ವಿಪಕ್ಷಗಳ ಟೀಕೆಗೆ ಗುರಿಯಾದ ಪಿಎಂ ಕೇರ್ಸ್​ ನಿಧಿ; ಆಕ್ಸಿಜನ್ ಘಟಕಗಳ ನಿರ್ಮಾಣವಾಗುತ್ತಿರುವುದು ಇದರಿಂದಲೇ

ದೆಹಲಿ ಮತ್ತು ಜಾರ್ಖಂಡ್​ನಲ್ಲಿ ನಿರ್ಮಾಣವಾದ ಆಕ್ಸಿಜನ್​ ಘಟಕಗಳು ಕೂಡ ಇದೇ ಪಿಎಂ ಕೇರ್ಸ್​ ನಿಧಿಯಿಂದ ನಿರ್ಮಾಣವಾಗಿದ್ದವು. 

ನರೇಂದ್ರ ಮೋದಿ.

ನರೇಂದ್ರ ಮೋದಿ.

 • Share this:
  ಪಿಎಂ ಕೇರ್ಸ್​ ನಿಧಿ ( PM CARES Fund ) ಕುರಿತು ಟೀಕಿಸುವ ವಿಪಕ್ಷಗಳು, ಇದೇ ನಿಧಿ ಸಹಾಯದಿಂದ ನಿರ್ಮಾಣವಾದ ಆಕ್ಸಿಜನ್​ ​ ಉತ್ಪಾದನಾ ಘಟಕಗಳು ( Oxygen Generation Plants) ನಿರ್ಮಾಣವಾದಗ ಹೆಚ್ಚು ಸಂಭ್ರಮದಿಂದ ಉದ್ಘಾಟಿಸುತ್ತಾರೆ. ಜೊತೆಗೆ ಆಕ್ಸಿಜನ್​ ​ ಘಟಕ ನಿರ್ಮಾಣದ ಶ್ರೇಯಸ್ಸನ್ನು ಪಡೆಯಲು ಮುಂದಾಗುತ್ತವೆ. ದೇಶದ  ವಿವಿಧ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ 35ಕ್ಕೂ ಹೆಚ್ಚು ಆಕ್ಸಿಜನ್​ ಘಟಕಗಳು ನಿರ್ಮಾಣವಾಗಿವೆ. ಆದರೆ, ಈ ಘಟಕಗಳು ನಿರ್ಮಾಣವಾಗು ಒಂದು ದಿನದ ಮೊದಲು ತಿಳಿದಿದ್ದು ಎಂದರೆ, ಇವೆಲ್ಲವೂ ಪಿಎಂ ಕೇರ್ಸ್​ ನಿಧಿಯಿಂದಲೇ ನಿರ್ಮಿಸಲಾಗಿದೆ ಎಂಬುದು. ಇನ್ನು ದೆಹಲಿ ಮತ್ತು ಜಾರ್ಖಂಡ್​ನಲ್ಲಿ ನಿರ್ಮಾಣವಾದ ಆಕ್ಸಿಜನ್​ ಘಟಕಗಳು ಕೂಡ ಇದೇ ಪಿಎಂ ಕೇರ್ಸ್​ ನಿಧಿಯಿಂದ ನಿರ್ಮಾಣವಾಗಿದ್ದವು. 

  ಜನಪ್ರಿಯತೆ ಪಡೆದು ಪಿಎಂ ಕೇರ್ಸ್​ ನಿಧಿ ಬಗ್ಗೆ ಆರೋಪ

  ಕೇಂದ್ರದಿಂದ ನಿರ್ಮಾಣವಾಗುತ್ತಿರುವ ಈ ಆಕ್ಸಿಜನ್​ ಘಟಕಗಳ ಸ್ಥಾಪನೆಯಾದಾಗ ಉದ್ಘಾಟಿಸುತ್ತಿರುವ ರಾಜ್ಯ ಸರ್ಕಾರಗಳು ಮಾತ್ರ ಈ ಪಿಎಂ ಕೇರ್ಸ್​ ನಿಧಿ ವಿರುದ್ಧ ಟೀಕೆ ಮಾಡುತ್ತಿದೆ. ಈ ಮೂಲಕ ಪಿಎಂ ಕೇರ್ಸ್​ ನಿಧಿಯನ್ನು ದುರ್ಬಳಕೆ ಮಾಡುತ್ತಿರುವ ಆರೋಪ ಮಾಡುತ್ತಿವೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ

  ಪಿಎಂ ಕೇರ್ಸ್​ನಿಧಿ ಲಾಭಾ ಪಡೆದ ದೆಹಲಿ

  ಅಕ್ಟೋಬರ್ 6 ರಂದು ದೆಹಲಿ ಸರ್ಕಾರದ ಮಂತ್ರಿಗಳು ಉದ್ಘಾಟಿಸಿದ 27 ಆಮ್ಲಜನಕ ಸ್ಥಾವರಗಳಲ್ಲಿ, ಅವುಗಳಲ್ಲಿ 14 ಅನ್ನು ಪಿಎಂ ಕೇರ್ಸ್ ನಿಧಿಯಿಂದ ನಿರ್ಮಿಸಲಾಗಿದೆ. ಉಳಿದವುಗಳನ್ನು ಇತರ ಉದ್ಯಮ ಸಂಸ್ಥೆಗಳಿಂದ ಧನ ಸಹಾಯ ಮಾಡಲಾಗಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ನ್ಯೂಸ್ 18 ಗೆ ತಿಳಿಸಿವೆ. ಈ ಘಟಕ ಉದ್ಘಾಟನೆ ಜಾಹೀರಾತು ವೇಳೆ ದೆಹಲಿ ಸರ್ಕಾರ ಈ ಸಂಬಂಧ ನೀಡಿದ ಜಾಹೀರಾತಿನಲ್ಲಿ ಪಿಎಂ ಕೇರ್ಸ್​​ ನಿಧಿಯಿಂದ ಇದು ನಿರ್ಮಾಣವಾಗಿದೆ ಎಂಬ ಯಾವುದೇ ಅಂಶವನ್ನು ಉಲ್ಲೇಖಿಸಿಲ್ಲ ಎಂಬುದು ಮೂಲಗಳು ತಿಳಿಸಿವೆ

  ಇದನ್ನು ಓದಿ: ಯೋಗಿ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದ ನವಜೋತ್ ಸಿಂಗ್ ಸಿಧು

  ದೆಹಲಿ ಸರ್ಕಾರದ ಮಂತ್ರಿಗಳು ಉದ್ಘಾಟಿಸಿದ ಹೆಚ್ಚಿನ ಆಮ್ಲಜನಕ ಘಟಕಗಳಿಗೆ ಪಿಎಂ ಕೇರ್ಸ್ ನಿಧಿಯಿಂದ ಧನಸಹಾಯ ನೀಡಲಾಗಿದೆ ಆದರೆ, ಅಲ್ಲಿನ ಸರ್ಕಾರ ಮಾತ್ರ ತಮ್ಮ ಸರ್ಕಾರದ ನಿರ್ಮಾಣದಂತೆ ಅವುಗಳ ಶ್ರೇಯಸ್ಸನ್ನು​ ಪಡೆಯುತ್ತಿವೆ ಎಂದು ದೆಹಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕುಲ್‌ಜೀತ್ ಸಿಂಗ್ ಚಹಲ್ ಆರೋಪಿಸಿದ್ದಾರೆ

  ಇದನ್ನು ಓದಿ: 18 ಲಕ್ಷ ರೂಪಾಯಿ ಆರ್ಥಿಕ ಸಹಾಯ, ರೈತರಿಗೆ ಕೇಂದ್ರ ಸರ್ಕಾರದ ಯೋಜನೆ, ಹಣ ಪಡೆಯುವುದು ಹೇಗೆ? ಡೀಟೆಲ್ಸ್...

  ತರಾತುರಿಯಲ್ಲಿ ಉದ್ಘಾಟಿಸಿದ ಜಾರ್ಖಂಡ್​ ಸಿಎಂ 

  ಜಾರ್ಖಂಡ್​ನಲ್ಲೂ ಕೂಡ ಪಿಎಂ ಕೇರ್ಸ್​ನಿಧಿಯಿಂದ 27 ಆಕ್ಸಿಜನ್ ಘಟಕಗಳನ್ನು ನಿರ್ಮಾಣ ಮಾಡಿ ಉದ್ಘಾಟಿಸಲಾಗಿದೆ. ಜಾಹೀರಾತಿನಲ್ಲಿ ಈ ಆಕ್ಸಿಜನ್​ ಘಟಕಗಳನ್ನು ಪಿಎಂ ಕೇರ್ಸ್​ನಿಧಿಯಿಂದ ನಿರ್ಮಾಣಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಆದರೆ, ಪ್ರಧಾನಿಗಳು ಉದ್ಘಾಟಿಸಬೇಕಾದ ಈ ಘಟಕಗಳನ್ನು ಒಂದು ದಿನದ ಮುಂಚಿತಬಾಗಿ ಜಾರ್ಖಂಡ್​ ಸಿಎಂ ಹೇಮಂತ್​ ಸೊರೆನ್​ ಉದ್ಘಾಟಿಸಿದರು

  ಎಲ್ಲಾ ಜಿಲ್ಲೆಗಳಲ್ಲಿ ಆಕ್ಸಿಜನ್ ಘಟಕ ನಿರ್ಮಾಣದ ಗುರಿ

  ಉತ್ತರಾಖಂಡದ ಏಮ್ಸ್ ರಿಷಿಕೇಶದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರು ಗುರುವಾರ 35 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಿಎಂ ಕೇರ್ಸ್ ಅಡಿಯಲ್ಲಿ ಸ್ಥಾಪಿಸಲಾದ 35 ಆಕ್ಸಿಜನ್​​ ಘಟಕಗಳನ್ನು ಲೋಕಾರ್ಪಣೆ ಮಾಡಿದರು. ಈ ವೇಳೆ ಮಾತನಾಡಿದ ಅವರು ಎಲ್ಲಾ ಜಿಲ್ಲೆಗಳಲ್ಲೂ ಆಕ್ಸಿಜನ್ ಘಟಕ ಸ್ಥಾಪಿಸಲಾಗುವುದು ಎಂದು ತಿಳಿಸಿದರು
  Published by:Seema R
  First published: