43 ದಿನಗಳ ಜೈಲು ವಾಸದಿಂದ 5 ಕೆ.ಜಿ. ತೂಕ ಕಳೆದುಕೊಂಡ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ!

ಜಾಮೀನು ಅರ್ಜಿ ವಿಚಾರಣೆ ವೇಳೆ ಕಪಿಲ್ ಸಿಬಾಲ್ ಮತ್ತು ಸಿಬಿಐ ಪರ ವಕೀಲ, ಸಾಲಿಸಿಟರಿ ಜನರಲ್ ತುಷಾರ್ ಮೆಹ್ತಾ ಇಬ್ಬರ ನಡುವೆ ಬಿರುಸಿನ ವಾದ-ಪ್ರತಿವಾದ ನಡೆದವು. 2ಜಿ ಹಗರಣದ ಪ್ರಕರಣದಲ್ಲಿ ಏನೆಲ್ಲಾ ಆಗಿದೆ ಎಂಬುದು ಎಲ್ಲರಿಗೂ ಗೊತ್ತು. ಚಾರ್ಜ್​ಶೀಟ್​ ಸಲ್ಲಿಕೆ ಮಾಡಿದ ಬಳಿಕ ಎಲ್ಲ ಆರೋಪಿಗಳು ಖುಲಾಸೆಗೊಂಡರು ಎಂದು ಸಿಬಾಲ್ ಹೇಳಿದರು.

HR Ramesh | news18-kannada
Updated:October 18, 2019, 9:29 PM IST
43 ದಿನಗಳ ಜೈಲು ವಾಸದಿಂದ 5 ಕೆ.ಜಿ. ತೂಕ ಕಳೆದುಕೊಂಡ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ!
ಪಿ. ಚಿದಂಬರಂ
  • Share this:
ನವದೆಹಲಿ: ಐಎನ್​ಎಕ್ಸ್​ ಮೀಡಿಯಾ ಪ್ರಕರಣದಲ್ಲಿ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರು ನ್ಯಾಯಾಂಗ ಬಂಧನದ್ದಾರೆ. ಕಳೆದ 43 ದಿನಗಳ ಕಾಲ ಜೈಲಿನಲ್ಲಿರುವುದರಿಂದ 5 ಕೆ.ಜಿ. ತೂಕ ಕಳೆದುಕೊಂಡು, ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಶುಕ್ರವಾರ ಸುಪ್ರೀಂಕೋರ್ಟ್​ಗೆ ತಿಳಿಸಿದ್ದಾರೆ.

ಪ್ರಕರಣದಲ್ಲಿ ಜಾಮೀನು ನೀಡುವಂತೆ ಸುಪ್ರೀಂಕೋರ್ಟ್​ನಲ್ಲಿ ಚಿದಂಬರಂ ಪರ ವಕೀಲರು ಮನವಿ ಮಾಡಿದ್ದಾರೆ. ನ್ಯಾಯಮೂರ್ತಿ ಆರ್.ಭಾನುಮತಿ, ನ್ಯಾ.ಎ.ಎಸ್.ಬೋಪಣಣ ಮತ್ತು ಋಷಿಕೇಶ್ ಅವರಿರುವ ನ್ಯಾಯಪೀಠದ ಮುಂದೆ ವಕೀಲ ಕಪಿಲ್ ಸಿಬಾಲ್ ಅವರು, 43 ದಿನಗಳಿಂದ ಜೈಲಿನಲ್ಲಿರುವ 74 ವರ್ಷದ ಚಿದಂಬರಂ ಅವರು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಈ ಮೊದಲು 73.5 ಕೆ.ಜಿ. ಇದ್ದ ಅವರು ಈಗ 68.5 ಕೆಜಿ ಇದ್ದಾರೆ. ಇನ್ನು ಚಳಿಗಾಲದಲ್ಲಿ ಅವರ ಆರೋಗ್ಯ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇದೆ. ಹೀಗಾಗಿ ಅವರ ಆರೋಗ್ಯ ದೃಷ್ಟಿಯಿಂದ ಜಾಮೀನು ನೀಡಬೇಕು ಎಂದು ಮನವಿ ಮಾಡಿದ್ದರು. ಜಾಮೀನು ನೀಡಿದರೆ ಚಿದಂಬರಂ ಸಾಕ್ಷ್ಯ ನಾಶ ಮಾಡಲಿದ್ದಾರೆ ಎಂದು ಸಿಬಿಐ ಆಧಾರರಹಿತವಾಗಿ, ಸುಳ್ಳು ವಾದ ಮಾಡುತ್ತಿದೆ ಎಂದರು.

ಜಾಮೀನು ಅರ್ಜಿ ವಿಚಾರಣೆ ವೇಳೆ ಕಪಿಲ್ ಸಿಬಾಲ್ ಮತ್ತು ಸಿಬಿಐ ಪರ ವಕೀಲ, ಸಾಲಿಸಿಟರಿ ಜನರಲ್ ತುಷಾರ್ ಮೆಹ್ತಾ ಇಬ್ಬರ ನಡುವೆ ಬಿರುಸಿನ ವಾದ-ಪ್ರತಿವಾದ ನಡೆದವು. 2ಜಿ ಹಗರಣದ ಪ್ರಕರಣದಲ್ಲಿ ಏನೆಲ್ಲಾ ಆಗಿದೆ ಎಂಬುದು ಎಲ್ಲರಿಗೂ ಗೊತ್ತು. ಚಾರ್ಜ್​ಶೀಟ್​ ಸಲ್ಲಿಕೆ ಮಾಡಿದ ಬಳಿಕ ಎಲ್ಲ ಆರೋಪಿಗಳು ಖುಲಾಸೆಗೊಂಡರು ಎಂದು ಸಿಬಾಲ್ ಹೇಳಿದರು.

ಇದನ್ನು ಓದಿ: ಐಎನ್ಎಕ್ಸ್ ಮೀಡಿಯಾ ಪ್ರಕರಣ: ಸಿಬಿಐ ಹೊಸ ಚಾರ್ಜ್​ಶೀಟ್​ನಲ್ಲಿ ಪಿ. ಚಿದಂಬರಮ್ ಸೇರಿ 14 ಮಂದಿ ಹೆಸರು

2 ಜಿ ಹಗರಣದ ಉಲ್ಲೇಖಕ್ಕೆ ಮೆಹ್ತಾ ಆಕ್ಷೇಪ ವ್ಯಕ್ತಪಡಿಸಿದರು ಮತ್ತು ಈ ವಿಷಯವು ಉಪ ನ್ಯಾಯಾಲಯ ಮತ್ತು ಹೈಕೋರ್ಟ್ ಮುಂದೆ ಮೇಲ್ಮನವಿ ಬಾಕಿ ಇದೆ ಎಂದು ಸೂಚಿಸಿದರು. ದೇಶವು ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆ ಹೊಂದಿರಬೇಕು ಮತ್ತು ನ್ಯಾಯಾಲಯವು ನ್ಯಾಯಾಂಗ ಸಂಸ್ಥೆಯಾಗಿರುವುದರಿಂದ ಅದರ ಬಗ್ಗೆ ಕ್ರಮ ತಗೆದುಕೊಳ್ಳಬೇಕು ಎಂದರು.

First published:October 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading