• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Pakistan: ಪಾಕ್​ನಲ್ಲಿ ಮತ್ತೆ ಮತಾಂತರ, ಮನೆ ಕೆಲಸಕ್ಕಿದ್ದ ಅಪ್ರಾಪ್ತೆಯನ್ನು ಬಲವಂತವಾಗಿ ಮದುವೆಯಾದ 60ರ ವೃದ್ಧ!

Pakistan: ಪಾಕ್​ನಲ್ಲಿ ಮತ್ತೆ ಮತಾಂತರ, ಮನೆ ಕೆಲಸಕ್ಕಿದ್ದ ಅಪ್ರಾಪ್ತೆಯನ್ನು ಬಲವಂತವಾಗಿ ಮದುವೆಯಾದ 60ರ ವೃದ್ಧ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಿತಾರಾ ಅವರ ತಂದೆ ಮತ್ತು ತಾಯಿ ತನಿಖೆ ನಡೆಲು ಪೊಲೀಸರಿಗೆ ಮನವಿ ಮಾಡಿದ್ದಾರೆ. ಆದರೆ ಅವರು ಇದಕ್ಕೆ ಒಪ್ಪಲಿಲ್ಲ. ಅಲ್ಲದೇ ಬೆದರಿಕೆ ಹಾಕಿದ್ದಾರೆ. ಈ ತಿಂಗಳಷ್ಟೇ, ಕುಟುಂಬವು ಖ್ಯಾತ ವಕೀಲ ಮತ್ತು ಅಲ್ಪಸಂಖ್ಯಾತರ ಒಕ್ಕೂಟ ಪಾಕಿಸ್ತಾನದ ಅಧ್ಯಕ್ಷ ಅಕ್ಮಲ್ ಭಟ್ಟಿ ಅವರನ್ನು ಸಂಪರ್ಕಿಸಿದಾಗ, ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವುದಾಗಿ ಭರವಸೆ ನೀಡಿದ್ದಾರೆ ಎಂದು ಬಿಟರ್ ವಿಂಟರ್ ವರದಿ ಮಾಡಿದೆ.

ಮುಂದೆ ಓದಿ ...
  • Share this:

ಇಸ್ಲಮಾಬಾದ್(ಫೆ.25): ಪಾಕಿಸ್ತಾನದಲ್ಲಿ (Pakistan) ಮತ್ತೊಂದು ಬಲವಂತದ ಮತಾಂತರ ಪ್ರಕರಣ ಮುನ್ನೆಲೆಗೆ ಬಂದಿದೆ. ಅಪ್ರಾಪ್ತ ಕ್ಯಾಥೋಲಿಕ್ (Catholic) ಹುಡುಗಿಯನ್ನು ಅಪಹರಿಸಿದ 60 ವರ್ಷದ ಮುಸ್ಲಿಂ ವ್ಯಕ್ತಿ (Muslim Person), ಆಕೆಯನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಾನೆ ಎಂದು ಧಾರ್ಮಿಕ ಸ್ವಾತಂತ್ರ್ಯ (Religious Freedom) ಮತ್ತು ಮಾನವ ಹಕ್ಕುಗಳ ನಿಯತಕಾಲಿಕ ಬಿಟರ್ ವಿಂಟರ್ ವರದಿ ಮಾಡಿದೆ. ಸಿತಾರಾ ಆರಿಫ್ ಅವರನ್ನು ಡಿಸೆಂಬರ್ 15 ರಂದು ಅಪಹರಿಸಲಾಯಿತು. ಆದರೆ ಈ ವಿಷಯವನ್ನು ತನಿಖೆ ಮಾಡಲು ಪೊಲೀಸರ ಮನವೊಲಿಸಲು ಎರಡು ತಿಂಗಳು ತೆಗೆದುಕೊಂಡಿದೆ ಎಂದು ಮಾಸ್ಸಿಮೊ ಇಂಟ್ರೊವಿಗ್ನೆ ತನ್ನ ವರದಿಯಲ್ಲಿ ತಿಳಿಸಿದ್ದಾರೆ.


ಸಿತಾರಾ ಅವರ ತಂದೆ ಆರಿಫ್ ಗಿಲ್ ಅವರು ಪಾಕಿಸ್ತಾನದ ಪಂಜಾಬ್‌ನ ಫೈಸಲಾಬಾದ್‌ನಲ್ಲಿರುವ ಪಬ್ಲಿಕ್ ಸ್ಕೂಲ್‌ನ ಮುಸ್ಲಿಂ ಪ್ರಾಂಶುಪಾಲರಾದ ನೈಲಾ ಅಂಬ್ರಿನ್ ಅವರ ಮನೆಗೆ ಸಹಾಯಕರಾಗಿ ಕೆಲಸ ಮಾಡಲು ಕಳುಹಿಸಿದ್ದರು. ಆರಿಫ್ ದೈಹಿಕವಾಗಿ ದುರ್ಬಲನಾಗಿದ್ದು, ಹಣದ ಅವಶ್ಯಕತೆ ವಿಚಾರದಲ್ಲಿ ತನ್ನ ಕುಟುಂಬವನ್ನು ಪೋಷಿಸಲು ಅಸಮರ್ಥನಾಗಿದ್ದ. ಆದ್ದರಿಂದ ಸಿತಾರಾಳನ್ನು ಮುಸ್ಲಿಂ ಮಹಿಳೆಯ ಕೆಲಸ ಮಾಡಲು ಬಿಡಲು ನಿರ್ಧರಿಸಿದರು.


ಇದನ್ನೂ ಓದಿ: Kalasipalya Bus Terminal: 63 ಕೋಟಿ ರೂಪಾಯಿ ವೆಚ್ಚದ ಕಲಾಸಿಪಾಳ್ಯದ ಬಸ್​​ ಟರ್ಮಿನಲ್​ ಉದ್ಘಾಟಿಸಿದ ಸಿಎಂ ಬೊಮ್ಮಾಯಿ


ಧಾರ್ಮಿಕ ಅಲ್ಪಸಂಖ್ಯಾತರ ಹೆಣ್ಣುಮಕ್ಕಳನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸಿ ಮುಸ್ಲಿಂ ಪುರುಷರೊಂದಿಗೆ ಮದುವೆಯಾ ಆಡಿಸುವ ಪ್ರಕರಣಗಳು ಪಾಕಿಸ್ತಾನಿ ಮತ್ತು ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ನಿರಂತರವಾಗಿ ವರದಿಯಾಗುತ್ತವೆ ಎಂದು ಇಂಟ್ರೊವಿಗ್ನೆ ಹೇಳಿದ್ದಾರೆ.


60 ವರ್ಷದ ವ್ಯಕ್ತಿ ಅಪ್ರಾಪ್ತ ವಯಸ್ಕನ ಜೊತೆ ಮದುವೆ


ಆಂಬ್ರೀನ್ ಅವರ 60 ವರ್ಷದ ಪತಿ ರಾಣಾ ತ್ಯಾಬ್, ಸುಂದರವಾಗಿದ್ದ ಸಿತಾರಾಳನ್ನು ನೋಡಿ ಆಕೆಯನ್ನು ತನ್ನ ಎರಡನೇ ಹೆಂಡತಿಯನ್ನಾಗಿ ಮಾಡಲು ನಿರ್ಧರಿಸಿದ್ದಾನೆ ಎಂದು ಬಿಟರ್ ವಿಂಟರ್ ವರದಿ ಮಾಡಿದೆ.


ಇಂತಹ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಹುಡುಗಿಯ ಮೇಲೆ ಅತ್ಯಾಚಾರದ ನಡೆಸಿ, ಬಳಿಕ ಆಕೆಗೆ ಅವಮಾನವಾಗವುದನ್ನು ತಡೆಯುವ ನೆಪದಲ್ಲಿ ಮದುವೆಯಾಗುವ ಮಾರ್ಗ ಕಂಡುಕೊಳ್ಳುತ್ತಾರೆ. ಆದರೆ, ಸಿತಾರಾ ವಿಚಾರದಲ್ಲಿ ಅದು ಸ್ಪಷ್ಟವಾಗಿಲ್ಲ. ಅವಳು ಡಿಸೆಂಬರ್ 15 ರಂದು ಕೆಲಸದಿಂದ ಮನೆಗೆ ಹಿಂತಿರುಗಿರಲಿಲ್ಲ. ಇದಾದ ಬಳಿಕ ಆಕೆಯ ಕುಟುಂಬಕ್ಕೆ ನಂತರ ಅವಳು ಇಸ್ಲಾಂಗೆ ಮತಾಂತರಗೊಂಡಿದ್ದಾಳೆ ಮತ್ತು ರಾಣಾ ತಯ್ಯಬ್ ಅನ್ನು ಮದುವೆಯಾಗಿದ್ದಾಳೆಂಬ ವಿಚಾರ ಅರಿವಿಗೆ ಬಂದಿದೆ.


ಇದನ್ನೂ ಓದಿ: PAN: ನಿಮ್ಮ ಪ್ಯಾನ್ ಕಾರ್ಡ್​ ಮಾನ್ಯವಾಗಿದೆಯಾ? ಹೀಗೆ ಚೆಕ್ ಮಾಡಿ


ಮನವಿ ಮಾಡಿದ ನಂತರ ಎಫ್‌ಐಆರ್ ದಾಖಲು


ಸಿತಾರಾ ಅವರ ತಂದೆ ಮತ್ತು ತಾಯಿ ತನಿಖೆಗಾಗಿ ಪೊಲೀಸರಿಗೆ ಮನವಿ ಮಾಡಲು ಪ್ರಾರಂಭಿಸಿದರು, ಆದರೆ ಅವರು ಇದನ್ನು ಕೇಳದೆ ಸುಮ್ಮನಾಗಿದ್ದಾರೆ. ಈ ತಿಂಗಳಷ್ಟೇ, ಕುಟುಂಬವು ಖ್ಯಾತ ವಕೀಲ ಮತ್ತು ಅಲ್ಪಸಂಖ್ಯಾತರ ಒಕ್ಕೂಟ ಪಾಕಿಸ್ತಾನದ ಅಧ್ಯಕ್ಷ ಅಕ್ಮಲ್ ಭಟ್ಟಿ ಅವರನ್ನು ಸಂಪರ್ಕಿಸಿದಾಗ, ಪೊಲೀಸರು ಅಂತಿಮವಾಗಿ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವುದಾಗಿ ಭರವಸೆ ನೀಡಿದರು ಎಂದು ಬಿಟರ್ ವಿಂಟರ್ ವರದಿ ಮಾಡಿದೆ.




ಭಟ್ಟಿಯವರ ಮಧ್ಯಪ್ರವೇಶದ ನಂತರ, ಪೊಲೀಸ್ ಅಧಿಕಾರಿಗಳು ನೈಲಾ ಅಂಬ್ರಿನ್ ಅವರ ನಿವಾಸಕ್ಕೆ ಭೇಟಿ ನೀಡಿದರು. ಆದರೆ ಅವರ ಪತಿ ಅಥವಾ ಸಿತಾರಾ ಮನೆಯಲ್ಲಿ ಇರಲಿಲ್ಲ. ಆದರೆ, ಮಹಿಳೆ ಪೊಲೀಸರಿಗೆ ನಿಕಾಹ್, ಇಸ್ಲಾಮಿಕ್ ಮದುವೆ ಪ್ರಮಾಣಪತ್ರವನ್ನು ತೋರಿಸಿದ್ದಾರೆ. ಈ ಮೂಲಕ ರಾಣಾ ತ್ಯಾಬ್ ಸಿತಾರಾ ಅವರನ್ನು ಎರಡನೇ ಹೆಂಡತಿಯಾಗಿ ಸ್ವೀಕರಿಸಿದ್ದಾರೆ ಎಂದು ಖಚಿತಪಡಿಸಿದ್ದಾರೆ. ಅಪ್ರಾಪ್ತ ವಯಸ್ಕಳನ್ನು ಮದುವೆಯಾಗುವುದು ಈಗ ಪಾಕಿಸ್ತಾನದಲ್ಲಿ ಕಾನೂನುಬಾಹಿರವಾಗಿದೆ, ಆದರೆ ಸಿತಾರಾಗೆ 18 ವರ್ಷ ಎಂದು ಆಂಬ್ರಿನ್ ಪೊಲೀಸರಿಗೆ ತಿಳಿಸಿದ್ದಾರೆ.

Published by:Precilla Olivia Dias
First published: