ಹರಿಯಾಣದಲ್ಲಿ ಪ್ರಸಕ್ತ ಶೈಕ್ಷಣಿಕ ಅಧಿವೇಶನ ಪ್ರಾರಂಭವಾಗಿ, ಸುಮಾರು ಮೂರು ತಿಂಗಳಾಗಿದ್ದರೂ, ಖಾಸಗಿ ಶಾಲೆಗಳ 12.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾತಿ ಪಡೆದಿಲ್ಲ ಎಂಬ ನಿರ್ದೇಶನವನ್ನು ಶಾಲಾ ಶಿಕ್ಷಣ ನಿರ್ದೇಶನಾಲಯವು , ಜಿಲ್ಲಾ ಅಧಿಕಾರಿಗಳಿಗೆ ಕಳುಹಿಸಿದ್ದು, ಅವರೆಲ್ಲಾ ಶಾಲೆ ತೊರೆಯಬಹುದು ಎಂಬ ಆತಂಕ ವ್ಯಕ್ತಪಡಿಸಿದೆ. ಹರಿಯಾಣ ಶಿಕ್ಷಣ ಇಲಾಖೆಗೆ, ಖಾಸಾಗಿ ಶಾಲೆಗಳು ಸಲ್ಲಿಸಿರುವ ದತ್ತಾಂಶಗಳ ಪ್ರಕಾರ, 2021-22 ರ ಜೂನ್ನಲ್ಲಿ 17.31 ಲಕ್ಷ ಶಾಲೆಗೆ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಹೋದ ವರ್ಷ ಈ ಸಂಖ್ಯೆ 29.83 ಲಕ್ಷ ಇತ್ತು.
ಹರಿಯಾಣ ಶಿಕ್ಷಣ ಇಲಾಖೆಗೆ, ಖಾಸಾಗಿ ಶಾಲೆಗಳು ಸಲ್ಲಿರುವ ದತ್ತಾಂಶಗಳ ಪ್ರಕಾರ, 2021-22 ರ ಜೂನ್ನಲ್ಲಿ 17.31 ಲಕ್ಷ ಶಾಲೆಗೆ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಹೋದ ವರ್ಷ ಈ ಸಂಖ್ಯೆ 29.83 ಲಕ್ಷ ಇತ್ತು. ಹರಿಯಾಣದಲ್ಲಿ 14,500 ಸರಕಾರಿ ಶಾಲೆಗಳು ಮತ್ತು 8,900 ಖಾಸಗಿ ಶಾಲೆಗಳು ಇವೆ.
ಖಾಸಗಿ ಶಾಲೆಗಳ ಕೆಲವು ಮಕ್ಕಳು ಬಹುಶಃ ಶುಲ್ಕದ ಸಮಸ್ಯೆಯಿಂದ ದಾಖಲಾಗಿಲ್ಲ ಮತ್ತು ಕೆಲವು ಮಕ್ಕಳು ಸರ್ಕಾರಿ ಶಾಲೆಗೆ ಸೇರಿದ್ದಾರೆ, ಕೆಲವರಿಗೆ ಆನ್ಲೈನ್ ತರಗತಿಗೆ ಸೇರುವ ಸೌಲಭ್ಯ ಇಲ್ಲದೆ ಇರುವುದರಿಂದ ದಾಖಲಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಗ್ರಾಮೀಣ ಭಾಗದ ಮಕ್ಕಳಿಗೆ ಬಹುಶಃ ಶಾಲೆ ಸೇರುವುದು ಕಷ್ಟವಾಗಿದೆ. ಬಹಳಷ್ಟು ಜನ ಸಾಂಕ್ರಮಿಕ ರೋಗದ ಸಂದರ್ಭದಲ್ಲಿ ಕೆಲಸ ಕಳೆದುಕೊಂಡಿರುವುದು ಕೂಡ ಇದಕ್ಕೆ ಒಂದು ಕಾರಣ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹರಿಯಾಣದ ಶಿಕ್ಷಣ ಸಚಿವ ಕನ್ವರ್ಪಾಲ್ ಗುರ್ಜರ್ , ಈ ವರ್ಷ ಮತ್ತು ಕಳೆದ ವರ್ಷದ ಶಾಲಾ ದಾಖಲಾತಿಯ ನಡುವೆ ಇರುವ ದೊಡ್ಡ ಅಂತರ’ವನ್ನು ಕಂಡು ತಮಗೆ ಅಚ್ಚರಿಯಾಗಿದೆ ಎಂದು ಹೇಳಿದ್ದು, “ಈ ವಿಷಯದ ಬಗ್ಗೆ ನಾವು ಪರಿಶೀಲನೆ ನಡೆಸುತ್ತೇವೆ” ಎಂದು ಹೇಳಿದ್ದಾರೆ. ಖಾಸಗಿ ಶಾಲಾ ಮಾಲೀಕರ ಪ್ರಕಾರ, ಈ ಬಾರಿ ಶಾಲೆಗೆ ಮರಳದ ಮಕ್ಕಳಲ್ಲಿ ಕೆಲವರು , ಕೆಲಸ ಸಿಗದೆ ತಮ್ಮ ಊರಿಗೆ ಮರಳಿರುವ ವಲಸೆ ಕುಟುಂಬದ ಮಕ್ಕಳು.
ಸಾಮಾಜಿಕ ಮಾಧ್ಯಮದಲ್ಲಿ ಸರಕಾರಿ ಶಾಲಾ ಶಿಕ್ಷಕರ ಒಂದು ವಿಡಿಯೋ ಹರಿದಾಡುತ್ತಿದೆ. ಆ ವಿಡಿಯೋದಲ್ಲಿ ಕೈತಾಲ್ ಜಿಲ್ಲೆಯ ಬಟ್ಟಾ ಗ್ರಾಮದಲ್ಲಿ, ಶಿಕ್ಷಕರು ಸರಕಾರಿ ಶಾಲೆಗೆ ಸೇರಿಸುವಂತೆ ಧ್ವನಿವರ್ಧಕದಲ್ಲಿ ಹೇಳುತ್ತಾ ಹಳ್ಳಿಯಲ್ಲಿ ಸುತ್ತುಬರುತ್ತಿರುವ ದೃಶ್ಯವಿದೆ. “ಖಾಸಗಿ ಶಾಲೆಗಳ ದುಬಾರಿ ಶುಲ್ಕದಿಂದ ಮುಕ್ತಿ ಪಡೆಯಲು,ನಿಮ್ಮ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಿ. ಈ ಬಾರಿ ನಿಮ್ಮ ಆಯ್ಕೆ ಸರಕಾರಿ ಶಾಲೆ ಆಗಿರಲಿ” ಎಂದು ವಿಡಿಯೋದಲ್ಲಿ 3 ಮಂದಿ ಹೇಳುತ್ತಿರುವುದನ್ನು ಕಾಣಬಹುದು.
“ಪ್ರಸ್ತುತ ಇರುವ ನಿಯಮಾವಳಿಗಳ ಪ್ರಕಾರ, ವಿದ್ಯಾರ್ಥಿ ತಾನು ಓದುತ್ತಿದ್ದ ಸಂಸ್ಥೆಯಿಂದ ಶಾಲೆ ಬಿಡುವ ಪತ್ರ (ಎಸ್ಎಲ್ಸಿ) ಪಡೆಯದೆ ಇನ್ನೊಂದು ಶಾಲೆಗೆ ದಾಖಲಾತಿ ಪಡೆಯುವಂತಿಲ್ಲ.ಆದರೆ ಸರಕಾರ ಈ ನಿಯಮವನ್ನು ನಿರ್ಭೀತಿಯಿಂದ ಉಲ್ಲೇಖಿಸುತ್ತಿದೆ. ವಿದ್ಯಾರ್ಥಿಗಳ ಹತ್ತಿರ ಶಾಲೆ ಬಿಡುವ ಪತ್ರ (ಎಸ್ಎಲ್ಸಿ) ಇರಲಿ, ಇಲ್ಲದಿರಲಿ ಸರಕಾರಿ ಶಾಲೆಗಳು ಅವರನ್ನು ದಾಖಲು ಮಾಡಿಕೊಳ್ಳುತ್ತಿವೆ” ಎಂದು ಹರಿಯಾಣ ಖಾಸಗಿ ಶಾಲೆಗಳ ಅಧ್ಯಕ್ಷ ಕುಲಭೂಷಣ್ ಶರ್ಮಾ ಹೇಳಿದ್ದಾರೆ. ಅವರ ಪ್ರಕಾರ, ಖಾಸಗಿ ಶಾಲೆಗಳ ಅತ್ಯಧಿಕ ಮಂದಿ ಶಿಕ್ಷಕರು ಕೆಲಸ ಕಳೆದುಕೊಂಡಿದ್ದಾರೆ .
ಎಸ್ಎಲ್ಸಿ ವಿಷಯದಲ್ಲಿ ಹಸ್ತಕ್ಷೇಪ ಮಾಡುವಂತೆ, ಇತ್ತೀಚೆಗೆ ರಾಷ್ಟ್ರೀಯ ಸ್ವತಂತ್ರ ಶಾಲೆಗಳ ಒಕ್ಕೂಟ, ಪಂಜಾಬ್ ಮತ್ತು ಹರಿಯಾಣ ಹೈ ಕೋರ್ಟ್ನ್ನು ಕೇಳಿಕೊಂಡಿತು. ಆದರೆ, ಸರಕಾರಿ ಅಧಿಕಾರಿಗಳು, ನಾವು ರೈಟ್ ಟು ಎಜುಕೇಶನ್ ಆ್ಯಕ್ಟ್ಗೆ ಅನುಗುಣವಾಗಿ ಕೆಲಸ ಮಾಡುತ್ತಿದ್ದೇವೆ, ಅದರ ಪ್ರಕಾರ ಯಾವುದೇ ಮಗು 8ನೇ ತರಗತಿ ವರೆಗೆ ಸರಕಾರಿ ಶಾಲೆಗೆ ಸೇರುವುದನ್ನು ತಡೆಯುವಂತಿಲ್ಲ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ