ಸಿಎಎ ಬಗ್ಗೆ ಫೋನ್​ನಲ್ಲಿ ಮಾತಾಡಿದ್ದೇ ತಪ್ಪಾಯ್ತ? ಪ್ರಯಾಣಿಕನನ್ನು ಪೊಲೀಸರಿಗೆ ಒಪ್ಪಿಸಿದ ಕ್ಯಾಬ್ ಚಾಲಕ

ಬುಧವಾರ ರಾತ್ರಿ 10 ಗಂಟೆಗೆ ಮುಂಬೈನ ಜುಹು ಪ್ರದೇಶದಿಂದ ಕುರ್ಲಾದಲ್ಲಿರುವ ತಮ್ಮ ರೂಮಿಗೆ ತೆರಳಲು ಕ್ಯಾಬ್​ ಬುಕ್ ಮಾಡಿದ್ದ ಬಪ್ಪಾದಿತ್ಯ ಕ್ಯಾಬ್​ನಲ್ಲಿ ಕುಳಿತು ತಮ್ಮ ಸ್ನೇಹಿತನೊಂದಿಗೆ ಮಾತನಾಡುತ್ತಿದ್ದರು. ಅದನ್ನು ಕೇಳಿಸಿಕೊಂಡ ಕ್ಯಾಬ್ ಚಾಲಕ ಪೊಲೀಸರಿಗೆ ಕರೆ ಮಾಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮುಂಬೈ (ಫೆ. 7): ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ದೇಶದ ಹಲವು ಭಾಗಗಳಲ್ಲಿ ಭಾರೀ ಪ್ರತಿಭಟನೆಗಳು ನಡೆದಿದ್ದವು. ಇಂದಿಗೂ ದೆಹಲಿಯ ಶಹೀನ್ ಬಾಗ್​ನಲ್ಲಿ ಸಿಎಎ ವಿರೋಧಿ ಪ್ರತಿಭಟನೆ ನಡೆಯುತ್ತಲೇ ಇದೆ. ಕೇಂದ್ರ ಸರ್ಕಾರ ಜಾರಿಗೆ ತಂದ ಹೊಸ ಮಸೂದೆಯ ವಿರುದ್ಧ ಮೊಬೈಲ್​ನಲ್ಲಿ ಮಾತನಾಡಿದ ಕಾರಣಕ್ಕೆ ಮುಂಬೈನಲ್ಲಿ ಕವಿ ಮತ್ತು ಸಾಮಾಜಿಕ ಹೋರಾಟಗಾರನನ್ನು ಊಬರ್ ಕ್ಯಾಬ್​ ಚಾಲಕ ಪೊಲೀಸರ ವಶಕ್ಕೆ ಒಪ್ಪಿಸಿದ್ದಾನೆ.

ಈ ಬಗ್ಗೆ ಆಲ್ ಇಂಡಿಯಾ ಪ್ರೋಗ್ರೆಸಿವ್ ವುಮೆನ್ಸ್​ ಅಸೋಸಿಯೇಷನ್​ ಕಾರ್ಯದರ್ಶಿ ಕವಿತಾ ಕೃಷ್ಣನ್ ಟ್ವೀಟ್ ಮಾಡಿದ್ದಾರೆ. ಮುಂಬೈನಲ್ಲಿ ಬುಧವಾರ ರಾತ್ರಿ ಊಬರ್ ಕ್ಯಾಬ್​ನಲ್ಲಿ ಪ್ರಯಾಣಿಸುತ್ತಿದ್ದ ಬಪ್ಪಾದಿತ್ಯ ಸರ್ಕಾರ್ ಎಂಬ ಕವಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಬುಧವಾರ ರಾತ್ರಿ 10 ಗಂಟೆಗೆ ಮುಂಬೈನ ಜುಹು ಪ್ರದೇಶದಿಂದ ಕುರ್ಲಾದಲ್ಲಿರುವ ತಮ್ಮ ರೂಮಿಗೆ ತೆರಳಲು ಕ್ಯಾಬ್​ ಬುಕ್ ಮಾಡಿದ್ದ ಬಪ್ಪಾದಿತ್ಯ ಕ್ಯಾಬ್​ನಲ್ಲಿ ಕುಳಿತು ತಮ್ಮ ಸ್ನೇಹಿತನೊಂದಿಗೆ ಮಾತನಾಡುತ್ತಿದ್ದರು. ಈ ವೇಳೆ ಬಪ್ಪಾದಿತ್ಯ ಸರ್ಕಾರ್ ಸಿಎಎ ವಿರುದ್ಧವಾಗಿ ಮಾತನಾಡಿದ್ದು, ದೆಹಲಿಯ ಶಹೀನ್ ಬಾಗ್​ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಂತೆ ಮುಂಬೈನಲ್ಲೂ ಪ್ರತಿಭಟನೆ ನಡೆಸಬೇಕೆಂದು ಹೇಳಿದ್ದಾರೆ.

ಇದನ್ನೂ ಓದಿ: ಸಿಎಎ ಮುಸ್ಲಿಮರಿಗಷ್ಟೇ ಅಲ್ಲ ದಲಿತರಿಗೂ ಮಾರಕ; ಕೇಂದ್ರ ಸರ್ಕಾರದ ವಿರುದ್ಧ ಬಿಜೆಪಿ ಶಾಸಕನಿಂದಲೇ ಕಿಡಿ!

ಈ ಸಂಭಾಷಣೆಯನ್ನು ಕೇಳುತ್ತಿದ್ದ ಕ್ಯಾಬ್ ಚಾಲಕ ಎಟಿಎಂನಿಂದ ಹಣ ಡ್ರಾ ಮಾಡಿಕೊಳ್ಳಬಹುದಾ? ಎಂದು ಬಪ್ಪಾದಿತ್ಯ ಅವರ ಬಳಿ ಕೇಳಿದ್ದ. ಅದಕ್ಕೆ ಒಪ್ಪಿಗೆ ಸೂಚಿಸಿದ ಬಪ್ಪಾದಿತ್ಯ ಮೊಬೈಲ್​ನಲ್ಲಿ ಮಾತನಾಡುತ್ತಾ ಕುಳಿತಿದ್ದರು. ಆಗ ಇಬ್ಬರು ಪೊಲೀಸರೊಂದಿಗೆ ವಾಪಾಸ್ ಬಂದ ಕ್ಯಾಬ್ ಚಾಲಕ ತನ್ನ ಗ್ರಾಹಕನನ್ನು ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸುವಂತೆ ಮನವಿ ಮಾಡಿದ್ದಾನೆ. ಈತ ದೇಶವಿರೋಧಿಯಾಗಿ ಮಾತನಾಡುತ್ತಿದ್ದು, ತಾನು ಆ ಮಾತುಗಳನ್ನು ರೆಕಾರ್ಡ್​ ಮಾಡಿಕೊಂಡಿದ್ದೇನೆ ಎಂದು ಹೇಳಿದ್ದಾನೆ.ಇದನ್ನೂ ಓದಿ: ಸಿಎಎ ವಿಚಾರದಲ್ಲಿ ವಿರೋಧ ಪಕ್ಷಗಳು ಪಾಕಿಸ್ತಾನ್ ಭಾಷೆಯಲ್ಲಿ ಮಾತನಾಡುತ್ತಿವೆ; ಸಂಸತ್​ನಲ್ಲಿ ಹರಿಹಾಯ್ದ ಮೋದಿ

ಜೈಪುರ ಮೂಲದವರಾದ ಬಪ್ಪಾದಿತ್ಯ ಮುಂಬೈನಲ್ಲಿ ನಡೆಯುತ್ತಿರುವ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಬಂದಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾರೆ. ಬಳಿಕ ಊಬರ್ ಚಾಲಕ ಮತ್ತು ಆ ಕವಿಯನ್ನು ಪೊಲೀಸರು ಠಾಣೆಗೆ ಕರೆದೊಯ್ದು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಬಪ್ಪಾದಿತ್ಯ ಅವರ ಮೇಲೆ ಆರೋಪ ಮಾಡಿರುವ ಕ್ಯಾಬ್ ಚಾಲಕ, ಈತ ಹಿಂದಿನ ಸೀಟಿನಲ್ಲಿ ಕುಳಿತು ದೇಶವಿರೋಧಿ ಮಾತುಗಳನ್ನಾಡುತ್ತಿದ್ದ. ತಾನೊಬ್ಬ ಕಮ್ಯುನಿಸ್ಟ್​ ಎಂದು ಹೇಳಿಕೊಂಡಿದ್ದ ಈತ ದೇಶಕ್ಕೆ ಬೆಂಕಿ ಹಚ್ಚುವ ಬಗ್ಗೆ ಮಾತನಾಡುತ್ತಿದ್ದ. ಇಂಥವರಿಂದಲೇ ದೇಶ ಹಾಳಾಗುತ್ತಿದೆ. ಇದನ್ನು ನೋಡಿಕೊಂಡು ನಾವು ಸುಮ್ಮನಿರಬೇಕಾ? ಎಂದು ಪ್ರಶ್ನಿಸಿದ್ದಾನೆ ಎಂದು ಕವಿತಾ ಕೃಷ್ಣನ್ ಟ್ವೀಟ್​ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಕೊರೊನಾ ವೈರಸ್​ಗೆ ಚೀನಾದಲ್ಲಿ 636 ಬಲಿ; ಜಪಾನ್​ನಲ್ಲೂ ಹೆಚ್ಚಾಯ್ತು ಸಾವಿನ ಭೀತಿ

ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಕಮ್ಯುನಿಸ್ಟ್​ ಹೋರಾಟಗಾರ ಎಸ್​. ಗೋಹಿಲ್ ಎಂಬುವವರು ಪೊಲೀಸ್ ಠಾಣೆಗೆ ಧಾವಿಸಿ, ಬಪ್ಪಾದಿತ್ಯ ಅವರನ್ನು ಕರೆದುಕೊಂಡು ಹೋಗಿದ್ದಾರೆ. ಯಾವುದೇ ಕಾರಣಕ್ಕೂ ಕೆಂಪು ಸ್ಕಾರ್ಫ್​ ಧರಿಸಿ ಓಡಾಡದಂತೆ ಪೊಲೀಸರು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಈ ಟ್ವೀಟ್ ಅನ್ನು ಊಬರ್ ಮತ್ತು ಮುಂಬೈ ಪೊಲೀಸ್ ಟ್ವಿಟ್ಟರ್ ಖಾತೆಗೆ ಟ್ಯಾಗ್ ಮಾಡಲಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಊಬರ್, ನಾವು ಈ ಬಗ್ಗೆ ತುರ್ತು ವಿಚಾರಣೆ ನಡೆಸುತ್ತೇವೆ. ನಮ್ಮ ಗ್ರಾಹಕರಿಗೆ ಆದ ಅನಾನುಕೂಲಕ್ಕೆ ಕ್ಷಮೆ ಕೇಳುತ್ತೇವೆ. ಟ್ರಿಪ್ ಕುರಿತ ಮಾಹಿತಿಯನ್ನು ನೀಡಿ ಎಂದು ರೀಟ್ವೀಟ್ ಮಾಡಿದೆ.

 

 
First published: