ಪೌರತ್ವ ತಿದ್ದುಪಡಿ ಮಸೂದೆ ಕುತಂತ್ರದಿಂದ ಕೂಡಿದೆ; ರದ್ದುಗೊಳಿಸುವಂತೆ ಸುಪ್ರೀಂ ಮೊರೆ ಹೋಗುತ್ತೇವೆ; ಪಿ. ಚಿದಂಬರಂ

ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಜನ ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಅಸ್ಸಾಂನಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ. ಇಲ್ಲಿನ ಡಿಸ್ಪುರ್‌ ಜಂತ್ ಭವನದ ಬಳಿ ಪ್ರತಿಭಟನಾಕಾರರು ಬಸ್‌ಗೆ ಬೆಂಕಿ ಹಚ್ಚಿ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.


Updated:December 11, 2019, 8:03 PM IST
ಪೌರತ್ವ ತಿದ್ದುಪಡಿ ಮಸೂದೆ ಕುತಂತ್ರದಿಂದ ಕೂಡಿದೆ; ರದ್ದುಗೊಳಿಸುವಂತೆ ಸುಪ್ರೀಂ ಮೊರೆ ಹೋಗುತ್ತೇವೆ; ಪಿ. ಚಿದಂಬರಂ
ಪಿ. ಚಿದಂಬರಮ್
  • Share this:
ನವದೆಹಲಿ(ಡಿ.11): ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವೂ ಹಿಂದುತ್ವ ಅಂಜೆಂಡಾ ಹೇರುವ ಸಲುವಾಗಿಯೇ ಪೌರತ್ವ ತಿದ್ದುಪಡಿ ಮಸೂದೆ ಜಾರಿಗೆ ಮುಂದಾಗಿದೆ. ಈ ಮಸೂದೆಯೂ ಕಪಟತನದಿಂದ ಕೂಡಿದೆ ಎಂದು ಕಾಂಗ್ರೆಸ್​ನ ಹಿರಿಯ ನಾಯಕ ಪಿ. ಚಿದಂಬರಂ ಅಭಿಪ್ರಾಯಪಟ್ಟಿದ್ದಾರೆ.

ಇಂದು ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಕೇಂದ್ರ ಮಾಜಿ ಸಚಿವ ಪಿ. ಚಿದಂಬರಂ ಹರಿಹಾಯ್ದರು. ಭಾರತದ ಪೌರತ್ವವೂ ಹುಟ್ಟು ಮತ್ತು ವಂಶಪಾರಂಪರಿಕವಾಗಿ ಬರುತ್ತದೆ ಎಂದು ಸಂವಿಧಾನ ಹೇಳುತ್ತದೆ. ಆದರೀಗ ಭಾರತೀಯ ಜನತಾ ಪಕ್ಷ ಸರ್ಕಾರ ಸ್ವೇಚ್ಛೆ ಉದ್ದೇಶದಿಂದ ಈ ಮಸೂದೆ ಜಾರಿಗೆ ಮುಂದಾಗಿದೆ ಎಂದು ಕುಟುಕಿದರು.

ಅಸಮಾನತೆ, ಅಕ್ರಮದಿಂದ ಕೂಡಿರುವ ಈ ಮಸೂದೆ ಸಂವಿಧಾನದ 14ನೇ ವಿಧಿ ಉಲ್ಲಂಘನೆ ಮಾಡಿದೆ. ಇದೊಂದು ಅಸಂವಿಧಾನಿಕ ಮಸೂದೆ. ಈ ಮಸೂದೆಗೆ ಕಾನೂನು ಸಲಹೆ ನೀಡಿದ್ಯಾರು? ಕಾನೂನು ಸಚಿವಾಲಯ? ಗೃಹ ಸಚಿವಾಲಯ? ಅಟಾರ್ನಿ ಜನರಲ್? ಯಾರು ಎಂದು ಎಲ್ಲರಿಗೂ ಗೊತ್ತಿದೆ. ಇದರ ವಿರುದ್ಧ ಸುಪ್ರೀಂಕೋರ್ಟ್​ ಮೊರೆ ಹೋಗಲಿದ್ದೇವೆ ಎಂದು ಪಿ. ಚಿದಂಬರಂ ಸಿಡಿಮಿಡಿಗೊಂಡರು.

ಇದನ್ನೂ ಓದಿ: ಪೌರತ್ವ ತಿದ್ದುಪಡಿ ಮಸೂದೆ ಭೀತಿ; ಮುನ್ನೆಚ್ಚರಿಕಾ ಕ್ರಮ; ಕರ್ನಾಟಕ ಮಸೀದಿಗಳಲ್ಲಿ ಮುಸ್ಲಿಮರ ದಾಖಲಾತಿ ಪರಿಶೀಲನೆ

ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಜನ ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಅಸ್ಸಾಂನಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದೆ. ಇಲ್ಲಿನ ಡಿಸ್ಪುರ್‌ ಜಂತ್ ಭವನದ ಬಳಿ ಪ್ರತಿಭಟನಾಕಾರರು ಬಸ್‌ಗೆ ಬೆಂಕಿ ಹಚ್ಚಿ, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತ್ರಿಪುರಾ ಹಾಗೂ ಅಸ್ಸಾಂನಲ್ಲಿ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ, ಪರಿಸ್ಥಿತಿ ನಿಯಂತ್ರಿಸಲು ಸೇನೆಯನ್ನು ನಿಯೋಜನೆ ಮಾಡಲಾಗಿದೆ.

ಅಸ್ಸಾಂ, ಗುವಾಹಟಿ, ತ್ರಿಪುರಾಗಳಲ್ಲಿ ಪರಿಸ್ಥಿತಿ ಬಿಗಡಾಯಿಸುತ್ತಿರುವುದನ್ನು ಮನಗಂಡ ಕೇಂದ್ರ ಸರ್ಕಾರ ಬೆಳಗ್ಗೆ 140 ಯೋಧರನ್ನು ಕಳುಹಿಸಿತ್ತು. ಆದರೆ ಹಿಂಸಾಚಾರ ಭುಗಿಲೆದ್ದ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲು ಐದು ಸಾವಿರ ಯೋಧರನ್ನು ಕಳುಹಿಸಲಾಗಿದೆ ಎಂದು ವರದಿ ವಿವರಿಸಿದೆ. ಅಸ್ಸಾಂ ಸರ್ಕಾರ ಈಗಾಗಲೇ ಮೊಬೈಲ್ ಹಾಗೂ ಇಂಟರ್ನೆಟ್ ಸೇವೆಯನ್ನು ಸುಮಾರು ಹತ್ತು ಜಿಲ್ಲೆಗಳಲ್ಲಿ ಕಡಿತಗೊಳಿಸಿದೆ. ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಹಲವಾರು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ ಎಂದು ವರದಿ ತಿಳಿಸಿದೆ.
First published:December 11, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ