ಯುಎಇಗೆ ಕಾಲಿಟ್ಟ ಒಯೋ ಹೊಟೇಲ್ ಸಂಸ್ಥೆ: 10 ಸಾವಿರ ಉದ್ಯೋಗ ಸೃಷ್ಟಿ

zahir | news18
Updated:October 17, 2018, 10:38 AM IST
ಯುಎಇಗೆ ಕಾಲಿಟ್ಟ ಒಯೋ ಹೊಟೇಲ್ ಸಂಸ್ಥೆ:  10 ಸಾವಿರ ಉದ್ಯೋಗ ಸೃಷ್ಟಿ
  • Advertorial
  • Last Updated: October 17, 2018, 10:38 AM IST
  • Share this:
ನ್ಯೂಸ್ 18 ಕನ್ನಡ

ಒಯೋ ಹೊಟೇಲ್ಸ್​ ಸಮೂಹ ಸಂಸ್ಥೆ ಶೀಘ್ರದಲ್ಲೇ ಯುನೈಟೆಡ್​ ಅರಬ್ ಎಮಿರೇಟ್ಸ್​(ಯುಎಇ)ನಲ್ಲಿ ಮತ್ತಷ್ಟು ಹೊಟೇಲ್​ಗಳನ್ನು ತೆರೆಯಲಿದೆ. ಈಗಾಗಲೇ ಯುಎಇನ ಪ್ರಮುಖ ನಗರಗಳಲ್ಲಿ ಹತ್ತಕ್ಕಿಂತಲೂ ಹೆಚ್ಚಿನ ಫ್ರಾಂಚೈಸಿಗಳನ್ನು ಹೊಂದಿದ್ದು, ದುಬೈ, ಶಾರ್ಜಾ ಮತ್ತು ಫುಜೈರಾದಲ್ಲಿ ಹೊಟೇಲ್ ಸೇವೆಯನ್ನು ಪ್ರಾರಂಭಿಸುವುದಾಗಿ ಒಯೊ ತಿಳಿಸಿದೆ. ಮರಳು ಗಾಡಿನ ನಗರಗಳಲ್ಲಿ 2020ರ ಒಳಗೆ 150 ಹೊಟೇಲ್​ಗಳನ್ನು ತೆರೆಯಲು ಯೋಜನೆ ಹಾಕಿಕೊಂಡಿದ್ದು, ಈ ಮೂಲಕ 12,000 ಅತಿಥಿಗಳಿಗೆ ಆತಿಥ್ಯವನ್ನು ಕಲ್ಪಿಸಲಿದೆ.

2020 ವರ್ಲ್ಡ್ ಎಕ್ಸ್​ಪೋ ದುಬೈನಲ್ಲಿ ನಡೆಯಲಿದ್ದು, ಇಲ್ಲಿಗೆ ಆಗಮಿಸುವ ಪ್ರವಾಸಿಗಳ ಆತಿಥ್ಯವನ್ನು ವಹಿಸಲು ತಮ್ಮ ಸಂಸ್ಥೆ ಎದುರು ನೋಡುತ್ತಿದೆ. 170ಕ್ಕೂ ದೇಶಗಳು ಭಾಗವಹಿಸುವ ಈ ಎಕ್ಸ್​ಪೋ ಕಾರ್ಯಕ್ರಮದಲ್ಲಿ ಆತಿಥ್ಯ ಕ್ಷೇತ್ರದ ಲಾಭವನ್ನು ಪಡೆಯಲು ನಮ್ಮ ಸಂಸ್ಥೆ ಸಿದ್ದವಾಗಿದೆ ಎಂದು ಒಯೋ ಸಂಸ್ಥಾಪಕ ರಿತೇಶ್ ಅಗರ್ವಾಲ್ ತಿಳಿಸಿದ್ದಾರೆ.

ಇದನ್ನೂ ಓದಿ: ದೇಹದ ದುರ್ವಾಸನೆ ತಡೆಯಲು ಇಲ್ಲಿದೆ ಸುಲಭ ಉಪಾಯ

ಅಲ್ಲದೆ ಮುಂದಿನ ಮೂರು ವರ್ಷಗಳಲ್ಲಿ 10,000ಕ್ಕೂ ಅಧಿಕ ಉದ್ಯೋಗಗಳನ್ನು ಸೃಷ್ಟಿಸುವ ಮಹತ್ವದ ಯೋಜನೆ ಇದಾಗಿದೆ ಎಂದು ಸಂಸ್ಥೆ ಹೇಳಿದೆ. 2019 ರ ಅಂತ್ಯದ ವೇಳೆಗೆ ಯುಎಇನಲ್ಲಿ ನೇರ ಮತ್ತು ಪರೋಕ್ಷವಾಗಿ 4,000 ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಸದ್ಯದ ಗುರಿಯಾಗಿದೆ ಎಂದು ಒಯೋ ತಿಳಿಸಿದೆ.
First published:October 17, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ