ಪಾಕಿಸ್ತಾನ ದಿವಾಳಿಯಾಗಿದೆ ಎಂದು ಒಪ್ಪಿಕೊಂಡ ಪ್ರಧಾನಿ Imran Khan.. ಇದೇ ಕಾರಣ!

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್  ಅವರು ನಿನ್ನೆ ನಡೆದ ಕಾರ್ಯಕ್ರಮವೊಂದರಲ್ಲಿ ತಮ್ಮ ಅಧಿಕಾರಾವಧಿಯಲ್ಲಿ ಪಾಕಿಸ್ತಾನದ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದೆ ಎಂದು ಒಪ್ಪಿಕೊಂಡಿದ್ದಾರೆ.

ಪಾಕ್‌ ಪ್ರಧಾನಿ

ಪಾಕ್‌ ಪ್ರಧಾನಿ

 • Share this:
  ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಗೆ (Pakistan PM Imran Khan) ಇದು ನಿಜಕ್ಕೂ ನಾಚಿಕೆಗೇಡಿನ ಸಂಗತಿ, ಹೌದು 'ಪಾಕ್ ನಡೆಸಲು ಸಾಕಷ್ಟು ಹಣವಿಲ್ಲ' ಎಂದು ಪಾಕ್‌ ಪ್ರಧಾನಿ ಹೇಳಿಕೆ ನೀಡುವ ಮೂಲಕ ದೀವಾಳಿ (we don’t have enough money) ಎಂದು ಒಪ್ಪಿಕೊಂಡಿದ್ದಾರೆ. ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್  ಅವರು ನಿನ್ನೆ ನಡೆದ ಕಾರ್ಯಕ್ರಮವೊಂದರಲ್ಲಿ ತಮ್ಮ ಅಧಿಕಾರಾವಧಿಯಲ್ಲಿ ಪಾಕಿಸ್ತಾನದ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿದೆ ಎಂದು ಒಪ್ಪಿಕೊಂಡಿದ್ದಾರೆ. ಹೆಚ್ಚುತ್ತಿರುವ ವಿದೇಶಿ ಸಾಲಗಳು (Rising foreign loans) ಮತ್ತು ಕಡಿಮೆ ತೆರಿಗೆ ವಸೂಲಾತಿಯು "ರಾಷ್ಟ್ರೀಯ ಭದ್ರತೆ"(national security) ಸಮಸ್ಯೆಯಾಗಿದೆ ಏಕೆಂದರೆ ಜನರ ಕಲ್ಯಾಣಕ್ಕಾಗಿ ಖರ್ಚು ಮಾಡಲು ಸರ್ಕಾರವು ಸಾಕಷ್ಟು ಸಂಪನ್ಮೂಲಗಳನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.

  ಇದನ್ನು ಓದಿ:Pakistan Debt - ಇಮ್ರಾನ್ ಖಾನ್ ಸರ್ಕಾರಕ್ಕೆ ಸಾಲ ನೀಡಲ್ಲ ಎಂದ IMF - ಸಾಲ ಕೇಳಿದೆಷ್ಟು ಗೊತ್ತಾ?

  ಸಾಲ ಪಡೆಯಬೇಕು(Should be borrowed)
  ಫೆಡರಲ್ ಬ್ಯೂರೋ ಆಫ್ ರೆವಿನ್ಯೂ (ಟಿಟಿಎಸ್) ಯ (ಟಿಟಿಎಸ್) ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಾ, "ನಮ್ಮ ದೊಡ್ಡ ಸಮಸ್ಯೆಯೆಂದರೆ ನಮ್ಮ ದೇಶವನ್ನು ನಡೆಸಲು ನಮ್ಮಲ್ಲಿ ಸಾಕಷ್ಟು ಹಣವಿಲ್ಲ,  ಇದರಿಂದಾಗಿ ಇತರ ದೇಶಗಳಿಂದ ಸಾಲ ತೆಗೆದುಕೊಳ್ಳಬೇಕಾಗಿದೆ ಎಂದು ಇಮ್ರಾನ್ ಖಾನ್ ಹೇಳಿದರು. ಹೆಚ್ಚುತ್ತಿರುವ ವಿದೇಶಿ ಸಾಲ ಮತ್ತು ತೆರಿಗೆ ಆದಾಯದಲ್ಲಿ ಕಡಿತವು ರಾಷ್ಟ್ರೀಯ ಭದ್ರತಾ ವಿಷಯಕ್ಕೆ ತಲುಪಿದೆ ಮತ್ತು ಜನರ ಕಲ್ಯಾಣಕ್ಕಾಗಿ ಖರ್ಚು ಮಾಡಲು ಈಗ ಸರ್ಕಾರದ ಬಳಿ ಸಾಕಷ್ಟು ಸಂಪನ್ಮೂಲಗಳೇ ಇಲ್ಲ ಎಂದು  ಹೇಳಿದ್ದಾರೆ.

  ದೊಡ್ಡ ಸಮಸ್ಯೆಯೇ ಉದ್ಭವ(The biggest problem arises)
  ದೇಶದಲ್ಲಿ ಸರಕಾರ ನಡೆಸಲು ಹಣವಿಲ್ಲದೇ ದೊಡ್ಡ ಸಮಸ್ಯೆಯೇ ಉದ್ಭವವಾಗಿದೆ, ಅದಕ್ಕಾಗಿಯೇ ನಾವು ಸಾಲ ಪಡೆಯುವ ಬಗ್ಗೆ ಚಿಂತಿಸಲಾಗಿದ್ದು . ಜನರು ತೆರಿಗೆ ಪಾವತಿಸಲು ಇಷ್ಟಪಡದಿದ್ದಾಗ ತೆರಿಗೆ ಪಾವತಿಸದ ಸಂಸ್ಕೃತಿಯು ವಸಾಹತುಶಾಹಿ ಪರಂಪರೆಯಾಗಿ ಮಾರ್ಪಡುತ್ತದೆ. ಜನರು ತಮ್ಮ ಹಣವನ್ನು ಖರ್ಚು ಮಾಡುತ್ತಿಲ್ಲ ಎಂದು ಅವರು ಇದೇ ವೇಳೆ ವಿಷಾದ ವ್ಯಕ್ತಪಡಿಸಿದರು. ಪಾಕಿಸ್ತಾನದಲ್ಲಿ ಆಳ್ವಿಕೆ ನಡೆಸಿದ್ದ ಹಿಂದಿನ ಸರ್ಕಾರಗಳನ್ನೂ ತರಾಟೆಗೆ ತೆಗೆದುಕೊಂಡ ಇಮ್ರಾನ್​ ಖಾನ್​, ಸ್ಥಳೀಯ ಸಂಪನ್ಮೂಲಗಳನ್ನು ಉತ್ಪಾದಿಸುವಲ್ಲಿ ವಿಫಲವಾದ ಕಾರಣ ಹಿಂದಿನ ಸರ್ಕಾರಗಳೂ ಸಾಲಕ್ಕೆ ಇಳಿದಿದ್ದವು ಎಂದು ಹೇಳಿದರು. ಈ ಸರ್ಕಾರಗಳು ದೊಡ್ಡ ಪ್ರಮಾಣದ ಹಣವನ್ನು ಸಾಲದಲ್ಲಿ ತೆಗೆದುಕೊಂಡಿವೆ ಎಂದು ಅವರು ಹೇಳಿದ್ದಾರೆ. ಕೇವಲ ಭಯೋತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡುವ ಪಾಕಿಸ್ತಾನ. ಭಾರತದ ಜೊತೆಜೊತೆಗೆ ಸ್ವತಂತ್ರ ಹೊಂದಿದ್ದರೂ ಭಾರತದ ಕಾಲು ಭಾಗದಷ್ಟೂ ಆರ್ಥಿಕ ಅಭಿವೃದ್ಧಿ ಹೊಂದಲು ಸಾಧ್ಯವಾಗದಾಗಿದೆ ಎಂದು ಅವರು ಒಪ್ಪಿಕೊಂಡಿದ್ದಾರೆ.

  ಇದನ್ನು ಓದಿ:Imran Khan : ಮಹಿಳೆಯರ ಮೇಲಿನ ಅತ್ಯಾಚಾರಕ್ಕೆ ಅವರು ಉಡುಗೆಯೇ ಕಾರಣ; ಪಾಕ್​ ಪ್ರಧಾನಿ

  ತೆರಿಗೆ ಪಾವತಿಸುವುದೇ ದಾರಿ(Paying taxes is the way to go)
  ಸ್ಥಳೀಯ ಸಂಪನ್ಮೂಲಗಳನ್ನು ಉತ್ಪಾದಿಸುವಲ್ಲಿ ವಿಫಲವಾದ ಕಾರಣ, ನಂತರದ ಸರ್ಕಾರಗಳು ಸಾಲದ ಮೊರೆ ಹೋಗಿವೆ. ಕಳೆದ ನಾಲ್ಕು ತಿಂಗಳಲ್ಲಿ ಸರ್ಕಾರವು USD 3.8 ಶತಕೋಟಿ ಮೌಲ್ಯದ ಹೊಸ ವಿದೇಶಿ ಸಾಲಗಳನ್ನು ಪಡೆದುಕೊಂಡಿದೆ ಎಂದು ಖಾನ್ ಹೇಳಿದರು. ಆರ್ಥಿಕ ವ್ಯವಹಾರಗಳ ಸಚಿವಾಲಯದ ಅಂಕಿಅಂಶಗಳು ಕಳೆದ ವರ್ಷ ಇದೇ ಅವಧಿಯಲ್ಲಿ ಪಡೆದ ಸಾಲಗಳಿಗೆ ಹೋಲಿಸಿದರೆ USD 580 ಮಿಲಿಯನ್ ಅಥವಾ ಶೇಕಡಾ 18 ರಷ್ಟು ಹೆಚ್ಚಾಗಿದೆ ಎಂದು ತೋರಿಸಿದೆ. 2009 ರಿಂದ 2018 ರವರೆಗಿನ ಹಿಂದಿನ ಎರಡು ಸರ್ಕಾರಗಳು ಭಾರಿ ಸಾಲವನ್ನು ಪಡೆದಿವೆ ಎಂದು ಖಾನ್ ಟೀಕಿಸಿದರು. ತೆರಿಗೆ ಪಾವತಿಸುವ ಮೂಲಕ ಮಾತ್ರ ಪಾಕಿಸ್ತಾನವು ಸಾಲದ "ದುಷ್ಟ ಚಕ್ರ" ವನ್ನು ಜಯಿಸಲು ಸಾಧ್ಯ ಎಂದು ಅವರು ಹೇಳಿದರು.
  Published by:vanithasanjevani vanithasanjevani
  First published: