Pakistan: ಪೊಲೀಸ್​ ಠಾಣೆಯಲ್ಲಿ ಆತ್ಮಹತ್ಯಾ ಬಾಂಬ್ ದಾಳಿ: 2 ಸ್ಫೋಟ 12 ಸಾವು!

ದಾಳಿ ಬಳಿಕ ಕಂಡು ಬಂದ ದೃಶ್ಯ

ದಾಳಿ ಬಳಿಕ ಕಂಡು ಬಂದ ದೃಶ್ಯ

ಪಾಕಿಸ್ತಾನದಲ್ಲಿ ಮತ್ತೊಮ್ಮೆ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆದಿದೆ. ಸ್ವಾತ್‌ನ ಕಬಲ್ ಪಟ್ಟಣದಲ್ಲಿರುವ ಭಯೋತ್ಪಾದನಾ ನಿಗ್ರಹ ಇಲಾಖೆ (CTD) ಪೊಲೀಸ್ ಠಾಣೆಯೊಳಗೆ ಎರಡು ಬಾಂಬ್‌ಗಳು ಸ್ಫೋಟಗೊಂಡಿವೆ. ಈ ಸ್ಫೋಟದಲ್ಲಿ 12 ಮಂದಿ ಸಾವನ್ನಪ್ಪಿದ್ದು, 40ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಮುಂದೆ ಓದಿ ...
  • Share this:

ಇಸ್ಲಮಾಬಾದ್(ಏ.26): ಬಾಂಬ್ ಸ್ಫೋಟದಿಂದ ಪಾಕಿಸ್ತಾನ ಮತ್ತೊಮ್ಮೆ ತತ್ತರಿಸಿದೆ. ಪಾಕಿಸ್ತಾನದ ಸ್ವಾತ್ ಜಿಲ್ಲೆಯ ಪೊಲೀಸ್ ಠಾಣೆಯ ಮೇಲೆ ಸೋಮವಾರ ಭಯೋತ್ಪಾದಕ ದಾಳಿ ನಡೆದಿದೆ. ಈ ದಾಳಿಯಲ್ಲಿ 12 ಮಂದಿ ಸಾವನ್ನಪ್ಪಿದ್ದಾರೆ. ಮೃತಪಟ್ಟವರಲ್ಲಿ ಎಂಟು ಪೊಲೀಸರು ಸೇರಿದ್ದಾರೆ. ಇದೇ ವೇಳೆ ದಾಳಿಯಲ್ಲಿ ಗಾಯಗೊಂಡವರ ಸಂಖ್ಯೆ 40ಕ್ಕೂ ಹೆಚ್ಚು ಎನ್ನಲಾಗಿದೆ. ಸ್ವಾತ್ ಜಿಲ್ಲೆಯ ಕಬಲ್‌ನಲ್ಲಿರುವ ಭಯೋತ್ಪಾದನಾ ನಿಗ್ರಹ ಇಲಾಖೆ (ಸಿಟಿಡಿ) ಮೇಲೆ ದಾಳಿ ನಡೆದಿದೆ. ಇದನ್ನು ಭಯೋತ್ಪಾದಕ ದಾಳಿ ಎಂದು ಪರಿಗಣಿಸಲಾಗಿದೆ.


ಸುದ್ದಿ ಸಂಸ್ಥೆ ಎಪಿ ಪ್ರಕಾರ, ಪೊಲೀಸ್ ಠಾಣೆಯೊಳಗೆ ಎರಡು ಸ್ಫೋಟಗಳು ಸಂಭವಿಸಿವೆ ಎಂದು ಪೊಲೀಸರು ಘಟನೆಯ ಬಗ್ಗೆ ಹೇಳಿದ್ದಾರೆ. ಈ ಸ್ಫೋಟದಿಂದಾಗಿ ಕಟ್ಟಡಗಳು ಸಂಪೂರ್ಣ ನೆಲಸಮವಾಗಿವೆ. ದಾಳಿಯ ಹೊಣೆಯನ್ನು ಯಾರೂ ತಕ್ಷಣವೇ ವಹಿಸಿಕೊಂಡಿಲ್ಲ, ಆದರೆ ಪಾಕಿಸ್ತಾನಿ ತಾಲಿಬಾನ್ ಕಳೆದ ವರ್ಷ ಸರ್ಕಾರದೊಂದಿಗೆ ಕದನ ವಿರಾಮವನ್ನು ಕೊನೆಗೊಳಿಸಿದ ನಂತರ ಇದೇ ರೀತಿಯ ದಾಳಿ ನಡೆಸುವುದಾಗಿ ಹೇಳಿಕೊಂಡಿತ್ತು.


ಇದನ್ನೂ ಓದಿ: ಉಂಡ ಮನೆಗೆ ದ್ರೋಹ ಬಗೆದ ಕಿರಾತಕ; ಮಾಲೀಕನ ಮಗಳನ್ನೇ ಅತ್ಯಾಚಾರಗೈದ ಕಾಮುಕ!


ಅದೇ ಸಮಯದಲ್ಲಿ, ಪ್ರಾಂತ್ಯದ ಲಕ್ಕಿ ಮಾರ್ವಾಟ್ ಜಿಲ್ಲೆಯಲ್ಲಿ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯನ್ನು ನಡೆಸಲಾಯಿತು, ಇದರಲ್ಲಿ ಮೂವರು ಭಯೋತ್ಪಾದಕರು ಮತ್ತು ಒಬ್ಬ ಪೊಲೀಸ್ ಅಧಿಕಾರಿಯನ್ನು ಕೊಲ್ಲಲಾಗಿತ್ತು, ಇದಾದ ಗಂಟಗಳ ಬಳಿಕ ಸ್ಫೋಟ ಸಂಭವಿಸಿದೆ. ಪೊಲೀಸ್ ಠಾಣೆ ಮೇಲಿನ ದಾಳಿಗೂ ಇದಕ್ಕೂ ಸಂಬಂಧವಿದೆಯೋ ಇಲ್ಲವೋ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಭಯೋತ್ಪಾದನಾ ನಿಗ್ರಹ ಪೊಲೀಸ್ ಕಟ್ಟಡದ ಒಂದು ಭಾಗ ಕುಸಿದಿದೆ ಮತ್ತು ರಕ್ಷಣಾ ಕಾರ್ಯಕರ್ತರು ಸತ್ತ ಮತ್ತು ಗಾಯಗೊಂಡವರ ದೇಹಗಳನ್ನು ಹೊರತೆಗೆದಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಅತಾವುಲ್ಲಾ ಖಾನ್ ಹೇಳಿದ್ದಾರೆ.


ಇದನ್ನೂ ಓದಿ: ಗಡ್ಡ ಬಿಟ್ಟರೆ ₹51000 ದಂಡ! ಮದುವೆಯಲ್ಲಿ ಡಿಜೆ ನಿಷೇಧ: ಸಮುದಾಯ ಸುಧಾರಣೆಗೆ ಮಹತ್ವದ ನಿರ್ಧಾರ


ಪೊಲೀಸ್ ಕಾಂಪೌಂಡ್‌ನಲ್ಲಿ ಕಬಲ್ ಸಿಟಿ ಪೊಲೀಸ್ ಠಾಣೆ ಮತ್ತು ಮೀಸಲು ಪೊಲೀಸ್ ಪಡೆಗಳ ಪ್ರಧಾನ ಕಚೇರಿಯೂ ಇದೆ, ಆದರೆ ಭಯೋತ್ಪಾದನಾ ನಿಗ್ರಹ ವಿಭಾಗದ ಕಟ್ಟಡವು ಹೆಚ್ಚು ಹಾನಿಗೊಳಗಾಗಿದೆ ಎಂದು ಅತಾವುಲ್ಲಾ ಖಾನ್ ಹೇಳಿದರು. ಅದೇ ಸಮಯದಲ್ಲಿ ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ಘಟನೆಯನ್ನು ಖಂಡಿಸಿದರು ಮತ್ತು ಮೃತರಿಗೆ ಸಂತಾಪ ಸೂಚಿಸಿದರು. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದರು. ಇದರೊಂದಿಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಘಟನೆಯ ವರದಿ ಕೇಳಿದರು.




ಸ್ವಾತ್ ಕಣಿವೆಯು ಒಂದು ಕಾಲದಲ್ಲಿ ಇಸ್ಲಾಮಿಕ್ ಉಗ್ರಗಾಮಿಗಳ ಭದ್ರಕೋಟೆಯಾಗಿತ್ತು, ಅವರು ಈ ಪ್ರದೇಶದಲ್ಲಿ ಕಟ್ಟುನಿಟ್ಟಾದ ಷರಿಯಾ ಅಥವಾ ಇಸ್ಲಾಮಿಕ್ ಆಡಳಿತವನ್ನು ಹೇರಿದ್ದರು. 2007 ರಲ್ಲಿ, ಸೇನೆಯು ಅಲ್ಲಿ ಬೃಹತ್ ಕಾರ್ಯಾಚರಣೆಯನ್ನು ಪ್ರಾರಂಭಿಸಿತು, ಇದರಲ್ಲಿ ಉಗ್ರಗಾಮಿಗಳನ್ನು ನಿರ್ಮೂಲನೆ ಮಾಡಲಾಯಿತು, ಬಳಿಕ ಇದು ಸಹಜ ಸ್ಥಿತಿಗೆ ಮರಳಿತು. ಔಪಚಾರಿಕವಾಗಿ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ ಎಂದು ಕರೆಯಲ್ಪಡುವ ಪಾಕಿಸ್ತಾನಿ ತಾಲಿಬಾನ್, ಅಫ್ಘಾನ್ ತಾಲಿಬಾನ್‌ನಿಂದ ಪ್ರತ್ಯೇಕ ಗುಂಪು, ಆದರೆ ನಿಕಟ ಸಂಬಂಧ ಹೊಂದಿದೆ.

top videos
    First published: