HOME » NEWS » National-international » OVER WEIGHT GAIN BRIDE BANS BEST FRIEND FROM BRIDAL PARTY KVD

ದಪ್ಪಗಾಗಿದ್ದೀಯ ಅಂತೇಳಿ ಬೆಸ್ಟ್ ಫ್ರೆಂಡ್​​ನ ಮದುವೆ ಪಾರ್ಟಿಯಿಂದ ದೂರವಿಟ್ಟ ವಧು.. ನೆಟ್ಟಿಗರಿಂದ ಛೀಮಾರಿ!

ನಾನು ಆಯ್ಕೆ ಮಾಡಿರುವ ಬ್ರೈಡ್ಸ್​ ಮೇಡ್​ ಡ್ರೆಸ್​​ ನಿನಗೆ ಈಗ ಶೂಟ್​ ಆಗಲ್ಲ. ದಪ್ಪಗಿರುವುದರಿಂದ ಡ್ರೆಸ್​​ ನಿನಗೆ ಚನ್ನಾಗಿ ಕಾಣೋಲ್ಲ. ನಿನಗೆ ಮುಜುಗರವಾಗುವುದು ಬೇಡ ಎಂದು ನಾನು ನಿನ್ನನ್ನು ಇದರಿಂದ ದೂರವಿಡುತ್ತಿದ್ದೇನೆ.


Updated:May 31, 2021, 4:05 PM IST
ದಪ್ಪಗಾಗಿದ್ದೀಯ ಅಂತೇಳಿ ಬೆಸ್ಟ್ ಫ್ರೆಂಡ್​​ನ ಮದುವೆ ಪಾರ್ಟಿಯಿಂದ ದೂರವಿಟ್ಟ ವಧು.. ನೆಟ್ಟಿಗರಿಂದ ಛೀಮಾರಿ!
ಸಾಂದರ್ಭಿಕ ಚಿತ್ರ (ಕೃಪೆ: ಮಿಲನಾ ನಾಗರಾಜ್​​ ಇಸ್ಟಾಗ್ರಾಂ)
  • Share this:
ಮದುವೆ ಹತ್ತಿರ ಬರುತ್ತಿದ್ದಂತೆ ಹೆಣ್ಣು ಮಕ್ಕಳಿಗೆ ಏನೋ ಸಂಭ್ರಮ. ಮದುವೆಗೆ ಹೇಗೆಲ್ಲಾ ರೆಡಿ ಆಗಬೇಕು ಅನ್ನೋದನ್ನ ಗೆಳೆತಿಯರ ಜೊತೆ ಗಂಟೆಗಟ್ಟಲೆ ಚರ್ಚಿಸುತ್ತಾರೆ. ಯಾವ ಜ್ಯುವೆಲ್ಸ್​​​ ತೊಡಬೇಕು ಎಂಬುದರಿಂದ ಹಿಡಿದು ಚಪ್ಪಲಿವರೆಗೆ ಆಯ್ಕೆ ಮಾಡಲು ಗೆಳೆತಿಯರ ಗುಂಪನ್ನು ಕಟ್ಟಿಕೊಂಡು ದಿನಗಟ್ಟಲೇ ಶಾಪಿಂಗ್​ ಮಾಡುತ್ತಾರೆ. ಇನ್ನು ಬೆಸ್ಟ್​​ ಫ್ರೆಂಡ್​​​ ಮದುವೆಯಲ್ಲಿ ಮಿಂಚಲು ಗೆಳೆತಿಯರು ಭರ್ಜರಿಯಾಗೇ ತಯಾರಾಗುತ್ತಾರೆ. ವಧುವಿಗೆ ತಮ್ಮ ಸಂಬಂಧಿಕರಲ್ಲಿ ನಾಲ್ಕು ಜನ ಕಮ್ಮಿ ಬಂದರೂ ಚಿಂತೆ ಇಲ್ಲ. ಆದರೆ ತನ್ನೆಲ್ಲಾ ಬೆಸ್ಟ್​​ ಫ್ರೆಂಡ್​​ ಮದುವೆಯಲ್ಲಿ ಕಡ್ಡಾಯವಾಗಿ ಇರಬೇಕು. ಮಂಟಪಕ್ಕೆ ನಡೆಯುವಾಗ ಹಿಂದೆ ಗೆಳೆತಿಯರ ಹಿಂಡು ಇರಬೇಕು ಅಂತ ಬಯಸುತ್ತಾರೆ.

ಅದರಲ್ಲೂ ಇತ್ತೀಚೆಗೆ ವಧುವಿನ ಬ್ಯಾಚುಲರ್​​ ಪಾರ್ಟಿಗಳು ಕಡ್ಡಾಯವಾಗಿವೆ. ವಧುವಾದವಳು ಮದುವೆಗೂ ಮುನ್ನ ತನ್ನ ಗೆಳೆತಿಯರಿಗೆ ಭರ್ಜರಿ ಪಾರ್ಟಿ ಕೊಡುತ್ತಾಳೆ. ಆ ಪಾರ್ಟಿಯಲ್ಲಿ ಗೆಳೆತಿಯರೆಲ್ಲಾ ಒಂದೇ ತರದ ಬಟ್ಟೆ ತೊಡೋದು ಕೂಡ ಫ್ಯಾಷನ್​ ಆಗಿದೆ. ಇನ್ನು ಬ್ಯಾಚುಲರ್​ ಪಾರ್ಟಿಯಲ್ಲಿ ಒಂದಷ್ಟು ಪ್ರೈವೆಟ್​​ ಮೋಜು-ಮಸ್ತಿ ಕೂಡ ಇರುತ್ತೆ. ಹೀಗಾಗಿ ವಧುವಿನ ಆಪ್ತ ಗೆಳೆತಿಯರಿಗೆ ಮಾತ್ರ ಬ್ಯಾಚುಲರ್​ ಪಾರ್ಟಿಗೆ ಎಂಟ್ರಿ ಇರುತ್ತೆ. ಆದರೆ ಇಲ್ಲೊಬ್ಬಳು ವಧು ತನ್ನ ಬೆಸ್ಟ್​​ ಫ್ರೆಂಡ್​​ನ ಪಾರ್ಟಿಗೆ ಕರೆದಿಲ್ಲ. ಅದಕ್ಕೆ ಆಕೆ ನೀಡಿರುವ ಕಾರಣ ನೆಟ್ಟಿಗರಿಗೆ ಬೇಸರ ತರಿಸಿದೆ.



ವಿದೇಶಿ ಕ್ರಿಶ್ಚಿಯನ್​ ಮದುವೆಗಳಲ್ಲಿ ಬ್ರೈಡಲ್​​​​​​​ ಪಾರ್ಟಿಗೆ ವಿಶೇಷ ಸ್ಥಾನವಿದೆ. ಅದರಲ್ಲೂ ಯುವತಿಯ ಜೊತೆಗೆ ಬ್ರೈಡ್ಸ್​​ ಮೇಡ್​ ಆಗಿ ಚರ್ಚ್​ನಲ್ಲಿ ನಿಲ್ಲುವುದು ಒಂದು ಗೌರವ. ಸಾಮಾನ್ಯವಾಗಿ ಸೋದರಿಯರಿಗೆ, ಗೆಳೆತಿಯರಿಗೆ ವಧು ಆದವಳು ಬ್ರೈಡ್ಸ್​​ ಮೇಡ್​​​ ಆಗುವ ಅವಕಾಶ ನೀಡುತ್ತಾಳೆ. ಅಂತೆಯೇ ಇಲ್ಲಿನ ವಧು ತನ್ನ ಬೆಸ್ಟ್​​ ಫ್ರೆಂಡ್​ಗೆ ಪಾರ್ಟಿಗೆ ನೀನು ಬರುವುದು ಬೇಡ. ನೀನು ನನ್ನ ಮದುವೆಯಲ್ಲಿ ಬ್ರೈಡ್ಸ್​ ಮೇಡ್​ ಆಗಲು ಸಾಧ್ಯವಿಲ್ಲ. ಅದಕ್ಕೆ ನಿನ್ನ ತೂಕವೇ ಕಾರಣ ಎಂದು ನೇರವಾಗಿ ಮೆಸೇಜ್​ ಮಾಡಿದ್ದಾಳೆ.

ಬ್ರೈಡ್ಸ್​​ ಮೇಡ್​ಗಾಗಿ ನಾನು ನನ್ನ ಕಲ್ಪನೆಯ ಡ್ರೆಸನ್ನು ಆಯ್ಕೆ ಮಾಡಿದ್ದೇನೆ. ಯಾವುದೇ ಹುಡುಗಿಯಾದರೂ ಅದನ್ನು ಧರಿಸಲು ಇಷ್ಟಪಡುತ್ತಾಳೆ. ಆದರೆ ನೀನು ಮಗುವಿನ ತಾಯಿಯಾದ ಬಳಿಕ ದಪ್ಪಗಾಗಿದ್ದೀಯಾ. ನಾನು ಆಯ್ಕೆ ಮಾಡಿರುವ ಬ್ರೈಡ್ಸ್​ ಮೇಡ್​ ಡ್ರೆಸ್​​ ನಿನಗೆ ಈಗ ಶೂಟ್​ ಆಗಲ್ಲ. ದಪ್ಪಗಿರುವುದರಿಂದ ಡ್ರೆಸ್​​ ನಿನಗೆ ಚನ್ನಾಗಿ ಕಾಣೋಲ್ಲ. ನಿನಗೆ ಮುಜುಗರವಾಗುವುದು ಬೇಡ ಎಂದು ನಾನು ನಿನ್ನನ್ನು ಇದರಿಂದ ದೂರವಿಡುತ್ತಿದ್ದೇನೆ ಎಂದು ವಧು ತನ್ನ ಬೆಸ್ಟ್​​ ಫ್ರೆಂಡ್​ಗೆ ಮೆಸೇಜ್​ ಮಾಡಿದ್ದಾಳೆ.

ಇದನ್ನೂ ಓದಿ:  ರಾತ್ರಿ ಇಡೀ ಗಂಡ ಹೇಗೆಲ್ಲಾ ಕಾಟ ಕೊಡ್ತಾನೆ ಅಂತ ವಿಡಿಯೋ ಮಾಡಿದ ಸಾನಿಯಾ ಮಿರ್ಜಾ ತಂಗಿ!

ಮದುವೆಯಾಗಲು ಹೊರಟಿರುವ ಜೀವದ ಗೆಳೆತಿಯ ಮೆಸೇಜ್​ ನೋಡಿ ಹೊಸದಾಗಿ ತಾಯಿಯಾಗಿರುವ ಸ್ನೇಹಿತೆಗೆ ಬೇಸರವಾಗಿದೆ. ದಪ್ಪಗಾಗಿರುದರಿಂದ ನನ್ನ ದೂರವಿಡಲಾಗಿದೆ ಎಂದು ನೊಂದುಕೊಂಡಿದ್ದಾಳೆ. ಗೆಳೆತಿಯರ ಈ ಮೆಸೇಜ್​ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹಲವರು ಈ ಬಗ್ಗೆ ಪ್ರತಿಕ್ರಿಯಿಸಿ ಮಧುವನ್ನು ಟೀಕಿಸಿದ್ದಾರೆ. ಆಕೆ ಬೆಸ್ಟ್​​ ಫ್ರೆಂಡೇ ಅಲ್ಲ. ಯಾರೂ ತನ್ನ ಆಪ್ತ ಗೆಳೆತಿಗೆ ಈ ರೀತಿ ಮೆಸೇಜ್​ ಕಳುಹಿಸುವುದಿಲ್ಲ. ಫ್ರೆಂಡ್​ ಹೇಗಿದ್ದರೂ ಸ್ವೀಕರಿಸುವ ಮನಸ್ಸಿರಬೇಕು. ಇದು ಬಾಡಿ ಶೇಮಿಂಗ್​ ಎಂದು ಕಿಡಿ ಕಾರಿದ್ದಾರೆ.ನಮ್ಮನ್ನು ನಾವು ಇದ್ದಂತೆಯೇ ಸ್ವೀಕರಿಸುವವರ ಜೊತೆ ಇರಬೇಕು. ದಪ್ಪಗಿದ್ದೀಯಾ ಬೇಡ ಎನ್ನುವವರಿಂದ ದೂರು ಇರುವುದೇ ಲೇಸು ಎಂದು ಕೆಲವರು ಸಲಗೆ ನೀಡಿದ್ದಾರೆ. ವಧು ಕೂಡ ನಾಳೆ ಮಗುವನ್ನು ಹೆತ್ತು ದಪ್ಪಗಾಗುವುದಿಲ್ಲವೇ. ಅವಳು ಈಗ ಇರುವಂತೆಯೇ ಇರುತ್ತಾಳಾ ಎಂದು ಕೆಲವರೂ ಮಾತಿನಲ್ಲೇ ತಿವಿದಿದ್ದಾರೆ. ಅದೇನೇ ಇರಲಿ ದೇಹದ ತೂಕಕ್ಕೂ ಸ್ನೇಹಕ್ಕೂ ಸಂಬಂಧವೇ ಇಲ್ಲ ಅನ್ನುವಷ್ಟು ಮನಸ್ಸು ದೊಡ್ಡದಿರಬೇಕು.
Published by: Kavya V
First published: May 31, 2021, 4:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories