• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Turkey Earthquake: ಭೂಕಂಪಕ್ಕೆ ಉರುಳಿಬಿದ್ದ ಕಟ್ಟಡದ ಅವಶೇಷಗಳಡಿ ಮಗುವಿಗೆ ಜನ್ಮ ನೀಡಿ ಮಹಿಳೆ ಮೃತ್ಯು!

Turkey Earthquake: ಭೂಕಂಪಕ್ಕೆ ಉರುಳಿಬಿದ್ದ ಕಟ್ಟಡದ ಅವಶೇಷಗಳಡಿ ಮಗುವಿಗೆ ಜನ್ಮ ನೀಡಿ ಮಹಿಳೆ ಮೃತ್ಯು!

ಟರ್ಕಿ ಮತ್ತು ಸಿರಿಯಾ ಭೂಕಂಪ

ಟರ್ಕಿ ಮತ್ತು ಸಿರಿಯಾ ಭೂಕಂಪ

ಸೋಮವಾರ ರಾತ್ರಿ ಜನರೆಲ್ಲ ರಾತ್ರಿ ಹೊತ್ತು ನಿದ್ದೆಯಲ್ಲಿದ್ದಾಗ ಏಕಾಏಕಿ 7.8 ತೀವ್ರತೆಯಲ್ಲಿ ಭೂಕಂಪ ಸಂಭವಿಸಿತ್ತು. ಏನು ಆಯ್ತು ಅಂತಾ ನೋಡೋವಷ್ಟರಲ್ಲಿ ಸಾಲು ಸಾಲಾಗಿ ಅಸಂಖ್ಯಾತ ಕಟ್ಟಡಗಳು, ಮನೆಗಳು, ಗಿಡಮರಗಳು ಉರುಳಿಬಿದ್ದಿದ್ದವು.

  • Share this:

ಇಸ್ತಾಂಬುಲ್: ಪ್ರಬಲ ಭೂಕಂಪಕ್ಕೆ ಹೈರಾಣಾಗಿರುವ ಟರ್ಕಿ ಮತ್ತು ಸಿರಿಯಾ (Turkey Earthquake)ಇನ್ನೂ ಮಹಾ ಆಘಾತದಿಂದ ಹೊರಬಂದಿಲ್ಲ. ಸಾವಿರಾರು ಕಟ್ಟಡಗಳು ಭೂಕಂಪದ ತೀವ್ರತೆಗೆ (Earthquake Effects) ನೆಲ ಸಮವಾಗಿದ್ದು, ಅಸಂಖ್ಯಾತ ಮನೆಗಳು ಗುರುತೇ ಸಿಗದಂತೆ ಧರಾಶಾಹಿಯಾಗಿದೆ. ಈವರೆಗೆ 7,800ಕ್ಕೂ ಹೆಚ್ಚು ಮಂದಿ ಟರ್ಕಿ ಮತ್ತು ಸಿರಿಯಾದಲ್ಲಿ (Syria) ಸಾವನ್ನಪ್ಪಿದ್ದು, ಇನ್ನೂ ಅನೇಕ ಜನರು ನೆಲಸಮವಾಗಿರುವ ಕಟ್ಟಡಗಳ ಮಧ್ಯೆ ಸಿಲುಕಿ ಸಾವು ಬದುಕಿನ ಮಧ್ಯೆ ಹೋರಾಟ ಮಾಡುತ್ತಿದ್ದಾರೆ. ಅವರೆಲ್ಲರನ್ನು ರಕ್ಷಿಸಲು ರಕ್ಷಣಾ ಪಡೆ ಸಮರೋಪಾದಿಯಾಗಿ ಕಾರ್ಯಾಚರಣೆ ಮಾಡುತ್ತಿದ್ದರೂ, ಅನೇಕ ಜನರು ಎಲ್ಲೆಲ್ಲಿ ಸಿಲುಕಿದ್ದಾರೆ ಅನ್ನೋದು ತಿಳಿಯದೆ ರಕ್ಷಣಾ ಸಿಬ್ಬಂದಿಯೂ ಹುಡುಕಾಟದಲ್ಲೇ ತೊಡಗಿದೆ.


ಈ ಮಧ್ಯೆ ಮನೆ ಮಠಗಳನ್ನು, ಮನೆಯ ಸದಸ್ಯರನ್ನು ಕಳೆದುಕೊಂಡು ಅಕ್ಷರಶಃ ಬೀದಿಗೆ ಬಿದ್ದಂತಾಗಿರುವ ಅಸಂಖ್ಯಾತ ಜನರು ಕೊರೆವ ಚಳಿಯಲ್ಲೇ ಬೀದಿ ಬದಿಯಲ್ಲಿ ಮುದುಡಿಕೊಂಡು ಕೂತಿರುವ ಪರಿಸ್ಥಿತಿ ವಿಶ್ವದಾದ್ಯಂತ ಜನರ ಹೃದಯವನ್ನು ಕಲಕಿದೆ. ಟರ್ಕಿ ಮತ್ತು ಸಿರಿಯಾದಲ್ಲಿ ಭೂಕಂಪದ ತೀವ್ರತೆಗೆ ತಿನ್ನೋಕೆ ಊಟ ಇರದೆ, ಕೂರೋಕೆ ಮನೆಯಿರದೆ, ಹೊದ್ದುಕೊಳ್ಳೋಕೆ ಬಟ್ಟೆಯಿರದೆ ಒದ್ದಾಡುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಅದರ ಜೊತೆಗೆ ಸಿರಿಯಾ, ಟರ್ಕಿಯ ಪರಿಸ್ಥಿತಿ ಕಂಡು ಅಂತರಾಷ್ಟ್ರೀಯ ಮಟ್ಟದಲ್ಲಿ ನೆರವು ಲಭಿಸುತ್ತಿರುವ ಹಿನ್ನೆಲೆ ಸಂಕಷ್ಟಕ್ಕೆ ಒಳಗಾಗಿರುವ ಜನರು ಸ್ವಲ್ಪ ಮಟ್ಟಿಗೆ ಚೇತರಿಸಿಕೊಳ್ಳುವಂತಾಗಿದೆ.


ಇದನ್ನೂ ಓದಿ: Turkey Earthquake: ಟರ್ಕಿ ಭೂಕಂಪದಲ್ಲಿ ಸಾವನ್ನಪ್ಪಿದ ಖ್ಯಾತ ಫುಟ್​ಬಾಲ್ ಆಟಗಾರ, ಅವಶೇಷಗಳಡಿ ಸಿಕ್ತು ಮೃತದೇಹ


ಅವಶೇಷಗಳಡಿ ಮಗುವಿಗೆ ಜನ್ಮ ನೀಡಿದ ಮಹಿಳೆ


ಈ ಮಧ್ಯೆ ಸಿರಿಯಾದಲ್ಲಿ ಅಸಾಮಾನ್ಯ ಘಟನೆಗಳು ಸಂಭವಿಸಿದ್ದು, ಆಗತಾನೆ ಭೂಕಂಪದ ಹೊಡೆತಕ್ಕೆ ಕಟ್ಟಡಗಳ ಅಡಿಯಲ್ಲಿ ಸಿಲುಕಿದ್ದ ತುಂಬು ಗರ್ಭಿಣಿ ಅಲ್ಲೇ ನವಜಾತ ಶಿಶುವಿಗೆ ಜನ್ಮ ನೀಡಿ ಮೃತಪಟ್ಟಿದ್ದಾರೆ. ಭೂಕಂಪಕ್ಕೆ ಉರುಳಿ ಬಿದ್ದ ಮನೆಯ ಅವಶೇಷಗಳ ಅಡಿಯಲ್ಲಿ ಮಗು ಅಳುವ ಧ್ವನಿ ಕೇಳಿದಾಗ ಮಹಿಳೆಯ ಸಂಬಂಧಿಕರು ಅವಶೇಷಗಳನ್ನು ಅಗೆದು, ಧೂಳು ತೆರವು ಮಾಡಿ ನೋಡಿದಾಗ ಮಗುವಿಗೆ ಜನ್ಮ ನೀಡಿದ್ದರು. ಆದರೆ ಬಾಣಂತಿ ಮಹಿಳೆ ಆಗಲೇ ಮೃತಪಟ್ಟಿದ್ದರು. ಆಗ ಸಂಬಂಧಿಕರು ಕರುಳ ಬಳ್ಳಿಯನ್ನು ಕತ್ತರಿಸಿ ಮಗುವನ್ನು ಅಲ್ಲಿಂದ ಎತ್ತಿಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.


ಇದನ್ನೂ ಓದಿ: Turkey Earthquake: ಟರ್ಕಿಯಲ್ಲಿ ಭೂಕಂಪಕ್ಕೆ ಸತ್ತವರ ಸಂಖ್ಯೆ 1300ಕ್ಕೆ ಏರಿಕೆ, ಭಾರತ ಸೇರಿ 45 ರಾಷ್ಟ್ರಗಳಿಂದ ಸಹಾಯಹಸ್ತ


ಭೂಕಂಪಕ್ಕೆ ಬೆಚ್ಚಿಬಿದ್ದಿದ್ದ ಜನರು


ಸೋಮವಾರ ರಾತ್ರಿ ಜನರೆಲ್ಲ ರಾತ್ರಿ ಹೊತ್ತು ಗಡದ್ದಾಗಿ ನಿದ್ದೆಯಲ್ಲಿದ್ದಾಗ ಏಕಾಏಕಿ 7.8 ತೀವ್ರತೆಯಲ್ಲಿ ಭೂಕಂಪ ಸಂಭವಿಸಿತ್ತು. ಏನು ಆಯ್ತು ಅಂತಾ ನೋಡೋವಷ್ಟರಲ್ಲಿ ಸಾಲು ಸಾಲಾಗಿ ಅಸಂಖ್ಯಾತ ಕಟ್ಟಡಗಳು, ಮನೆಗಳು, ಗಿಡಮರಗಳು ಉರುಳಿ ಬಿದ್ದಿದ್ದವು. ಸಾವಿರಾರು ಮಂದಿ ಪ್ರಾಣ ಕಳೆದು ಕೊಂಡಿದ್ದರು. ಭೂಕಂಪದ ಕೇಂದ್ರ ಬಿಂದುವಾದ ಟರ್ಕಿಯ ನಗರಗಳು ಗಾಜಿಯಾಂಟೆಪ್ ಮತ್ತು ಕಹ್ರಮನ್ಮರಸ್ ಸುತ್ತಮುತ್ತ ಭಾರೀ ಮಟ್ಟದಲ್ಲಿ ವಿನಾಶ ಉಂಟಾಗಿದೆ.


ಅಮೆರಿಕಾ, ಚೀನಾ ಮತ್ತು ಗಲ್ಫ್ ರಾಷ್ಟ್ರಗಳು ಸೇರಿದಂತೆ ಅನೇಕ ರಾಷ್ಟ್ರಗಳು ಭೂಕಂಪದಿಂದ ತತ್ತಿರಿಸಿದ ಟರ್ಕಿ ಮತ್ತು ಸಿರಿಯಾ ದೇಶಕ್ಕೆ ಸಹಾಯ ಮಾಡಲು ಮುಂದಾಗಿವೆ. ಈಗಾಗಲೇ ಅನೇಕ ತಂಡಗಳ ಜೊತೆ ಆಹಾರ ಸಾಮಾಗ್ರಿಗಳು, ಬಟ್ಟೆ ಬರೆಗಳು ವಿಮಾನದ ಮೂಲಕ ಹಂತ ಹಂತವಾಗಿ ಸಂತ್ರಸ್ತ ದೇಶಕ್ಕೆ ಬರುತ್ತಿವೆ.
ಇತ್ತೀಚಿನ ವರದಿಯ ಪ್ರಕಾರ ಟರ್ಕಿಯಲ್ಲಿ 5,434 ಜನರು ಮತ್ತು ಸಿರಿಯಾದಲ್ಲಿ ಕನಿಷ್ಠ 1,872 ಜನರು ಸಾವನ್ನಪ್ಪಿದ್ದಾರೆ, ಈವರೆಗೆ ಒಟ್ಟು 7,306 ಸಾವುಗಳು ಸಂಭವಿಸಿವೆ ಎಂದು ತಿಳಿದು ಬಂದಿದೆ.

Published by:Avinash K
First published: