ಭವ್ಯ ಬಂಗಲೆ, 524 ಸಿಬ್ಬಂದಿ, 80 ಐಷಾರಾಮಿ ಕಾರುಗಳು ಬೇಡ ಎಂದ ಪಾಕ್ ಪ್ರಧಾನಿ ಇಮ್ರಾನ್ ಖಾನ್!

news18
Updated:August 21, 2018, 10:30 AM IST
ಭವ್ಯ ಬಂಗಲೆ, 524 ಸಿಬ್ಬಂದಿ, 80 ಐಷಾರಾಮಿ ಕಾರುಗಳು ಬೇಡ ಎಂದ ಪಾಕ್ ಪ್ರಧಾನಿ ಇಮ್ರಾನ್ ಖಾನ್!
news18
Updated: August 21, 2018, 10:30 AM IST
ನ್ಯೂಸ್ 18 ಕನ್ನಡ

ಇಸ್ಲಾಮಾಬಾದ್ (ಆಗಸ್ಟ್ 21): ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಪ್ರಮಾಣವಚನ ಸ್ವಿಕರಿಸುತ್ತಿದ್ದಂತೆ ಇಮ್ರಾನ್ ಖಾನ್ ಅವರು ಐಷಾರಾಮಿ ಜೀವನಕ್ಕೆ ಕಡಿವಾಣ ಹಾಕಿ, ಸರಳತೆಯ ಮಂತ್ರ ಜಪಿಸಿದ್ದಾರೆ.

ಅದರ ಭಾಗವಾಗಿ ಪಾಕಿಸ್ತಾನ ಪ್ರಧಾನಿಗಳು ವಾಸಿಸುವ ಭವ್ಯ ಬಂಗಲೆ, 524 ಸೇವಕರು ಮತ್ತು 80 ಐಷಾರಾಮಿಗಳು ಕಾರುಗಳನ್ನು ಇಮ್ರಾನ್ ಖಾನ್ ಬೇಡ ಎಂದು ಹೇಳಿದ್ದಾರೆ. ಭವ್ಯ ಬಂಗಲೆಯ ಬದಲಿಗೆ ಪುಟ್ಟ ಮನೆಯಲ್ಲಿ ಇರುವುದಾಗಿ ಅವರು ಪ್ರಧಾನಿಯಾದ ನಂತರ ದೇಶವನ್ನುದ್ದೇಶಿಸಿ ಮಾಡಿದ ಪ್ರಥಮ ಭಾಷಣದಲ್ಲಿ ಈ ವಿಷಯ ತಿಳಿಸಿದ್ದಾರೆ.

ಪ್ರಧಾನಿಗಳ ಅಧಿಕೃತ ನಿವಾಸದ ಬದಲಿಗೆ ತಮ್ಮ ಸೇನಾ ಕಾರ್ಯದರ್ಶಿಯ ಮೂರು ಕೋಣೆಗಳ ಮನೆಯಲ್ಲಿ ಅವರು ಸೋಮವಾರದಿಂದ ವಾಸ್ತವ್ಯ ಆರಂಭಿಸಿದ್ದಾರೆ. 524 ಸೇವಕರ ಪೈಕಿ ಇಬ್ಬರು ಸೇವಕರು ಹಾಗೂ 80 ಕಾರುಗಳ ಪೈಕಿ ಎರಡನ್ನು ಮಾತ್ರ ಬಳಸಿಕೊಳ್ಳಲಿದ್ದಾರೆ.

ಪಾಕಿಸ್ತಾನ ಚುನಾವಣೆ ವೇಳೆ ಇಮ್ರಾನ್ ಖಾನ್ ಅವರು ಭ್ರಷ್ಟಾಚಾರಕ್ಕೆ ಕಡಿವಾಣ ಹಾಗೂ ಮಿತವ್ಯಯ ನೀತಿ ಜಾರಿಗೆ ತರುವುದಾಗಿ ಪ್ರಚಾರ ಮಾಡಿದ್ದರು. ಅದರಂತೆ ಅವರು ಪ್ರಧಾನಿಯಾಗಿ ಆಯ್ಕೆಯಾದ ನಂತರ ಮಿತವ್ಯಯ ನೀತಿಯನ್ನು ತಮ್ಮಿಂದಲೇ ಆರಂಭಿಸಿದ್ದಾರೆ.
First published:August 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...