HOME » NEWS » National-international » OVER 35 ARRESTS 12 FIRS THROUGH LOVE JIHAD LAW IN A MONTH IN UTTAR PRADESH SNVS

ಉತ್ತರ ಪ್ರದೇಶದಲ್ಲಿ ತಿಂಗಳ ಹಿಂದೆ ಜಾರಿಯಾದ ಲವ್ ಜಿಹಾದ್ ಕಾನೂನು ಎಷ್ಟು ಯಶಸ್ವಿ?

ಈ ಕಾಯ್ದೆ ಸಾಮಾಜಿಕವಾಗಿ ಉಪಯುಕ್ತವಾಗಬಹುದಾದರೂ ಆಧುನಿಕ ದೃಷ್ಟಿಕೋನದಲ್ಲಿ ನೋಡಿದರೆ ಇದು ಜನರ ಸ್ವಾತಂತ್ರ್ಯ ಹನನವೆಂಬಂತೆ ತೋರುತ್ತದೆ ಎಂದು ಕೆಲವರು ಹೇಳುತ್ತಾರೆ. ಸಂವಿಧಾನದಲ್ಲಿ ಕಲ್ಪಿಸಿರುವ ವ್ಯಕ್ತಿಗತ ಸ್ವಾತಂತ್ರ್ಯಕ್ಕೆ ಈ ಕಾಯ್ದೆ ವಿರೋಧಾಭಾಸವಾಗಿದೆ ಎಂಬುದು ಕೆಲ ಪರಿಣಿತರ ಅನಿಸಿಕೆ.

news18
Updated:December 26, 2020, 4:11 PM IST
ಉತ್ತರ ಪ್ರದೇಶದಲ್ಲಿ ತಿಂಗಳ ಹಿಂದೆ ಜಾರಿಯಾದ ಲವ್ ಜಿಹಾದ್ ಕಾನೂನು ಎಷ್ಟು ಯಶಸ್ವಿ?
ಉತ್ತರ ಪ್ರದೇಶ ಪೊಲೀಸ್
  • News18
  • Last Updated: December 26, 2020, 4:11 PM IST
  • Share this:
ನವದೆಹಲಿ(ಡಿ. 26): ಉತ್ತರ ಪ್ರದೇಶದಲ್ಲಿ ಅಕ್ರಮ ಮತಾಂತರ ನಿಗ್ರಹ ಲವ್ ಜಿಹಾದ್ ಕಾನೂನು ಜಾರಿಗೆ ತಂದು ತಿಂಗಳಾಯಿತು. ಈ ಹೊಸ ಕಾನೂನಿನಡಿ ಆ ರಾಜ್ಯದಲ್ಲಿ ಈವರೆಗೆ 12 ಎಫ್​ಐಆರ್ ದಾಖಲಾಗಿವೆ. 35 ಮಂದಿ ಬಂಧನವಾಗಿದೆ. ಇಟಾ ಜಿಲ್ಲೆಯಲ್ಲಿ ಅತಿ ಹೆಚ್ಚು ಬಂಧನವಾಗಿದೆ. ಇಲ್ಲಿ ಎಂಟು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಸೀತಾಪುರದಲ್ಲಿ 7, ಗ್ರೇಟರ್ ನೋಯ್ಡಾದಲ್ಲಿ 4, ಶಹಜಾನಪುರ್ ಮತ್ತು ಅಜಮ್​ಗಡದಲ್ಲಿ ತಲಾ ಮೂವರು ವ್ಯಕ್ತಿಗಳು, ಮೊರಾದಾಬಾದ್, ಮುಜಾಫರ್​ನಗರ್, ಬಿಜ್ನೋರ್ ಮತ್ತು ಕನ್ನೋಜ್​ನಿಂದ ತಲಾ ಇಬ್ಬರು ಹಾಗೂ ಬರೇಲಿ ಹಾಗೂ ಹರ್ದೋಯಿಯಿಂದ ತಲಾ ಒಬ್ಬರು ವ್ಯಕ್ತಿಗಳನ್ನ ಲವ್ ಜಿಹಾದ್ ಆರೋಪದ ಮೇಲೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಮತಾಂತರ ಉದ್ದೇಶದಿಂದ ವಿವಾಹವಾಗುವುದನ್ನು ತಡೆಯುವ ಉದ್ದೇಶದಿಂದ ರೂಪಿತವಾಗಿರುವ ಈ ಲವ್ ಜಿಹಾದ್ ಕಾಯ್ದೆ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳಿವೆ. ಮುಸ್ಲಿಮ್ ಧರ್ಮೀಯರ ವಿರುದ್ಧ ಅಸ್ತ್ರವಾಗಿ ಇದನ್ನ ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪಗಳಿವೆ. ಹಾಗೆಯೇ, ಅಮಾಯಕ ಹಿಂದೂ ಮಹಿಳೆಯರನ್ನು ಲವ್ ಹೆಸರಿನಲ್ಲಿ ಮದುವೆಗೆ ಪುಸಲಾಯಿಸಿ ಮತಾಂತರ ಮಾಡಲಾಗುತ್ತಿರುವುದನ್ನು ತಡೆಯಲು ಈ ಕಾಯ್ದೆ ಪ್ರಬಲ ಅಸ್ತ್ರವಾಗಿದೆ ಎಂಬ ಮಾತುಗಳೂ ಇವೆ. ಒಂದು ತಿಂಗಳಲ್ಲಿ ಉತ್ತರ ಪ್ರದೇಶದಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ಎರಡೂ ಕಡೆಯ ಸಂಗತಿಗಳು ಇವೆ.

ತನ್ನ ಮಗಳ ಸ್ನೇಹ ಸಂಪಾದಿಸಿ ಪುಸಲಾಯಿಸಿ ಮತಾಂತರ ಮಾಡುತ್ತಿದ್ದಾರೆ ಎಂದು ಟಿಕಾರಾಮ್ ರಾಥೋಡ್ ಅವರು ನೀಡಿದ ದೂರಿನ ಮೇಲೆ 22 ವರ್ಷದ ಉವೇಶ್ ಅಹ್ಮದ್ ಎಂಬಾತನನ್ನು ಡಿಸೆಂಬರ್ 5ರಂದು ಪೊಲೀಸರು ಬಂಧಿಸಿದ್ದರು. ಡಿ. 6ರಂದು ಅಂತ್​ಧರ್ಮೀಯ ವಿವಾಹವಾಗುತ್ತಿದೆ ಎಂಬ ಮಾಹಿತಿ ಮೇಲೆ ಲಕ್ನೋ ಪೊಲೀಸರು ಮುಜಾಫರ್ ಜಿಲ್ಲೆಯಲ್ಲಿ ನದೀಮ್ ಎಂಬಾತನನ್ನು ಪೊಲೀಸರು ಬಂಧಿಸಿದ್ದರು. ಆದರೆ, ಅಲಹಾಬಾದ್ ಹೈಕೋರ್ಟ್ ಮಧ್ಯ ಪ್ರವೇಶಿಸಿ ನದೀಮ್ ವಿರುದ್ಧ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ಸೂಚನೆ ನೀಡಿತು. ಮೊರಾದಾಬಾದ್​ನಲ್ಲಿ ಇಂಥದ್ದೇ ಪ್ರಕರಣದಲ್ಲಿ ಬಂಧಿತರಾಗಿದ್ದ ಇಬ್ಬರು ವ್ಯಕ್ತಿಗಳಿಗೆ ಕೋರ್ಟ್ ರಕ್ಷಣೆ ಕೊಟ್ಟಿತು.

ಇದನ್ನೂ ಓದಿ: ಜಮ್ಮು ಮತ್ತು ಕಾಶ್ಮೀರದಿಂದ ಪಾಠ ಕಲಿಯಿರಿ; ತಮ್ಮ ದೆಹಲಿ ಟೀಕಾಕಾರರಿಗೆ ಕುಟುಕಿದ ಪ್ರಧಾನಿ

ಹರದೋಯ್ ಜಿಲ್ಲೆಯಲ್ಲಿ ಮೊಹಮ್ಮದ್ ಆಜಾದ್ ಎಂಬಾತ ತನ್ನನ್ನ ಮದುವೆಯಾಗುವುದಾಗಿ ಹೇಳಿ ಅತ್ಯಾಚಾರ ಮಾಡಿ ಮತಾಂತರಕ್ಕೆ ಒತ್ತಾಯಿಸಿದ. ಹಾಗೆಯೇ, ದೆಹಲಿಯಲ್ಲಿ ತನ್ನನ್ನು ಮಾರಲು ಪ್ರಯತ್ನಿಸಿದ ಎಂದು 19 ವರ್ಷದ ಯುವತಿಯೊಬ್ಬಳು ದೂರು ನೀಡಿದ್ದಳು. ಅದರ ಆಧಾರದ ಮೇಲೆ ಆಜಾದ್​ನನ್ನು ಪೊಲೀಸರು ಅರೆಸ್ಟ್ ಮಾಡಿದ್ದರು.

ಹೀಗೆ ಉತ್ತರ ಪ್ರದೇಶದಲ್ಲಿ ಇಂಥ ಅನೇಕ ಪ್ರಕರಣಗಳು ದಾಖಲಾಗಿ ಹಲವರ ಬಂಧನವಾಗಿದೆ. ಈ ಕಾಯ್ದೆಗಳನ್ನ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆಯೇ ಹೆಚ್ಚು ಎಂದು ಹಲವರು ಹೇಳುತ್ತಾರೆ. ಇನ್ನೂ ಕೆಲವರು ಇದು ಜನರ ಸ್ವಾತಂತ್ರ್ಯ ಹನನವೆಂದು ಅಭಿಪ್ರಾಯಪಡುತ್ತಾರೆ.

ಸಾಮಾಜಿಕ ಕಾರ್ಯಕರ್ತರ ಶಾಂತನು ಶರ್ಮಾ ಈ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಈ ಕಾನೂನನ್ನು ಜನರಿಗೆ ಕಿರುಕುಳವಾಗದ ರೀತಿಯಲ್ಲಿ ಅನುಷ್ಠಾನವಾಗಬೇಕು ಎಂದು ಸಲಹೆ ನೀಡಿದ್ದಾರೆ. “ಈ ಕಾನೂನಿನಿಂದ ನಮಗೆ ಏನೂ ಸಮಸ್ಯೆ ಇಲ್ಲ. ಆದರೆ, ಅದರ ಅನುಷ್ಠಾನದ ವೇಳೆ ಜನರಿಗೆ ಕಿರುಕುಳವಾಗಬಾರದು. ಕಾನೂನು ದುರ್ಬಳಕೆ ಆಗಬಾರದು. ಹೊಸ ಕಾನೂನು ರೂಪಿಸಿದಾಕ್ಷಣ ಬಲವಂತದ ಮತಾಂತರವನ್ನು ಸುಲಭವಾಗಿ ನಿಗ್ರಹಿಸಲು ಸಾಧ್ಯವಿಲ್ಲ. ಅಂತಿಮವಾಗಿ ಈ ಕಾನೂನನ್ನು ಜಾರಿಗೆ ತರುವುದು ಪೊಲೀಸರೇ. ಈ ಕಾನೂನು ಸಫಲವಾಗಿದೆಯಾ ಇಲ್ಲವಾ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ” ಎಂದು ಶಾಂತನು ಶರ್ಮಾ ಹೇಳುತ್ತಾರೆ.ಇದನ್ನೂ ಓದಿ: ಮೋದಿ-ದೀದಿ ಜಟಾಪಟಿಗೆ ಕಾರಣವಾಯ್ತು ಮನ್​ ಕಿ ಬಾತ್​ ಬಾಷಣ; ಈ ಕಾರ್ಯಕ್ರಮದಲ್ಲಿ ಪ್ರಧಾನಿ ಹೇಳಿದ್ದೇನು?

ಈ ಕಾಯ್ದೆ ಸಾಮಾಜಿಕವಾಗಿ ಉಪಯುಕ್ತವಾಗಬಹುದಾದರೂ ಆಧುನಿಕ ದೃಷ್ಟಿಕೋನದಲ್ಲಿ ನೋಡಿದರೆ ಇದು ಜನರ ಸ್ವಾತಂತ್ರ್ಯ ಹನನವೆಂಬಂತೆ ತೋರುತ್ತದೆ ಎಂದು ಕೆಲವರು ಹೇಳುತ್ತಾರೆ.

“ಸಾಮಾಜಿಕ ರಚನೆಯ ದೃಷ್ಟಿಯಲ್ಲಿ ಈ ಕಾನೂನು ಉತ್ತಮ ಎನಿಸುತ್ತದೆ. ಯಾವುದೇ ಶೋಷಣೆ ಆಗದಂತೆ ತಡೆಯುತ್ತದೆ. ಆದರೆ ಆಧುನಿಕ ಸಮಾಜದ ದೃಷ್ಟಿಕೋನದಲ್ಲಿ ಜನರಿಗೆ ತಮ್ಮ ಸ್ವಾತಂತ್ರ್ಯದ ದಮನವೆಂಬಂತೆ ಭಾಸವಾಗಬಹುದು. ವ್ಯಕ್ತಿಯ ಆಯ್ಕೆ ಸ್ವಾತಂತ್ರ್ಯ ಹಾಗೂ ಧರ್ಮ ಬದಲಾವಣೆ ಹಕ್ಕನ್ನ ಕಸಿದುಕೊಂಡಂತಾಗುತ್ತದೆ. ಸಂವಿಧಾನದ 21ನೇ ಆರ್ಕಲ್​ನಲ್ಲಿ ನೀಡಲಾಗಿರುವ ವೈಯಕ್ತಿಕ ಸ್ವಾಯತ್ತತೆ, ಖಾಸಗಿತ್ವ, ಘನತೆ, ವೈಯಕ್ತಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕಿಗೆ ಇದು ವಿರೋಧವಾಗಿದೆ” ಎಂದು ಹೈಕೋರ್ಟ್ ವಕೀಲ ಸಂದೀಪ್ ಚೌಧುರಿ ಹೇಳುತ್ತಾರೆ.
Published by: Vijayasarthy SN
First published: December 26, 2020, 4:11 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories