ಅರೆಸೈನಿಕ ಪಡೆಗಳ ಕ್ಯಾಂಟೀನ್​ಗಳಲ್ಲಿ 1000ಕ್ಕೂ ಹೆಚ್ಚು ವಿದೇಶಿ ಉತ್ಪನ್ನಗಳ ಮಾರಾಟ ಸ್ಥಗಿತ

ಸಿಆರ್​ಪಿಎಫ್​, ಬಿಎಸ್​ಎಫ್, ಐಟಿಬಿಪಿ, ಸಿಐಎಸ್​ಎಫ್, ಎಸ್​ಎಸ್​ಬಿ, ಎನ್​ಎಸ್​ಜಿ ಮತ್ತು ಅಸ್ಸಾಂ ರೈಫಲ್ಸ್​ನ 10 ಲಕ್ಷ ಸಿಬ್ಬಂದಿ ಹಾಗೂ 50 ಲಕ್ಷ ಕುಟುಂಬ ಸದಸ್ಯರು ಕೇಂದ್ರೀಯ ಪೊಲೀಸ್ ಕ್ಯಾಂಟೀನ್ ಉತ್ಪನ್ನಗಳನ್ನು ಬಳಸಲಿದ್ದಾರೆ.

ಅರೆಸೈನಿಕ ಪಡೆಯ ಕ್ಯಾಂಟೀನ್. (ಸಂಗ್ರಹ ಚಿತ್ರ)

ಅರೆಸೈನಿಕ ಪಡೆಯ ಕ್ಯಾಂಟೀನ್. (ಸಂಗ್ರಹ ಚಿತ್ರ)

 • Share this:
  ನವದೆಹಲಿ: ಮೈಕ್ರೋಒವನ್ ನಿಂದ ಹಿಡಿದು ಚಪ್ಪಲಿವರೆಗೆ ಮತ್ತು ಟಾಮಿ ಹಿಲ್​ಫಿಗರ್ ಶರ್ಟ್​ನಂತಹ  ಬ್ರಾಂಡೆಡ್​ ಶರ್ಟ್ಸ್​ ಸೇರಿ 1000 ಕ್ಕೂ ಹೆಚ್ಚು ಆಮದು ಉತ್ಪನ್ನಗಳು ಇನ್ನು ಮುಂದೆ ಕೇಂದ್ರೀಯ ಪೊಲೀಸ್ ಕಲ್ಯಾಣ ಭಂಡಾರ (ಕೆಪಿಕೆಬಿ) ಹಾಗೂ ದೇಶಾದ್ಯಂತ ಇರುವ ಅರೆಸೈನಿಕ ಕ್ಯಾಂಟೀನ್​ಗಳಲ್ಲಿ ದೊರೆಯುವುದಿಲ್ಲ. ಜೂನ್ 1ರಿಂದ ಇಲ್ಲಿ ಸ್ವದೇಶಿ ಉತ್ಪನ್ನಗಳು ಮಾತ್ರ ದೊರೆಯಲಿವೆ.

  ಕೆಪಿಕೆಬಿ ಕ್ಯಾಂಟೀನ್​ಗಳಲ್ಲಿ ದೇಶದಲ್ಲಿ ತಯಾರಾದ ಉತ್ಪನ್ನಗಳನ್ನು ಮಾತ್ರ ಮಾರಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದ ಬಳಿಕ ಈ ಬೆಳವಣಿಗೆ ನಡೆದಿದೆ.

  ಇದರಿಂದಾಗಿ ಸ್ಕೇಚೆರ್ಸ್, ಫೆರೆರೊ, ರೆಡ್ ಬುಲ್, ವಿಕ್ಟ್ರೋನೆಕ್ಸ್​, ಸಫೀಲೋ (ಪೊಲಾರೈಡ್ ಕ್ಯಾರೆರಾ) ಸೇರಿ ಏಳು ಕಂಪನಿಗಳಿಂದ ಆಮದು ಮಾಡಿಕೊಳ್ಳುತ್ತಿದ್ದ ಉತ್ಪನ್ನಗಳನ್ನು ತೆಗೆದುಹಾಕಲಾಗಿದೆ.

  ಹಲವು ಕಂಪನಿಗಳ ಉತ್ಪನ್ನಗಳನ್ನು ಅವುಗಳಿಗೆ ಯಾವುದೇ ಮಾಹಿತಿ ನೀಡದ ಕೆಪಿಕೆಬಿ ಸ್ಥಗಿತಗೊಳಿಸಿದೆ.

  ಸಿಆರ್​ಪಿಎಫ್​, ಬಿಎಸ್​ಎಫ್, ಐಟಿಬಿಪಿ, ಸಿಐಎಸ್​ಎಫ್, ಎಸ್​ಎಸ್​ಬಿ, ಎನ್​ಎಸ್​ಜಿ ಮತ್ತು ಅಸ್ಸಾಂ ರೈಫಲ್ಸ್​ನ 10 ಲಕ್ಷ ಸಿಬ್ಬಂದಿ ಹಾಗೂ 50 ಲಕ್ಷ ಕುಟುಂಬ ಸದಸ್ಯರು ಕೇಂದ್ರೀಯ ಪೊಲೀಸ್ ಕ್ಯಾಂಟೀನ್ ಉತ್ಪನ್ನಗಳನ್ನು ಬಳಸಲಿದ್ದಾರೆ.

  ಇದನ್ನು ಓದಿ: ಕೇಂದ್ರದ ತಪ್ಪಿನಿಂದಾಗಿ 560 ಜನ ಮೃತಪಟ್ಟಿದ್ದಾರೆ, ಈ ಸಾವಿಗೆ ಯಾರು ಹೊಣೆ? ಸರ್ಕಾರದ ವಿರುದ್ಧ ಖರ್ಗೆ ಕಿಡಿ

  ಕೆಪಿಕೆಬಿ ಮೂರು ವರ್ಗಗಳಲ್ಲಿ ಉತ್ಪನ್ನಗಳನ್ನು ವಿಂಗಡಿಸಿದೆ. ವರ್ಗ-1ರಲ್ಲಿ ಸಂಪೂರ್ಣವಾಗಿ ಭಾರತದಲ್ಲಿ ತಯಾರಾದ ಉತ್ಪನ್ನಗಳು, ವರ್ಗ- ರಲ್ಲಿ ಕಚ್ಛಾ ಪದಾರ್ಥಗಳನ್ನು ಆಮದು ಮಾಡಿಕೊಂಡು, ಅವುಗಳಿಂದ ಭಾರತದಲ್ಲಿ ತಯಾರಿಸಿದ ಉತ್ಪನ್ನಗಳು ಹಾಗೂ ವರ್ಗ- 3ರಲ್ಲಿ ಸಂಪೂರ್ಣವಾಗಿ ಆಮದು ಮಾಡಿಕೊಂಡ ಉತ್ಪನ್ನಗಳು. ವರ್ಗ 1 ಮತ್ತು ವರ್ಗ 2ರ ಉತ್ಪನ್ನಗಳನ್ನು ಕೆಪಿಕೆಬಿ ಕ್ಯಾಂಟೀನ್​ಗಳಲ್ಲಿ ಮಾರಾಟ ಮಾಡಲು ತೀರ್ಮಾನಿಸಲಾಗಿದೆ. ಕ್ಯಾಟಗರಿ-3ರಲ್ಲಿ ಬರುವ ಉತ್ಪನ್ನಗಳ ಮಾರಾಟವನ್ನು ಜೂನ್ 1ರಿಂದ ಕೈಬಿಡಲಾಗಿದೆ.
  First published: