ಇಸ್ತಾಂಬುಲ್(ಫೆ.06): ಟರ್ಕಿಯಲ್ಲಿ (Turkey) ಸೋಮವಾರ ಮುಂಜಾನೆ ಎರಡು ಪ್ರಬಲ ಭೂಕಂಪನದ ಅನುಭವವಾಗಿದೆ. ಇದಾದ ಬಳಿಕ ಟರ್ಕಿ ಸರ್ಕಾರ ತುರ್ತು ಪರಿಸ್ಥಿತಿ (Emergency) ಹೇರುವುದಾಗಿ ಘೋಷಿಸಿದೆ. ಭೂಕಂಪ (Earthquake) ಪೀಡಿತ ಪ್ರದೇಶಗಳಲ್ಲಿನ ಕಟ್ಟಡಗಳಿಗೆ ಭಾರೀ ಹಾನಿಯಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ. ಅಮೆರಿಕನ್ ಜಿಯೋಲಾಜಿಕಲ್ ಸರ್ವೆ 'ಯುಎಸ್‌ಜಿಎಸ್' ಪ್ರಕಾರ, ಸಿರಿಯನ್ ಗಡಿಯ ಸಮೀಪವಿರುವ ಗಜಿಯಾಂಟೆಪ್‌ನ ಕಹನ್‌ಮರಾಶ್ ಬಳಿ ಮೊದಲ ಕಂಪನದ ಅನುಭವವಾಗಿದೆ. USGS ಪ್ರಕಾರ, ಈ ಭೂಕಂಪದ ತೀವ್ರತೆಯನ್ನು 7.8 ಎಂದು ದಾಖಲಿಸಲಾಗಿದೆ.
ಸಾವಿನ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ
ಭೂಕಂಪವು ದೇಶದ 10 ನಗರಗಳ ಮೇಲೆ ಹೆಚ್ಚಿನ ಪರಿಣಾಮ ಬೀರಿದೆ ಎಂದು ಟರ್ಕಿಯ ಆಂತರಿಕ ಸಚಿವ ಸುಲೇಮಾನ್ ಶೋಯ್ಲು ಹೇಳಿದ್ದಾರೆ. ಈ ನಗರಗಳೆಂದರೆ ಕಹ್ಮನ್‌ಮಾರ್ಷ್, ಹಟೇ, ಗಾಜಿಯಾಂಟೆಪ್, ಉಸ್ಮಾನಿಯೆ, ಆದಿಮಾನ್, ಸಾನ್ಲಿಯುರ್ಫಾ, ಮಲತ್ಯ, ಅದಾನ, ದಿಯರ್‌ಬಕಿರ್ ಮತ್ತು ಕಿಲಿಸ್. ಭೂಕಂಪದ ನಂತರ ಬಂದ ಪ್ರಾಥಮಿಕ ಮಾಹಿತಿಯ ಪ್ರಕಾರ, ಟರ್ಕಿ ಮತ್ತು ಅದರ ನೆರೆಯ ಸಿರಿಯಾದಲ್ಲಿ 300 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಈ ಸಾವಿನ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುವ ಅನುಮಾನ ವ್ಯಕ್ತವಾಗಿದೆ.
ಇದನ್ನೂ ಓದಿ: Heart Problem: ಹೃದಯ ವೈಫಲ್ಯ ಹೆಚ್ಚುತ್ತಿರೋದೇಕೆ? ಹಾರ್ಟ್ ಬಗ್ಗೆಯೂ ಇರಲಿ ಕೊಂಚ ಕೇರ್
ಟರ್ಕಿಯ ನೂರ್ಡಗಿಯಿಂದ ಪೂರ್ವಕ್ಕೆ 23 ಕಿಮೀ ದೂರದಲ್ಲಿ ಪ್ರಬಲ ಭೂಕಂಪ
ಟರ್ಕಿಯ ನೂರ್ಡಗಿಯಿಂದ ಪೂರ್ವಕ್ಕೆ 23 ಕಿಮೀ ದೂರದಲ್ಲಿ ಪ್ರಬಲ ಭೂಕಂಪನದ ಅನುಭವವಾಗಿದೆ. ರಿಯಾಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆಯನ್ನು 7.8 ಎಂದು ಅಳೆಯಲಾಗಿದೆ. ಈ ಭೂಕಂಪವು ಸಿರಿಯಾ ಮತ್ತು ಟರ್ಕಿಯಲ್ಲಿ ಭಾರೀ ವಿನಾಶಕ್ಕೆ ಕಾರಣವಾಯಿತು. ಆಗ್ನೇಯ ಟರ್ಕಿಯಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿದ ನಂತರ ಸಿರಿಯಾದ ಸರ್ಕಾರಿ ನಿಯಂತ್ರಿತ ಪ್ರದೇಶಗಳಲ್ಲಿ ಕನಿಷ್ಠ 237 ಜನರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. "ಅಲೆಪ್ಪೊ, ಲಟಾಕಿಯಾ, ಹಮಾ ಮತ್ತು ಟಾರ್ಟಸ್ ಪ್ರಾಂತ್ಯಗಳಲ್ಲಿ 639 ಜನರು ಗಾಯಗೊಂಡಿದ್ದಾರೆ ಮತ್ತು 237 ಮಂದಿ ಸಾವನ್ನಪ್ಪಿದ್ದಾರೆ" ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಈ ಹಿಂದೆ, ಆಸ್ಪತ್ರೆಯೊಂದು AFP ಗೆ ತಿಳಿಸಿದ್ದು, ಭೂಕಂಪವು ಟರ್ಕಿಶ್ ಪರ ಗುಂಪುಗಳಿಂದ ನಿಯಂತ್ರಿಸಲ್ಪಟ್ಟಿರುವ ಉತ್ತರ ಪ್ರದೇಶಗಳಲ್ಲಿ ಕನಿಷ್ಠ ಎಂಟು ಮಂದಿ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.
ಭೂಕಂಪವು ಸ್ಥಳೀಯ ಕಾಲಮಾನ ಮುಂಜಾನೆ 04:17 ಗಂಟೆಗೆ (0117 GMT) ಸರಿಸುಮಾರು 17.9 ಕಿಲೋಮೀಟರ್ (11 ಮೈಲಿ) ಆಳದಲ್ಲಿ ಸಂಭವಿಸಿದೆ. ಈ ಕುರಿತು ಮಾಹಿತಿ ನೀಡಿರುವ ಯುಎಸ್ ಜಿಯೋಲಾಜಿಕಲ್ ಸರ್ವೀಸ್, ಸೋಮವಾರ ದಕ್ಷಿಣ ಟರ್ಕಿಯ ಗಾಜಿಯಾಂಟೆಪ್ ಬಳಿ 7.8 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ತಿಳಿಸಿದೆ. ಟರ್ಕಿಯ ಪೂರ್ವಕ್ಕೆ 26 ಕಿಮೀ ದೂರದಲ್ಲಿರುವ ನೂರ್ದಾ ಇದರ ಕೇಂದ್ರವಾಗಿದೆ. ಈ ಪ್ರದೇಶವು ಗಾಜಿಯಾಂಟೆಪ್ ಸಮೀಪದಲ್ಲಿದೆ. ಈ ಪ್ರದೇಶದ ಜನಸಂಖ್ಯೆ ಸುಮಾರು 20 ಲಕ್ಷ, ಅದರಲ್ಲಿ 5 ಲಕ್ಷ ಸಿರಿಯನ್ ನಿರಾಶ್ರಿತರಾಗಿದ್ದರು. ಭೂಕಂಪನದಿಂದ ಅಪಾರ ಪ್ರಮಾಣದ ಪ್ರಾಣಹಾನಿ ಮತ್ತು ಆಸ್ತಿಪಾಸ್ತಿ ಹಾನಿಯಾಗುವ ಆತಂಕವಿದೆ.
ಇದನ್ನೂ ಓದಿ: Earthquake: ವಿಜಯಪುರ ಜಿಲ್ಲೆಯಲ್ಲಿ ಎರಡು ಬಾರಿ ಭೂಕಂಪನದ ಅನುಭವ
ಸಿರಿಯನ್ ಗಡಿಯ ಸಮೀಪ ಮೊದಲ ಭೂಕಂಪ
ಟರ್ಕಿಯ ಗಾಜಿಯಾಂಟೆಪ್‌ನಲ್ಲಿ ಭೂಕಂಪದ ಕೇಂದ್ರಬಿಂದುವನ್ನು ಟರ್ಕಿಯಿಂದ 26 ಕಿಮೀ ಪೂರ್ವಕ್ಕೆ ನೂರ್ಡಾ ಬಳಿ ಹೇಳಲಾಗಿದೆ. 7.4 ತೀವ್ರತೆಯ ಭೂಕಂಪ ಎಂದು ಜರ್ಮನ್ ರಿಸರ್ಚ್ ಸೆಂಟರ್ ಆಫ್ ಜಿಯೋಸೈನ್ಸ್ (GFZ) ಅನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. GFZ ಪ್ರಕಾರ, ಭೂಕಂಪದ ಕೇಂದ್ರಬಿಂದುವು ನೆಲದಿಂದ 10 ಕಿಲೋಮೀಟರ್ ಕೆಳಗೆ ಇತ್ತು. ಅದೇ ಸಮಯದಲ್ಲಿ, USGS ಭೂಕಂಪದ ಕೇಂದ್ರಬಿಂದುವು ನೆಲದಿಂದ 11 ಮೈಲಿ ಆಳದಲ್ಲಿದೆ ಎಂದು ಹೇಳಿದೆ. USGS ಪ್ರಕಾರ ಇದರ ತೀವ್ರತೆ 7.8 ಆಗಿತ್ತು.
ಮಧ್ಯ ಟರ್ಕಿ ಬಳಿ ಎರಡನೇ ಹೊಡೆತ
ಇದಾದ ಕೆಲವೇ ದಿನಗಳಲ್ಲಿ, ಮಧ್ಯ ಟರ್ಕಿಯಲ್ಲಿ ಎರಡನೇ ಆಘಾತವನ್ನು ಅನುಭವಿಸಲಾಗಿದೆ. USGS ಪ್ರಕಾರ, ಎರಡನೇ ಕಂಪನದ ತೀವ್ರತೆಯು 6.7 ಆಗಿತ್ತು, ಇದರ ಕೇಂದ್ರವು ನೆಲದಿಂದ 12 ಕಿಲೋಮೀಟರ್ ಆಳದಲ್ಲಿತ್ತು. ವರದಿಗಳ ಪ್ರಕಾರ, ಭೂಕಂಪದಿಂದಾಗಿ ಅನೇಕ ಕಟ್ಟಡಗಳು ಕುಸಿದಿವೆ ಮತ್ತು ಜನರು ಅವುಗಳ ಅವಶೇಷಗಳಲ್ಲಿ ಸಿಲುಕಿರುವ ಸಾಧ್ಯತೆಯಿದೆ. ನಗರದ ಶಾಪಿಂಗ್ ಮಾಲ್ ಭೂಕಂಪದಿಂದ ನೆಲಸಮವಾಗಿದೆ ಎಂದು ದಿಯಾರ್‌ಬಕಿರ್‌ನಲ್ಲಿರುವ ವರದಿಗಳು ಉಲ್ಲೇಖಿಸಿವೆ.
Massive #earthquake registered M7.8 hit the middle of Turkey. pic.twitter.com/mdxt53QlQ0
— Asaad Sam Hanna (@AsaadHannaa) February 6, 2023
ಇಲ್ಲಿ ಹಿಂದೆಯೂ ಭೂಕಂಪ ಸಂಭವಿಸಿದ್ದವು
ಟರ್ಕಿ ವಿಶ್ವದ ಅತ್ಯಂತ ಸಕ್ರಿಯ ಭೂಕಂಪ ವಲಯಗಳಲ್ಲಿ ಒಂದಾಗಿದೆ. 1999 ರಲ್ಲಿ 7.4 ತೀವ್ರತೆಯ ಭೂಕಂಪದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಡ್ಯೂಜ್ ಒಂದಾಗಿದೆ. ಸುರಕ್ಷತಾ ಮುನ್ನೆಚ್ಚರಿಕೆಗಳಿಲ್ಲದೆ ವ್ಯಾಪಕವಾದ ನಿರ್ಮಾಣವನ್ನು ಅನುಮತಿಸಿದ ಇಸ್ತಾನ್‌ಬುಲ್ ಅನ್ನು ದೊಡ್ಡ ಭೂಕಂಪವು ಧ್ವಂಸಗೊಳಿಸಬಹುದು ಎಂದು ತಜ್ಞರು ಬಹಳ ಹಿಂದೆಯೇ ಎಚ್ಚರಿಸಿದ್ದಾರೆ.
* ಜನವರಿ 2020 ರಲ್ಲಿ, ಎಲಾಜಿಗ್‌ನಲ್ಲಿ 6.8 ತೀವ್ರತೆಯ ಭೂಕಂಪ ಸಂಭವಿಸಿತು, ಇದರಲ್ಲಿ 40 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು.
* ಈ ವರ್ಷದ ಅಕ್ಟೋಬರ್‌ನಲ್ಲಿ, ಏಜಿಯನ್ ಸಮುದ್ರದಲ್ಲಿ 7.0 ತೀವ್ರತೆಯ ಭೂಕಂಪ ಸಂಭವಿಸಿದೆ, ಇದರಲ್ಲಿ 114 ಜನರು ಸಾವನ್ನಪ್ಪಿದರು ಮತ್ತು ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡರು.
* 1999ರಲ್ಲಿ ದುಜಾದಲ್ಲಿ 7.4 ತೀವ್ರತೆಯ ಭೂಕಂಪ ಸಂಭವಿಸಿತ್ತು. ಇದರಲ್ಲಿ 17 ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, ಅದರಲ್ಲಿ ಒಂದು ಸಾವಿರ ಜನರು ಇಸ್ತಾಂಬುಲ್‌ನಲ್ಲೇ ಬಲಿಯಾಗಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ