ಪ್ರವಾಹ ಇಳಿದ ದೇವರನಾಡಿನಲ್ಲಿ ಈಗ ಶುಚಿ ಅಭಿಯಾನ; ಸ್ವಚ್ಛತೆ ಕಾರ್ಯಕ್ಕೆ ಕೈ ಜೋಡಿಸಿದ 60ಸಾವಿರ ಸ್ವಯಂ ಸೇವಕರು

news18
Updated:August 28, 2018, 2:00 PM IST
ಪ್ರವಾಹ ಇಳಿದ ದೇವರನಾಡಿನಲ್ಲಿ ಈಗ ಶುಚಿ ಅಭಿಯಾನ; ಸ್ವಚ್ಛತೆ ಕಾರ್ಯಕ್ಕೆ ಕೈ ಜೋಡಿಸಿದ 60ಸಾವಿರ ಸ್ವಯಂ ಸೇವಕರು
news18
Updated: August 28, 2018, 2:00 PM IST
ನ್ಯೂಸ್​ 18 ಕನ್ನಡ

ತಿರುವನಂತಪುರ (ಆ.28): ಪ್ರವಾಹ ಇಳಿದ ಕೇರಳದಲ್ಲಿ ಈಗ ಮನೆಗಳನ್ನು ಶುಚಿಗೊಳಿಸುವುದೇ ದೊಡ್ಡ ಕಾರ್ಯವಾಗಿದೆ. ನೀರಿನಲ್ಲಿ ಮುಳುಗಿದ ಮನೆಗಳ ಸ್ವಚ್ಛಗೊಳಿಸುವುದು ಸಾಮಾನ್ಯವಲ್ಲ. ಅಲ್ಲದೇ ಮನೆಗಳಲ್ಲಿ ವಿಷಜಂತುಗಳು ಸೇರಿಕೊಂಡಿದ್ದು, ಮುನ್ನೆಚ್ಚರಿಕಾ ಕ್ರಮವಹಿಸದೇ ಶುಚಿಕಾರ್ಯಕ್ಕೆ ಮುಂದಾಗಬೇಡಿ ಎಂದು ಖುದ್ದು ಸಿಎಂ ಪಿಣರಾಯ್​ ವಿಜಯನ್​ ಕೂಡ  ಮನವಿ ಮಾಡಿದ್ದಾರೆ.

ಊರಿಗೆ ಊರನ್ನೇ ಶುಚಿಗೊಳಿಸುವ ಈ ಕಾರ್ಯಕ್ಕೆ  ಈಗ ಸ್ವಯಂ ಸೇವಕರು ಕೈ ಜೋಡಿಸಿದ್ದು, 60 ಸಾವಿರ ಜನರು ಈ ಕಾರ್ಯಕ್ಕೆ ಜೊತೆಯಾಗಿದ್ದಾರೆ. ಕುಟ್ಟನಾಡುನ ಅಲಪುಜಾದಲ್ಲಿ ನೆರೆ ಇಳಿದಿದ್ದು, ಬೃಹತ್​ ಸ್ವಚ್ಛತಾ ಕಾರ್ಯಕ್ಕೆ ಮುಂದಾಗಿದ್ದಾರೆ. ಇನ್ನು ಇವರ ಈ ಕಾರ್ಯಕ್ಕೆ ನಿರಾಶ್ರಿತರ ತಾಣದಲ್ಲಿರುವ ಜನರು ಸೇರಿದಂತೆ ಲೋಕೋಪಯೋಗಿ ಮಂತ್ರಿ ಜಿ ಸುಧಾಕರ್ ಕೂಡ ಕೈ ಜೋಡಿಸಿದ್ದಾರೆ.

ಕೇರಳದಲ್ಲಿ ಮೊದಲು ಪ್ರವಾಹಕ್ಕೆ ಒಳಗಾದ ಪ್ರದೇಶ ಈ ಕುಟ್ಟನಾಡು​ ಆಗಿದ್ದು, ಮೂರು ದಿನಗಳ ಕಾಲ ಈ ನಗರ ಶುಚಿಗೊಳಿಸಲು ಯೋಜನೆ ರೂಪಿಸಲಾಗಿದೆ, ಎಲೆಕ್ಟ್ರಿಶಿಯನ್ಸ್​, ಪ್ಲಂಬರ್​, ವಿದ್ಯಾರ್ಥಿಗಳು ಸೇರಿದಂತೆ ಹಲವು ಸೇವೆಗಳಲ್ಲಿ  ನುರಿತವರು ಈ ಕಾರ್ಯಕ್ಕೆ ಮುಂದಾಗಿದ್ದಾರೆ. ಈ ಶುಚಿತ್ವ ಕೆಲಸಕ್ಕೆ ಮುಂದಾಗಿರುವ ಸ್ವಯಂ ಕಾರ್ಯಕರ್ತರಿಗೆ ಆರೋಗ್ಯದ ಹಿತ ದೃಷಿಯಿಂದ ಅನೇಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇವರ ಆರೋಗ್ಯ ಕಾಳಜಿ ಬಗ್ಗೆ ನಿಗಾವಹಿಸಲು ಅವರೊಂದಿಗೆ ಆಶಾ ಕಾರ್ಯಕರ್ತರು  ನಿರಂತರ ಸಂಪರ್ಕದಲ್ಲಿದ್ದಾರೆ.

ಶತಮಾನದಲ್ಲಿಯೇ ಕಂಡರಿಯದಂತಹ ಪ್ರವಾಹಕ್ಕೆ ಕೇರಳ ಈ ಬಾರಿ ತುತ್ತಾಗಿದ್ದು, ಈ ಪ್ರವಾಹಕ್ಕೆ 300 ಜನರು ಪ್ರಾಣ ಕಳೆದು ಕೊಂಡರು. ಮನೆ ಮಠ ಕಳೆದುಕೊಂಡವರ ಬದುಕು ಸರಿಪಡಿಸಲು ದೇಶ ವಿದೇಶಗಳಿಂದ ಎಲ್ಲ ಸಹಾಯಧನ ಹರಿದು ಬಂದಿದ್ದು, ಅವರ ಬದುಕಿನ ಪುನರ್​ ನಿರ್ಮಾಣ ಕಾರ್ಯ ಈಗ ನಡೆಯಬೇಕಿದೆ.

ಮಳೆ ನೀರಿಗೆ ಕೊಚ್ಚಿಕೊಂಡು ಬಂದಂತಹ ಸರಿಸೃಪಗಳು ಮನೆಯ ಮೂಲೆಗಳಲ್ಲಿ ತಾಣ ಮಾಡಿಕೊಂಡಿದ್ದು, ಅವುಗಳನ್ನು ಸೆರೆಹಿಡಿಯಲು ಹಾವಾಡಿಗರನ್ನು ಕೂಡ ಸರ್ಕಾರ ನೇಮಿಸಿದೆ. ಇದರ ಜೊತೆಯಲ್ಲಿ ಜನರಿಗೆ ಶುದ್ದ ಕುಡಿಯುವ ನೀರನ್ನು ಜನರಿಗೆ ಒದಗಿಸಲು ಪಂಚಾಯತ್​ ಮುಂದಾಗಿದೆ.
First published:August 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...