news18-kannada Updated:February 2, 2021, 2:42 PM IST
ಪ್ರಧಾನಿ ನರೇಂದ್ರ ಮೋದಿ.
ದೇಶಕ್ಕೆ ಕೊರೋನಾ ವೈರಸ್ ಕಾಲಿಟ್ಟ ಬಳಿಕ ಜನರ ಆರ್ಥಿಕ ಸ್ಥಿತಿ ಕುಸಿಯತೊಡಗಿತು. ಆಗ ಪ್ರಧಾನಿ ನರೇಂದ್ರ ಮೋದಿಯವರು ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಕರೆ ನೀಡಿದರು. ಸ್ವದೇಶಿ ವಸ್ತುಗಳ ಉತ್ಪಾದನೆ ಹೆಚ್ಚಿಸಬೇಕು, ವಿದೇಶಿ ವಸ್ತುಗಳಿಗೆ ಕಡಿವಾಣ ಹಾಕಬೇಕು ಎನ್ನುವುದು ಇದರ ಮೂಲ ಉದ್ದೇಶವಾಗಿದೆ. ಪ್ರಧಾನಿ ಮೋದಿ ಕರೆ ನೀಡಿದ ಬಳಿಕ ಆತ್ಮನಿರ್ಭರ ಭಾರತ ಅಭಿಯಾನ ದೇಶದೆಲ್ಲೆಡೆ ಪ್ರತಿಧ್ವನಿಸಲು ಶುರುವಾಯಿತು.
ಇದೀಗ ಈ ಆತ್ಮನಿರ್ಭರ ಎಂಬ ಶಬ್ದಕ್ಕೆ 2020ರ ಹಿಂದಿಯ ಪ್ರಖ್ಯಾತ ಶಬ್ಧ ಎಂಬ ಹಿರಿಮೆಯನ್ನು ಆಕ್ಸ್ಫರ್ಡ್ ನೀಡಿದೆ. ಆತ್ಮನಿರ್ಭರ್ ಅಸಂಖ್ಯಾತ ಭಾರತೀಯರ ಪ್ರತಿನಿತ್ಯದ ಸಾಧನೆಗಳನ್ನು ಮೌಲ್ಯೀಕರಿಸಿದೆ. ಜೊತೆಗೆ ಸಾಂಕ್ರಾಮಿಕ ರೋಗದ ಅಪಾಯಗಳನ್ನು ನಿಭಾಯಿಸಿದೆ ಎನ್ನಲಾಗುತ್ತಿದೆ.
CBSE Class 10, Class 12 Exam 2021: ಸಿಬಿಎಸ್ಇ 10, 12 ನೇ ತರಗತಿ ಪರೀಕ್ಷಾ ವೇಳಾಪಟ್ಟಿ ಪ್ರಕಟ
ಆತ್ಮನಿರ್ಭರ ಎಂದರೆ ಸ್ವಾವಲಂಬನೆ ಎಂಬರ್ಥ ಬರುತ್ತದೆ. ಆಕ್ಸ್ಫರ್ಡ್ ಸಲಹಾ ಸಮಿತಿಯಲ್ಲಿದ್ದ ಭಾಷಾ ತಜ್ಞೆ ಕೃತಿಕಾ ಅಗರ್ವಾಲ್, ಪೂನಂ ನಿಗಮ್ ಸಹಾಯ್ ಹಾಗೂ ಇಮೊಗನ್ ಫಾಕ್ಸ್ ವೆಲ್ ಈ ಶಬ್ಧವನ್ನು ಆಯ್ಕೆ ಮಾಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಕೊರೋನಾ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದ ಬಳಿಕ ಮಾತನಾಡಿದ್ದ ಪ್ರಧಾನಿ ಮೋದಿ, ಸ್ವಾವಲಂಬಿ ದೇಶ ನಿರ್ಮಾಣಕ್ಕಾಗಿ ಆತ್ಮನಿರ್ಭರ್ ಭಾರತ್ಗೆ ಕರೆ ನೀಡಿದ್ದರು. ಇದಾದ ಬಳಿಕ ಭಾರತದಲ್ಲಿ ಈ ಶಬ್ಧವನ್ನು ಹೆಚ್ಚಾಗಿ ಬಳಕೆ ಮಾಡಲಾಗಿದೆ ಎಂದು ಆಕ್ಸ್ಫರ್ಡ್ ಹೇಳಿದೆ. ಹೀಗಾಗಿ 2020ನೇ ವರ್ಷದ ಆಕ್ಸ್ಫರ್ಡ್ ಹಿಂದಿ ಶಬ್ಧ ಆತ್ಮನಿರ್ಭರ ಆಗಿದೆ.
Published by:
Latha CG
First published:
February 2, 2021, 2:42 PM IST