• Home
 • »
 • News
 • »
 • national-international
 • »
 • Pune Accident: ಪುಣೆ- ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: 48 ವಾಹನ ಜಖಂ, 50ಕ್ಕೂ ಅಧಿಕ ಮಂದಿಗೆ ಗಾಯ!

Pune Accident: ಪುಣೆ- ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: 48 ವಾಹನ ಜಖಂ, 50ಕ್ಕೂ ಅಧಿಕ ಮಂದಿಗೆ ಗಾಯ!

ಪುಣೆ- ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ

ಪುಣೆ- ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ

ಕಂಟೇನರ್‌ನ ಬ್ರೇಕ್ ವೈಫಲ್ಯವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಮುಂಬೈನಿಂದ ಸತಾರಾ ಕಡೆಗೆ ಹೋಗುತ್ತಿದ್ದ ಕಂಟೇನರ್‌ಗೆ ಇದ್ದಕ್ಕಿದ್ದಂತೆ ಬ್ರೇಕ್ ಫೇಲ್ ಆದ ಕಾರಣ ಚಾಲಕನ ನಿಯಂತ್ರಣ ತಪ್ಪಿದೆ. ಹೀಗಿರುವಾಗ ಕಂಟೇನರ್​ ಮುಂದೆ ಮತ್ತು ಹಿಂದೆ ಓಡುತ್ತಿದ್ದ 45ಕ್ಕೂ ಹೆಚ್ಚು ವಾಹನಗಳು ಪರಸ್ಪರ ಡಿಕ್ಕಿ ಹೊಡೆದಿವೆ. ಈ ಘಟನೆ ರಾತ್ರಿ 8.30 ಮತ್ತು 9.00 ರ ಸುಮಾರಿಗೆ ನಡೆದಿದೆ ಎಂದು ವರದಿಗಳು ಉಲ್ಲೇಖಿಸಿವೆ.

ಮುಂದೆ ಓದಿ ...
 • Share this:

  ಪುಣೆ(ನ.21): ಮಹಾರಾಷ್ಟ್ರದ ಪುಣೆಯಲ್ಲಿ (Pune Bangalore Highway Accident) ಭಾನುವಾರ ರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸುಮಾರು 50 ಮಂದಿ ಗಾಯಗೊಂಡಿದ್ದಾರೆ. ಪುಣೆ-ಬೆಂಗಳೂರು ಹೆದ್ದಾರಿಯ ನವಲೆ ಸೇತುವೆಯಲ್ಲಿ 48 ವಾಹನಗಳು ಪರಸ್ಪರ ಡಿಕ್ಕಿ ಹೊಡೆದಿವೆ. ಅಪಘಾತದಲ್ಲಿ ಗಾಯಗೊಂಡವರನ್ನು ರಕ್ಷಿಸಲು ರಕ್ಷಣಾ ತಂಡಗಳು (Rescue Operation) ಸ್ಥಳಕ್ಕೆ ಧಾವಿಸಿವೆ. ಪುಣೆ ಅಗ್ನಿಶಾಮಕ ದಳದ ಮತ್ತು ಪುಣೆ ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ತಂಡಗಳು ಸ್ಥಳದಲ್ಲಿದ್ದು, ಜನರ ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ.


  ಸ್ಥಳೀಯ ಮಾಧ್ಯಮಗಳ ಪ್ರಕಾರ, ಅಪಘಾತದಲ್ಲಿ ಸುಮಾರು 40-50 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಂಟೇನರ್‌ನ ಬ್ರೇಕ್ ವೈಫಲ್ಯವೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಮುಂಬೈನಿಂದ ಸತಾರಾ ಕಡೆಗೆ ಹೋಗುತ್ತಿದ್ದ ಕಂಟೇನರ್‌ಗೆ ಇದ್ದಕ್ಕಿದ್ದಂತೆ ಬ್ರೇಕ್ ಫೇಲ್ ಆದ ಕಾರಣ ಚಾಲಕನ ನಿಯಂತ್ರಣ ತಪ್ಪಿದೆ. ಹೀಗಿರುವಾಗ ಕಂಟೇನರ್​ ಮುಂದೆ ಮತ್ತು ಹಿಂದೆ ಓಡುತ್ತಿದ್ದ 45ಕ್ಕೂ ಹೆಚ್ಚು ವಾಹನಗಳು ಪರಸ್ಪರ ಡಿಕ್ಕಿ ಹೊಡೆದಿವೆ. ಈ ಘಟನೆ ರಾತ್ರಿ 8.30 ಮತ್ತು 9.00 ರ ಸುಮಾರಿಗೆ ನಡೆದಿದೆ ಎಂದು ವರದಿಗಳು ಉಲ್ಲೇಖಿಸಿವೆ. ಅಪಘಾತದ ನಂತರ ಕಾರಿನಿಂದ ಹೊರಬಿದ್ದ ಆಯಿಲ್ ಕೂಡ ಹಿಂದೆ ಬರುವ ವಾಹನಗಳ ಅಪಘಾತಕ್ಕೆ ಕಾರಣವಾಗಿದೆ. ಇದರಿಂದ ಹಲವು ವಾಹನಗಳು ಸ್ಕಿಡ್​ ಆಗಿ ಪಕ್ಕದ ವಾಹನಗಳಿಗೆ ಡಿಕ್ಕಿ ಹೊಡೆದಿವೆ.


  ಇದನ್ನೂ ಓದಿ: ಚೀನಾದ ಫ್ಯಾಕ್ಟರಿಯಲ್ಲಿ ತಯಾರಾಗುತ್ತೆ ಸೊಳ್ಳೆಗಳು! ಇವು ಕಚ್ಚಲ್ಲ, ರೋಗ ವಾಸಿ ಮಾಡುತ್ತವೆಯಂತೆ!


  ಅಪಘಾತದ ನಂತರ, ಪುಣೆಯ ಬಿಜೆಪಿ ಶಾಸಕ ಸಿದ್ಧಾರ್ಥ್ ಶಿರೋಳೆ ಅವರು ಅಪಘಾತದ ಕುರಿತಾದ ಅನಧಿಕೃತ ಸುದ್ದಿಯನ್ನು ಹಂಚಿಕೊಳ್ಳದಂತೆ ಟ್ವಿಟರ್‌ನಲ್ಲಿ ಮನವಿ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ ಅವರು, "ಪುಣೆ-ಬೆಂಗಳೂರು ಹೆದ್ದಾರಿಯ ನವಲೆ ಸೇತುವೆಯಲ್ಲಿ ನಡೆದ ಅಪಘಾತ ದುರದೃಷ್ಟಕರ. ಅಗ್ನಿಶಾಮಕ ದಳ ಮತ್ತು ಪಿಎಂಆರ್‌ಡಿಎ ರಕ್ಷಣಾ ತಂಡಗಳು ಸ್ಥಳದಲ್ಲಿದ್ದು ಗಾಯಾಳುಗಳನ್ನು ರಕ್ಷಿಸುತ್ತಿವೆ. ಅಪಘಾತದ ಬಗೆಗಿನ ಅನಧಿಕೃತ ಮಾಹಿತಿ ಹಂಚಿಕೊಳ್ಳಬೇಡಿ. ಅಲ್ಲದೇ ವೃತ್ತಿಪರರು ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ, ಹೀಗಾಗಿ ಅಪಘಾತದ ಸ್ಥಳದತ್ತ ಹೋಗುವುದನ್ನು ತಪ್ಪಿಸಿ ಎಂದು ನಾಗರಿಕರಲ್ಲಿ ವಿನಂತಿಸುತ್ತೇನೆ ಎಂದಿದ್ದಾರೆ.


  ಇದನ್ನೂ ಓದಿ: ಶಸ್ತ್ರಚಿಕಿತ್ಸೆ ವೇಳೆ ಕಿಡ್ನಿ ಕಳ್ಳತನ, ಕದ್ದ ವೈದ್ಯನ ಮೂತ್ರಪಿಂಡವನ್ನೇ ಕಸಿ ಮಾಡುವಂತೆ ಮಹಿಳೆಯ ಹಠ


  ಪುಣೆಯಲ್ಲಿರುವ ನವಲೆ ಸೇತುವೆ ಕಳೆದ ಕೆಲವು ದಿನಗಳಿಂದ ಅಪಘಾತಗಳ ಹಾಟ್ ಸ್ಪಾಟ್ ಆಗುತ್ತಿದೆ. ಅನೇಕ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಈ ಕಾರಣದಿಂದ ಇಂತಹ ಅವಘಡಗಳು ಮರುಕಳಿಸದಂತೆ ವಡಗಾಂವ್ ಸೇತುವೆಗೆ ಸಂಪರ್ಕ ಕಲ್ಪಿಸಲು ಮುಂದಾಗಿತ್ತು. ಈ ಪ್ರಸ್ತಾವನೆಯನ್ನು ಪುಣೆ ಮಹಾನಗರ ಪಾಲಿಕೆಗೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೀಡಿದೆ.

  Published by:Precilla Olivia Dias
  First published: