ಆಕ್ಸ್​ಫರ್ಡ್​ ಡಿಕ್ಷನರಿಯಲ್ಲಿ ಯಡವಟ್ಟು; ಮಹಿಳೆಗೆ ಸಮಾನಾರ್ಥಕ ಪದ ವೇಶ್ಯೆ!

ಗೂಗಲ್, ಬಿಂಗ್, ಯಾಹೂನಂತಹ ಸರ್ಚ್​ ಇಂಜಿನ್​ಗಳು ಆಕ್ಸ್​ಫರ್ಡ್​ ಡಿಕ್ಷನರಿಯನ್ನು ಗಮನಿಸಿ ತನ್ನ ಗ್ರಾಹಕರಿಗೆ ಬೇಕಾದ ಮಾಹಿತಿಯನ್ನು ಒದಗಿಸುತ್ತದೆ. ಹೀಗಾಗಿ, ಆಕ್ಸ್​ಫರ್ಡ್​ ಪ್ರೆಸ್​ನಲ್ಲಿ ಪ್ರಿಂಟ್ ಆಗಿರುವ ಹೊಸ ನಿಘಂಟನ್ನು ಬದಲಾಯಿಸದಿದ್ದರೆ ಅದು ಭಾಷೆಯ ಮೇಲೆ ತೀವ್ರ ರೀತಿಯ ಪರಿಣಾಮ ಬೀರುತ್ತದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

Sushma Chakre | news18-kannada
Updated:September 18, 2019, 12:20 PM IST
ಆಕ್ಸ್​ಫರ್ಡ್​ ಡಿಕ್ಷನರಿಯಲ್ಲಿ ಯಡವಟ್ಟು; ಮಹಿಳೆಗೆ ಸಮಾನಾರ್ಥಕ ಪದ ವೇಶ್ಯೆ!
ಪ್ರಾತಿನಿಧಿಕ ಚಿತ್ರ
  • Share this:
ವರ್ಷಗಳು ಕಳೆದಂತೆ ಎಲ್ಲ ಭಾಷೆಗಳಲ್ಲೂ ಹೊಸ ಪದಗಳು ಸೇರ್ಪಡೆಯಾಗುತ್ತಲೇ ಇರುತ್ತವೆ. ಈಗಂತೂ ಸಾಮಾಜಿಕ ಜಾಲತಾಣಗಳಲ್ಲಿ ಬಳಸುವ ಭಾಷೆಯೇ ವಿಭಿನ್ನವಾಗಿರುವುದರಿಂದ ಅವುಗಳನ್ನು ಕೂಡ ನಿಘಂಟಿನಲ್ಲಿ ಸೇರಿಸಲಾಗುತ್ತಿದೆ. ಹೊಸ ಪದಗಳು ಭಾಷೆಯಲ್ಲಿ ಸೇರ್ಪಡೆಯಾದಂತೆಲ್ಲ ಆಯಾ ಭಾಷೆಯ ನಿಘಂಟು ಪರಿಷ್ಕರಣೆಯಾಗುತ್ತಾ ಇರುತ್ತದೆ. ಆದರೀಗ ಜಗತ್ತಿನ ಪ್ರತಿಷ್ಠಿತ ಡಿಕ್ಷನರಿ ಎಂಬ ಬ್ರಾಂಡ್​ ಹೊಂದಿರುವ ಆಕ್ಸ್​ಫರ್ಡ್​ ಡಿಕ್ಷನರಿಯ ಪರಿಷ್ಕೃತ ಪ್ರತಿ ಬಗ್ಗೆ 30 ಸಾವಿರಕ್ಕೂ ಅಧಿಕ ಮಹಿಳೆಯರು ಸಹಿ ಅಭಿಯಾನ ಮಾಡಿದ್ದಾರೆ. ಅಂಥದ್ದೇನಾಯಿತು ಅಂತೀರಾ?

ಆಕ್ಸ್​ಫರ್ಡ್​ ಯೂನಿವರ್ಸಿಟಿ ಹೊರತರುವ ಆಕ್ಸ್​ಫರ್ಡ್​ ಡಿಕ್ಷನರಿಯ ಪರಿಷ್ಕೃತ ಪ್ರತಿಯಲ್ಲಿ ಮಹಿಳೆ ಎಂಬ ಪದಕ್ಕೆ ಸಮಾನಾರ್ಥಕವಾಗಿ ವೇಶ್ಯೆ (Bitch) ಎಂಬ ಪದವನ್ನು ಸೇರಿಸಲಾಗಿದೆ. ನೀವೇನಾದರೂ ಗೂಗಲ್​ನಲ್ಲಿ ಮಹಿಳೆ ಎಂದರೆ ಯಾರು? (Definition of woman) ಎಂದು ಸರ್ಚ್​ ಮಾಡಿದರೆ ಮೂರ್ಖಳು ಎಂಬ ಪದವೂ ಕಾಣಿಸಿಕೊಳ್ಳುತ್ತದೆ. ಇದರ ವಿರುದ್ಧವೂ ಅನೇಕ ಮಹಿಳೆಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಡಿಕ್ಷನರಿಯಲ್ಲಿ ವೇಶ್ಯೆ ಎಂಬ ಪದ ಬಳಸಿರುವ ಬಗ್ಗೆ ಅನೇಕ ಮಹಿಳೆಯರು ವಿರೋಧ ವ್ಯಕ್ತಪಡಿಸಿದ್ದು, ಮರಿಯಾ ಬೀಟ್ರೈಸ್​ ಎಂಬ ಮಹಿಳೆ ಸಹಿ ಅಭಿಯಾನ ಆರಂಭಿಸಿದ್ದಾರೆ. ಬಿಚ್, ಪೀಸ್, ಬ್ಯಾಗೇಜ್, ಫ್ರೈಲ್, ಬರ್ಡ್​, ಬಿಂಟ್​ನಂತಹ ಪದಗಳನ್ನು ಮಹಿಳೆಯರಿಗೆ ಅನ್ವರ್ಥವಾಗಿ ಹೇಗೆ ಬಳಸಲು ಸಾಧ್ಯ? ಇಂಥದ್ದೊಂದು ಯಡವಟ್ಟನ್ನು ಆಕ್ಸ್​ಫರ್ಡ್​ ಇಂಗ್ಲಿಷ್​ ಡಿಕ್ಷನರಿ ಮಾಡಿದೆ. ಈ ಸೆಕ್ಸಿಯೆಸ್ಟ್​ ಡಿಕ್ಷನರಿಯನ್ನು ಮೊದಲು ಬದಲಿಸಬೇಕು. ಆದಷ್ಟು ಬೇಗ ಇದನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಒಂದೇ ಬಾವಿಯಲ್ಲಿ ತುಂಡು ತುಂಡಾಗಿ ಬಿದ್ದಿದ್ದ 44 ಮೃತ ದೇಹಗಳು; ಘಟನೆಗೆ ಬೆಚ್ಚಿಬಿತ್ತು ಮೆಕ್ಸಿಕೋ!

ಗೂಗಲ್​ನಲ್ಲಿ ಮಹಿಳೆಯ ವ್ಯಾಖ್ಯಾನದಲ್ಲಿ ಆಕೆಯನ್ನು ಲೈಂಗಿಕ ವಸ್ತುವಂತೆ ಚಿತ್ರಿಸಲಾಗಿದೆ. ಇದರಿಂದ ಇಂದಿನ ಆಧುನಿಕ ಸಮಾಜದಲ್ಲಿಯೂ ಮಹಿಳೆಯನ್ನು ಸಮಾಜ ಯಾವ ರೀತಿ ನೋಡುತ್ತಿದೆ ಎಂಬುದು ಗೊತ್ತಾಗುತ್ತಿದೆ. ಮಹಿಳೆಗೂ ಗೌರವಯುತ ಸ್ಥಾನ ನೀಡುವಂತೆ ಹಾಗೂ ಆಕೆಯ ಬಗ್ಗೆ ಗೌರವ ಮೂಡುವಂತೆ ವ್ಯಾಖ್ಯಾನಿಸುವಂತೆ ಮಹಿಳೆಯರು ಆಗ್ರಹಿಸಿದ್ದಾರೆ.

ಆಕ್ಸ್​ಫರ್ಡ್​ ಡಿಕ್ಷನರಿಯಲ್ಲಿ ಮಹಿಳೆಯಂತೆ ಪುರುಷ ಕೂಡ ಈ ರೀತಿಯೆಲ್ಲ ವ್ಯಾಖ್ಯಾನಿಸ್ಪಟ್ಟಿದ್ದಾನಾ? ಎಂದು ಹುಡುಕಿದರೆ ಅಂತಹ ಯಾವ ಪದವೂ ಸಿಗುವುದಿಲ್ಲ. ಪುರುಷರ ಬಗ್ಗೆ ಬೇಜವಾಬ್ದಾರಿತನದವ ಎಂಬ ಹೋಲಿಕೆ ಅತಿ ಕೆಳಮಟ್ಟದ್ದು. ಅದಕ್ಕಿಂತ ಕೆಟ್ಟದಾಗಿ ಪುರುಷರನ್ನು ಬಿಂಬಿಸಿಲ್ಲ. ಹಾಗೇ, ಪುರುಷನ ವ್ಯಾಖ್ಯಾನದಲ್ಲಿ 25 ಉದಾಹರಣೆಗಳನ್ನು ನೀಡಲಾಗಿದೆ. ಮಹಿಳೆಯರನ್ನು ವ್ಯಾಖ್ಯಾನಿಸುವಾಗ 5 ಉದಾಹರಣೆಗಳನ್ನಷ್ಟೇ ನೀಡಲಾಗಿದೆ. ಇಲ್ಲಿ ಕೂಡ ಲಿಂಗ ತಾರತಮ್ಯ ಮಾಡಲಾಗಿದೆ ಎಂಬ ಆರೋಪ ಸಹಿ ಅಭಿಯಾನ ಮಾಡಿರುವ ಮಹಿಳೆಯರದ್ದು.ಗೂಗಲ್, ಬಿಂಗ್, ಯಾಹೂನಂತಹ ಸರ್ಚ್​ ಇಂಜಿನ್​ಗಳು ಆಕ್ಸ್​ಫರ್ಡ್​ ಡಿಕ್ಷನರಿಯನ್ನು ಗಮನಿಸಿ ತನ್ನ ಗ್ರಾಹಕರಿಗೆ ಬೇಕಾದ ಮಾಹಿತಿಯನ್ನು ಒದಗಿಸುತ್ತದೆ. ಹೀಗಾಗಿ, ಆಕ್ಸ್​ಫರ್ಡ್​ ಪ್ರೆಸ್​ನಲ್ಲಿ ಪ್ರಿಂಟ್ ಆಗಿರುವ ಹೊಸ ನಿಘಂಟನ್ನು ಬದಲಾಯಿಸದಿದ್ದರೆ ಅದು ಭಾಷೆಯ ಮೇಲೆ ತೀವ್ರ ರೀತಿಯ ಪರಿಣಾಮ ಬೀರುತ್ತದೆ ಎಂದು ಅರ್ಜಿದಾರರು ತಮ್ಮ ದೂರಿನಲ್ಲಿ ಬರೆದಿದ್ದಾರೆ.

(ವರದಿ: ರಾಖಾ ಮುಖರ್ಜಿ)

First published:September 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading