ಹೆಚ್ಚಿನ ಹಣದ ಆಸೆ ತೋರಿಸಿ ಜನರಿಂದ ಹಣ ಕಟ್ಟಿಸಿಕೊಂಡು ಮೋಸ ಮಾಡುವ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಲೇ ಇವೆ. ಇಂತಹ ಫೈನಾನ್ಸ್ಗಳ (Bogus Chit Fund) ಮೇಲೆ ಹಣ ಹೂಡಬೇಡಿ ಎಂದು ಎಷ್ಟೇ ಮನವಿ ಮಾಡಿದರೂ ಜನರು ಮಾತ್ರ ಕೆಲವು ಮೋಸಗಾರರ ಮಾತಿಗೆ ಮರುಳಾಗಿ ಹಣ ಹೂಡಿಕೆ ಮಾಡಿ, ಕೊನೆಗೆ ಕಟ್ಟಿದ ಹಣವೂ ವಾಪಸ್ ಬಾರದಿದ್ದಾಗ ಪೊಲೀಸ್ ಠಾಣೆ ಮೆಟ್ಟಿಲೇರಿರುವ ನೂರಾರು ಪ್ರಕರಣಗಳನ್ನು ನಾವು ನೋಡಿದ್ದೇವೆ. ಇದೀಗ ಅಂತಹದ್ದೇ ಒಂದು ಪ್ರಕರಣ ತಮಿಳುನಾಡಿನ ಚೆನ್ನೈನಲ್ಲಿ (Chennai) ನಡೆದಿದೆ.
ಠೇವಣಿ ಯೋಜನೆಗಳ ಮೇಲೆ ಆಕರ್ಷಕ ಲಾಭದ ಭರವಸೆ ನೀಡಿ 1000 ಜನರಿಂದ 100 ಕೋಟಿ ರೂಪಾಯಿ ಕಟ್ಟಿಸಿಕೊಂಡು ವಂಚಿಸಿದ ಆರೋಪದ ಮೇಲೆ ಉದ್ಯಮಿಯೊಬ್ಬರನ್ನು ಆರ್ಥಿಕ ಅಪರಾಧಗಳ ವಿಭಾಗದ ಅಧಿಕಾರಿಗಳು ಬಂಧಿಸಿದ್ದಾರೆ. ಆರೋಪಿಯನ್ನು ರಾಫೊಲ್ ರಿಟೇಲ್ಸ್ ಪ್ರೈವೇಟ್ ಲಿಮಿಟೆಡ್ ನ ಅಧ್ಯಕ್ಷ ಶಿವನ್ ನರೇಂದ್ರನ್ ಎಂದು ಗುರುತಿಸಲಾಗಿದೆ. ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ಈಗ ಜೈಲಿಗೆ ಕಳುಹಿಸಲಾಗಿದೆ.
ಆರೋಪಿ ನರೇಂದ್ರ ಪತ್ರಿಕೆಯೊಂದರಲ್ಲಿ ಜಾಹೀರಾತು ಪ್ರಕಟಿಸಿ, ಠೇವಣಿಗಳ ಮೇಲೆ ಆಕರ್ಷಕ, ಯೋಜನೆಗಳು ಹಾಗು ದ್ವಿಗುಣ ಲಾಭ ನೀಡುವ ಮತ್ತು ವರ್ಷಕ್ಕೆ 700 ರೂ.ಗೆ ವಾರಕ್ಕೆ ಆರು ಮೊಟ್ಟೆಗಳನ್ನು ನೀಡುವುದಾಗಿ ಜಾಹೀರಾತಿನಲ್ಲಿ ಪ್ರಕಟಿಸಿದ್ದ. ಇನ್ನೊಂದು ಯೋಜನೆಯಲ್ಲಿ ವರ್ಷಕ್ಕೆ 1,400 ರೂ.ಗೆ ವಾರಕ್ಕೆ 12 ಮೊಟ್ಟೆಗಳನ್ನು ನೀಡುವುದು ಮತ್ತು ಮೂರನೆಯದು ವಾರಕ್ಕೆ ರೂ .2,800 ಕ್ಕೆ ನೀಡುತ್ತದೆ 24 ಮೊಟ್ಟೆಗಳನ್ನು ನೀಡುವುದು ಎಂಬು ಕೊಡುಗೆಗಳನ್ನು ಆರೋಪಿ ಘೋಷಿಸಿದ್ದ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಜುಲೈನಲ್ಲಿ, ಪೊಲೀಸರು ಆರೋಪಿಯನ್ನು ಕರೆಸಿದ್ದರು. ಕನಿಷ್ಠ 280 ಹೂಡಿಕೆದಾರರಿಗೆ ಹಣವನ್ನು ಹಿಂದಿರುಗಿಸುವ ಭರವಸೆ ನೀಡಿದ ಹೇಳಿಕೆ ನೀಡಿದ ನಂತರ ಆತನನ್ನು ಬಿಡುಗಡೆ ಮಾಡಲಾಗಿತ್ತು.
ಆತ ಪೊಲೀಸರ ಮುಂದೆ ಹಾಜರಾಗುವ ಮುನ್ನ, ಕನಿಷ್ಠ 100 ಇತರ ಜನರು ರಾಫೋಲ್ ಗುಂಪಿನಿಂದ ನೀಡಿದ ಭರವಸೆಯಂತೆ ಆತ ಆದಾಯ ಹಿಂದಿರುಗಿಸಿಲ್ಲ ಎಂದು ಆರೋಪಿಸಿ ಪ್ರತ್ಯೇಕ ದೂರುಗಳನ್ನು ಸಲ್ಲಿಸಿದರು. ಪೊಲೀಸರ ಪ್ರಕಾರ, ಕಂಪನಿಯು 36,00 ರಿಂದ 1 ಲಕ್ಷದವರೆಗೆ ಜನರಿಂದ ಹಣ ಸಂಗ್ರಹಿಸಿದೆ ಮತ್ತು 12 ತಿಂಗಳುಗಳವರೆಗೆ ಪ್ರತಿ ತಿಂಗಳು 10,000 ಮತ್ತು 36,000 ರೂಪಾಯಿಗಳ ಆಕರ್ಷಕ ಆದಾಯದ ಭರವಸೆ ನೀಡಿತು. ಠೇವಣಿದಾರರಿಂದ ಒತ್ತಡ ಹೆಚ್ಚಾದಾಗ, ಕಂಪನಿಯು ಜನರಿಗೆ ಈ ಯೋಜನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಮತ್ತು ಅವರು ಹಣ ಕೇಳಿದಾಗಲೆಲ್ಲಾ ಕ್ಷಮಿಸಿ ಎಂದು ಹೇಳಿದ್ದಾರೆ. ಆ ಬಳಿಕ ಜನರಿಂದ ಆರೋಪಿ ವಿರುದ್ಧ ದೂರು ದಾಖಲಾದಾಗ ಆತನನ್ನು ಇದೀಗ ಬಂಧಿಸಲಾಗಿದೆ. ಜನರು ಇಂತಹ ಮೋಸಗಳಿಗೆ ಬಲಿಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ತಮಿಳುನಾಡಿನ ಇಒಡಬ್ಲ್ಯು ಸಿಐಡಿ ಹೇಳಿಕೆ ಬಿಡುಗಡೆ ಮಾಡಿದೆ.
ಜನರು ಸಹ ಅಧಿಕ ಹಣದ ಆಸೆಗೆ ಬಲಿಯಾಗಿ ಇಂತಹ ಬೋಗಸ್ ಕಂಪನಿಗಳಲ್ಲಿ ಹಣ ಹೂಡಿಕೆ ಮಾಡಬೇಡಿ. ಹಣ ಹೂಡಿಕೆಗೆ ಪೋಸ್ಟ್ ಆಫೀಸ್ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳ ಹೆಚ್ಚು ಸುರಕ್ಷಿತ. ಹಣ ಹೂಡಿಕೆ ಮಾಡುವುದಿದ್ದರೆ ಅಲ್ಲಿ ಹೂಡಿಕೆ ಮಾಡಿ.
ಇದನ್ನು ಓದಿ: Blast in Bengaluru: ಬೆಂಗಳೂರಿನಲ್ಲಿ ಮತ್ತೊಂದು ಬೆಂಕಿ ಅವಘಡ; ಮೂವರು ಸಾವು, ನಾಲ್ವರಿಗೆ ಗಾಯ
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ