ಇಸ್ಲಾಂ ಧರ್ಮದಲ್ಲಿ (Islam Religion) ಕೈಗೊಳ್ಳಲಾಗುವ ಪವಿತ್ರ ಹಜ್ ಯಾತ್ರೆಗೆ ಸಂಬಂಧಿಸಿದಂತೆ ಈ ವರ್ಷ ಹಲವು ಮಹತ್ತರವಾರ ಬದಲಾವಣೆಗಳನ್ನು ತರಲಾಗಿದೆ. ಜೊತೆಗೆ ಇದೇ ಮೊಟ್ಟ ಮೊದಲ ಬಾರಿಗೆ ಹಜ್ ಯಾತ್ರೆಗೆ ಪುರುಷರಿಲ್ಲದೇ ಭಾಗಿಯಾಗಲು ಸಾವಿರಾರು ಮಹಿಳೆಯರು ಅರ್ಜಿಗಳನ್ನು ಸಲ್ಲಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಮೊದಲು ಹಜ್ (Hajj) ಯಾತ್ರೆ ಮಾಡುವ ಮಹಿಳೆಯರು ರಕ್ಷಕ ಪುರುಷನ ಜೊತೆ ಯಾತ್ರೆ ಮಾಡುವುದು ಕಡ್ಡಾಯವಾಗಿತ್ತು. ಆದರೆ ಕಳೆದ ವರ್ಷ ಹಜ್ ಯಾತ್ರೆಯ ನಿಯಮದಲ್ಲಿ ಕೆಲ ಬದಲಾವಣೆಯಲ್ಲಿ ಈ ನಿಯಮವನ್ನು ಸಹ ತಿದ್ದುಪಡಿ ಮಾಡಲಾಯಿತು. ಹೊಸ ನಿಯಮಗಳು ಮಹಿಳೆಯರು ಯಾವುದೇ ಪುರುಷ ರಕ್ಷಕನಿಲ್ಲದೆ ಹಜ್ ಯಾತ್ರೆ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದೆ.
ʻಮೆಹ್ರಂ’ ಇಲ್ಲದೆ ತೀರ್ಥಯಾತ್ರೆಗೆ ಹೋಗಲು 4 ಸಾವಿರ ಮಹಿಳೆಯರಿಂದ ಅರ್ಜಿ
ಪ್ರಸ್ತುತ ಈ ಹೊಸ ನಿಯಮದ ಪ್ರಕಾರ ಪುರುಷರಿಲ್ಲದೇ ಹಜ್ ಯಾತ್ರೆಗೆ ತೆರಳಲು ಮಹಿಳೆಯರು ಒಲವು ತೋರಿಸಿದ್ದು, ಮೊದಲ ಬಾರಿಗೆ, 4,314 ಮಹಿಳೆಯರು ‘ಮೆಹ್ರಂ’ ಇಲ್ಲದೆ ತೀರ್ಥಯಾತ್ರೆಗೆ ಹೋಗಲು ಅರ್ಜಿ ಸಲ್ಲಿಸಿದ್ದಾರೆ.
ಸೌದಿ ಅರೇಬಿಯಾದ ಮೆಕ್ಕಾ ನಗರದಲ್ಲಿ ರಕ್ತ ಸಂಬಂಧ ಹೊಂದಿರುವ ಪುರುಷ ಪೋಷಕರಿಲ್ಲದೆ 4,000 ಕ್ಕೂ ಹೆಚ್ಚು ಮಹಿಳೆಯರು ಹಜ್ ಯಾತ್ರೆಗೆ ಹೋಗಲು ಅರ್ಜಿ ಸಲ್ಲಿಸಿದ್ದಾರೆ ಎಂದು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ ಸುದ್ದಿ ಮಾಧ್ಯಮಗಳಿಗೆ ತಿಳಿಸಿದೆ.
ಶೀಘ್ರದಲ್ಲೇ ಹಜ್ ಪ್ರಯಾಣ ಯಾತ್ರಿಕರ ಪಟ್ಟಿ
ಸಚಿವಾಲಯವು ಆದ್ಯತೆಯ ಮೇರೆಗೆ ಅರ್ಜಿಗಳನ್ನು ತೆರವುಗೊಳಿಸುತ್ತದೆ ಮತ್ತು ಹಜ್ ಪ್ರಯಾಣ ಯಾತ್ರಿಕರ ಪಟ್ಟಿಯನ್ನು ಸಹ ಈ ವಾರ ತೆರವುಗೊಳಿಸಲಾಗುವುದು ಎಂದು ಸಚಿವಾಲಯ ತಿಳಿಸಿದೆ.
ಯಾವುದೇ ಪುರುಷ ಪೋಷಕರಿಲ್ಲದೆ ಹಜ್ ಯಾತ್ರೆಗೆ ಪ್ರಯಾಣಿಸಲು ಬಯಸುವ 45 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಂದ ಇಷ್ಟು ದೊಡ್ಡ ಪ್ರಮಾಣದ ಅರ್ಜಿಗಳು ಬಂದಿರುವುದು ಇದೇ ಮೊದಲು ಎಂದು ವರದಿ ತಿಳಿಸಿದೆ.
ಪುರುಷ ರಕ್ಷಕರಿಲ್ಲದೆ ಮಹಿಳೆಯರ ಉಮ್ರಾಗೆ ಅವಕಾಶ ಮಾಡಿಕೊಟ್ಟ ಸೌದಿ ಸರ್ಕಾರ
ಸೌದಿ ಅರೇಬಿಯಾ ಸರ್ಕಾರವು ಕಳೆದ ವರ್ಷ ಅಕ್ಟೋಬರ್‌ನಲ್ಲಿ, ಮದುವೆಗೆ ಅನುಮತಿಯಿಲ್ಲದ ಪುರುಷ ರಕ್ತಸಂಬಂಧಿ (ಅವರನ್ನು ಮೆಹ್ರಂ ಎನ್ನಲಾಗುತ್ತದೆ) - ಇನ್ನು ಮುಂದೆ ವಿಶ್ವದ ಯಾವುದೇ ಭಾಗದಿಂದ ಮಹಿಳಾ ಯಾತ್ರಿಕರೊಂದಿಗೆ ಹೋಗುವ ಅಗತ್ಯವಿಲ್ಲ ಎಂದು ಘೋಷಿಸಿತು.
ಇದನ್ನೂ ಓದಿ: ಅಯೋಧ್ಯೆಯ ರಾಮಮಂದಿರ ನಿರ್ಮಾಣದಲ್ಲೂ ಈ ಮರವನ್ನೇ ಬಳಸೋದಂತೆ! ಇದಕ್ಕೂ ಒಂದು ಬಲವಾದ ಕಾರಣವಿದೆ
ಮುಸ್ಲಿಮ ಮಹಿಳೆಯರು ಹಜ್ ಯಾತ್ರೆ ಕೈಗೊಳ್ಳಲು ಸುರಕ್ಷಿತ, ನಂಬಿಕಸ್ಥ ರಕ್ಷಕ ಅಥವಾ ಮೆಹ್ರಂ ಕರೆತರುವುದು ಕಡ್ಡಾಯವಾಗಿತ್ತು. ಇದರಿಂದ ಹಲವು ಮಹಿಳೆಯರು ಹಜ್ ಯಾತ್ರೆಯಿಂದ ವಂಚಿತರಾಗುತ್ತಿದ್ದರು.
ಜೊತೆಗೆ ಹಜ್ ಯಾತ್ರೆಯ ವೆಚ್ಚವೂ ಅಧಿಕವಾಗುತ್ತಿತ್ತು. ಇದನ್ನೆಲ್ಲಾ ಪರಿಗಣಿಸಿ ಸೌದಿ ಅರೇಬಿಯಾ ಸರ್ಕಾರ ಮೆಕ್ಕಾಗೆ 45 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರು ಯಾವುದೇ ಪುರುಷ ರಕ್ಷಕನಿಲ್ಲದೆ ತೆರಳಿ ಹಜ್‌ನಲ್ಲಿ ಪಾಲ್ಗೊಳ್ಳಬಹುದು ಎಂದು ಆದೇಶ ಹೊರಡಿಸಿತು.
ಸೌದಿಯಲ್ಲಿ ಸುಧಾರಣೆ ತಂದ ಬಿನ್ ಸಲ್ಮಾನ್
ಸೌದಿಯಲ್ಲಿದ್ದ ಹಲವು ಕಠಿಣ ನಿಯಮಗಳು ಸೌದಿಯ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರ ಕಾಲದಲ್ಲಿ ಮಹತ್ತರ ಬದಲಾವಣೆ ಕಂಡಿವೆ ಎನ್ನಬಹುದು. ಇವರು ಇಂತಹ ಕೆಲ ಕಠಿಣ ಕ್ರಮಗಳನ್ನು ಸಡಿಲಗೊಳಿಸುತ್ತಿದ್ದು, ಸಾಮಾಜಿಕ ಸುಧಾರಣೆಗಳನ್ನು ಜಾರಿಗೆ ತರುತ್ತಿದ್ದಾರೆ.
ಇದನ್ನೂ ಓದಿ: ಪಾಲಿಹೌಸ್ ಕೃಷಿ ವಿಧಾನದಲ್ಲಿ ಸೌತೆಕಾಯಿ ಬೆಳೆ; ಒಂದು ಬೆಳೆಗೆ 10 ಲಕ್ಷ ಆದಾಯ ಗಳಿಸುತ್ತಿದ್ದಾರೆ ಈ ರೈತ!
ಸೌದಿ ಅರೇಬಿಯಾದಲ್ಲಿ ಪುರುಷ ಪೋಷಕರಿಲ್ಲದೆ ಮಹಿಳೆಯರಿಗೆ ವಾಹನ ಚಲಾಯಿಸಲು ಸಹ ಅವಕಾಶ ಇರಲಿಲ್ಲ. ಆದರೆ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಇಂತಹ ನಿಯಮಗಳನ್ನು ಸಡಿಲಗೊಳಿಸಿದ್ದು, ಪುರುಷರಿಲ್ಲದೇ ವಾಹನ ಚಲಾಯಿಸುವುದು, ವಿದೇಶ ಪ್ರವಾಸ ಕೈಗೊಳ್ಳವ ಅವಕಾಶವನ್ನು ಮಹಿಳೆಯರಿಗೆ ಕಲ್ಪಿಸಿಕೊಟ್ಟಿದ್ದಾರೆ.
ಇಸ್ಲಾಂ ಧರ್ಮದ ಪ್ರಮುಖ ಯಾತ್ರೆ ಹಜ್ ಆಗಿದ್ದು, ಮುಸ್ಲಿಂ ಬಾಂಧವರು ಒಮ್ಮೆಯಾದರೂ ಮೆಕ್ಕಾ-ಮದೀನಾಕ್ಕೆ ಹೋಗಿ ಹಜ್ ಕರ್ಮಗಳನ್ನು ಮುಗಿಸಬೇಕೆಂಬುದು ಬಯಸುತ್ತಾರೆ. ಅದಕ್ಕೆ ಅಂತಾನೇ ಪ್ರತಿವರ್ಷ ಹಜ್ ಯಾತ್ರೆ ಕೈಗೊಳ್ಳುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ