ಜೈಲುಪಾಲಾದ ಮಾಜಿ ಪಾಕ್​ ಪ್ರಧಾನಿ ಬಗ್ಗೆ ಭಾರತದ ಪ್ರಧಾನಿ ಅಭಿಪ್ರಾಯವೇನು?: ಮೋದಿ ಕಾಲೆಳೆದ ಕಾಂಗ್ರೆಸ್​


Updated:July 14, 2018, 4:10 PM IST
ಜೈಲುಪಾಲಾದ ಮಾಜಿ ಪಾಕ್​ ಪ್ರಧಾನಿ ಬಗ್ಗೆ ಭಾರತದ ಪ್ರಧಾನಿ ಅಭಿಪ್ರಾಯವೇನು?: ಮೋದಿ ಕಾಲೆಳೆದ ಕಾಂಗ್ರೆಸ್​
  • Share this:
ನ್ಯೂಸ್​-18 ಕನ್ನಡ

ನವದೆಹಲಿ(ಜುಲೈ.14): ಪನಾಮ ಪೇಪರ್​ ಹಗರಣದಲ್ಲಿ ದೋಷಿಯೆಂದು ಸಾಬೀತಾಗಿ ಜೈಲು ಸೇರಿದ ಮಾಜಿ ಪಾಕ್​ ಪ್ರಧಾನಿ ನವಾಜ್​ ಷರೀಫ್​ ಬಗ್ಗೆ ಭಾರತದ ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಭಿಪ್ರಾಯವೇನು ಎಂದು ಟ್ವಿಟ್ಟರ್​​​ನಲ್ಲಿ ಪ್ರಶ್ನಿಸುವ ಮೂಲಕ ಕಾಂಗ್ರೆಸ್ ​ಪ್ರಧಾನಿಗಳ ಕಾಲು ಎಳೆದಿದೆ.

ಮಾಜಿ ಪಾಕ್​ ಪ್ರಧಾನಿ ನವಾಜ್​ ಷರೀಫ್​ ಮತ್ತು ಮಗಳು ಮರಿಯಮ್​ ಅವರನ್ನು ಪಾಕ್​ ಪೊಲೀಸರು ಬಂಧಿಸಿದ್ದಾರೆ. ಷರೀಫರ ಬಂಧನದ ಬಗ್ಗೆ ತನ್ನ ಆತ್ಮೀಯ ಸ್ನೇಹಿತರಾದ ಪ್ರಧಾನಿ ಮೋದಿ ಅವರ ಅಭಿಪ್ರಾಯವೇನು ಎಂದು ಟ್ವೀಟ್​ನಲ್ಲಿ ಕಾಂಗ್ರೆಸ್​ ಪ್ರಶ್ನಿಸಿ ಮೋದಿ ಅವರನ್ನು ಟೀಕಿಸಿದೆ.


ಈ ಹಿಂದೆ 2015 ರಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಫ್ಘಾನಿಸ್ತಾನದಿಂದ ವಾಪಾಸ್​ ಆಗುವ ವೇಳೆ ಲಾಹೋರ್​ಗೆ ತೆರಳಿ ಪಾಕ್​ ಮಾಜಿ ಪ್ರಧಾನಿ ನವಾಜ್​ ಷರಿಫ್​ ಅವರ ಮೊಮ್ಮಗಳ ಮದುವೆಯಲ್ಲಿ ಭಾಗಿಯಾಗಿದ್ದರು. ಈ  ಸಂದರ್ಭದಲ್ಲಿಯೂ ಕಾಂಗ್ರೆಸ್​ ಪಕ್ಷ ಈ ವಿಚಾರವನ್ನು ಹಿಡಿದು ಟ್ರಾಲ್​ ಮಾಡಿತ್ತು.

ಇನ್ನು ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಅವರು ಕೂಡ ಇಂದು ಪ್ರಧಾನಿ ಅವರನ್ನು ಟೀಕಿಸಿದ್ದು, ಇತಿಹಾಸದಲ್ಲಿಯೇ ಒಂದು ಅಜೆಂಡಾ ಇಲ್ಲದೇ ಚೀನಾಕ್ಕೆ ಭೇಟಿ ನೀಡುವ ಪ್ರಧಾನಿ ಎಂದರೆ ನರೇಂದ್ರ ಮೋದಿಯವರು. ಭಾರತದಿಂದ ಚೀನಾಗೆ ತೆರಳಿದ ಬಳಿಕ ವಿದೇಶದ ರಾಜಕೀಯ ಒತ್ತಡಕ್ಕೆ ಮಣಿದು ಅಂತರಾಷ್ಟ್ರೀಯ ನೀತಿಗಳಿಗೆ ಸಹಿ ಹಾಕುತ್ತಾರೆ ಎಂದು ಟ್ವೀಟ್​ನಲ್ಲಿ ರಾಹುಲ್​ ವ್ಯಂಗ್ಯವಾಡಿದ್ದಾರೆ.ಕಾಂಗ್ರೆಸ್​ ಟ್ವೀಟ್​ಗೆ ಕೂಡಲೇ ಪ್ರತಿಕ್ರಿಯಿಸಿರುವ ಬಿಜೆಪಿ ನವಾಜ್​ ಷರೀಫ್​ ಅವರಂತೆಯೇ ಭಾರತದ ಭ್ರಷ್ಟ ರಾಜಕಾರಣಿಗಳನ್ನು ಜೈಲಿಗೆ ಹೋಗಬೇಕು. ಭಾರತದಲ್ಲಿಯೂ ಈ ರೀತಿಯ ರಾಜಕಾರಣಿಗಳು ಯಾವಾಗ ಜೈಲುಪಾಲಾಗುತ್ತಾರೋ ಎಂದು ದೇಶದ ಜನತೆ ಎದುರು ನೋಡುತ್ತಿದ್ದಾರೆ ಎನ್ನುವ ಮೂಲಕ ತಿರುಗೇಟು ನೀಡಿದೆ.ಇನ್ನು ಪನಾಮ ಪೇಪರ್ ಹಗರಣದಲ್ಲಿ ದೋಷಿ ಎಂದು ಸಾಬೀತಾದ ​ನವಾಜ್​ ಶರೀಫ್‍‍ಗೆ 10 ವರ್ಷ ಮತ್ತು ಮಗಳು ಮರಿಯಮ್​ ಅವರಿಗೆ 7 ವರ್ಷ ಜೈಲು ಶಿಕ್ಷೆಯನ್ನು ಪಾಕಿಸ್ತಾನ ಸುಪ್ರೀಂಕೋರ್ಟ್ ವಿಧಿಸಿತ್ತು. ಈ ಆದೇಶದ ಮೇಲೆ ಪಾಕ್​ ಮಾಜಿ ಪ್ರಧಾನಿ ಮತ್ತು ಮಗಳನ್ನು ಪೊಲೀಸರು ನಿನ್ನೆ ಲಾಹೋರ್​ನಲ್ಲಿ ಬಂಧಿಸಿದ್ದಾರೆ.
First published:July 14, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ