ನವದೆಹಲಿ: ಮಾಜಿ ಕೇಂದ್ರ ಸಚಿವ (Former Central minister) ಪಿ. ಚಿದಂಬರಂ (P Chidambaram) ಅವರ ಎಡ ಪಕ್ಕೆಲುಬು ಮೂಳೆ (Left rib bone) ಮುರಿದಿದೆ (Broke) ಎನ್ನಲಾಗಿದೆ. ನ್ಯಾಷನಲ್ ಹೆರಾಲ್ಡ್ ಕೇಸ್‌ನಲ್ಲಿ (National Herald Case) ಜಾರಿ ನಿರ್ದೇಶನಾಲಯ (ED) ರಾಹುಲ್ ಗಾಂಧಿ (Rahul Gandhi) ಹಾಗೂ ಸೋನಿಯಾ ಗಾಂಧಿಗೆ (Sonia Gandhi) ನೋಟಿಸ್ (Notoce) ಕೊಟ್ಟಿದ್ದಕ್ಕೆ ಕಾಂಗ್ರೆಸ್ (Congress) ಕೆಂಡಾಮಂಡಲವಾಗಿದೆ. ರಾಷ್ಟ್ರ ರಾಜಧಾನಿ ನವದೆಹಲಿ (New Delhi), ರಾಜ್ಯ ರಾಜಧಾನಿ ಬೆಂಗಳೂರು (Bengaluru) ಸೇರಿದಂತೆ ದೇಶಾದ್ಯಂತ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ರು. ಈ ವೇಳೆ ದೇಹಲಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಹೀಗಾಗಿ ಪೊಲೀಸರು ಕಾಂಗ್ರೆಸ್ ನಾಯಕರನ್ನು ವಶಕ್ಕೆ ಪಡೆದುಕೊಂಡಿದ್ದರು. ಈ ವೇಳೆ ಪಿ ಚಿದಂಬರಂ ಅವರು ಎಡ ಪಕ್ಕೆಲುಬು ಮೂಳೆ ಮುರಿತಕ್ಕೆ ಒಳಗಾಗಿದ್ದಾರೆ ಎನ್ನಲಾಗಿದೆ.
ಪಿ. ಚಿದಂಬರಂ ಎಡ ಪಕ್ಕೆಲುಬು ಮುರಿತ
ಇಂದು ನಡೆದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರ ಎಡ ಪಕ್ಕೆಲುಬು ಮುರಿತಕ್ಕೆ ಒಳಗಾಗಿದೆ. ಪಿ ಚಿದಂಬರಂ ಅವರನ್ನು ಪೊಲೀಸರು ಹೊಡೆದರು, ಅವರ ಕನ್ನಡಕವನ್ನು ನೆಲದ ಮೇಲೆ ಎಸೆಯಲಾಯಿತು. ಅವರ ಎಡ ಪಕ್ಕೆಲುಬಿನಲ್ಲಿ ಕೂದಲು ಮುರಿತವಾಗಿದೆ ಅಂತ ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ.
ಕಾಂಗ್ರೆಸ್ ನಾಯಕರ ಮೇಲೆ ನಡೀತಾ ಹಲ್ಲೆ?
ಕಾಂಗ್ರೆಸ್ ಪ್ರತಿಭಟನೆ ವೇಳೆ ನಾಯಕರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಅಂತ ಆರೋಪಿಸಲಾಗಿದೆ. ಪಕ್ಷದ ನಾಯಕ ಕೆಸಿ ವೇಣುಗೋಪಾಲ್ ಮೇಲೆ ಮಾರಣಾಂತಿಕ ದಾಳಿ ನಡೆಸಲಾಗಿದೆ ಎಂದು ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ ಆರೋಪಿಸಿದ್ದಾರೆ. ಸಂಸದ ಪ್ರಮೋದ್ ತಿವಾರಿ ಅವರನ್ನು ರಸ್ತೆಯಲ್ಲಿ ಎಸೆಯಲಾಗಿದ್ದು, ಅವರ ತಲೆಗೆ ಗಾಯ ಮತ್ತು ಪಕ್ಕೆಲುಬು ಮುರಿತವಾಗಿದೆ ಅಂತ ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ ಆರೋಪಿಸಿದ್ದಾರೆ.
ಇದನ್ನೂ ಓದಿ: Rahul Gandhi: ಇಂದು ಇಡಿ ಕಚೇರಿಯಲ್ಲಿ ಏನೇನಾಯ್ತು? ನಾಳೆಯೂ ನಡೆಯಲಿದೆ ರಾಹುಲ್ ಗಾಂಧಿ ವಿಚಾರಣೆ
ರಣದೀಪ್ ಸುರ್ಜೇವಾಲ್ ಆಕ್ರೋಶ
ಇನ್ನು ಕೇಂದ್ರ ಸರ್ಕಾರ ಹಾಗೂ ಪೊಲೀಸರ ವಿರುದ್ಧ ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಇಡೀ ದಿನ ಕಳೆದಿದೆ, ಆದರೆ ದಾಳಿ ಮುಂದುವರಿಯುತ್ತದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಸಂಸದ ಶಕ್ತಿ ಸಿಂಗ್ ಗೋಹಿಲ್ ಅವರ ಮೇಲೂ ಹಲ್ಲೆ ನಡೆದಿದೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಥಳಿಸಲಾಗಿದೆ. ಸಾವಿರಾರು ಮಂದಿ ಜೈಲಿನಲ್ಲಿದ್ದಾರೆ. ಪ್ರಜಾಪ್ರಭುತ್ವವನ್ನು ತುಳಿಯಲಾಗಿದೆ. ಹೀಗಾಗಿ ನರೇಂದ್ರ ಮೋದಿ ಸರ್ಕಾರವನ್ನು ದೇಶ ಕ್ಷಮಿಸುವುದಿಲ್ಲ ಅಂತ ಟ್ವೀಟ್ ಮಾಡಿದ್ದಾರೆ.
मोदी सरकार बर्बरता की हर हद पार कर गई।
पूर्व गृह मंत्री, श्री पी.चिदंबरम के साथ पुलिस की धक्कामुक्की हुई, चश्मा ज़मीन पर फेंका, उनकी बायीं पसलियों में हेयरलाइन फ्रैक्चर है।
सांसद प्रमोद तिवाड़ी को सड़क पर फेंका गया। सिर में चोट और पसली में फ्रैक्चर है।
क्या यह प्रजातंत्र है? pic.twitter.com/rRLOhIOTJ3
— Randeep Singh Surjewala (@rssurjewala) June 13, 2022
ರಾಹುಲ್ ಗಾಂಧಿ ಸತತ 8 ಗಂಟೆಗಳ ಕಾಲ ಅಧಿಕಾರಿ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಗೆ ವರಗೆ ವಿಚಾರಣೆ ಎದುರಿಸಿದ ರಾಹುಲ್ ಗಾಂಧಿಗೆ ಒಂದೂವರೆ ಗಂಟೆಗಳ ಕಾಲ ಊಟದ ವಿರಾಮ ನೀಡಲಾಗಿತ್ತು. ಬಳಿಕ ಮಧ್ಯಾಹ್ನ 3.30ಕ್ಕೆ ಮತ್ತೆ ವಿಚಾರಣೆಗೆ ಹಾಜರಾದ ರಾಹುಲ್ ಗಾಂಧಿ ರಾತ್ರಿ 9 ಗಂಟೆ ವರೆಗೆ ವಿಚಾರಣೆ ಎದುರಿಸಿದ್ದಾರೆ.
ನಾಳೆಯೂ ವಿಚಾರಣೆಗೆ ಹಾಜರಾಗಲಿದ್ದಾರೆ ರಾಹುಲ್ ಗಾಂಧಿ
ಇನ್ನು ಇಂದಿಗೇ ರಾಹುಲ್ ಗಾಂಧಿ ವಿಚಾರಣೆ ಮುಗಿದಿಲ್ಲ. ಹೀಗಾಗಿ ನಾಳೆಯೂ ಮತ್ತೊಮ್ಮೆ ವಿಚಾರಣೆಗೆ ಬರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಹೀಗಾಗಿ ನಾಳೆ ಕೂಡ ರಾಹುಲ್ ಗಾಂಧಿ ವಿಚಾರಣೆಗಾಗಿ ಇಡಿ ಕಚೇರಿಗೆ ಆಗಮಿಸಲಿದ್ದಾರೆ ಅಂತ ಹೇಳಲಾಗ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ