Drone Attack in Jammu| ಜಮ್ಮು ವಾಯುನೆಲೆ ಡ್ರೋನ್ ದಾಳಿ ಹಿಂದಿದೆಯೇ ಜೈಶ್​-ಎ-ಮೊಹಮ್ಮದ್ ಉಗ್ರರ ಕೈವಾಡ?; ಎನ್​ಐಎ ತನಿಖೆ

ಪಾಕಿಸ್ತಾನದ ಸೈನ್ಯ ಅಥವಾ ಐಎಸ್ಐನ ಸಕ್ರಿಯ ಪಾಲ್ಗೊಳ್ಳುವಿಕೆ ಇಲ್ಲದೆ ದಾಳಿ ನಡೆಯಲು ಸಾಧ್ಯವಿಲ್ಲ. ಹೀಗಾಗಿ ಜೈಶ್​-ಎ-ಮೊಹಮ್ಮದ್ ಸಂಘಟನೆ ಪಾಕಿಸ್ತಾನದ ಐಎಸ್​ಐ ಬೆಂಬಲ ಪಡೆದು ಈ ಸ್ಪೋಟವನ್ನು ನಡೆಸಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ತನಿಖೆಗೆ ಮುಂದಾಗಿರುವ ಎನ್​ಐಎ.

ತನಿಖೆಗೆ ಮುಂದಾಗಿರುವ ಎನ್​ಐಎ.

 • Share this:
  ಜಮ್ಮು-ಕಾಶ್ಮೀರ (ಜೂನ್ 28); ಭಾನುವಾರ ಮುಂಜಾನೆ 1.40ಕ್ಕೆ ಜಮ್ಮು ವಾಯುನೆಲೆಯ ಮೇಲೆ ಭಯೋತ್ಪಾದಕರು ಡ್ರೋನ್​ ದಾಳಿ ನಡೆಸಿದ್ದರು. 6 ನಿಮಿಷಗಳ ಅಂತರದಲ್ಲಿ ಎರಡು ಬಾಂಬ್ ಬ್ಲಾಸ್ಟ್​ ಆಗಿದ್ದು, ಇ್ಬಬರು ಸೈನಿಕರು ಗಾಯಕ್ಕೆ ಒಳಗಾಗಿದ್ದರು. ಈ ಸುದ್ದಿ ರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಈ ಸ್ಪೋಟ 2016ರ ಪಠಾಣ್ ಕೋಟ್​ ವಾಯನೆಲೆ ದಾಳಿಯ ಮುಂದು ವರಿಕೆಯಾಗಿದ್ದು, ಇದರ ಹಿಂದೆ ಜೈಶ್​-ಎ-ಮೊಹಮ್ಮದ್​ ಉಗ್ರ ಸಂಘಟನೆಯ ಕೈವಾಡ ಇರುವ ಶಂಕೆ ಇದೆ ಎಂದು ಗುಪ್ತಚರ ಇಲಾಖೆ ಉನ್ನತ ಮೂಲಗಳು ನ್ಯೂಸ್​18ಗೆ ಮಾಹಿತಿ ನೀಡಿದ್ದವು. ಆದರೆ, ಇದೀಗ ಪ್ರಕರಣದ ತನಿಖೆಗೆಯನ್ನು ಎನ್ಐಎ (NIA-National Investigation Agency) ಗೆ ವಹಿಸಲಾಗಿದ್ದು, ಎನ್​ಐಎ ಅಧಿಕಾರಿಗಳು ಸಹ ಈ ದಾಳಿಯ ಹಿಂದೆ ಜೈಶ್​-ಎ-ಮೊಹಮ್ಮದ್ ಸಂಘಟನೆಯ ಕೈವಾಡ ಇದೆ ಎಂಬ ನಿಟ್ಟಿನಲ್ಲಿಯೇ ತನಿಖೆಗೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

  ನಗರದ ಹೊರವಲಯದಲ್ಲಿರುವ ಸತ್ವಾರಿ ಪ್ರದೇಶದಲ್ಲಿ ಐಎಎಫ್ ನಿರ್ವಹಿಸುತ್ತಿದ್ದ ವಿಮಾನ ನಿಲ್ದಾಣದ ಉನ್ನತ ಭದ್ರತಾ ತಾಂತ್ರಿಕ ಪ್ರದೇಶದಲ್ಲಿ ಒಂದೇ ಅಂತಸ್ತಿನ ಕಟ್ಟಡದ ಮೇಲ್ ಛಾವಣಿಯ ಮೇಲೆ ಮೊದಲ ಸ್ಫೋಟ ಸಂಭವಿಸಿದ್ದರೆ, ಎರಡನೆಯ ಸ್ಪೋಟ ನೆಲದ ಮೇಲೆ ಸಂಭವಿಸಿತ್ತು. ಈ ಸ್ಪೋಟದಲ್ಲಿ ಯಾವುದೇ ಪ್ರಾಣ ಹಾನಿ ಆಗಿಲ್ಲವಾದರೂ, ಕೇಂದ್ರ ಭದ್ರತಾ ಪಡೆ ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದೆ.

  ಈ ದಾಳಿಯ ಹಿಂದೆ ಜೈಶ್​-ಎ-ಮೊಹಮ್ಮದ್ ಉಗ್ರ ಸಂಘಟನೆ ಕೈವಾಡ ಇರಬಹುದು ಎಂದು ಉನ್ನತ ಮೂಲಗಳು ಸಿಎನ್ಎನ್-ನ್ಯೂಸ್ 18 ಗೆ ತಿಳಿಸಿವೆ. "ಪಾಕಿಸ್ತಾನದ ಸೈನ್ಯ ಅಥವಾ ಐಎಸ್ಐನ ಸಕ್ರಿಯ ಪಾಲ್ಗೊಳ್ಳುವಿಕೆ ಇಲ್ಲದೆ ದಾಳಿ ನಡೆಯಲು ಸಾಧ್ಯವಿಲ್ಲ. ಹೀಗಾಗಿ ಜೈಶ್​-ಎ-ಮೊಹಮ್ಮದ್ ಸಂಘಟನೆ ಪಾಕಿಸ್ತಾನದ ಐಎಸ್​ಐ ಬೆಂಬಲ ಪಡೆದು ಈ ಸ್ಪೋಟವನ್ನು ನಡೆಸಿರುವ ಸಾಧ್ಯತೆ ಇದೆ" ಎನ್ನಲಾಗುತ್ತಿದೆ.

  ಇದನ್ನೂ ಓದಿ: Blast in Jammu Airport | ಜಮ್ಮು ವಿಮಾನ ನಿಲ್ದಾಣದಲ್ಲಿ ಡ್ರೋನ್ ಮೂಲಕ ಸ್ಟೋಟ; ಪಾಕಿಸ್ತಾನದ ಕೈವಾಡ ಶಂಕೆ?

  ಸ್ಫೋಟಗಳಲ್ಲಿ ಆರ್‌ಡಿಎಕ್ಸ್ ಬಳಸಲಾಗಿದೆಯೆಂದು ಸಹ ಶಂಕಿಸಲಾಗಿದೆ. ಹೆಚ್ಚಿನ ಲ್ಯಾಬ್ ಪರೀಕ್ಷೆಗಳಿಗೆ ಮಾದರಿಗಳನ್ನು ಕಳುಹಿಸಲಾಗಿದೆ ಮತ್ತು ಪ್ರತಿ ಸುಧಾರಿತ ಸ್ಫೋಟಕ ಸಾಧನಗಳಲ್ಲಿ (ಐಇಡಿ) ಸುಮಾರು 1.5 ಕೆಜಿ ಸ್ಫೋಟಕವನ್ನು ಬಳಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

  ಡ್ರೋನ್ ದಾಳಿಯ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾಗಲೂ, ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆಯಾದ ಲಷ್ಕರ್-ಎ-ತೊಯ್ಬಾ ಜೊತೆ ಸಂಬಂಧ ಹೊಂದಿದೆ ಎಂದು ಶಂಕಿಸಲಾಗಿರುವ ವ್ಯಕ್ತಿಯನ್ನು 6 ಕೆಜಿ ತೂಕದ ಐಇಡಿ ಜೊತೆಗೆ ಬಂಧಿಸಿದಾಗ ಮತ್ತೊಂದು ದೊಡ್ಡ ಅನಾಹುತವನ್ನು ತಪ್ಪಿಸಲಾಯಿತು ಎಂದು ಜಮ್ಮು ಮತ್ತು ಕಾಶ್ಮೀರ ಡಿಜಿಪಿ ದಿಲ್ಬಾಗ್ ಸಿಂಗ್ ತಿಳಿಸಿದ್ದಾರೆ.

  ಇದನ್ನೂ ಓದಿ: Crime News| ಅಪ್ರಾಪ್ತ ವಯಸ್ಸಿನ ಸ್ವಂತ ಮಗಳ ಮೇಲೆ ಅತ್ಯಾಚಾರ ಎಸಗಿದ ಮಧ್ಯಪ್ರದೇಶದ ಆರ್​ಎಸ್​ಎಸ್​ ಮುಖಂಡ ಬಂಧನ!

  ಜಮ್ಮು ವಿಮಾನ ವಾಯುನೆಲೆ ಮೇಲೆ ನಡೆದ ಬಾಂಬ್ ದಾಳಿ ಪ್ರಕರಣವನ್ನು ಭಯೋತ್ಪಾದಕ ದಾಳಿ ಎಂದು ಹೇಳಿರುವ ದಿಲ್ಬಾಗ್ ಸಿಂಗ್ , "ಪೊಲೀಸರು ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸೇರಿದಂತೆ ಇತರ ಏಜೆನ್ಸಿಗಳು ಐಎಎಫ್ ಅಧಿಕಾರಿಗಳೊಂದಿಗೆ ದಾಳಿಯ ಹಿಂದಿನ ಯೋಜನೆಯನ್ನು ಪತ್ತೆಹಚ್ಚಲು ಕೆಲಸ ಮಾಡುತ್ತಿವೆ. ತನಿಖೆಯನ್ನು ಎನ್‌ಐಎ ವಹಿಸಿಕೊಳ್ಳುವ ಸಾಧ್ಯತೆ ಇದೆ" ಎಂದು ಮಾಹಿತಿ ನೀಡಿದ್ದಾರೆ.  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: