ಮಧ್ಯಪ್ರದೇಶದ ಪ್ರವಾಹಕ್ಕೆ ಮೃತಪಟ್ಟವರ ಸಂಖ್ಯೆ 200ಕ್ಕೂ ಹೆಚ್ಚು; ಇಂದೂ ಸಹ ವರುಣನ ಆರ್ಭಟ

ಮುಂದಿನ 24 ಗಂಟೆಗಳಲ್ಲಿ ಮಧ್ಯಪ್ರದೇಶದಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಎಲ್ಲೆಡೆ ಆರೆಂಜ್​ ಅಲರ್ಟ್​ ಘೋಷಣೆ ಮಾಡಲಾಗಿದೆ. ಜೊತೆಗೆ 14 ಜಿಲ್ಲೆಗಳಲ್ಲಿ ರೆಡ್​ ಅಲರ್ಟ್​ ಘೋಷಿಸಲಾಗಿದೆ.

Latha CG | news18-kannada
Updated:September 13, 2019, 1:23 PM IST
ಮಧ್ಯಪ್ರದೇಶದ ಪ್ರವಾಹಕ್ಕೆ ಮೃತಪಟ್ಟವರ ಸಂಖ್ಯೆ 200ಕ್ಕೂ ಹೆಚ್ಚು; ಇಂದೂ ಸಹ ವರುಣನ ಆರ್ಭಟ
ಸಾಂದರ್ಭಿಕ ಚಿತ್ರ
  • Share this:
ಮಧ್ಯಪ್ರದೇಶ(ಸೆ.13): ಭಾರೀ ಮಳೆ ಮತ್ತು ಪ್ರವಾಹಕ್ಕೆ ಮಧ್ಯಪ್ರದೇಶದ ಜನ ನಲುಗಿ ಹೋಗಿದ್ದಾರೆ. ಈ ಬಾರಿಯ ಮಾನ್ಸೂನ್​ ಮಳೆಗೆ ಈವರೆಗೆ ಮೃತಪಟ್ಟವರ ಸಂಖ್ಯೆ ಸುಮಾರು 202 . ಇನ್ನು, 32 ಜನರ ಪರಿಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಮಾರು 631 ಮೂಕ ಪ್ರಾಣಿಗಳು ಮಳೆ ಮತ್ತು ಪ್ರವಾಹಕ್ಕೆ ಬಲಿಯಾಗಿವೆ.  

ಭೀಕರ ಪ್ರವಾಹಕ್ಕೆ 9,816 ಮನೆಗಳು ಭಾಗಶಃ ಹಾನಿಯಾಗಿವೆ. ಒಟ್ಟು 231 ಮನೆಗಳು ಕೊಚ್ಚಿ ಹೋಗಿವೆ. ಮಧ್ಯಪ್ರದೇಶ ಸರ್ಕಾರ ಪ್ರವಾಹದಲ್ಲಿ ಮೃತಪಟ್ಟವರ ಕುಟುಂಬಗಳಿಗೆ 4 ಲಕ್ಷ ಪರಿಹಾರ ಬಿಡುಗಡೆ ಮಾಡಿದೆ. ಇನ್ನು, ನೆರೆ ಸಂತ್ರಸ್ತರಿಗೆ ಪರಿಹಾರ ನೀಡಲು ಮಧ್ಯಪ್ರದೇಶ ಸರ್ಕಾರ ಕೆಂದ್ರಕ್ಕೆ ಮನವಿ ಮಾಡಲಿದೆ.

ಪ್ರವಾಹ ಸಂದರ್ಭದಲ್ಲಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಾವಿರಾರು ಜನರ ಪ್ರಾಣ ಕಾಪಾಡಿದ್ದು, ಎನ್​​ಡಿಆರ್​​ಎಫ್​ ಮತ್ತು ಎಸ್​ಡಿಆರ್​​ಎಫ್​ ಸಿಬ್ಬಂದಿ. ಈವರೆಗೆ ಸುಮಾರು 8,500 ಮಂದಿ ಜೀವ ಕಾಪಾಡಿದ್ದಾರೆ.  ನೆರೆ ಸಂತ್ರಸ್ತರನ್ನು ನಿರಾಶ್ರಿತರ ತಾಣಗಳಿಗೆ ಸ್ಥಳಾಂತರಿಸಲಾಗಿದೆ.

ಇನ್ನು, ಭಾರೀ ಮಳೆ ಮತ್ತು ಪ್ರವಾಹಕ್ಕೆ 6-8 ಲಕ್ಷ ಹೆಕ್ಟೇರ್ ಭೂಮಿ ಹಾಳಾಗಿದ್ದು, ರೈತರ ಬೆಳೆದಿದ್ದ ಬೆಳೆಗಳು ಸಂಪೂರ್ಣ ನಾಶವಾಗಿವೆ. ರಾಜ್ಯ ಸರ್ಕಾರ ಪ್ರವಾಹ ಪೀಡಿತ ಜನರಿಗೆ 6 ಸಾವಿರ ಕೋಟಿ ಹಣ ಬಿಡುಗಡೆ ಮಾಡಿದೆ. ಈಗಾಗಲೇ ನೆರೆ ಸಂತ್ರಸ್ತರಿಗೆ 50 ಕೋಟಿ ಹಣವನ್ನು ನೀಡಲಾಗಿದೆ.

ಭೋಪಾಲ್​ನಲ್ಲಿ ಗಣಪತಿ ವಸರ್ಜನೆ ವೇಳೆ ದೋಣಿ ಮಗುಚಿ 11 ಸಾವು, 4 ಜನ ನಾಪತ್ತೆ

ಭಾರೀ ಪ್ರವಾಹಕ್ಕೆ ರಾಜ್ಯದ ಎಲ್ಲಾ ಜಲಾಶಯಗಳು ಅಪಾಯ ಮಟ್ಟ ಮೀರಿ ತುಂಬಿದ್ದವು. ಹೀಗಾಗಿ ಮಧ್ಯಪ್ರದೇಶದಲ್ಲಿರುವ 28 ಜಲಾಶಯಗಳಲ್ಲಿ 21 ಜಲಾಶಯಗಳ ಗೇಟ್​ಗಳನ್ನು ತೆರೆದು ನೀರನ್ನು ಹೊರ ಬಿಡಲಾಗಿತ್ತು.

ಇಂದೂ ಸಹ ಭಾರೀ ಮಳೆಮುಂದಿನ 24 ಗಂಟೆಗಳಲ್ಲಿ ಮಧ್ಯಪ್ರದೇಶದಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಎಲ್ಲೆಡೆ ಆರೆಂಜ್​ ಅಲರ್ಟ್​ ಘೋಷಣೆ ಮಾಡಲಾಗಿದೆ. ಜೊತೆಗೆ 14 ಜಿಲ್ಲೆಗಳಲ್ಲಿ ರೆಡ್​ ಅಲರ್ಟ್​ ಘೋಷಿಸಲಾಗಿದೆ. ಪಶ್ಚಿಮ, ನೈರಯತ್ಯ, ಮಧ್ಯ ಭಾಗದ ಪ್ರದೇಶಗಳನ್ನು ಒಳಗೊಂಡಂತೆ, ಇಂದೋರ್​, ಸಾಗರ್, ವಿದಿಶ, ದಿವಾಸ್​, ಹೊಶಂಗಾಬಾದ್, ಭೋಪಾಲ್​, ಜಬಲಾಪುರ, ರೇವಾ​ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ರೆಡ್​ ಅಲರ್ಟ್​ ಘೋಷಣೆ ಮಾಡಲಾಗಿದೆ.

ಎರಡು ತಿಂಗಳ ಹಿಂದೆ ಮಧ್ಯಪ್ರದೇಶದ ಭೋಪಾಲ್​ನಲ್ಲಿ ಮಳೆ ಬರಲಿ ಎಂದು ಜನ 2 ಕಪ್ಪೆಗಳಿಗೆ ಮದುವೆ ಮಾಡಿಸಿದ್ದರು. ಆದರೆ ಮೊನ್ನೆ ಮಳೆ ನಿಲ್ಲಲಿ ಎಂದು ಆ ಎರಡು ಕಪ್ಪೆಗಳಿಗೆ ವಿಚ್ಛೇದನ ಕೊಡಿಸಿದ್ದಾರೆ.

First published:September 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading