HOME » NEWS » National-international » OVER 18 LAKH RURAL HOUSES BUILD DURING COVID 19 PANDEMIC PERIOD PM NARENDRA MODI LG

ಕೊರೋನಾ ಸಮಯದಲ್ಲಿ ಪ್ರಧಾನ್​ ಮಂತ್ರಿ ಆವಾಸ್​ ಯೋಜನೆಯಡಿ 18 ಲಕ್ಷ ಮನೆಗಳ ನಿರ್ಮಾಣ

ಲಾಕ್​ಡೌನ್ ಕಾರಣದಿಂದಾಗಿ ವಲಸೆ ಕಾರ್ಮಿಕರು ತಮ್ಮ ಮನೆಗಳಿಗೆ ತೆರಳಿ ಬೇರೆ ಕೆಲಸ ಹುಡುಕಲು ಶುರು ಮಾಡಿದರು. ಈ ವೇಳೆ ಅವರು ಗರೀಬ್ ಕಲ್ಯಾಣ್​ ರೋಜ್​ಗಾರ್​ ಯೋಜನೆಯಡಿ ಪ್ರಯೋಜನಗಳನ್ನು ಪಡೆದರು. ಈ ಕಾರಣದಿಂದಾಗಿ ಲಾಕ್​ಡೌನ್​ ಸಮಯಲ್ಲಿ 18 ಲಕ್ಷ ಮನೆಗಳು ನಿರ್ಮಾಣವಾಗಲು ಸಾಧ್ಯವಾಯಿತು.

news18-kannada
Updated:September 18, 2020, 2:40 PM IST
ಕೊರೋನಾ ಸಮಯದಲ್ಲಿ ಪ್ರಧಾನ್​ ಮಂತ್ರಿ ಆವಾಸ್​ ಯೋಜನೆಯಡಿ 18 ಲಕ್ಷ ಮನೆಗಳ ನಿರ್ಮಾಣ
ಪಿಎಂಎವೈ ಯೋಜನೆಯಡಿ ನಿರ್ಮಾಣವಾಗಿರುವ ಮನೆಗಳು(ಪ್ರಾತಿನಿಧಿಕ ಚಿತ್ರ)
  • Share this:
ನವದೆಹಲಿ(ಸೆ.18): ಇಡೀ ವಿಶ್ವವನ್ನು ಭಾದಿಸುತ್ತಿರುವ ಈ ಮಾರಕ ಕೊರೋನಾ ಬಿಕ್ಕಟ್ಟಿನ ಸಂದರ್ಭದಲ್ಲಿ, ಭಾರತದಲ್ಲಿ ಪ್ರಧಾನ ಮಂತ್ರಿ ಆವಾಸ್​ ಯೋಜನೆ ಅಡಿಯಲ್ಲಿ ಸುಮಾರು 18 ಲಕ್ಷ ಮನೆಗಳು ನಿರ್ಮಾಣವಾಗಿವೆ ಎಂದು ತಿಳಿದು ಬಂದಿದೆ. ಕೊರೋನಾ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಮನೆಗಳನ್ನು ನಿರ್ಮಿಸಲು ತೆಗೆದುಕೊಳ್ಳುತ್ತಿದ್ದ ಸಮಯ 125 ದಿನಗಳಿಂದ 45- 65 ದಿನಗಳಿಗೆ ಇಳಿಕೆಯಾಗಿದೆ. ಈ ಕುರಿತು ಪ್ರಧಾನಿ ಮೋದಿ ಇತ್ತೀಚೆಗೆ ಬಡತನ ಎಂಬ ಪಿಡುಗನ್ನು ಕೊನೆಗಾಣಿಸಲು ಬಡವರನ್ನು ಬಲಪಡಿಸುವ ಅವಶ್ಯಕತೆ ಎಂದು ಹೇಳಿದ್ದರು. ಪಿಎಂಎವೈ ಗ್ರಾಮೀಣ ಯೋಜನೆಯಡಿ ಮಧ್ಯಪ್ರದೇಶದ ಗ್ರಾಮೀಣ ಪ್ರದೇಶಗಳಲ್ಲಿ ನಿರ್ಮಿಸಲಾಗಿದ್ದ 1.75 ಲಕ್ಷ ಮನೆಗಳ ಗೃಹಪ್ರವೇಶ ಸಮಾರಂಭದಲ್ಲಿ ಮೋದಿ ಮಾತನಾಡಿದ್ದರು.  ಪಿಎಂಎವೈ ಯೋಜನೆಯಡಿ ಮನೆಗಳನ್ನು ನಿರ್ಮಿಸಲು ಈ ಮೊದಲು 125 ದಿನಗಳ ಸಮಯ ಬೇಕಿತ್ತು. ಆದರೆ ಈಗ ಕೊರೋನಾ ಮತ್ತು ಲಾಕ್​ಡೌನ್ ಕಾರಣದಿಂದಾಗಿ 45-60 ದಿನಗಳಿಗೆ ಈ ಅವಧಿ ಇಳಿದಿದೆ. ಇದು ಬಿಕ್ಕಟ್ಟನ್ನು ಅವಕಾಶವಾಗಿ ಪರಿವರ್ತಿಸುವ ಒಂದು ಉದಾಹರಣೆ ಎಂದು ಮೋದಿ ಹೇಳಿದ್ದರು.

ಕೊರೋನಾ ವೈರಸ್​ ಮತ್ತು ಲಾಕ್​ಡೌನ್​ ಸಮಯದಲ್ಲಿ ಮನೆಗೆ ಮರಳಿದ ವಲಸೆ ಕಾರ್ಮಿಕರು ಈ ಕೆಲಸಕ್ಕೆ ಸೇರಿಕೊಂಡರು. ಜೊತೆಗೆ ಗರೀಬ್ ಕಲ್ಯಾಣ್​ ರೋಜ್​ಗಾರ್​ ಅಭಿಯಾನದ ಪ್ರಯೋಜನಗಳನ್ನು ಪಡೆದರು. ಇದರ ಅಡಿಯಲ್ಲಿ ಮೂಲ ಸೌಕರ್ಯ ಮತ್ತು ಇತರೆ ಕೆಲಸಗಳಿಗಾಗಿ 23 ಸಾವಿರ ಕೋಟಿ ಖರ್ಚು ಮಾಡಲಾಗಿದೆ. ಈ ಅಭಿಯಾನವು ಗ್ರಾಮೀಣ ಆರ್ಥಿಕತೆಯ ಅಭಿವೃದ್ದಿಗೆ ಸಹಕಾರಿಯಾಗಿದೆ ಎಂದು ಮೋದಿ ಅಭಿಪ್ರಾಯಪಟ್ಟಿದ್ದರು.

B Sriramulu: ತಮ್ಮನ್ನು ಡಿಸಿಎಂ ಮಾಡುವಂತೆ ದುರ್ಗಾ ಮಾತೆಗೆ ಪತ್ರ ಬರೆದ ಸಚಿವ ಶ್ರೀರಾಮುಲು!

ಲಾಕ್​ಡೌನ್ ಕಾರಣದಿಂದಾಗಿ ವಲಸೆ ಕಾರ್ಮಿಕರು ತಮ್ಮ ಮನೆಗಳಿಗೆ ತೆರಳಿ ಬೇರೆ ಕೆಲಸ ಹುಡುಕಲು ಶುರು ಮಾಡಿದರು. ಈ ವೇಳೆ ಅವರು ಗರೀಬ್ ಕಲ್ಯಾಣ್​ ರೋಜ್​ಗಾರ್​ ಯೋಜನೆಯಡಿ ಪ್ರಯೋಜನಗಳನ್ನು ಪಡೆದರು. ಈ ಕಾರಣದಿಂದಾಗಿ ಲಾಕ್​ಡೌನ್​ ಸಮಯಲ್ಲಿ 18 ಲಕ್ಷ ಮನೆಗಳು ನಿರ್ಮಾಣವಾಗಲು ಸಾಧ್ಯವಾಯಿತು.

ಈ ಹಿಂದೆ ಮನೆಗಳ ಗುಣಮಟ್ಟ ಕಳಪೆಯಾಗಿತ್ತು. ಜೊತೆಗೆ ಜನರಿಗೆ ಮೂಲಭೂತ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿತ್ತು. ಹೀಗಾಗಿಯೇ ಜನರು ಆ ಮನೆಗಳತ್ತ ಮುಖ ಮಾಡಿರಲಿಲ್ಲ. ಈ ಹಿಂದಿನ ಸರ್ಕಾರ ಬಡವರಿಗೆ ಉತ್ತಮ ಗುಣಮಟ್ಟದ ಮನೆಗಳನ್ನು ನಿರ್ಮಿಸುವಲ್ಲಿ ವಿಫಲವಾಗಿದೆ ಎಂದು ಮೋದಿ ಕಾಂಗ್ರೆಸ್​ ಸರ್ಕಾರದ ಆಡಳಿತವನ್ನು ಟೀಕಿಸಿದ್ದರು.
Youtube Video

ಈ ಮೊದಲು ಬಡವರ ಮನೆಗಳಿಗೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆ ದೆಹಲಿಯಲ್ಲಿ ಕೇಂದ್ರೀಕೃತವಾಗಿತ್ತು. ಫಲಾನುಭವಿಗಳು ಯಾರೂ ಸಹ ಈ ಪ್ರಕ್ರಿಯೆಯಲ್ಲಿ ಭಾಗಿಯಾಗಿಲ್ಲ. ಆಗ ಸರ್ಕಾರದ ಹಸ್ತಕ್ಷೇಪ ಮತ್ತು ಪಾರದರ್ಶಕತೆಯ ಕೊರತೆ ಇತ್ತು. ಆ ಮನೆಗಳಲ್ಲಿ ವಾಸಿಸಬೇಕಾದ ಫಲಾನುಭವಿಗಳನ್ನು ಅವರ ಅವಶ್ಯಕತೆಗಳ ಬಗ್ಗೆ ಕೇಳುತ್ತಿರಲಿಲ್ಲ ಎಂದು ಮೋದಿ ಗಂಭೀರ ಆರೋಪ ಮಾಡಿದ್ದಾರೆ.
Published by: Latha CG
First published: September 18, 2020, 2:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories