• Home
  • »
  • News
  • »
  • national-international
  • »
  • Ozone Layer: ಚೇತರಿಕೆಯ ಹಾದಿಯಲ್ಲಿ ಓಝೋನ್ ಪದರ, ಅಧ್ಯಯನದಿಂದ ಹೊರಬಿತ್ತು ಸಂತಸದ ವರದಿ!

Ozone Layer: ಚೇತರಿಕೆಯ ಹಾದಿಯಲ್ಲಿ ಓಝೋನ್ ಪದರ, ಅಧ್ಯಯನದಿಂದ ಹೊರಬಿತ್ತು ಸಂತಸದ ವರದಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಜೀವ ಸಂಕುಲಗಳಿಗೆ ಮಾರಕವಾಗಿರುವ ನೇರಳಾತೀತ ವಿಕಿರಣ ಅಥವಾ UV ಬೆಳಕು ಎಂದು ಕರೆಯಲಾದ ಒಂದು ರೀತಿಯ ವಿಕಿರಣವನ್ನು ತಡೆಹಿಡಿಯುವಲ್ಲಿ ಓಝೋನ್ ಪದರದ ಪಾತ್ರ ಮಹತ್ತರವಾದುದು.

  • Trending Desk
  • 5-MIN READ
  • Last Updated :
  • Share this:

ಭೂಮಿಯ ಮೇಲಿನ ಜೀವಸಂಕುಲಗಳಿಗೆ ರಕ್ಷಣಾ ಹೊದಿಕೆಯಾಗಿ ಓಝೋನ್ (Ozon) ಪದರವು ಕಾರ್ಯನಿರ್ವಹಿಸುತ್ತದೆ. ಜೀವ ಸಂಕುಲಗಳಿಗೆ ಮಾರಕವಾಗಿರುವ ನೇರಳಾತೀತ ವಿಕಿರಣ ಅಥವಾ UV ಬೆಳಕು ಎಂದು ಕರೆಯಲಾದ ಒಂದು ರೀತಿಯ ವಿಕಿರಣವನ್ನು ತಡೆಹಿಡಿಯುವಲ್ಲಿ ಓಝೋನ್ ಪದರದ ಪಾತ್ರ ಮಹತ್ತರವಾದುದು. ಹವಾಮಾನ ವೈಪರೀತ್ಯಗಳು, ಪರಿಸರ ಮಾಲಿನ್ಯದಂತಹ ಪ್ರಕ್ರಿಯೆಗಳಿಂದ ಈ ಪದರವು ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿದೆ ಎಂದು ವಿಜ್ಞಾನಿಗಳು ( Scientists) ಈ ಹಿಂದೆ ಸೂಚಿಸಿದ್ದರು. ಇದೀಗ ಸಂಶೋಧಕರ ತಂಡವು ಓಝೋನ್ ಪದರದ ಕುರಿತು ಧನಾತ್ಮಕ (Positive) ಅಂಶವೊಂದನ್ನು ಹಂಚಿಕೊಂಡಿದ್ದು, ಈ ಪದರವು ನಾಲ್ಕು ದಶಕಗಳಲ್ಲಿ ಅಭಿವೃದ್ಧಿಗೊಳ್ಳುವ ಹಂತದಲ್ಲಿದೆ ಎಂದು ತಿಳಿಸಿದ್ದಾರೆ.


ಓಝೋನ್ ಪದರಕ್ಕೆ ಹಾನಿಯನ್ನುಂಟು ಮಾಡುವ ರಾಸಾಯನಿಕಗಳು ಸಾಮರ್ಥ್ಯ ಕಳೆದುಕೊಳ್ಳುತ್ತಿದೆ ಹಾಗೂ ಹವಾಮಾನ ಬದಲಾವಣೆ ಕೂಡ ಮಿತಿಗೊಳ್ಳುತ್ತಿದೆ ಎಂಬುದಾಗಿ ಅಮೇರಿಕನ್ ಮೆಟಿಯೊರೊಲಾಜಿಕಲ್ ಸೊಸೈಟಿಯ 103 ನೇ ವಾರ್ಷಿಕ ಸಭೆಯಲ್ಲಿ ಪ್ರಸ್ತುತಪಡಿಸಲಾಗಿದೆ.


ಮಾಂಟ್ರಿಯಲ್ ಪ್ರೋಟೋಕಾಲ್ ಎಂದರೇನು?


ಮಾಂಟ್ರಿಯಲ್ ಪ್ರೊಟೊಕಾಲ್, ಓಝೋನ್ ಪದರವನ್ನು ಸಂರಕ್ಷಿಸುವಲ್ಲಿ ಯಶಸ್ವಿಯಾಗಿದೆ ಎಂದು ಅಧ್ಯಯನಕಾರರು ಖಾತ್ರಿಪಡಿಸಿದ್ದಾರೆ. ಮಾಂಟ್ರಿಯಲ್ ಪ್ರೋಟೋಕಾಲ್ ಓಝೋನ್ ಪದರದ ಹಾನಿಗೆ ಕಾರಣವಾಗಿರುವ ಹಲವಾರು ರಾಸಾಯನಿಕ ವಸ್ತುಗಳ ಉತ್ಪಾದನೆಯನ್ನು ಹಂತಹಂತವಾಗಿ ಹೊರಹಾಕುವ ಮೂಲಕ ಓಝೋನ್ ಪದರವನ್ನು ರಕ್ಷಿಸಲು ವಿನ್ಯಾಸಗೊಳಿಸಲಾದ ಅಂತರಾಷ್ಟ್ರೀಯ ಒಪ್ಪಂದವಾಗಿದೆ.


ವಾಯುಮಂಡಲದ ಮೇಲ್ಭಾಗದಲ್ಲಿ ಓಝೋನ್ ಪದರದ ಗಮನಾರ್ಹ ಚೇತರಿಕೆಗೆ ಕಾರಣವಾಗಿದೆ. ಹಾಗೂ ಸೂರ್ಯನಿಂದ ಹಾನಿಕಾರಕ ನೇರಳಾತೀತ (UV) ಕಿರಣಗಳಿಗೆ ಮಾನವರು ಒಳಗಾಗುವುದನ್ನು ಕಡಿಮೆಗೊಳಿಸಿದೆ. ಈ ಬೆಳವಣಿಗೆ ಹೀಗೆಯೇ ಮುಂದುವರಿದರೆ 2066 ರಲ್ಲಿ ಓಝೋನ್ ಪದರ ಸಂಪೂರ್ಣವಾಗಿ ಚೇತರಿಸಿಕೊಳ್ಳುವ ನಿರೀಕ್ಷೆ ಇದೆ ಎಂದು ಅಧ್ಯಯನಕಾರರು ತಿಳಿಸಿದ್ದಾರೆ.


ಚತುರ್ವಾರ್ಷಿಕ ವರದಿ ಪ್ರಕಾರ ಓಝೋನ್ ವಲಯ ಚೇತರಿಕೆಯ ಹಾದಿಯಲ್ಲಿದೆ, ಇದು ಅದ್ಭುತ ಸುದ್ದಿಯಾಗಿದೆ ಜೊತೆಗೆ ಮಾಂಟ್ರಿಯಲ್ ಪ್ರೋಟೋಕಾಲ್ ಬೀರಿದ ಪ್ರಭಾವವೇ ಇದಕ್ಕೆ ಕಾರಣ ಹಾಗೂ ಕಳೆದ 35 ವರ್ಷಗಳಲ್ಲಿ ಈ ಪ್ರೋಟೋಕಾಲ್ ಪರಿಸರದ ಸಮಸ್ಯೆಯನ್ನು ಗೆದ್ದ ಚಾಂಪಿಯನ್ ಎಂದೆನಿಸಿದೆ ಎಂದು ಓಝೋನ್ ಸೆಕ್ರೆಟರಿಯಟ್‌ನ ಕಾರ್ಯನಿರ್ವಾಹಕ ಕಾರ್ಯದರ್ಶಿ ಮೆಗ್ ಸೆಕಿ ತಿಳಿಸಿದ್ದಾರೆ.


ಹವಾಮಾನ ಬದಲಾವಣೆಯ ಮೇಲೆ ಪರಿಣಾಮಗಳು


ಪರಿಸರ ಹಾಗೂ ಓಝೋನ್ ವಲಯಕ್ಕೆ ಮಾರಕವಾಗಿರುವ ಹೈಡ್ರೋಫ್ಲೋರೋಕಾರ್ಬನ್‌ಗಳ (HFCs) ಉತ್ಪಾದನೆ ಮತ್ತು ಬಳಕೆಯನ್ನು ಹಂತ ಹಂತವಾಗಿ ತಗ್ಗಿಸುವ ಅಗತ್ಯವಿದೆ ಎಂಬುದಾಗಿ ಅಧ್ಯಯನಕಾರರು ಅಭಿಪ್ರಾಯಪಟ್ಟಿದ್ದಾರೆ.


ಇದನ್ನೂ ಓದಿ: ಶಬರಿಮಲೆಯಲ್ಲಿ ಸ್ಟ್ರಿಕ್ಟ್ ರೂಲ್ಸ್, ಅಯ್ಯಪ್ಪನ ದೇಗುಲದ ಬಳಿ ಗಣ್ಯರ ಪೋಸ್ಟರ್‌ಗೆ ಹೈಕೋರ್ಟ್ ಬ್ರೇಕ್!


ಈ ರಾಸಾಯನಿಕಗಳು ಓಝೋನ್ ವಲಯಕ್ಕೆ ನೇರವಾದ ಪ್ರಭಾವ ಬೀರುವುದಿಲ್ಲ ಆದರೆ ಹವಾಮಾನ ಬದಲಾವಣೆಯ ಮೇಲೆ ಶಕ್ತಿಯುತ ಪರಿಣಾಮವನ್ನು ಬೀರುವ ಮೂಲಕ ಪದರಕ್ಕೆ ಹಾನಿಯನ್ನುಂಟು ಮಾಡುತ್ತವೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.


ಇನ್ನಷ್ಟು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ


ಓಝೋನ್ ಪದರವನ್ನು ನಾಶಮಾಡುವ ರಾಸಾಯನಿಕಗಳನ್ನು ನಿವಾರಿಸುವುದರ ಜೊತೆಗೆ ಪಳೆಯುಳಿಕೆ ಇಂಧನಗಳಿಂದ ದೂರವಿರುವುದು, ಹಸಿರುಮನೆ ಅನಿಲಗಳನ್ನು ಕಡಿಮೆ ಮಾಡಲು, ತಾಪಮಾನ ಹೆಚ್ಚಳವನ್ನು ಮಿತಿಗೊಳಿಸಲು ಯಾವೆಲ್ಲಾ ಮುತುವರ್ಜಿಗಳನ್ನು ಅಳವಡಿಸಿಕೊಳ್ಳಬೇಕು ಎಂಬುದನ್ನು ನಮಗೆ ತಿಳಿಸುತ್ತದೆ ಎಂದು WMO ಕಾರ್ಯದರ್ಶಿ-ಜನರಲ್ ಪ್ರೊ. ಪೆಟ್ಟೆರಿ ತಾಲಾಸ್ ತಿಳಿಸಿದ್ದಾರೆ.


ವಿಶ್ವ ಹವಾಮಾನ ಸಂಸ್ಥೆ (WMO), ಯುನೈಟೆಡ್ ನೇಷನ್ಸ್ ಎನ್ವಿರಾನ್ಮೆಂಟ್ ಪ್ರೋಗ್ರಾಂ (UNEP), US ನ್ಯಾಷನಲ್ ಓಷಿಯಾನಿಕ್ ಮತ್ತು ವಾತಾವರಣದ ಆಡಳಿತ (UNEP), ಸೇರಿದಂತೆ ದೊಡ್ಡ ಅಂತರರಾಷ್ಟ್ರೀಯ ತಜ್ಞರ ಗುಂಪು ಸಂಗ್ರಹಿಸಿದ ವ್ಯಾಪಕ ಅಧ್ಯಯನಗಳು, ಸಂಶೋಧನೆ ಮತ್ತು ಡೇಟಾವನ್ನು ಆಧರಿಸಿ ಇತ್ತೀಚಿನ ಅಂಕಿಅಂಶಗಳನ್ನು ಪಡೆಯಲಾಗಿದೆ ಎಂದು ಪೆಟ್ಟೆರಿ ತಿಳಿಸಿದ್ದಾರೆ.


ವಾಯುಮಂಡಲದ ಏರೋಸಾಲ್ ಇಂಜೆಕ್ಷನ್ SAI


ವಾಯುಮಂಡಲದ ಏರೋಸಾಲ್ ಇಂಜೆಕ್ಷನ್ (SAI) ಅನ್ನು ವಾಯುಮಂಡಲಕ್ಕೆ ಸೇರ್ಪಡೆಗೊಳಿಸುವ ಮೂಲಕ ಓಝೋನ್‌ನ ಮೇಲಿನ ಪರಿಣಾಮಗಳನ್ನು ವೈಜ್ಞಾನಿಕ ಮೌಲ್ಯಮಾಪನ ಸಮಿತಿಯು ಪರಿಶೀಲಿಸಿದೆ.


ಸೂರ್ಯನ ಬೆಳಕಿನ ಪ್ರತಿಫಲನವನ್ನು ಹೆಚ್ಚಿಸುವ ಮೂಲಕ ಹವಾಮಾನ ತಾಪಮಾನವನ್ನು ಕಡಿಮೆ ಮಾಡುವ ವಿಧಾನವಾಗಿ SAI ಕಾರ್ಯನಿರ್ವಹಿಸುತ್ತದೆ.

First published: