ಕಳೆದ 7 ವರ್ಷದಲ್ಲಿ ಮೋದಿ ಸರ್ಕಾರ 79 ಲಕ್ಷ ಕೋಟಿ ರೂ. ಜನರ ಜೇಬಿಗೆ ಕತ್ತರಿ ಹಾಕಿದೆ; ರಣದೀಪ್​ಸಿಂಗ್ ಸುರ್ಜೇವಾಲಾ

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಕಚ್ಚಾ ಇಂಧನವನ್ನು ಆಯಿಲ್ ಬಾಂಡ್​ಗೆ ಖರೀದಿಸಲಾಗುತ್ತಿತ್ತು. ಆದರೆ, ಈಗ ಎಲ್ಲವೂ ಬದಲಾಗಿದೆ. ಮೋದಿ ಸರ್ಕಾರ ಜನರ ಮೇಲೆ ತೆರಿಗೆಯ ಬರೆ ಹಾಕುತ್ತಿದೆ ಎಂದು ಸುರ್ಜೇವಾಲಾ ಕಿಡಿಕಾರಿದ್ದಾರೆ.

ರಣದೀಪ್ ಸಿಂಗ್ ಸುರ್ಜೇವಾಲಾ.

ರಣದೀಪ್ ಸಿಂಗ್ ಸುರ್ಜೇವಾಲಾ.

 • Share this:
  ರಾಯಚೂರು (ಆಗಸ್ಟ್​ 17); ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಕಳೆದ 7 ವರ್ಷದಲ್ಲಿ ಜನರ ಜೇಬು ಕತ್ತರಿಸಿ 79 ಲಕ್ಷ ಕೋಟಿ ಹಣ ಸಂಗ್ರಹಿಸಿದೆ ಎಂದು ರಾಜ್ಯ ಕಾಂಗ್ರೆಸ್​ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಆರೋಪಿಸಿದ್ದಾರೆ. ರಾಯಚೂರು ಕಾಂಗ್ರೆಸ್​ ಸಮಾವೇಶದಲ್ಲಿ ಮಾತನಾಡಿರುವ ರಣದೀಪ್ ಸಿಂಗ್ ಸುರ್ಜೇವಾಲಾ, "ಕಳೆದ 7 ವರ್ಷಗಳಿಂದ ಬಿಜೆಪಿ ಜನರ ಜೇಬಿಗೆ ಕತ್ತರಿ ಹಾಕುತ್ತಲೇ ಇದೆ. ಪರಿಣಾಮ ಜನ ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದರೆ, ಬಿಜೆಪಿ ಪಕ್ಷ ಮಾತ್ರ ದಿನದಿಂದ ದಿನಕ್ಕೆ ಶ್ರೀಮಂತ ಪಕ್ಷವಾಗುತ್ತಲೇ ಇದೆ. ಈ ಬಗ್ಗೆ ಚರ್ಚೆಗೂ ನಾನು ಸಿದ್ದವಾಗಿದ್ದೇನೆ. ಶೀಘ್ರದಲ್ಲೇ ಮೋದಿ ಭ್ರಮೆ ಕಳಚಲಿದೆ" ಎಂದು ಕಿಡಿಕಾರಿದ್ದಾರೆ.

  ಸಮಾವೇಶದಲ್ಲಿ ತೈಲ ಬೆಲೆ ಏರಿಕೆ ಬಗ್ಗೆಯೂ ಆಕ್ರೋಶ ಹೊರಹಾಕಿದ ರಣದೀಪ್ ಸಿಂಗ್ ಸುರ್ಜೇವಾಲಾ, "ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಕಚ್ಚಾ ಇಂಧನವನ್ನು ಆಯಿಲ್ ಬಾಂಡ್​ಗೆ ಖರೀದಿಸಲಾಗುತ್ತಿತ್ತು. ಆದರೆ, ಈಗ ಎಲ್ಲವೂ ಬದಲಾಗಿದೆ. ಮೋದಿ ಸರ್ಕಾರ ಜನರ ಮೇಲೆ ತೆರಿಗೆಯ ಬರೆ ಹಾಕುತ್ತಿದೆ.

  ಪರಿಣಾಮ ತೈಲ ಬೆಲೆ ದಿನೇ ದಿನೇ ಏರುತ್ತಲೇ ಇದೆ. ಮೋದಿ ಬ್ರಮೆಯಲ್ಲಿದ್ದಾರೆ, ಸುಳ್ಳಿನ ಕಥೆ ಕಟ್ಟೊದರಲ್ಲಿ ನಿಸ್ಸಿನರಾಗಿದ್ದಾರೆ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ದೊಡ್ಡ ರಣತಂತ್ರ ರೂಪಿಸಲಾಗುತ್ತದೆ. ಈ ಬಗ್ಗೆ 20 ಆಗಸ್ಟ್​ ನಂತರ ದೇಶದ ಎಲ್ಲಾ ವಿರೋಧ ಪಕ್ಷಗಳು ಒಂದಾಗಲಿವೆ" ಎಂದು ತಿಳಿಸಿದ್ದಾರೆ.

  ಇದೇ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕಕ್ಕೆ ಬಿಜೆಪಿ ಸರ್ಕಾರ ಮಾಡಿರುವ ಅನ್ಯಾಯದ ಬಗ್ಗೆಯೂ ಧ್ವನಿ ಎತ್ತಿರುವ ರಣದೀಪ್ ಸಿಂಗ್ ಸುರ್ಜೇವಾಲಾ, "ಬಿಜೆಪಿ ಸರ್ಕಾರ ಕಲ್ಯಾಣ ಕರ್ನಾಟಕ ವಿರೋಧಿಯಾಗಿದೆ. ಬಿಜೆಪಿ ಈ ಭಾಗದ ಅಭಿವೃದ್ದಿ ವಿಚಾರದಲ್ಲಿ ಪಕ್ಷಪಾತ ನೀತಿ ಅನುಸರಿಸುತ್ತಿದೆ. ಈ ಭಾಗದ ಕೇವಲ 3 ಜನರಿಗೆ ಮಾತ್ರ ಸಚಿವ ಸ್ಥಾನ ನೀಡಲಾಗಿದೆ.

  ಹೀಗಾಗಿ ಈ ಭಾಗದಲ್ಲಿ ಅಭಿವೃದ್ದಿ ಕಲ್ಯಾಣ ಮಾಡುವ ಉದ್ದೇಶ ಬಿಜೆಪಿಗಿಲ್ಲ. 1500 ಕೋಟಿ ಹಣ KKRDB ಗೆ ಮಂಜೂರು ಮಾಡಲಾಗಿದೆ, ಆದರೆ, 630 ಕೋಟಿ ಮಾತ್ರ ಬಿಡುಗಡೆ ಮಾಡಿದೆ‌. 630 ಕೋಟಿಯಲ್ಲಿ ಏನು ಅಭಿವೃದ್ದಿ ಮಾಡುತ್ತೆ ಈ ಸರ್ಕಾರ?" ಎಂದು ಜರಿದಿದ್ದಾರೆ.

  ಇದನ್ನೂ ಓದಿ: West Bengal| ಬಂಗಾಳದಲ್ಲಿ ಬಿಜೆಪಿ ಯುವ ಸಂಕಲ್ಪ ಯಾತ್ರೆ; ಶಾಸಕ ಸೇರಿ 30 ಕಾರ್ಯಕರ್ತರ ಬಂಧನ!

  "ರೆಮಡಿಷನ್ ಇಂಜಕ್ಷನ್ 25,000 ರು. ಗೆ ಮಾರಾಟ ಮಾಡಲಾಗಿದೆ ಈ ಭಾಗದಲ್ಲಿ. ಐಸಿಯು ಬೆಡಗಳು ಸಹ ಸಿಗದೇ ರೋಗಿಗಳು ಪರದಾಡಿದ್ದರು. ಕೋವಿಡ್ ಸಾವಿನ ಪ್ರಮಾಣ ಪತ್ರ ಸಹ ನೀಡಲಾಗುತ್ತಿಲ್ಲ. ತೊಗರ ಬೆಳೆಗೆ ಬೆಂಬಲ ಬೆಲೆ ಇದುವರೆಗೂ ನೀಡಲಾಗುತ್ತಿಲ್ಲ. ಮೋದಿ ಸರ್ಕಾರ ತೊಗರಿ ಬೆಳೆಗಾರರ ಮೇಲೆ ಗದಾ ಪ್ರಹಾರ ನಡೆಸಿದೆ‌. ತೊಗರಿ ಬೆಳೆ ಆಮದು ರದ್ದು ಮಾಡಲಾಗಿದೆ. ಇದಕ್ಕಿಂತ ದೊಡ್ಡ ವಿಶ್ವಾದ್ರೋಹ ಮೋಸ ದೊಡ್ಡದಿಲ್ಲ" ಎಂದು ಆಕ್ರೋಶ ಹೊರಹಾಕಿದ್ದಾರೆ.

  ಇದನ್ನೂ ಓದಿ: Explained| ಹವಾಮಾನ ಬದಲಾವಣೆಯಿಂದ ರಾಜ್ಯದ ಪಶ್ಚಿಮ ಘಟ್ಟ, ಹಲವು ಜಿಲ್ಲೆಗಳ ಬಗ್ಗೆ ತಜ್ಞರ ಎಚ್ಚರಿಕೆ ಹೀಗಿದೆ..

  "62 ಕೋಟಿ ರೈತರು ಬೀದಿಗೆ ಬಿದ್ದಿದ್ದಾರೆ. ದೊಡ್ಡ ದೊಡ್ಡ ಉದ್ಯಮಿಗಳಿಗೆ ರೈತರ ಜಮೀನು ಮಾರಾಟ ಮಾಡುವ ಹುನ್ನಾರ ನಡೆದಿದೆ. 371(j) ತಿದ್ದುಪಡಿ ಮಾಡಲಾಗಿತ್ತು. ಆದರಿಗ ಸರ್ಕಾರಿ ನೇಮಕಾತಿ ನಿಲ್ಲಿಸಲಾಗಿದೆ. ಹಿಂದೆ ಪ್ರವಾಹ ಬಂದಾಗ 1500 ಕೋಟಿ ಪರಿಹಾರ ನೀಡಿದ್ದರು. ರಾಜ್ಯದಲ್ಲಿ ಜನರ ಓಟಿನಿಂದ ಬಂದ ಸರ್ಕಾರವಲ್ಲ. ಬಿಎಸವೈ ಅವರನ್ನ ಮರ್ಯಾದೆ ಕಳೆದು ಕೆಳಗಿಳಿಸಿದ್ದಾರೆ‌. ಬಿಎಸ್​ವೈ ಮೇಲೆ ಬೃಷ್ಟಾಚಾರ ಆರೋಪವಿತ್ತಾ.. ಅಥವಾ ಇಡಿ ಒತ್ತಡ ಹೇರಲಾಗಿತ್ತಾ. ಅವರನ್ನ ಬಲವಂತವಾಗಿ ಕೆಳಗಿಳಿಸಲಾಯ್ತಾ ಇದರ ಉತ್ತರ ಬಿಜೆಪಿ ಇನ್ನು ನೀಡಿಲ್ಲ. ಈ ಸರ್ಕಾರ ಅನೈತಿಕ ಸರ್ಕಾರ" ಎಂದು ಸುರ್ಜೇವಾಲಾ ಕಿಡಿಕಾರಿದ್ದಾರೆ.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
  Published by:MAshok Kumar
  First published: