Padma Awards 2023: ಪದ್ಮ ಪ್ರಶಸ್ತಿಗೆ ನೀವೂ ನಾಮನಿರ್ದೇಶನ ಮಾಡಿ; ಇಲ್ಲಿದೆ ಆನ್​ಲೈನ್ ಲಿಂಕ್

Padma Awards 2023 Nomination Link: ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನಗಳು/ಶಿಫಾರಸುಗಳನ್ನು ಆನ್‌ಲೈನ್‌ನಲ್ಲಿ ಮಾತ್ರಸ್ವೀಕರಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.

ಪದ್ಮ ಪ್ರಶಸ್ತಿ

ಪದ್ಮ ಪ್ರಶಸ್ತಿ

  • Share this:
    ದೇಶದ ಅತ್ಯುನ್ನತ ಪ್ರಶಸ್ತಿಗಳಾದ ಪದ್ಮ ಪ್ರಶಸ್ತಿ-2023 ಕ್ಕೆ (Padma Awards 2023) ಅರ್ಹರನ್ನು ನಾಮನಿರ್ದೇಶನ ಮಾಡಲು (Padma Awards 2023 Nominations) ಕೇಂದ್ರ ಸರ್ಕಾರ ಸಾರ್ವಜನಿಕರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನ ಮಾಡಲು ಸೆಪ್ಟೆಂಬರ್ 15, 2022 ರವರೆಗೆ ಅವಕಾಶ ಒದಗಿಸಲಾಗಿದೆ. ಎಂದು ಕೇಂದ್ರ ಸರ್ಕಾರ ಬುಧವಾರ ತಿಳಿಸಿದೆ. ಪದ್ಮ ಪ್ರಶಸ್ತಿಗಳಿಗೆ ನಾಮನಿರ್ದೇಶನಗಳು/ಶಿಫಾರಸುಗಳನ್ನು ಆನ್‌ಲೈನ್‌ನಲ್ಲಿ ಮಾತ್ರ  (Padma Awards 2023 Nomination Link)  ಸ್ವೀಕರಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ. ರಾಷ್ಟ್ರೀಯ ಪುರಸ್ಕರ್ ಪೋರ್ಟಲ್‌ನಲ್ಲಿ ಪದ್ಮ ಪ್ರಶಸ್ತಿ 2023ಕ್ಕೆ ನಾಮನಿರ್ದೇಶನ ಮಾಡಬಹುದಾಗಿದೆ.  ನೀವೂ ನಾಮನಿರ್ದೇಶಲನ ಮಾಡಲು ಇಲ್ಲಿದೆ ಲಿಂಕ್.

    ಪದ್ಮ ಪ್ರಶಸ್ತಿಯನ್ನು 1954 ರಲ್ಲಿ ಆರಂಭಿಸಲಾಗಿದೆ.  ಪದ್ಮ ವಿಭೂಷಣ, ಪದ್ಮಭೂಷಣ ಮತ್ತು ಪದ್ಮಶ್ರೀ ಸೇರಿ ಒಟ್ಟು  ಮೂರು ಪದ್ಮ ಪ್ರಶಸ್ತಿಗಳಿದ್ದು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಾಗಿವೆ. ಇವುಗಳನ್ನು ಪ್ರತಿ ವರ್ಷ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಘೋಷಿಸಲಾಗುತ್ತದೆ. ಪದ್ಮ ಪ್ರಶಸ್ತಿ 2023ಕ್ಕೆ ಅರ್ಹ ಸಾಧಕರನ್ನು ನಾಮನಿರ್ದೇಶನ ಮಾಡಲು ಇಲ್ಲಿ ಕ್ಲಿಕ್ ಮಾಡಿ

    ಯಾರಿಗೆ ಈ ಅತ್ಯುನ್ನತ ಪ್ರಶಸ್ತಿ ನೀಡಲಾಗುತ್ತದೆ?
    ಈ ಪ್ರಶಸ್ತಿಗಳನ್ನು ಆಯಾ ಕ್ಷೇತ್ರದಲ್ಲಿ ವಿಶಿಷ್ಟ ಕೆಲಸ ಮಾಡಿದ ಸಾಧಕರನ್ನು ಗುರುತಿಸಲು ಪ್ರಧಾನ ಮಾಡಲಾಗುತ್ತದೆ.  ಕಲೆ, ಸಾಹಿತ್ಯ ಮತ್ತು ಶಿಕ್ಷಣ, ಕ್ರೀಡೆ, ವೈದ್ಯಕೀಯ, ಸಮಾಜಕಾರ್ಯ, ವಿಜ್ಞಾನ ಮತ್ತು ಎಂಜಿನಿಯರಿಂಗ್, ಸಾರ್ವಜನಿಕ ವ್ಯವಹಾರಗಳು, ನಾಗರಿಕ ಸೇವೆ, ಮುಂತಾದ ಎಲ್ಲಾ ಕ್ಷೇತ್ರಗಳು ಮತ್ತು ವಿಭಾಗಗಳಲ್ಲಿನ ಅಸಾಧಾರಣ ಸಾಧನೆಗಳು ಮತ್ತು ಅಸಾಧಾರಣ ಮಟ್ಟದ ಸೇವೆಗಾಗಿ ನೀಡಲಾಗುತ್ತದೆ. ವ್ಯಾಪಾರ ಮತ್ತು ಕೈಗಾರಿಕೆ ಇತ್ಯಾದಿ ಕ್ಷೇತ್ರಗಳ ಅರ್ಹ ಸಾಧಕರಿಗೂ ಪದ್ಮ ಪ್ರಶಸ್ತಿ ಘೋಷಿಸಲಾಗುತ್ತದೆ.  

    ಜನಾಂಗ, ಉದ್ಯೋಗ, ಸ್ಥಾನ ಅಥವಾ ಲಿಂಗ ಬೇಧವಿಲ್ಲದೇ ಗೌರವ
    ಪದ್ಮ ಪ್ರಶಸ್ತಿಗೆ ಜನಾಂಗ, ಉದ್ಯೋಗ, ಸ್ಥಾನ ಅಥವಾ ಲಿಂಗದ ಭೇದವಿಲ್ಲದೇ ಆಯಾ ಕ್ಷೇತ್ರದಲ್ಲಿ ಅಸಾಧಾರಣ ಸೇವೆ ಸಲ್ಲಿಸಿದ ವ್ಯಕ್ತಿಗಳು ಅರ್ಹರಾಗಿರುತ್ತಾರೆ.  ಇನ್ನೊಂದು ಮುಖ್ಯ ಅಂಶವೆಂದರೆ  ವೈದ್ಯರು ಮತ್ತು ವಿಜ್ಞಾನಿಗಳನ್ನು ಹೊರತುಪಡಿಸಿ ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಕೆಲಸ ಮಾಡುವವರು ಸೇರಿದಂತೆ ಸರ್ಕಾರಿ ನೌಕರರು ಪದ್ಮ ಪ್ರಶಸ್ತಿಗಳಿಗೆ ಪರಿಗಣಿಸುವುದಿಲ್ಲ.

    ಇದನ್ನೂ ಓದಿ: Nayyara Noor: ಅಸ್ಸಾಂನಲ್ಲಿ ಜನಿಸಿದ 'ನೈಟಿಂಗೇಲ್ ಆಫ್ ಪಾಕಿಸ್ತಾನ್' ನಯ್ಯರಾ ನೂರ್ ಕರಾಚಿಯಲ್ಲಿ ನಿಧನ

    ಪದ್ಮ ಪ್ರಶಸ್ತಿಯನ್ನು "ಜನರ ಪದ್ಮ" ವನ್ನಾಗಿ ಪರಿವರ್ತಿಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಬದ್ಧವಾಗಿದೆ. ಸ್ವಯಂ ನಾಮನಿರ್ದೇಶನಗಳನ್ನು ಒಳಗೊಂಡಂತೆ ನಾಮನಿರ್ದೇಶನಗಳು ಮತ್ತು ಶಿಫಾರಸುಗಳನ್ನು ಎಲ್ಲಾ ನಾಗರಿಕರಿಂದ ಪ್ರೋತ್ಸಾಹಿಸಲಾಗುತ್ತದೆ ಎಂದು ಪ್ರಕಟಣೆಯು ತಿಳಿಸಿದೆ.

    ಇದನ್ನೂ ಓದಿ: Miss Universe: ನಿಮಗೆ ಮದುವೆಯಾಗಿದೆಯೇ? ಮಕ್ಕಳಾಗಿದ್ದಾರಾ? ಆದ್ರೂ ವಿಶ್ವ ಸುಂದರಿಯಾಗಬಹುದು!

    ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಮತ್ತು ಅವರ ಶ್ರೇಷ್ಠತೆ ಮತ್ತು ಸಾಧನೆಗಳು ಮನ್ನಣೆಗೆ ಅರ್ಹವಾದ ಪ್ರತಿಭಾವಂತ ವ್ಯಕ್ತಿಗಳನ್ನು ಗುರುತಿಸಲು ಸಂಘಟಿತ ಪ್ರಯತ್ನಗಳನ್ನು ಮಾಡಬಹುದು ಎಂದು ಪ್ರಕಟಣೆಯಲ್ಲಿ ಸಲಹೆ ನೀಡಲಾಗಿದೆ.
    Published by:guruganesh bhat
    First published: