ಮೋದಿಯನ್ನು ಫಾಲೋ ಮಾಡುತ್ತಿದ್ದಾರೆ ಇಮ್ರಾನ್​: ಪಾಕ್​ನಲ್ಲಿ ಆರಂಭವಾಯ್ತು ಭಾರತದಲ್ಲಿರುವ 6 ಯೋಜನೆಗಳು


Updated:August 28, 2018, 2:26 PM IST
ಮೋದಿಯನ್ನು ಫಾಲೋ ಮಾಡುತ್ತಿದ್ದಾರೆ ಇಮ್ರಾನ್​: ಪಾಕ್​ನಲ್ಲಿ ಆರಂಭವಾಯ್ತು ಭಾರತದಲ್ಲಿರುವ 6 ಯೋಜನೆಗಳು

Updated: August 28, 2018, 2:26 PM IST
ನ್ಯೂಸ್​ 18 ಕನ್ನಡ

ಇಸ್ಲಮಾಬಾದ್​(ಆ.28): ಇಮ್ರಾನ್​ ಖಾನ್​ ಪಾಕಿಸ್ತಾನದ ಪ್ರಧಾನ ಮಂತ್ರಿಯಾದ ಬಳಿಕ ಹೊಸ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಪಿಎಂ ಇಮ್ರಾನ್​ ಖಾನ್​ ಪಾಕಿಸ್ತಾನದ ಸದ್ಯದ ಸ್ಥಿತಿ ಹಾಗೂ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಕೆಲ ನೂತನ ಯೋಜನೆಗಳನ್ನು ಘೋಷಿಸಿದ್ದಾರೆ. ಆದರೆ ಇವುಗಳಲ್ಲಿ ಕೆಲ ಯೋಜನೆಗಳು ಭಾರತದ ಪ್ರಧಅನ ಮಂತ್ರಿ ನರೇಂದ್ರ ಮೋದಿ ಘೋಷಿಸಿರುವ ಯೋಜನೆಗಳಿಗೆ ಹೋಲಿಕೆಯಾಗುತ್ತಿವೆ. ಹಾಗಾದ್ರೆ ಪಾಕಿಸ್ತಾನ ಭಾರತದ ಯಾವೆಲ್ಲಾ ಯೋಜನೆಗಳನ್ನು ಕಾಪಿ ಮಾಡಿದೆ? ಇಲ್ಲಿದೆ ವಿವರ

ನಂಬರ್​ 1: ಸ್ವಚ್ಛ ಭಾರತ ಅಭಿಯಾನವನ್ನು ಗಮನಿಸಿ ಸ್ವಚ್ಛ ಪಾಕಿಸ್ತಾನ ಯೋಜನೆ:

ಇಮ್ರಾನ್​ ಖಾನ್​ ಸ್ವಚ್ಛ ಪಾಕಿಸ್ತಾನವನ್ನು ಎರಡನೇ ಅತಿದೊಡ್ಡ ಯೋಜನೆಯನ್ನಾಗಿ ಘೋಷಿಸಿಉದ್ದಾರೆ. ಇಮ್ರಾನ್​ ಅನ್ವಯ, ಪಾಕಿಸ್ತಾನವನ್ನು ಜತ್ತಿನ ಉತ್ಕೃಷ್ಟ ರಾಷ್ಟ್ರವನ್ನಾಗಿಸಲು ಹಾಗೂ ಪ್ರವಾಸೋದ್ಯಮವನ್ನು ಉತ್ತೇಜಿಸಲು ದೇಶವನ್ನು ಸ್ವಚ್ಛವಾಗಿಡುವುದು ಅತಿ ಮುಖ್ಯ ಎಂಬ ಅಭಿಪ್ರಾಯವಿದೆ. ಅವರು ಜನರ ಬಳಿ ಮುಂದಿನ 5 ವರ್ಷಗಳೊಳಗೆ ಸ್ವಚ್ಛವಾಗಿಸುವ ಮಾತುಗಳನ್ನಾಡಿದ್ದಾರೆ.ನಂಬರ್​ 2: ಆಯುಷ್ಯಮಾನ್​ ಯೋಜನೆಯಂತೆಯೇ ಉಚಿತ ಆರೋಗ್ಯ ವಿಮೆ: 
Loading...

ಇಮ್ರಾನ್​ ಖಾನ್​ ತಮ್ಮ ಭಾಷಣದಲ್ಲಿ ಪಾಕಿಸ್ತಾನದಲ್ಲಿ ವೈದ್ಯಕೀಯ ಸೌಲಭ್ಯಗಳ ಕುರಿತಾಗಿ ಮಾತನಾಡುತ್ತಾ, ಸರ್ಕಾರವು ಜನಸಾಮಾನ್ಯರಿಗೆ 5 ಲಕ್ಷ ಪಾಕಿಸ್ತಾನ ರೂಪಾಯಿಗಳ ಉಚಿತ ಚಿಕಿತ್ಸೆ ನೀಡುವುದಾಗಿ ಘೋಷಿಸಿದ್ದಾರೆ. ಇಮ್ರಾನ್​ ಸರ್ಕಾರ ಇದಕ್ಕಾಗಿ ಒಂದು ಆರೋಗ್ಯ ಕಾರ್ಡ್​ ಬಿಡುಗಡೆ ಮಾಡಲಿದೆ. ಮೋದಿ ಸರ್ಕಾರವೂ ಆಯುಷ್ಯಮಾನ್​ ಸ್ಕೀಂ ಅಡಿಯಲ್ಲಿ ಬಡವರಿಗೆ 5 ಲಕ್ಷ ರೂಪಾಯಿವರೆಗಿನ ವಾರ್ಷಿಕ ಚಿಕಿತ್ಸೆ ಉಚಿತವಾಗಿ ಘೋಷಿಸಿದ್ದರು.

ನಂಬರ್​ 3: ಪ್ರಧಾನ ಮಂತ್ರಿ ಆವಾಸ್​ ಯೋಜನೆಯಡಿಯಲ್ಲಿ ಎಲ್ಲಿರಿಗೂ ಮನೆ:

ಪಾಕಿಸ್ತಾನ ಪಿಎಂ ಇಮ್ರಾನ್​ ಖಾನ್​ ದೇಶದ ಪ್ರತಿಯೊಂದು ಕುಟುಂಬಕ್ಕೂ ಮನೆಗಳನ್ನು ನಿರ್ಮಿಸಿಕೊಡುವ ಭರವಸೆ ನೀಡಿದ್ದಾರೆ. ಇದಕ್ಕಾಗಿ ಸರ್ಕಾರ ಮುಂದಿನ ವರ್ಷಗಳಲ್ಲಿ ಸುಮಾರು 50 ಲಕಜ್ಷ ಮನೆಗಲನ್ನು ನಿರ್ಮಿಸಲಿದೆ ಎಂದು ಇಮ್ರಾನ್​ ತಿಳಿಸಿದ್ದಾರೆ. ಭಾರತದಲ್ಲೂ ಮೋದಿ ನೇತೃತ್ವದ ಸರ್ಕಾರ ಮನೆ ಇಲ್ಲದ ಕುಟುಂಬಗಳಿಗೆ ವಾಸಿಸಲು ಮನೆ ನಿರ್ಮಿಸಿ ಕೊಡಲು ಪ್ರಧಾನ ಮಂತ್ರಿ ಆವಾಸ್​ ಯೋಜನೆಯಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಇಮ್ರಾನ್​ ತಮ್ಮ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ತಮ್ಮ ನವ ಪಾಕಿಸ್ತಾನದ ಕನಸನ್ನು ಜನರೆದುರು ತೆರೆದಿಟ್ಟಿದ್ದರು.ನಂಬರ್​ 4: ಸ್ವಜಲ್​ ಸ್ಕೀಂನತೆ ಎಲ್ಲರಿಗೂ ಶುದ್ಧ ನೀರು:

ಇಮ್ರಾನ್​ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ ಮೂಲ ವಿಚಾರವೆಂದರೆ ನೀರು. ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ್ದ ಅವರು ದೇಶದಲ್ಲಿ ಜನರಿಗೆ ಕುಡಿಯಲು ಶುದ್ಧ ನೀರು ಸಿಗುತ್ತಿಲ್ಲ. ಕರಾಚಿಯಂತಹ ನಗರಗಳಲ್ಲಿ ಟ್ಯಾಂಕರ್​ ಮಾಫಿಯಾ ತಲೆ ಎತ್ತಿದೆ. ಹೀಗಿರುವಾಗ ತಮ್ಮ ಸರ್ಕಾರವು ಪಾಕಿಸ್ತಾನದ ಎಲ್ಲಾ ನಗರಗಳಿಗೆ ಶುದ್ಧ ನೀರು ತಲುಪಿಸುವ ಪ್ರಯತ್ನ ಮಾಡಲಿದೆ ಎಂಬ ಭರವಸೆ ನೀಡಿದ್ದಾರೆ. ಇತ್ತ ಭಾರತದಲ್ಲಿ ಮೋದಿ ಸರ್ಕಾರ ಪ್ರತಿಯೊಬ್ಬ ವ್ಯಕ್ತಿಗೂ ಶುದ್ಧ ನೀರು ತಲುಪಿಸಿಕೊಡುವ ನಿಟ್ಟಿನಲ್ಲಿ ಸ್ವಜಲ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯಡಿಯಲ್ಲಿ ಮೊದಲ ಹಂತದಲ್ಲಿ 115 ಜಿಲ್ಲೆಗಳಿಗೆ ಈ ಯೋಜನೆಯನ್ನಿ ಜಾರಿಗೊಳಿಸಿದೆ.

ನಂಬರ್​ 5: ಮುದ್ರಾ ಯೋಜನೆಯಂತಹ ಬ್ಯುಸಿನೆಸ್​ ಫಂಡಿಂಗ್​ ಯೋಜನೆ:

ಇಮ್ರಾನ್​ ಖಾನ್​ ಪಾಕಿಸ್ತಾನದಲ್ಲಿ ದಿನೇ ದಿನೇ ಹೆಚ್ಚುತ್ದತಿರುವ ನಿರುದ್ಯೋಗ ಸಮಸ್ಯೆಯನ್ನು ತಡೆಯುವ ನಿಟ್ಟಿನಲ್ಲಿ ಯೋಜನೆಗಳನ್ನು ಘೋಷಿಸಿದ್ದಾರೆ. ಇವುಗಳಲ್ಲಿ ಒಂದು ಯುವಜನರನ್ನು ಉದ್ಯೋಗ ಮಾಡಲು ಪ್ರೇರೇಸುವಂತಿದೆ. ಈ ಕುರಿತಾಗಿ ಮಾತನಾಡಿದ ಪಾಕ್​ ಪಿಎಂ ತಮ್ಮ ಉದ್ಯೋಗ ಆರಂಭಿಸಲು ಇಚ್ಛಿಸುವ ಯುವಕರಿಗೆ ತಮ್ಮ ಸರ್ಕಾರ ಬಡ್ಡಿರಹಿತ ಸಾಲ ನೀಡಲಿದೆ ಎಂದು ಹೇಳಿದ್ದಾರೆ. ಇತ್ತ ಮೋದಿಯೂ ಇಂತಹುದೇ ಯೋಜನೆಯನ್ನು ಜಾರಿಗೊಳಿಸಿದ್ದರೆಂಬುವುದು ಗಮನಾರ್ಹ ವಿಚಾರ. ಇದೇ ಸಂದರ್ಭದಲ್ಲಿ ಇಮ್ರಾನ್​ ಖಾನ್​ ಜನರ ಬಳಿ ಪ್ರಾಮಾಣಿಕವಾಗಿ ತೆರಿಗೆ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.


ನಂಬರ್​ 6: ಸ್ಕಿಲ್​ ಇಂಡಿಯಾದಂತಹ ಯೋಜನೆ:

ಮ್ಮ ರಾಷ್ಟ್ರದ ಯುವಜನರ ಬಳಿ ಸರಿಯಾದ ಉದ್ಯೋಗವಿಲ್ಲದವರ ಪಟ್ಟಿಯಲ್ಲಿ ಪಾಕಿಸ್ತಾನವೂ ಒಂದು. ಇದಕ್ಕೆ ಸರಿಯಾದ ಶಿಕ್ಷಣ ಹಾಗೂ ತರಬೇತಿ ಸಿಗದಿರುವುದೇ ಕಾರಣವಾಗಿದೆ. ತಮ್ಮ ದೇಶದ ಯುವಜನರಿಗೆ ಕೌಶಲ್ಯ ತರಬೇತಿ ನೀಡಲು ಯೋಜನೆಯನ್ನು ಜಾರಿಗೊಳಿಸುವುದಾಗಿ ಇಮ್ರಾನ್​ ಖಾನ್​ ಭರವಸೆ ನೀಡಿದ್ದಾರೆ. ಇದೇ ಸಂರ್ಭದಲ್ಲಿ ಉತ್ತಮ ಶಿಕ್ಷಣ ವ್ಯವಸ್ಥೆ ಇರದ ಹೊರತು ಯಾವುದೇ ದೇಶ ಅಭಿವೃದ್ಧಿ ಕಾಣಲು ಸಾಧ್ಯವಿಲ್ಲ ಎಂದು ಇಮ್ರಾನ್​ ಖಾನ್​ ಸ್ಪಷ್ಟಪಡಿಸಿದ್ದಾರೆ.
First published:August 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...