• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • ಡಿಸೆಂಬರ್‌ ವೇಳೆಗೆ 216 ಕೋಟಿ ಡೋಸ್‌ ಲಸಿಕೆ ಉತ್ಪಾದನೆ; ಕೇಂದ್ರ ಸಚಿವರ ಹೇಳಿಕೆಗೆ ಓವೈಸಿ ಮಾತಿನ ಪಂಚ್..!

ಡಿಸೆಂಬರ್‌ ವೇಳೆಗೆ 216 ಕೋಟಿ ಡೋಸ್‌ ಲಸಿಕೆ ಉತ್ಪಾದನೆ; ಕೇಂದ್ರ ಸಚಿವರ ಹೇಳಿಕೆಗೆ ಓವೈಸಿ ಮಾತಿನ ಪಂಚ್..!

ಅಸಾದುದ್ದೀನ್ ಒವೈಸಿ

ಅಸಾದುದ್ದೀನ್ ಒವೈಸಿ

ಆಗಸ್ಟ್ - ಡಿಸೆಂಬರ್ ನಡುವೆ 216 ಕೋಟಿ ಲಸಿಕೆಗಳನ್ನು ಮ್ಯಾಜಿಕ್ ಮಾಡಿ ತಯಾರಿಸುತ್ತದೆ ಎಂದು ಸರ್ಕಾರ ಹೇಳುತ್ತಿದೆ. ಇದು ನಿಜವಾಗಿದ್ದರೆ ಇಲ್ಲಿಯವರೆಗೆ 55 ಕೋಟಿ ಕೋವ್ಯಾಕ್ಸಿನ್‌ ಉತ್ಪಾದನೆ ಆಗಿರಬೇಕಿತ್ತು ಎಂದು ಓವೈಸಿ ಹೇಳಿದ್ದಾರೆ.

  • Share this:

ಕೊರೋನಾ ಮಹಾಮಾರಿಯಿಂದ ದೇಶ ತತ್ತರಿಸಿದೆ. ಹಲವಾರು ರಾಜ್ಯಗಳಲ್ಲಿ ಲಾಕ್ಡೌನ್ ಜಾರಿಗೊಳಿಸಿದ್ದು, ಸೋಂಕನ್ನು ಹತೋಟಿ ತರುವ ಪ್ರಯತ್ನ ಮಾಡಲಾಗುತ್ತಿದೆ. ಇನ್ನೊಂದೆಡೆ ದೇಶದಲ್ಲಿ ಕೊರೋನಾ ಲಸಿಕೆ ಅಭಾವ ತಲೆದೋರಿದ್ದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಸವಾಲಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರು 216 ಕೋಟಿ ಡೋಸ್‌ ಹೊಸ ಲಸಿಕೆಗಳು ಡಿಸೆಂಬರ್ ವೇಳೆಗೆ ಸಿದ್ಧವಾಗಲಿದೆ ಎಂದು ಹೇಳಿದ್ದಾರೆ. ಈ ಹೇಳಿಕೆಯನ್ನು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಭಾರತದ ವ್ಯಾಕ್ಸಿನೇಷನ್ ಯೋಜನೆಯ ಬಗ್ಗೆ ಪ್ರಶ್ನಿಸಿದ್ದಾರೆ.


ಭಾರತೀಯ ಲಸಿಕೆಯಾದ ಕೋವ್ಯಾಕ್ಸಿನ್‌ ಲಸಿಕೆಯನ್ನು ಒಂದು ಬ್ಯಾಚ್​ನಲ್ಲಿ ತಯಾರಿಸಿ ಬಿಡುಗಡೆ ಮಾಡಲು ನಾಲ್ಕು ತಿಂಗಳುಗಳ ಅವಧಿ ತೆಗೆದುಕೊಳ್ಳುತ್ತದೆ. ಆದರೆ ಕೇಂದ್ರ ಸರ್ಕಾರ ಹೇಳಿರುತ್ತಿರುವುದಂತೆ, ಈ ವರ್ಷದ ಅಂತ್ಯಕ್ಕೆ 216 ಕೋಟಿ ಪ್ರಮಾಣದ ಲಸಿಕೆಯನ್ನು ಭಾರತ್ ಬಯೋಟೆಕ್ ಹೇಗೆ ಉತ್ಪಾದಿಸಲು ಸಾಧ್ಯವೆಂದು ಓವೈಸಿ ಪ್ರಶ್ನೆ ಮಾಡಿದ್ದಾರೆ.


"ಆಗಸ್ಟ್ - ಡಿಸೆಂಬರ್ ನಡುವೆ 216 ಕೋಟಿ ಲಸಿಕೆಗಳನ್ನು ಮ್ಯಾಜಿಕ್ ಮಾಡಿ ತಯಾರಿಸುತ್ತದೆ ಎಂದು ಸರ್ಕಾರ ಹೇಳುತ್ತಿದೆ. ಇದು ನಿಜವಾಗಿದ್ದರೆ ಇಲ್ಲಿಯವರೆಗೆ 55 ಕೋಟಿ ಕೋವ್ಯಾಕ್ಸಿನ್‌ ಉತ್ಪಾದನೆ ಆಗಿರಬೇಕಿತ್ತು. ಸದ್ಯ ದಿನದಲ್ಲಿ ಭಾರತ್ ಬಯೋಟೆಕ್ 5 ಲೀಟರ್ ವ್ಯಾಕ್ಸಿನ್ ಉತ್ಪಾದನೆ ಆಗುತ್ತಿದೆ. ಆಗಸ್ಟ್ ವೇಳೆಗೆ ಇದು ದಿನಕ್ಕೆ 37 ಲೀಟರ್‌ಗೆ ಹೆಚ್ಚಾಗಲಿದೆ! ಈ ಅಂಕಿ ಅಂಶಗಳನ್ನು ನೋಡಿದರೆ ಭಾರತ್ ಬಯೋಟೆಕ್ ನಾಲ್ಕು ತಿಂಗಳ ವಿಳಂಬ ಅಥವ ಇನ್ನೂ ಹೆಚ್ಚು ವಿಳಂಬವಾಗುವ ಸಾಧ್ಯತೆಯಿದೆ. ದಿಲ್ ಬೆಹ್ಲಾನೆ ಕೆ ಲಿಯೆ ಯೇ ಖಯಾಲ್" ಎಂದು ಓವೈಸಿ ಟ್ವೀಟ್ ಮಾಡಿದ್ದಾರೆ.


ಇದನ್ನೂ ಓದಿ: ಒಂದು ಬರ್ತ್ ಡೇ ಪೋಸ್ಟ್‌ನಿಂದ ಅಮೆರಿಕದಲ್ಲಿ ಅವಾಂತರ; 150 ಜನರ ಬಂಧನ!

ಸೆಪ್ಟೆಂಬರ್ ವೇಳೆಗೆ ತಿಂಗಳಿಗೆ ಲಸಿಕೆ ಉತ್ಪಾದನಾ ಸಾಮರ್ಥ್ಯದಲ್ಲಿ ಸುಮಾರು 10 ಕೋಟಿ ಪ್ರಮಾಣವನ್ನು ತಲುಪಲಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶುಕ್ರವಾರ ತಿಳಿಸಿದೆ.


"ಕೊವಾಕ್ಸಿನ್‌ ಲಸಿಕೆಯ ಪ್ರಸ್ತುತ ಉತ್ಪಾದನಾ ಸಾಮರ್ಥ್ಯದಲ್ಲಿ 2021ರ ಮೇ-ಜೂನ್ ತಿಂಗಳ ವೇಳೆಗೆ ದ್ವಿಗುಣಗೊಳ್ಳಲಿದೆ. ತದನಂತರ ಜುಲೈ / ಆಗಸ್ಟ್ ತಿಂಗಳಲ್ಲಿ ಸುಮಾರು 6-7 ಪಟ್ಟು ಉತ್ಪಾದನೆಯಲ್ಲಿ ಏರಿಕೆಯಾಗಲಿದೆ. ಹಾಗೂ ಏಪ್ರಿಲ್‌ನಲ್ಲಿ 1 ಕೋಟಿ ಲಸಿಕೆಗಳು: ಜುಲೈ / ಆಗಸ್ಟ್‌ ತಿಂಗಳಲ್ಲಿ 6-7 ಕೋಟಿ ಲಸಿಕೆಗಳ ಉತ್ಪಾದನೆ ಹೆಚ್ಚಿಸಲಾಗುವುದು. ಹೀಗೆ ಸೆಪ್ಟೆಂಬರ್ 2021ರ ವೇಳೆಗೆ ತಿಂಗಳ ವೇಳೆಗೆ ಸುಮಾರು 10 ಕೋಟಿ ಪ್ರಮಾಣವನ್ನು ತಲುಪಲಿದೆ" ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಹೇಳಿಕೆಯಲ್ಲಿ ವಿವರಿಸಿದೆ.




ಸದ್ಯ ದೇಶದಲ್ಲಿ ಲಸಿಕೆ ಅಭಾವ ಹೆಚ್ಚಾಗಿದ್ದು, ಜನರು ಆಸ್ಪತ್ರೆಗಳ ಮುಂದೆ ಸರದಿ ಸಾಲುಗಳಲ್ಲಿ ಘಂಟೆಗಟ್ಟಲೆ ನಿಂತಿರುವುದು ಕಾಣಬಹುದು. ಲಸಿಕೆಗಾಗಿ ಜನರು ಮುಗಿಬಿದ್ದಿದ್ದು ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಬೇಜವಾಬ್ದಾರಿತನ ಮಾಡುತ್ತಿದ್ದಾರೆ. ಆದಷ್ಟು ಬೇಗ ಕೇಂದ್ರ ಸರ್ಕಾರ ಲಸಿಕೆಯ ವ್ಯವಸ್ಥೆ ಮಾಡಬೇಕಾಗಿದೆ.

top videos
    First published: