PAF Aircraft Crash: ಪಾಕಿಸ್ತಾನ ವಾಯುಪಡೆಯ ತರಬೇತಿ ವಿಮಾನ ಪತನ; ಜಿಗಿದು ಜೀವ ಉಳಿಸಿಕೊಂಡ ಪೈಲಟ್

ಪಾಕಿಸ್ತಾನದಲ್ಲಿ ಇಂದು ಬೆಳಗ್ಗೆ ತರಬೇತಿ ನೀಡುತ್ತಿದ್ದ ವಾಯುಪಡೆಯ ವಿಮಾನ ಇದ್ದಕ್ಕಿದ್ದಂತೆ ಕೆಳಮುಖವಾಗಿ ಚಲಿಸಲಾರಂಭಿಸಿತು. ಅಪಾಯದ ಮುನ್ಸೂಚನೆ ಸಿಗುತ್ತಿದ್ದಂತೆ ತರಬೇತಿ ಪಡೆಯುತ್ತಿದ್ದ ಪೈಲಟ್ ಕೆಳಗೆ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಈ ವರ್ಷ ಪಾಕಿಸ್ತಾನದ ವಾಯುಸೇನೆಯಲ್ಲಿ ನಡೆಯುತ್ತಿರುವ 5ನೇ ವಿಮಾನ ದುರಂತ ಇದಾಗಿದೆ.

Sushma Chakre | news18-kannada
Updated:September 15, 2020, 3:07 PM IST
PAF Aircraft Crash: ಪಾಕಿಸ್ತಾನ ವಾಯುಪಡೆಯ ತರಬೇತಿ ವಿಮಾನ ಪತನ; ಜಿಗಿದು ಜೀವ ಉಳಿಸಿಕೊಂಡ ಪೈಲಟ್
ಸಾಂದರ್ಭಿಕ ಚಿತ್ರ
  • Share this:
ಇಸ್ಲಮಾಬಾದ್ (ಸೆ. 15): ಪಾಕಿಸ್ತಾನದ ವಾಯುಪಡೆಗೆ ಸೇರಿದ ವಿಮಾನ ಇಂದು ಮುಂಜಾನೆ ಅಪಘಾತಕ್ಕೀಡಾಗಿದೆ. ಪಿಂಡಿಘೇಬ್ ಬಳಿ ಪಾಕಿಸ್ತಾನದ ತರಬೇತಿ ವಿಮಾನ ಪತನಗೊಂಡಿದ್ದು, ಈ ಅವಘಡ ಸಂಭವಿಸುತ್ತಿದ್ದಂತೆ ಪೈಲಟ್ ವಿಮಾನದಿಂದ ಕೆಳಗೆ ಹಾರಿ ಬಚಾವಾಗಿದ್ದಾರೆ. ಪ್ರತಿನಿತ್ಯದಂತೆ ಬೆಳಗ್ಗೆ ತರಬೇತಿ ನೀಡುತ್ತಿದ್ದ ವಿಮಾನ ಇದ್ದಕ್ಕಿದ್ದಂತೆ ಪತನಗೊಂಡಿದೆ. ಈ ವರ್ಷ ಪಾಕಿಸ್ತಾನದ ವಾಯುಸೇನೆಯಲ್ಲಿ ನಡೆಯುತ್ತಿರುವ 5ನೇ ವಿಮಾನ ದುರಂತ ಇದಾಗಿದೆ. ಈ ಘಟನೆಗೆ ನಿಖರವಾದ ಕಾರಣವೇನೆಂದು ತಿಳಿದುಬಂದಿಲ್ಲ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನದ ವಾಯುಪಡೆ ಅಧಿಕಾರಿಗಳು, ಪ್ರತಿನಿತ್ಯ ವಿಮಾನ ತರಬೇತಿ ನೀಡಲಾಗುತ್ತದೆ. ಇಂದು ಬೆಳಗ್ಗೆ ಕೂಡ ತರಬೇತಿ ನೀಡುತ್ತಿದ್ದ ವಿಮಾನ ಇದ್ದಕ್ಕಿದ್ದಂತೆ ಕೆಳಮುಖವಾಗಿ ಚಲಿಸಲಾರಂಭಿಸಿತು. ಈ ಘಟನೆಯಲ್ಲಿ ಯಾರ ಜೀವಕ್ಕೂ ಅಪಾಯವಾಗಿಲ್ಲ. ಪೈಲಟ್​ಗೆ ಸಣ್ಣಪುಟ್ಟ ಗಾಯಗಳಾಗಿವೆ. ಅಪಾಯದ ಮುನ್ಸೂಚನೆ ಸಿಗುತ್ತಿದ್ದಂತೆ ತರಬೇತಿ ಪಡೆಯುತ್ತಿದ್ದ ಪೈಲಟ್ ಕೆಳಗೆ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಹೀಗಾಗಿ, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ.



ಈ ಘಟನೆಯ ಕುರಿತು ವರದಿ ನೀಡುವಂತೆ ಪಾಕ್ ವಾಯುಪಡೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹಾಗೇ, ಇದಕ್ಕೆ ಕಾರಣವೇನೆಂದು ತನಿಖೆ ನಡೆಸಲು ಆದೇಶಿಸಲಾಗಿದೆ. ಯಾವ ವಿಮಾನ ಪತನಗೊಂಡಿದೆ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಈ ರೀತಿಯ ವಿಮಾನ ದುರಂತದಲ್ಲಿ ಪಾಕಿಸ್ತಾನ ವಾಯುಪಡೆ ಈ ವರ್ಷ 5 ವಿಮಾನಗಳನ್ನು ಕಳೆದುಕೊಂಡಿದೆ. ಈ ವರ್ಷ ಪಾಕಿಸ್ತಾನದ ವಾಯುಸೇನೆಯಲ್ಲಿ ನಡೆಯುತ್ತಿರುವ 5ನೇ ವಿಮಾನ ದುರಂತ ಇದಾಗಿದೆ ಎಂದು ಟೈಮ್ಸ್​ ನೌ ವರದಿ ಮಾಡಿದೆ.

ಹೆಚ್ಚಿನ ಮಾಹಿತಿಗೆ ನಿರೀಕ್ಷಿಸಿ...
Published by: Sushma Chakre
First published: September 15, 2020, 3:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading