ಐಎನ್ಎಕ್ಸ್ ಮೀಡಿಯಾ ಪ್ರಕರಣ: ಪಿ. ಚಿದಂಬರಮ್ ಅರ್ಜಿ ವಜಾ; ಸೆ. 19ರವರೆಗೂ ತಿಹಾರ್ ಜೈಲುವಾಸ ಮುಂದುವರಿಕೆ

news18
Updated:September 13, 2019, 4:08 PM IST
ಐಎನ್ಎಕ್ಸ್ ಮೀಡಿಯಾ ಪ್ರಕರಣ: ಪಿ. ಚಿದಂಬರಮ್ ಅರ್ಜಿ ವಜಾ; ಸೆ. 19ರವರೆಗೂ ತಿಹಾರ್ ಜೈಲುವಾಸ ಮುಂದುವರಿಕೆ
ರೇಖಾಚಿತ್ರ- ಮೀರ್ ಸುಹೈಲ್​
  • News18
  • Last Updated: September 13, 2019, 4:08 PM IST
  • Share this:
ನವದೆಹಲಿ(ಸೆ. 13): ಐಎನ್​ಎಕ್ಸ್ ಮೀಡಿಯಾ ಅವ್ಯವಹಾರ ಹಗರಣದಲ್ಲಿ ತಿಹಾರ್ ಜೈಲಿನಲ್ಲಿರುವ ಕಾಂಗ್ರೆಸ್ ಮುಖಂಡ ಪಿ. ಚಿದಂಬರಮ್ ಅವರ ಅರ್ಜಿ ವಜಾಗೊಂಡಿದೆ. ಜಾರಿ ನಿರ್ದೇಶನಾಲಯಕ್ಕೆ ಶರಣಾಗುವುದಾಗಿ ಸಿಬಿಐ ವಿಶೇಷ ಕೋರ್ಟ್​ಗೆ ಚಿದಂಬರಮ್ ಮಾಡಿಕೊಂಡ ಮನವಿಯನ್ನು ಸಿಬಿಐ ವಿಶೇಷ ಕೋರ್ಟ್ ತಿರಸ್ಕರಿಸಿದೆ. ಮಾಜಿ ಕೇಂದ್ರ ಸಚಿವರಾದ ಅವರು ಸೆ. 19ರವರೆಗೂ ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿ ಮುಂದುವರಿಯಲಿದ್ಧಾರೆ.

ಐಎನ್​ಎಕ್ಸ್ ಪ್ರಕರಣದಲ್ಲಿ ಇನ್ನೂ ಸಾಕಷ್ಟು ವಿಚಾರಗಳನ್ನು ಕಲೆಹಾಕಬೇಕಿದೆ. ಈ ಪ್ರಕರಣದ ವ್ಯಾಪ್ತಿಯು ದೇಶದ ಹೊರಗೂ ಚಾಚಿದೆ. ಇನ್ನೂ ಆರು ಮಂದಿಯನ್ನು ವಿಚಾರಣೆ ನಡೆಸಬೇಕಿದೆ. ಅದಾದ ಬಳಿಕ ಚಿದಂಬರಮ್ ಅವರನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸುತ್ತೇವೆ. ಈಗಲೇ ಅವರನ್ನು ವಿಚಾರಣೆ ನಡೆಸುವ ಅಗತ್ಯವಿಲ್ಲ. ಅವರನ್ನು ನ್ಯಾಯಾಂಗ ಬಂಧನದಲ್ಲಿ ಮುಂದುವರಿಸುವುದರಿಂದ ಯಾವುದೇ ಸಾಕ್ಷ್ಯನಾಶದ ಭಯ ಇರುವುದಿಲ್ಲ. ತಮಗೆ ಬೇಕನಿಸಿದಾಗ ಅವರನ್ನ ಕಸ್ಟಡಿಗೆ ತೆಗೆದುಕೊಳ್ಳಲು ಕೋರ್ಟ್​ನಲ್ಲಿ ಮನವಿ ಮಾಡಿಕೊಳ್ಳುತ್ತೇವೆ ಎಂದು ಜಾರಿ ನಿರ್ದೇಶನಾಲಯವು ವಾದಿಸಿತ್ತು.

ಇದನ್ನೂ ಓದಿ: ಎಐಎಡಿಎಂಕೆ ಹೋರ್ಡಿಂಗ್​ಗೆ ಯುವತಿ ಬಲಿ; ಕೇಸಿನಿಂದ ಪ್ರಭಾವಿಗಳು ಬಚಾವ್

ಆದರೆ, ಜಾರಿ ನಿರ್ದೇಶನಾಲಯದವರು ತನ್ನನ್ನು ಆ. 20ರಂದೇ ಬಂಧಿಸಬೇಕೆಂದಿದ್ದರು. ಈಗ ಅವರು ಬೇರೆಯೇ ಆಲೋಚನೆಯೊಂದಿಗೆ ತನ್ನನ್ನು ಕಸ್ಟಡಿಗೆ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ತನ್ನನ್ನು ಜೈಲಿನಲ್ಲಿ ಮುಂದುವರಿಸುವುದೇ ಅದರ ಉದ್ದೇಶವಾಗಿದೆ ಎಂಬುದು ಚಿದಂಬರಮ್ ಅವರ ಪ್ರತಿವಾದವಾಗಿತ್ತು.

ಆದರೆ, ಕೊನೆಗೆ ಸಿಬಿಐ ವಿಶೇಷ ನ್ಯಾಯಾಧೀಶರು ಇಡಿ ವಾದಕ್ಕೆ ಮನ್ನಣೆ ಕೊಟ್ಟು ಚಿದಂಬರಮ್ ಅವರ ಶರಣಾಗತಿ ಅರ್ಜಿಯನ್ನು ತಿರಸ್ಕರಿಸಿದೆ.

ಇದನ್ನೂ ಓದಿ: ಔರಂಗಜೇಬ್ ಕೆಟ್ಟ ಮುಸಲ್ಮಾನನೆ, ಹಾಗಾದರೆ ಒಳ್ಳೆಯ ಹಿಂದೂ ಯಾರು?; ಜೆಯುಹೆಚ್​ ಮುಖಂಡ ಮಹಮೂದ್​ ಮದನಿ ಪ್ರಶ್ನೆ

ಎರಡು ದಿನಗಳ ಹಿಂದೆ ಚಿದಂಬರಮ್ ಅವರು ಪ್ರಕರಣದಲ್ಲಿ ಜಾಮೀನು ಕೋರಿ ದೆಹಲಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಆದರೆ, ತುರ್ತು ವಿಚಾರಣೆಗೆ ಉಚ್ಚ ನ್ಯಾಯಾಲಯ ನಿರಾಕರಿಸಿತ್ತು.
Loading...

ಸೆ. 5ರಂದು ಸಿಬಿಐ ವಿಶೇಷ ನ್ಯಾಯಾಲಯವು ಪಿ. ಚಿದಂಬರಮ್ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಿ ಆದೇಶ ಹೊರಡಿಸಿತ್ತು. ಅದಂತೆ ಚಿದಂಬರಮ್ ಅವರು ಸೆ. 19ರವರೆಗೂ ತಿಹಾರ್ ಜೈಲಿನಲ್ಲೇ ಮುಂದುವರಿಯುವುದು ಈಗ ಅನಿವಾರ್ಯವಾಗಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:September 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...