ದೆಹಲಿಯ ಜಫ್ರಾಬಾದ್​ನಲ್ಲಿ ಸಿಎಎ ವಿರೋಧಿ ಪ್ರತಿಭಟನೆ ವೇಳೆ ಸಂಘರ್ಷ; ಪೊಲೀಸರಿಂದ ಟಿಯರ್ ಗ್ಯಾಸ್ ಬಳಕೆ

ಇದೇ ವೇಳೆ, ಜಾಫ್ರಾಬಾದ್​ನಲ್ಲಿ ಪ್ರತಿಭಟನೆ ಮಾಡುತ್ತಿರುವ ಜನರು ಸಿಎಎ ಹಿಂಪಡೆಯುವವರೆಗೂ ಹೋರಾಟ ಕೈಬಿಡುವುದಿಲ್ಲ ಎಂದು ಹೇಳುತ್ತಿದ್ಧಾರೆ. ಈ ಪರಿಸ್ಥಿತಿಯನ್ನು ಸರ್ಕಾರ ನಿಭಾಯಸುತ್ತಿರುವ ರೀತಿ ಬಗ್ಗೆ ಜನರಲ್ಲಿ ಅಸಮಾಧಾನ ಇದೆ ಎಂದು ಸಾಮಾಜಿಕ ಕಾರ್ಯಕರ್ತೆ ಫಾಹೀಮ್ ಬೇಗ್ ತಿಳಿಸಿದ್ಧಾರೆ.

Vijayasarthy SN | news18
Updated:February 23, 2020, 7:00 PM IST
ದೆಹಲಿಯ ಜಫ್ರಾಬಾದ್​ನಲ್ಲಿ ಸಿಎಎ ವಿರೋಧಿ ಪ್ರತಿಭಟನೆ ವೇಳೆ ಸಂಘರ್ಷ; ಪೊಲೀಸರಿಂದ ಟಿಯರ್ ಗ್ಯಾಸ್ ಬಳಕೆ
ಮೌಜ್​ಪುರ್​ನಲ್ಲಿ ಎರಡು ಗುಂಪುಗಳ ಮಧ್ಯೆ ಸಂಘರ್ಷ
  • News18
  • Last Updated: February 23, 2020, 7:00 PM IST
  • Share this:
ನವದೆಹಲಿ(ಫೆ. 23): ದೇಶದ ರಾಜಧಾನಿಯಲ್ಲಿ ಸಿಎಎ ವಿರೋಧಿ ಪ್ರತಿಭಟನೆಯ ಬಿಸಿ ಇನ್ನಷ್ಟು ಕಾವೇರಿದೆ. ದೆಹಲಿಯ ಈಶಾನ್ಯ ಭಾಗದಲ್ಲಿರುವ ಜಫ್ರಾಬಾದ್​ನಲ್ಲಿ ಎರಡು ಗುಂಪುಗಳ ನಡುವೆ ಸಂಘರ್ಷ ನಡೆದಿದೆ. ಮೌಜ್​ಪುರದಲ್ಲಿ ಪರಸ್ಪರ ಕಲ್ಲುತೂರಾಟದಲ್ಲಿ ತೊಡಗಿದ್ದ ಎರಡು ಗುಂಪುಗಳನ್ನು ಚದುರಿಸಲು ಪೊಲೀಸರು ಟಿಯರ್ ಗ್ಯಾಸ್ ಬಳಕೆ ಮಾಡಿದ್ದಾರೆ. ಕೆಲ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಪ್ರಹಾರ ಕೂಡ ಮಾಡಿದ್ಧಾರೆ.

ಎರಡು ತಿಂಗಳ ಕಾಲ ಶಾಹೀನ್ ಬಾಗ್​ನಲ್ಲಿ ನಿರಂತರ ಪ್ರತಿಭಟನೆ ಕಂಡಿದ್ದ ದೆಹಲಿ ಈಗ ಜಾಫ್ರಾಬಾದ್​ನಲ್ಲೂ ಪ್ರತಿಭಟನೆಯ ಬಿಸಿ ಅನುಭವಿಸುತ್ತಿದೆ. ಸೀಲಂಪುರ್​ನಿಂದ ಮೌಜ್​ಪುರ್ ಮತ್ತು ಯಮುನಾ ವಿಹಾರ್​ಗೆ ಸಂಪರ್ಕ ಸಾಧಿಸುವ ಜಾಫ್ರಾಬಾದ್ ಮೆಟ್ರೋ ಸ್ಟೇಷನ್ ಬಳಿಯ ರಸ್ತೆಯೊಂದನ್ನು ಸಿಎಎ ಪ್ರತಿಭಟನಾಕಾರರು ಮುತ್ತಿಗೆ ಹಾಕಿದ್ದು ಸೂಕ್ಷ್ಮ ಪರಿಸ್ಥಿತಿಗೆ ಎಡೆ ಮಾಡಿಕೊಟ್ಟಿದೆ. ರಸ್ತೆಯನ್ನು ಮುತ್ತಿಗೆ ಹಾಕಿದ ನೂರಾರು ಪ್ರತಿಭಟನಾಕಾರರಲ್ಲಿ ಮಹಿಳೆಯರೇ ಹೆಚ್ಚಾಗಿದ್ದಾರೆ. ಭದ್ರತೆಯ ದೃಷ್ಟಿಯಿಂದ ಜಾಫ್ರಾಬಾದ್ ಮೆಟ್ರೋ ನಿಲ್ದಾಣದ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಮುಚ್ಚಲಾಯಿತು. ಹಾಗೆಯೇ, ಮೌಜ್​ಪುರ್-ಬಾಬರ್​ಪುರ್ ಮೆಟ್ರೋ ಸ್ಟೇಷನ್​ನ ದ್ವಾರಗಳನ್ನೂ ಬಂದ್ ಮಾಡಲಾಯಿತು.

ಇದನ್ನೂ ಓದಿ: ಯುದ್ದೋನ್ಮಾದ ಸೃಷ್ಟಿಗೆ ರಾಷ್ಟ್ರವಾದ, ಭಾರತ್ ಮಾತಾ ಕೀ ಜೈ ಘೋಷಣೆ ದುರ್ಬಳಕೆಯಾಗುತ್ತಿದೆ; ಡಾ.ಮನಮೋಹನ್ ಸಿಂಗ್ ಕಳವಳ

ದೆಹಲಿಯ ಮೆಟ್ರೋ ರೈಲುಗಳು ಈ ಎರಡು ಸ್ಟೇಷನ್​ಗಳಲ್ಲಿ ನಿಲುಗಡೆ ಮಾಡುತ್ತಿಲ್ಲ. ಪೊಲೀಸರು ಭಾನುವಾರ ಬೆಳಗ್ಗೆಯಿಂದಲೂ ಈ ನಿಲ್ದಾಣಗಳಲ್ಲಿ ಬಿಗಿ ಭದ್ರತೆ ಒದಗಿಸಿದೆ. ಮಧ್ಯಾಹ್ನದ ನಂತರ ಮತ್ತೊಂದು ಗುಂಪು ಅಲ್ಲಿಗೆ ಆಗಮಿಸಿದಾಗ ಗಲಾಟೆಯಾಗಿದೆ. ಎರಡೂ ಗುಂಪುಗಳು ಪರಸ್ಪರ ಕಲ್ಲು ತೂರಾಟ ನಡೆಸಿವೆ. ಪೊಲೀಸರು ಅನಿವಾರ್ಯವಾಗಿ ಟಿಯರ್ ಗ್ಯಾಸ್ ಬಳಕೆ ಮಾಡಿ ದುಷ್ಕರ್ಮಿಗಳನ್ನು ಚದುರಿಸುವ ಕೆಲಸ ಮಾಡಿದ್ಧಾರೆ.

ಇದೇ ವೇಳೆ, ಜಾಫ್ರಾಬಾದ್​ನಲ್ಲಿ ಪ್ರತಿಭಟನೆ ಮಾಡುತ್ತಿರುವ ಜನರು ಸಿಎಎ ಹಿಂಪಡೆಯುವವರೆಗೂ ಹೋರಾಟ ಕೈಬಿಡುವುದಿಲ್ಲ ಎಂದು ಹೇಳುತ್ತಿದ್ಧಾರೆ. ಈ ಪರಿಸ್ಥಿತಿಯನ್ನು ಸರ್ಕಾರ ನಿಭಾಯಸುತ್ತಿರುವ ರೀತಿ ಬಗ್ಗೆ ಜನರಲ್ಲಿ ಅಸಮಾಧಾನ ಇದೆ ಎಂದು ಸಾಮಾಜಿಕ ಕಾರ್ಯಕರ್ತೆ ಫಾಹೀಮ್ ಬೇಗ್ ತಿಳಿಸಿದ್ಧಾರೆ.

ಇದನ್ನೂ ಓದಿ: ಬಿಜೆಪಿ ಸೇರಿದ ಕಾಡುಗಳ್ಳ ವೀರಪ್ಪನ್ ಮಗಳು ವಿದ್ಯಾರಾಣಿ

“ಈ ಪ್ರತಿಭಟನೆಯು ಸಿಎಎ, ಎನ್​ಆರ್​ಸಿ ವಿರುದ್ಧವಾಗಿದೆ. ಹಾಗೆಯೇ, ದಲಿತರಿಗೆ ಮೀಸಲಾತಿ ಒದಗಿಸುವಂತೆ ಕೂಡ ಆಗ್ರಹಿಸುತ್ತಿದ್ದೇವೆ. ಮಹಿಳೆಯರೇ ಈ ಹೋರಾಟದ ನೇತೃತ್ವ ವಹಿಸಿದ್ದಾರೆ. ಪುರುಷರು ಕೇವಲ ಬೆಂಬಲಕ್ಕೆ ನಿಂತಿದ್ಧಾರೆ. ನಾವು ಪ್ರತಿಭಟನೆಯ ಉದ್ದೇಶದಿಂದಷ್ಟೇ ರಸ್ತೆಯನ್ನು ತಡೆದಿದ್ದೇವೆ. ಸಿಎಎ ಹಿಂಪಡೆಯುವವರೆಗೂ ನಾವು ಈ ಸ್ಥಳದಿಂದ ಕದಲುವುದಿಲ್ಲ” ಎಂದು ಶದಾಬ್ ಎಂಬ ಪ್ರತಿಭಟನಾಕಾರರು ಸ್ಪಷ್ಟಪಡಿಸಿದ್ಧಾರೆ.ಇನ್ನು, ಕಳೆದ ಎರಡು ತಿಂಗಳಿನಿಂದ ದಿನಂಪ್ರತಿ 24 ಗಂಟೆ ಪ್ರತಿಭಟನೆ ಕಂಡಿದ್ದ ಶಾಹೀನ್ ಬಾಗ್​ನಲ್ಲಿ ಪರಿಸ್ಥಿತಿ ಬಹುತೇಕ ಹಾಗೇ ಮುಂದುವರಿದಿದೆ. ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಇಬ್ಬರು ಸಂಧಾನಕಾರರು ಬಂದು ಮಾತನಾಡಿದ ಬಳಿಕ ಪ್ರತಿಭಟನಾಕಾರರು ತಾವು ಕುಳಿತಿದ್ದ ರಸ್ತೆಯ ಪಾರ್ಶ್ವ ಭಾಗವನ್ನು ವಾಹನ ಸಂಚಾರಕ್ಕಾಗಿ ತೆರವು ಮಾಡಿದ್ಧಾರೆ. ಆದರೆ, ಪೊಲೀಸರು ಭದ್ರತಾ ದೃಷ್ಟಿಯಿಂದ ರಸ್ತೆಯಲ್ಲಿ ಬ್ಯಾರಿಕೇಡ್​ಗಳನ್ನು ಹಾಕಿದ್ಧಾರೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:February 23, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ