ಪಾಕ್​​ ಆಕ್ರಮಿತ ಕಾಶ್ಮೀರ ನಮ್ಮದು; ಭವಿಷ್ಯದಲ್ಲಿ ಭಾರತ ನ್ಯಾಯಯುತ ಹಕ್ಕು ಹೊಂದಲಿದೆ; ಎಸ್ ಜೈಶಂಕರ್

ಈ ಹಿಂದೆ ಭಾರತ ಮತ್ತು ಪಾಕಿಸ್ತಾನದ ನಡುವೆ ಏನಾದರೂ ಮಾತುಕತೆ ನಡೆದರೆ, ಅದು ಪಾಕ್​​ ಆಕ್ರಮಿತ ಕಾಶ್ಮೀರದ ಬಗ್ಗೆ ಮಾತ್ರ ಆಗಿರಬೇಕು ಎಂದು ರಾಜನಾಥ್​ ಸಿಂಗ್​ ಹೇಳಿದ್ದರು.

news18
Updated:September 18, 2019, 2:31 PM IST
ಪಾಕ್​​ ಆಕ್ರಮಿತ ಕಾಶ್ಮೀರ ನಮ್ಮದು; ಭವಿಷ್ಯದಲ್ಲಿ ಭಾರತ ನ್ಯಾಯಯುತ ಹಕ್ಕು ಹೊಂದಲಿದೆ; ಎಸ್ ಜೈಶಂಕರ್
ವಿದೇಶಾಂಗ ಸಚಿವ ಎಸ್​​ ಜೈಶಂಕರ್​
news18
Updated: September 18, 2019, 2:31 PM IST
ನವದೆಹಲಿ(ಸೆ.17): ಪಾಕ್​​ ಆಕ್ರಮಿತ ಕಾಶ್ಮೀರವೂ ಭಾರತದ ಭಾಗ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್​​​ ಹೇಳಿದ್ದಾರೆ. ಅಲ್ಲದೇ ಮುಂದೊಂದು ದಿನ ಪಾಕ್​​ ಆಕ್ರಮಿತ ಕಾಶ್ಮೀರ(POK) ಮೇಲೆ ಭಾರವೂ ಕಾನೂನು ಬದ್ಧವಾಗಿಯೇ ಹಕ್ಕು ಹೊಂದಲಿದೆ ಎಂದು ತಿಳಿಸಿದ್ದಾರೆ.

ಭಾರತ ಪಾಕ್​ ಆಕ್ರಮಿತ ಕಾಶ್ಮೀರ ಬಗ್ಗೆ ಸ್ಪಷ್ಟ ನಿಲುವು ಹೊಂದಿದೆ. ಭವಿಷ್ಯದಲ್ಲಿ ನಾವೇ ಪಿಒಕೆ ಮೇಲೆ ನ್ಯಾಯಯುತವಾಗಿ ಹಕ್ಕು ಪಡೆಯಲಿದ್ದೇವೆ. ಪಿಒಕೆ ಯಾವತ್ತಿದ್ದರೂ ನಮ್ಮ ದೇಶದ ಭಾಗವೇ, ನಾವು ಬಿಟ್ಟುಕೊಡುವ ಮಾತೇ ಇಲ್ಲ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್​ ಪಾಕಿಸ್ತಾನಕ್ಕೆ ಖಡಕ್​​ ಸಂದೇಶ ರವಾನಿಸಿದ್ಧಾರೆ.

ಈ ಹಿಂದೆ ಭಾರತ ಮತ್ತು ಪಾಕಿಸ್ತಾನದ ನಡುವೆ ಏನಾದರೂ ಮಾತುಕತೆ ನಡೆದರೆ, ಅದು ಪಾಕ್​​ ಆಕ್ರಮಿತ ಕಾಶ್ಮೀರದ ಬಗ್ಗೆ ಮಾತ್ರ ಆಗಿರಬೇಕು. ಪಾಕ್​​ ಆಕ್ರಮಿತ ಕಾಶ್ಮೀರ ವಿಚಾರ ಹೊರತುಪಡಿಸಿ, ಇನ್ಯಾವ ವಿಚಾರದ ಬಗ್ಗೆಯೂ ಮಾತುಕತೆ ನಡೆಸಲು ಸಾಧ್ಯವಿಲ್ಲ. ಭಾರತವೂ ಇನ್ಮುಂದೆ ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಮಾತಾಡಬೇಕಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಹೇಳಿದ್ದರು.

ಹರಿಯಾಣದ ಪಂಚ್ ಕುಲದಲ್ಲಿ ಜನಾಶೀರ್ವಾದ ಯಾತ್ರೆಯನ್ನುದ್ದೇಶಿಸಿ ಮಾತಾಡಿದ ಕೇಂದ್ರ ರಕ್ಷಣಾ ಸಚಿವ ರಾಜ​ನಾಥ್​​ ಸಿಂಗ್ ಅವರು​​, ಪಾಕಿಸ್ತಾನವೂ ಭಯೋತ್ಪಾದನೆಯನ್ನು ಪೋಷಿಸುತ್ತಿದೆ. ಎಲ್ಲಿಯವರೆಗೂ ಪಾಕ್​​ ಉಗ್ರರಿಗೆ ನೆಲೆ ನೀಡುತ್ತದೋ, ಅಲ್ಲಿಯವರೆಗೂ ಭಾರತ ಮಾತುಕತೆಗೆ ಸಿದ್ಧವಿಲ್ಲ ಎಂದು ಖಡಕ್ಕಾಗಿ ಹೇಳಿದ್ದರು.

ಇದನ್ನೂ ಓದಿ: ಕೊನೆ ಉಸಿರು ಇರುವವರೆಗೂ ನಲ್ಲಮಲ ಅರಣ್ಯ ಉಳಿಸಲು ಹೋರಾಡುತ್ತೇನೆ; ಜನಸೇನೆ ಅಧ್ಯಕ್ಷ ಪವನ್​​ ಕಲ್ಯಾಣ್​​

ಇನ್ನು ಉಭಯ ದೇಶಗಳ ನಡುವೆ ಒಂದು ವೇಳೆ ಮಾತುಕತೆ ಎಂದಾದರೆ, ಅದು ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಮಾತ್ರ. ಈಗಾಗಲೇ ಜಮ್ಮು-ಕಾಶ್ಮೀರದ ಒಳಿತಿಗಾಗಿ ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದೇವೆ. ಅಲ್ಲಿನ ಯುವಕರ ಉತ್ತಮ ಭವಿಷ್ಯಕ್ಕಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದರು.

ಇತ್ತೀಚೆಗೆ ಭಾರತ ಸರಕಾರವು ಜಮ್ಮು-ಕಾಶ್ಮೀರದ ವಿಶೇಷಾಧಿಕಾರ ರದ್ದುಗೊಳಿಸಿದ ವಿಚಾರವಾಗಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಕ್ಲೋಸ್ ಡೋರ್ ಮೀಟಿಂಗ್ ನಡೆಯಿತು. ಮಂಡಳಿಯ ಎಲ್ಲಾ ಐದು ಖಾಯಂ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಈ ಅನೌಪಚಾರಿಕ ಸಭೆಯಲ್ಲಿ ಪಾಲ್ಗೊಂಡಿದ್ದರು.
Loading...

ಅದರ ಪ್ರಕಾರ, ಸಭೆಯಲ್ಲಿ ಪಾಕಿಸ್ತಾನಕ್ಕೆ ಚೀನಾದ ಬೆಂಬಲ ಮಾತ್ರವೇ ಸಿಕ್ಕಿದೆ. ಉಳಿದ ನಾಲ್ಕು ರಾಷ್ಟ್ರಗಳು ಭಾರತದ ನಿಲುವಿಗೆ ಬೆಂಬಲ ನೀಡಿವೆ ಎನ್ನಲಾಗಿದೆ. ಒಟ್ಟಾರೆಯಾಗಿ, ಜಮ್ಮು-ಕಾಶ್ಮೀರ ವಿಚಾರದಲ್ಲಿ ಎಲ್ಲೆ ಮೀರದಂತೆ ಸಂಯಮ ವಹಿಸಬೇಕೆಂದು ಭಾರತ ಮತ್ತು ಪಾಕಿಸ್ತಾನ ಎರಡೂ ದೇಶಗಳಿಗೆ ಭದ್ರತಾ ಮಂಡಳಿ ಬುದ್ಧಿ ಮಾತು ಹೇಳಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ಸಬ್ಸ್ಕ್ರೈಬ್ ಮಾಡಿ
------------
First published:September 17, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...