ಮಕ್ಕಳಿಗಾಗಿ ಬೇರೆ Instagram ಮಾಡಲು ಹೊರಟ ಜುಕರ್​ಬರ್ಗ್, ಬೇಡವೇ ಬೇಡ ಎನ್ನುತ್ತಿದ್ದಾರೆ ಲಕ್ಷಾಂತರ ಜನ !

ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಬಹಳ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ದೊಡ್ಡವರಿಗೇ ಈ ಸಮಸ್ಯೆ ಬಹಳ ಹೆಚ್ಚಿರುವುದರಿಂದ ಮಕ್ಕಳನ್ನು ದೂರ ಇಡುವುದೇ ಉತ್ತಮ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಸುಮಾರು 1 ಲಕ್ಷದ 80 ಸಾವಿರದಷ್ಟು ಜನ ಮಕ್ಕಳಿಗಾಗಿ ಬೇರೆ Instagram ಮಾಡುವುದೇ ಬೇಡವೇ ಬೇಡ ಎಂದು ಆನ್​ಲೈನ್ ಮೂಲಕ ಆಗ್ರಹಿಸಿದ್ದಾರೆ. ಫೇಸ್ಬುಕ್ ಒಡೆತನದ ಇನ್ಸ್ಟಾಗ್ರಾಮ್ 13 ವರ್ಷದೊಳಗಿನ ಮಕ್ಕಳಿಗಾಗಿ ಬೇರೆ ಇನ್ಸ್ಟಾಗ್ರಾಮ್ ಮಾಡುವುದಾಗಿ ಹೇಳಿತ್ತು. ಇದನ್ನು ವಿರೋಧಿಸಿ ಅನೇಕ ಎನ್​ಜಿಒಗಳು ಮತ್ತು ವಿವಿಧ ಸಂಘ ಸಂಸ್ಥೆಗಳ ಒತ್ತಾಯದ ಮೇರೆಗೆ ಆನ್​ಲೈನ್ ಪಿಟಿಶನ್ ಆರಂಭವಾಗಿತ್ತು. 1 ಬಿಲಿಯನ್​ಗೂ ಅಧಿಕ ಬಳಕೆದಾರರಿರುವ ಇನ್ಸ್ಟಾಗ್ರಾಮ್ ಮಕ್ಕಳಿಗಾಗಿಯೇ ಬೇರೆ ಇನ್ಸ್ಟಾ ಶುರು ಮಾಡುವ ಕುರಿತು ತಿಳಿಸಿದಾಗ ಅದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಏಪ್ರಿಲ್ ತಿಂಗಳಲ್ಲಿ ಆರಂಭವಾದ ಈ ಪಿಟಿಶನ್​ನ್ನು ಫೇಸ್ಬುಕ್​ಗೆ ನೀಡಲು ನಿರ್ಧರಿಸಲಾಗಿದೆ. ಟಿಕ್​ ಟಾಕ್ ವಿರುದ್ಧದ ಯುದ್ಧದಲ್ಲಿ ಮಕ್ಕಳನ್ನು ದಾಳಗಳಾಗಿ ಬಳಸಿಕೊಳ್ಳುವ ಇನ್ಸ್ಟಾಗ್ರಾಮ್ ಯೋಜನೆಗೆ ತಮ್ಮ ಬೆಂಬಲವಿಲ್ಲ ಎಂದು ಕ್ಯಾಂಪೇನ್ ಫಾರ್ ಎ ಕಮರ್ಷಿಯಲ್ ಫ್ರೀ ಚೈಲ್ಡ್​​ಹುಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ತಿಳಿಸಿದ್ದಾರೆ.

ಈಗಾಗಲೇ 13 ವರ್ಷದವರೆಗಿನ ಮಕ್ಕಳು ಇನ್ಸ್ಟಾಗ್ರಾಮ್ ಬಳಸುತ್ತಿದ್ದಾರೆ. ಇದರಿಂದ ತಮ್ಮ ಲುಕ್​, ಅಪಿಯರೆನ್ಸ್, ಜಗತ್ತು ನಮ್ಮನ್ನು ಹೇಗೆ ನೋಡುತ್ತದೆ, ನಾವು ಹಿಂದುಳಿದುಬಿಡುತ್ತೇವೆ ಮುಂತಾದ ಅನೇಕ ವಿಚಾರಗಳ  ಬಗ್ಗೆ ವಿಪರೀತ ಎನಿಸುವಷ್ಟು ಮನಸಿಗೆ ಹಚ್ಚಿಕೊಂಡಿದ್ದಾರೆ. ಇದು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಬಹಳ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ದೊಡ್ಡವರಿಗೇ ಈ ಸಮಸ್ಯೆ ಬಹಳ ಹೆಚ್ಚಿರುವುದರಿಂದ ಮಕ್ಕಳನ್ನು ದೂರ ಇಡುವುದೇ ಉತ್ತಮ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.

ಇದನ್ನೂ ಓದಿ: Savings: ದಿನಕ್ಕೆ 150 ರೂಪಾಯಿ ಉಳಿಸಿದ್ರೆ ಸಾಕು, ಮಗಳ ಮದುವೆಗೆ 22 ಲಕ್ಷ ಸಿಗುತ್ತದೆ.. LIC ಹೊಸಾ ಉಳಿತಾಯ ಯೋಜನೆ ಬಗ್ಗೆ ಗೊತ್ತಾ?

ಎರಡು ತಿಂಗಳ ಹಿಂದೆ ಫೇಸ್ಬುಕ್ ಸಂಸ್ಥಾಪಕ ಮಾರ್ಕ್ ಜುಕೆರ್​ಬರ್ಗ್ ಮಕ್ಕಳಿಗಾಗಿ ಬೇರೆಯದೇ ಇನ್ಸ್ಟಾಗ್ರಾಮ್ ಮಾಡುವುದಾಗಿ ಹೇಳಿದ್ದರು. ಅದಿನ್ನೂ ಆರಂಭಿಕ ಹಂತದಲ್ಲೇ ಇದ್ದರೂ ಯೋಜನೆಯಂತೂ ಇದ್ದೇ ಇದೆ ಎನ್ನಲಾಗಿತ್ತು. ಈಗ 13 ವರ್ಷದೊಳಗಿನ ಮಕ್ಕಳಿಗೆ ಇನ್ಸ್ಟಾಗ್ರಾಮ್​ನಲ್ಲಿ ಖಾತೆ ಹೊಂದಲು ಅನುಮತಿ ಇಲ್ಲ.

ಇಷ್ಟೆಲ್ಲಾ ವಿರೋಧ ವ್ಯಕ್ತವಾದರೂ ಇನ್ಸ್ಟಾಗ್ರಾಮ್ ಮುಖ್ಯಸ್ಥ ಆಡಂ ಮೊಸ್ಸೆರಿ ಮಾತ್ರ ತಮ್ಮ ಯೋಜನೆ ಹಿಂದಿನಂತೆಯೇ ಮುಂದುವರೆದಿದೆ ಎಂದಿದ್ದಾರೆ. ಪೋಷಕರಿಗೆ ಮಕ್ಕಳ ಖಾತೆಯ ಮೇಲೆ ಹಿಡಿತವಿರುವಂತೆ ಮಾಡುವ ಬಗ್ಗೆಯೂ ಆಲೋಚಿಸಬಹುದು ಎಂದಿದ್ದಾರೆ. ಈ ಪಿಟಿಶನ್​ನಲ್ಲಿ ಅನೇಕ ವಕೀಲರು ಮತ್ತು ಅಟಾರ್ನಿ ಜನರಲ್​ಗಳು ಕೂಡಾ ಇದ್ದಾರೆ. ಅವರು ನಿಯಮಗಳನ್ನು ಬರೆಯಲು ಸಾಧ್ಯವಿಲ್ಲ, ನಿಯಮಗಳ ಪಾಲನೆಯಾಗುವಂತೆ ನೋಡಬೇಕು ಅಷ್ಟೇ ಎಂದು ಮೊಸ್ಸೆರಿ ಕಟುವಾಗಿ ಟೀಕಿಸಿದ್ದಾರೆ.

ಇದನ್ನೂ ಓದಿ: Ladies Special: ಮಹಿಳೆಯರೇ... ದುಡ್ಡು ಉಳಿಸೋಕೆ ಹೀಗೆಲ್ಲಾ ಮಾಡಬಹುದು ನೋಡಿ !

ಫೇಸ್ಬುಕ್​ ತನ್ನ ವೇದಿಕೆಯಲ್ಲಿ ಮಕ್ಕಳನ್ನು ಕಾಪಾಡಲು ಸಾಧ್ಯವಾಗ್ತಿಲ್ಲ. ಅದನ್ನು ಇಷ್ಟು ವರ್ಷಗಳಲ್ಲಿ ಇಡೀ ಜಗತ್ತು ನೋಡಿದೆ. ಹೀಗಿರುವಾಗ ನಮ್ಮ ಮಕ್ಕಳನ್ನು ಕಾಪಾಡಿಕೊಳ್ಳಲು ನಾವು ಹೋರಾಡಬೇಕಿದೆ. ಸಾಮಾಜಿಕ ಜಾಲತಾಣ ಈಗ ನಮ್ಮೆಲ್ಲರ ಬದುಕನ್ನು ನಿರ್ಧರಿಸುವಷ್ಟರ ಮಟ್ಟಿಗೆ ಬೆಳೆದುಬಿಟ್ಟಿದೆ. ಅದರಲ್ಲಿ ಬರುವ ಲೈಕ್, ಶೇರ್​ಗಳ ಮೇಲೆ ನಮ್ಮ ಮನಸ್ಥಿತಿ ನಿರ್ಧಾರವಾಗುವಂಥಾ ಹಂತ ತಲುಪಿಬಿಟ್ಟಿದ್ದೇವೆ. ಕನಿಷ್ಟ ನಮ್ಮ ಮಕ್ಕಳಾದರೂ ಅದರಿಂದ  ದೂರವಿರಲಿ ಎಂದು ಅನೇಕ ಪೋಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಕ್ಕಳಿಗಾಗಿ ಇನ್ಸ್ಟಾಗ್ರಾಮ್ ಮಾಡುವುದು ಅಂದ್ರೆ ದೊಡ್ಡ ತಂಬಾಕು ಸಂಸ್ಥೆಗಳು ಮಕ್ಕಳಿಗಾಗಿ ಸಿಗರೇಟ್ ಮಾಡಿದಂತೆ. ಇದರಿಂದ ಮಾರ್ಕ್ ಜುಕೆರ್​ಬರ್ಗ್​ ಬಿಟ್ಟರೆ ಬೇರೆ ಯಾರಿಗೂ ಪ್ರಯೋಜನವಿಲ್ಲ. ಬಹಳ ಚಿಕ್ಕ ವಯಸ್ಸಿನಲ್ಲೇ ಮಕ್ಕಳನ್ನು ಸಾಮಾಜಿಕ ಜಾಲತಾಣದ ಚಟ ಹಿಡಿಯುವಂತೆ ಮಾಡುವ ಹುನ್ನಾರ ಇದು ಎಂದು ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನೇಕರು ಎಲ್ಲಾ ಬಗೆಯ ಪಿಟಿಶನ್​ಗಳಿಗೆ ಸಹಿ ಮಾಡಿದ್ದಾರೆ. ನಮ್ಮ ಈ ಆತಂಕಗಳನ್ನು ಅವರು ಅರ್ಥ ಮಾಡಿಕೊಳ್ಳುತ್ತಾರಾ. ಈ ಯೋಜನೆಯನ್ನು ಕೈ ಬಿಡುತ್ತಾರಾ ಗೊತ್ತಿಲ್ಲ. ಆದರೆ ನಮ್ಮ ಪ್ರಯತ್ನ ಮುಂದುವರೆಯಲಿದೆ ಎಂದಿದ್ದಾರೆ ಅನೇಕ ಸಾಮಾಜಿಕ ಹೋರಾಟಗಾರರು.​
Published by:Soumya KN
First published: