love marriage: 55 ವರ್ಷದ ವ್ಯಕ್ತಿಯನ್ನು ವಿವಾಹವಾದ 18 ವರ್ಷದ ಯುವತಿ! ಇದಕ್ಕೆಲ್ಲಾ ಕಾರಣ ಬಾಲಿವುಡ್​ ಈ ಖ್ಯಾತ ನಟನ ಹಾಡು!

ಏನೇ ಹೇಳಿದರೂ ಜಗತ್ತಿನಲ್ಲಿ ಪ್ರೀತಿಗೆ ದೊಡ್ಡ ಶಕ್ತಿ ಇದೆ. ಪ್ರೀತಿ ಮಾಡಿವರಿಗೆ ಮಾತ್ರ ಅದರ ಬೆಲೆ ಗೊತ್ತಿರಲು ಸಾಧ್ಯ. ಅಂದಹಾಗೆಯೇ, ಇಲ್ಲೊಂದು ತಾಜಾ ಉದಾಹರಣೆ ಇದೆ. ಅದೇನೆಂದರೆ 18 ವರ್ಷದ ಯುವತಿಯೊಬ್ಬಳು 55 ವರ್ಷದ ವ್ಯಕ್ತಿಯನ್ನು ವಿವಾಹವಾಗಿ ಪತಿ ಎಂದು ಸ್ವೀಕರಿಸಿಕೊಂಡಿದ್ದಾಳೆ.

ಫಾರೂಕ್​ ಮತ್ತು ಮುಸ್ಕಾನ್

ಫಾರೂಕ್​ ಮತ್ತು ಮುಸ್ಕಾನ್

 • Share this:
  ಪ್ರೀತಿಗೆ ಕಣ್ಣಿಲ್ಲ. ಯಾರು, ಯಾವಾಗ, ಯಾರ ಮೇಲೆ ಬೇಕಾದರೂ ಪ್ರೀತಿ ಆಗಬಹುದು. ಹಾಗಾಗಿ ಪ್ರೀತಿಗೆ ಜಾತಿಯ ಹಂಗಿಲ್ಲ ಎಂಬ ಮಾತಿದೆ. ಜಗತ್ತಿನಲ್ಲಿ ಪ್ರೀತಿ (Love) ಮಾಡಿ, ಮದುವೆ ಆದವರು ಅದೆಷ್ಟೋ ಮಂದಿ ಇದ್ದಾರೆ. ಆದರೆ ಕೆಲವರ ಪ್ರೀತಿ ಮಾತ್ರ ಸಕ್ಸಸ್ (Success)​​ ಕಂಡು ಮದುವೆ (Marriage) ಆಗಿ ಸುಖ ಸಂಸಾರ ನಡೆಸುತ್ತಾರೆ. ಆದರೆ ಇನ್ನು ಕೆಲವರು ಪ್ರೀತಿ ನಡುದಾರಿಯಲ್ಲಿ ಕೆಟ್ಟೋಗಿ ಕೊನೆಗೆ ನಾನೊಂದು ತೀರಾ.. ನೀನೊಂದು ತೀರಾ ಎಂದು ಉಳಿದುಬಿಡುತ್ತಾರೆ. ಏನೇ ಹೇಳಿದರೂ ಜಗತ್ತಿನಲ್ಲಿ ಪ್ರೀತಿಗೆ ದೊಡ್ಡ ಶಕ್ತಿ ಇದೆ. ಪ್ರೀತಿ ಮಾಡಿವರಿಗೆ ಮಾತ್ರ ಅದರ ಬೆಲೆ ಗೊತ್ತಿರಲು ಸಾಧ್ಯ. ಅಂದಹಾಗೆಯೇ, ಇಲ್ಲೊಂದು ತಾಜಾ ಉದಾಹರಣೆ ಇದೆ. ಅದೇನೆಂದರೆ 18 ವರ್ಷದ ಯುವತಿಯೊಬ್ಬಳು 55 ವರ್ಷದ ವ್ಯಕ್ತಿಯನ್ನು ವಿವಾಹವಾಗಿ ಪತಿ (Husband) ಎಂದು ಸ್ವೀಕರಿಸಿಕೊಂಡಿದ್ದಾಳೆ. ಇದಕ್ಕೆ ಕಾರಣ ಅವನಲ್ಲಿ ಕಂಡ ಪ್ರೀತಿ ಎಂಬುದು ಯುವತಿಯ ಮಾತು.

  ಮೊದಲೇ ಹೇಳಿದಂತೆ ಪ್ರೀತಿಗೆ ವಯಸ್ಸಿನ ಹಂಗಿಲ್ಲ. ಇದಕ್ಕೆ ಬಾಲಿವುಡ್​ನಲ್ಲಿ ಕಣ್ಣಾಡಿಸಿದರೆ ಹಲವಾರು ಉದಾಹರಣೆಗಳು ಸಿಗುತ್ತವೆ. ಆದರೆ ಪಾಕಿಸ್ತಾನ ಮೂಲದ 18 ವರ್ಷದ ಯುವತಿ 55 ವರ್ಷದ ವ್ಯಕ್ತಿಯನ್ನು ವಿವಾಹವಾಗಿರುವುದು ಎಲ್ಲರಿಗೂ ದಿಗ್ಭ್ರಮೆ ಆಗಿದೆ.

  ಅಚ್ಚರಿಯ ಸಂಗತಿ ಎಂದರೆ, ಇವರಿಬ್ಬರು ಒಂದಾಗಲು ಹಿಂದಿ ಹಾಡೊಂದು ಕಾರಣವಂತೆ. ಹೌದು. ಬಾಲಿವುಡ್​​ ನಟ ಬಾಬಿ ಡಿಯೋಲ್​​ ಅವರ ಸಿನಿಮಾ ಹಾಡುನಿಂದ 18 ವರ್ಷದ ಮುಸ್ಕಾನ್​ ಮತ್ತು 55 ವರ್ಷದ ಫಾರೂಕ್​ ನಡುವೆ ಪ್ರೀತಿ ಚಿಗುರೊಡೆದಿದೆ. ಮುಸ್ಕಾನ್​ ಮತ್ತು ಫಾರೂಕ್​ ಮನೆ ಸಮೀಪದಲ್ಲೇ ಇದ್ದು ಮುಸ್ಕಾನ್​ ಸಂಗೀತವನ್ನು ಹೆಚ್ಚು ಇಷ್ಟಪಡುತ್ತಿದ್ದಳು. ಮಾತ್ರವಲ್ಲದೆ, ಉತ್ತಮ ಹಾಡುಗಾರ್ತಿಯಾಗಿದ್ದಳು.

  ಸಂಗೀತಕ್ಕೆ ಯಾರನ್ನು ಬೇಕಾದರೂ ಒಂದು ಮಾಡಬಹುದಾದ ಶಕ್ತಿ ಇದೆ ಎಂಬುದಕ್ಕೆ ಇದುವೇ ಉದಾಹರಣೆ. ಏಕೆಂದರೆ ಫಾರೂಕ್​ಗೆ ಸಂಗೀತವೆಂದರೆ ಇಷ್ಟ. ಅತ್ತ ಮುಸ್ಕಾನ್​​​ ಕೂಡ ಹಾಡುಗರ್ತಿ. ಫಾರೂಕ್​ ಆಗಾಗ ಮುಸ್ಕಾನ್​ ಮನೆಗೆ ಬರುತ್ತಿದ್ದ. ಹೀಗೆ ಒಂದು ದಿನ ಮುಸ್ಕಾನ್​ಗೆ ಫಾರೂಕ್​ ತನ್ನನ್ನು ಇಷ್ಟ ಪಡುತ್ತಿದ್ದಾನೆ ಎಂಬ ವಿಚಾರ ಗೊತ್ತಾಯಿತು. ಆಕೆಯೂ ಆತನನ್ನು ಇಷ್ಟಪಡಳು ಪ್ರಾರಂಭಿಸಿದಳು.

  ಇದನ್ನೂ ಓದಿ: Kiara Advani: ಕ್ಯಾಶುವಲ್ ಡ್ರೆಸ್​ನಲ್ಲಿ ಸೂಪರ್ ಕ್ಯೂಟ್ ಕಾಣ್ತಾರೆ ಕಿಯಾರಾ, ಇವರ ನಿಜವಾದ ಹೆಸರು ಗೊತ್ತಾ?

  ಫಾರೂಕ್​ಗಾಗಿ ಮುಸ್ಕಾನ್​​ ಬಾಬಿ ಡಿಯೋಲ್​ ಅವರ ‘‘ಬಾದಲ್​​ ನಾ ಮಿಲೋ ಹಮ್ಸೆ ಜ್ಯಾದಾ’’ ಹಾಡನ್ನು ಹಾಡುತ್ತಿದ್ದಳು. ಹೀಗೆ ಇವರಿಬ್ಬರು ಪ್ರೀತಿಯಯತ್ತ ಮುಖ ಮಾಡುವ ಸಮಯದಲ್ಲಿ ಮುಸ್ಕಾನ್​ ಆತನಿಗೆ ಪ್ರಪೋಸ್​ ಮಾಡಿದಳು. ಆ ಬಳಿಕ ಇವರಿಬ್ಬರ ಲವ್​ ಶುರುವಾಯ್ತು.

  ಆಕೆಯ ಧ್ವನಿ ಮತ್ತು ಅವಳು ಹಾಡುತ್ತಿದ್ದ ಹಾಡಿಗೆ ಮನಸೋತಿದ್ದ ಫಾರೂಕ್​ ಆಕೆಯ ಮೇಲೆ ಪ್ರೀತಿ ಹುಟ್ಟಲು ಕಾರಣವಾಯಿತು ಎಂದು ಹೇಳಿದ್ದಾನೆ. ಮುಸ್ಕಾನ್​ ಕೂಡ ಫಾರೂಕ್​​ ಮಾತಿನ ಶೈಲಿಯನ್ನು ಇಷ್ಟಪಟ್ಟಿದ್ದಾಳೆ. ಇದರಿಂದ ಪ್ರಭಾವಿತನಾಗಿದ್ದೇನೆ ಎಂದು ಹೇಳಿದ್ದಾಳೆ.

  ಇದನ್ನೂ ಓದಿ: Image Consultant Course: ಇಮೇಜ್ ಕನ್ಸಲ್ಟೆಂಟ್ ಆಗಿ: ಈ ಕ್ಷೇತ್ರದಲ್ಲಿ ಹೆಚ್ಚು ಕಾಂಪಿಟೇಷನ್ ಇಲ್ಲ, ಲಕ್ಷ ಲಕ್ಷ ಗಳಿಸಬಹುದು 

  ಫಾರೂಕ್​ ಮತ್ತು ಮುಸ್ಕಾನ್​​ ನಡುವಿನ ಪ್ರೀತಿಯನ್ನು ಎರಡೂ ಮನೆಯವರು ತಿರಸ್ಕರಿಸಿದ್ದರಂತೆ. ಆದರೆ ಈ ಜೋಡಿ ಯಾರಿಗೂ ಭಯ ಬೀಳದೆ ತಮ್ಮ ಸ್ವಂತ ಇಷ್ಟದಂತೆಯೇ ವಿವಾಹವಾಗಿದ್ದಾಳೆ. ಅಂದಹಾಗೆಯೇ, ಫಾರೂಕ್​ ವಯಸ್ಸು ಮಾತ್ರ 55 ವರ್ಷವಾಗಿದ್ದರು ಇದು ಅವರ ಮೊದಲ ಮದುವೆಯಂತೆ.

  ಈ ಜೋಡಿಯನ್ನು ಯೂಟ್ಯೂಬರ್​ ಸಂದರ್ಶನ ಮಾಡಿದ್ದು, ಇಬ್ಬರು ಪ್ರೀತಿ ಹುಟ್ಟಿದ ಬಗೆಯನ್ನು ವಿವರವಾಗಿ ಹೇಳಿದ್ದಾರೆ. ಸದ್ಯ ಈ ಜೋಡಿಯ ಬಗ್ಗೆ ಪಾಕಿಸ್ತಾನದಲ್ಲಿ ಮಾತುಗಳು ಕೇಳಿಬರುತ್ತಿವೆ.
  Published by:Harshith AS
  First published: