370ನೇ ವಿಧಿ ರದ್ದು ಯುದ್ದಕ್ಕೆ ಕಾರಣವಾದೀತು; ಭಾರತಕ್ಕೆ ಪಾಕ್​​ ಪ್ರಧಾನಿ ಇಮ್ರಾನ್​​ ಎಚ್ಚರಿಕೆ

ಜಮ್ಮು-ಕಾಶ್ಮೀರಕ್ಕೆ ವಿಶೇಷಾಧಿಕಾರ ಹಿಂಪಡೆಯುವ ನಿರ್ಣಯ ಹಾಗೂ ಜಮ್ಮು-ಕಾಶ್ಮೀರವನ್ನು ಎರಡು ಕೇಂದ್ರಾಡಳಿತವಾಗಿ ಮಾಡುವ ಪುನಾರಚನೆ ಮಸೂದೆ ಇವೆರಡಕ್ಕೂ ರಾಜ್ಯಸಭೆ ಮತ್ತು ಲೋಕಸಭೆ ಎರಡರಲ್ಲೂ ಒಪ್ಪಿಗೆ ಸಿಕ್ಕಂತಾಗಿದೆ.

Ganesh Nachikethu | news18
Updated:August 6, 2019, 7:31 PM IST
370ನೇ ವಿಧಿ ರದ್ದು ಯುದ್ದಕ್ಕೆ ಕಾರಣವಾದೀತು; ಭಾರತಕ್ಕೆ ಪಾಕ್​​ ಪ್ರಧಾನಿ ಇಮ್ರಾನ್​​ ಎಚ್ಚರಿಕೆ
370ನೇ ವಿಧಿ ರದ್ದು ಯುದ್ದಕ್ಕೆ ಕಾರಣವಾದೀತು; ಭಾರತಕ್ಕೆ ಪಾಕ್​​ ಪ್ರಧಾನಿ ಇಮ್ರಾನ್​​ ಎಚ್ಚರಿಕೆ
  • News18
  • Last Updated: August 6, 2019, 7:31 PM IST
  • Share this:
ನವದೆಹಲಿ(ಆಗಸ್ಟ್​​.06): 370ನೇ ವಿಧಿ ರದ್ದತಿಯೂ ಉಭಯ ದೇಶಗಳ ನಡುವೆ ಯುದ್ಧಕ್ಕೆ ಕಾರಣವಾದೀತು ಎಂದು ಪಾಕ್​​​ ಪ್ರಧಾನಿ ಇಮ್ರಾನ್​​ ಖಾನ್​​ ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ. ಭಾರತ ಪಾಕಿಸ್ತಾನದ ಮೇಲೆ ದಾಳಿಗೆ ಮುಂದಾದರೆ, ನಾವು ನಿಮಗೆ ತಕ್ಕಪಾಠ ಕಲಿಸುತ್ತೇವೆ. ಬಳಿಕ ಭಾರತವೂ ಪಶ್ಚಾತ್ತಾಪ ಪಡಬೇಕಾಗುತ್ತದೆ ಎಂದಿದ್ದಾರೆ.

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 370ನೇ ವಿಧಿಯನ್ನು ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಸರ್ಕಾರ ರದ್ದುಪಡಿಸಿದ ಕಾರಣ, ಪಾಕಿಸ್ತಾನ ಸಂಸತ್​​ ಜಂಟಿ ಅಧಿವೇಶನ ನಡೆಸಿತ್ತು. ಕೊನೆಗೆ ಸದನದವೂ ಗದ್ದಲ ಮತ್ತು ಕೋಲಾಹಲದ ನಡುವೆಯೇ ಮಾಡಬೇಕಾಯ್ತು. ಸಂಸತ್​​ನಲ್ಲಿ ಮಾತಾಡಿದ ಪಾಕ್​​ ಪ್ರಧಾನಿ ಇಮ್ರಾನ್​​ ಖಾನ್​​​, ಭಾರತ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಭಾರತದ ಆಕ್ರಮಣಕಾರಿ ಮನೋಭಾವಕ್ಕೆ ಪಾಕಿಸ್ತಾನವೂ ತಕ್ಕ ಶಾಸ್ತ ನೀಡಲಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿನ ಪರಿಸ್ಥಿತಿ ಕುರಿತು ತಾವು ಅವಲೋಕಿಸುತ್ತಿದ್ದೇವೆ. ಭದ್ರತಾ ಪಡೆಯೂ ಕೂಡ ಪರಿಸ್ಥಿತಿ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಕಾಶ್ಮೀರ ವಿಚಾರವಾಗಿ ವಿಶ್ವಸಂಸ್ಥೆ ಕೂಡ ಕಳವಳ ವ್ಯಕ್ತಪಡಿಸಿದೆ. ಈ ಕುರಿತಂತೆ ನಾವೂ ವಿಶ್ವಸಂಸ್ಥೆಗೆ ಮಾಹಿತಿ ನೀಡುತ್ತಾ ನೀಡಲಿದ್ದೇವೆ. ಭಾರತವೂ ಕಾಶ್ಮೀರ ಜನತೆಯ ಆಶೋತ್ತರಗಳ ವಿರುದ್ಧ ನಡೆಯಬಾರದು ಎಂದು ಒತ್ತಾಯಿಸಿದರು.

ಇದನ್ನೂ ಓದಿ: ಬಿಜೆಪಿ ಪಾಲಿಗೆ ಮುಸ್ಲಿಮರು ಪ್ರತ್ಯೇಕತಾವಾದಿಗಳು; ಮೋದಿ ವಿರುದ್ಧ ಫಾರೂಕ್ ಅಬ್ದುಲ್ಲಾ ಕಿಡಿ

ಗಾಂಧಿಯನ್ನೇ ಕೊಂದ ಆರ್​ಎಸ್​​ಎಸ್​ಗೆ ಯಾವುದೇ ಸಿದ್ಧಾಂತವಿಲ್ಲ. ಭಾರತದಲ್ಲಿ ಧರ್ಮದ ರಾಜಕಾರಣ ತಲ್ಲೆಯೆತ್ತಿದೆ. ಆರ್​ಎಸ್​ಎಸ್​​ ಭಾರತವನ್ನು ಕೇವಲ ಹಿಂದೂರಾಷ್ಟ್ರ ಎಂದು ಭಾವಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವೂ ಜಿನಿವಾ ಒಪ್ಪಂದಕ್ಕೆ ವ್ಯಕ್ತರಿಕ್ತವಾಗಿ ನಡೆದುಕೊಂಡಿದೆ. ಭಾರತದ ಈ ನಿರ್ಧಾರ ಸಂವಿಧಾನ ಬಾಹಿರ ಹಾಗೂ ಸಾಮಾಜಿಕ ನ್ಯಾಯದ ತತ್ತ್ವಕ್ಕೆ ಮಾಡಿದ ದ್ರೋಹ ಎಂದು ಇಮ್ರಾನ್​​ ಖಾನ್​​ ಕುಟುಕಿದ್ದಾರೆ.

ಇದನ್ನೂ ಓದಿ: ಬಿಜೆಪಿಗೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಿಗಬಹುದು; ಆದರೆ, ಕಾಶ್ಮೀರಿಗಳ ಮನಸು ಗೆಲ್ಲಲಾಗಲ್ಲ: ಯಶವಂತ್ ಸಿನ್ಹ ಟೀಕೆ

ಜಮ್ಮು-ಕಾಶ್ಮೀರಕ್ಕೆ ವಿಶೇಷಾಧಿಕಾರ ಹಿಂಪಡೆಯುವ ನಿರ್ಣಯ ಹಾಗೂ ಜಮ್ಮು-ಕಾಶ್ಮೀರವನ್ನು ಎರಡು ಕೇಂದ್ರಾಡಳಿತವಾಗಿ ಮಾಡುವ ಪುನಾರಚನೆ ಮಸೂದೆ ಇವೆರಡಕ್ಕೂ ರಾಜ್ಯಸಭೆ ಮತ್ತು ಲೋಕಸಭೆ ಎರಡರಲ್ಲೂ ಒಪ್ಪಿಗೆ ಸಿಕ್ಕಂತಾಗಿದೆ. ಇಂದು ಲೋಕಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್​​ ಶಾ ಅವರು ಮಂಡಿಸಿದ ಈ ವಿಧೇಯಕದ ಪರ 351, ವಿರುದ್ಧ 72 ಮತಗಳು ಸಿಕ್ಕಿವೆ.-------------
First published:August 6, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ