• ಹೋಂ
 • »
 • ನ್ಯೂಸ್
 • »
 • ದೇಶ-ವಿದೇಶ
 • »
 • ಅಮೆರಿಕದ ಟೆಕ್ಸಾಸ್​ನಲ್ಲಿ 100ಕ್ಕೂ ಹೆಚ್ಚು ಕಾರುಗಳ ಸರಣಿ ಅಪಘಾತ: 6ಕ್ಕೂ ಹೆಚ್ಚು ಮಂದಿ ಸಾವು

ಅಮೆರಿಕದ ಟೆಕ್ಸಾಸ್​ನಲ್ಲಿ 100ಕ್ಕೂ ಹೆಚ್ಚು ಕಾರುಗಳ ಸರಣಿ ಅಪಘಾತ: 6ಕ್ಕೂ ಹೆಚ್ಚು ಮಂದಿ ಸಾವು

ಟೆ್ಕ್ಸಾಸ್​ನ ಫೋರ್ಟ್ ವರ್ತ್​ನಲ್ಲಿ ನಡೆದ ಸರಣಿ ಅಪಘಾತ

ಟೆ್ಕ್ಸಾಸ್​ನ ಫೋರ್ಟ್ ವರ್ತ್​ನಲ್ಲಿ ನಡೆದ ಸರಣಿ ಅಪಘಾತ

ಅಮೆರಿಕದ ಟೆಕ್ಸಾಸ್ ರಾಜ್ಯದ ಫೋರ್ಟ್ ವರ್ತ್ ನಗರದಲ್ಲಿ ಮಂಜಿನ ಮಳೆಯಿಂದ ಹಾಳಾಗಿದ್ದ ಫ್ರೀವೇ ರಸ್ತೆಯಲ್ಲಿ 130 ಕಾರುಗಳು ಸರಣಿ ಅಪಘಾತಗೊಳಗಾಗಿದ್ದು 3 ಮಂದಿ ಮೃತಪಟ್ಟು 65ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

 • News18
 • 3-MIN READ
 • Last Updated :
 • Share this:

ಟೆಕ್ಸಾಸ್: ಅಮೆರಿಕದ ಟೆಕ್ಸಾಸ್ ರಾಜ್ಯದ ಫೋರ್ಟ್ ವರ್ತ್ ನಗರದ ಫ್ರೀವೇ ರಸ್ತೆಯಲ್ಲಿ ನಡೆದ ಸರಣಿ ವಾಹನ ಅಪಘಾತದಲ್ಲಿ ಕನಿಷ್ಠ ಆರು ಜನರು ಮೃತಪಟ್ಟಿದ್ದಾರೆ ಎಂದು ಇಲ್ಲಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಐ -35 ನಲ್ಲಿ ಬೆಳಗ್ಗೆ 6 ಗಂಟೆಗೆ (ಅಮೆರಿಕ ಕಾಲಮಾನ) ಸಂಭವಿಸಿದೆ ಎನ್ನಲಾದ ಈ ಅಪಘಾತದಲ್ಲಿ 100 ಕ್ಕೂ ಹೆಚ್ಚು ವಾಹನಗಳು ಭಾಗಿಯಾಗಿದ್ದು, ಅನೇಕ ಜನರು ಜಖಂಗೊಂಡ ತಮ್ಮ ಕಾರುಗಳಲ್ಲಿ ಸಿಕ್ಕಿಬಿದ್ದಿದ್ದಾರೆ ಎಂದು ಅಗ್ನಿಶಾಮಕ ಇಲಾಖೆ ತಿಳಿಸಿದೆ. ಅಪಘಾತದಲ್ಲಿ ಅರವತ್ತೈದು ಜನರು ಗಾಯಗೊಂಡಿದ್ದಾರೆ ಎಂದು ಎಬಿಸಿ ನ್ಯೂಸ್ ವರದಿ ಮಾಡಿದೆ.


ಗಂಭೀರ ಸ್ಥಿತಿಯಲ್ಲಿದ್ದ ಮೂವರು ಸೇರಿದಂತೆ 36 ಜನರನ್ನು ಘಟನಾ ಸ್ಥಳದಿಂದ ಆಂಬುಲೆನ್ಸ್ ಮೂಲಕ ಸಾಗಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಲವಾರು ರೋಗಿಗಳಿಗೆ ಸ್ಥಳದಲ್ಲೇ ಚಿಕಿತ್ಸೆ ನೀಡಿ ಕಳುಹಿಸಲಾಗಿದೆ. ಅಪಘಾತಕ್ಕೀಡಾಗಿದ್ದ ಇನ್ನೂ ಕೆಲವರು ತಾವಾಗೇ ಸ್ಥಳದಿಂದ ಹೊರ ನಡೆದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿರುವುದು ತಿಳಿದುಬಂದಿದೆ.


ಇದನ್ನೂ ಓದಿ: CoronaVirus: ಕೋವಿಡ್​ನಿಂದ ಬದುಕುಳಿದ 116 ವರ್ಷದ ಫ್ರೆಂಚ್ ಸನ್ಯಾಸಿನಿ: ಯುರೋಪಿನ ಅತಿ ಹಿರಿಯ ವ್ಯಕ್ತಿ


ಹೆಚ್ಚು ಮಂಜು ಆವರಿಸಿದ್ದು ಈ ಅವಘಡಕ್ಕೆ ಕಾರಣ ಎಂದು ಶಂಕಿಸಲಾಗಿದೆ. ಹಿಮ ಮಳೆಯಿಂದಾಗಿ ಇಲ್ಲಿಯ ರಸ್ತೆ ವಾಹನ ಚಾಲನೆ ಅಸಾಧ್ಯವೆನ್ನುವಂತಾಗಿತ್ತು ಎಂದು ಇಲ್ಲಿಯ ಮಾಧ್ಯಮ ವರದಿಗಳು ತಿಳಿಸಿವೆ.


ಈ ಸಂಬಂಧ ಫೋರ್ಟ್ ವರ್ತ್ ಮೇಯರ್ ಬೆಟ್ಸಿ ಪ್ರೈಸ್ ಟ್ವೀಟ್ ಮಾಡಿದ್ದು, “ಇವತ್ತಿನ ಅಪಘಾತದಿಂದ ಆಗಿರುವ ನಷ್ಟವನ್ನ ಅಂದಾಜು ಮಾಡುತ್ತಿರುವಂತೆಯೇ ನಮ್ಮ ಸಮುದಾಯಕ್ಕಾಗಿ ನನ್ನ ಹೃದಯ ಮಿಡಿಯುತ್ತಿದೆ. ನಮ್ಮ ಸಮುದಾಯವು ನೆರವಿನ ಹಸ್ತ ಚಾಚಲು ಬಯಸುತ್ತಿದೆ. ಯಾವ ರೀತಿ ಸಹಾಯ ಮಾಡಬಹುದು ಎಂದು ನಿಮ್ಮಲ್ಲಿ ಹಲವರು ಕೇಳುತ್ತಿದ್ದಾರೆ” ಎಂದಿದ್ದಾರೆ. ಹಾಗೆಯೇ, “ಸದ್ಯಕ್ಕೆ ಅಪಘಾತಗೊಂಡವರು, ಅವರ ಕುಟುಂಬದವರಿಗೆ ನಿಮ್ಮ ಪ್ರಾರ್ಥನೆ ಅಗತ್ಯ ಇದೆ” ಎಂದೂ ಅವರು ಟ್ವೀಟ್ ಮಾಡಿದ್ದಾರೆ.


ಇದನ್ನೂ ಓದಿ: ಐಷಾರಾಮಿ ಹೋಟೆಲ್‌ಗೆ ಎಂಟ್ರಿ ಕೊಟ್ಟ ಸಿಂಹ...!; ವಿಡಿಯೋ ಸಖತ್ ವೈರಲ್


ಅಮೆರಿಕ ಇತಿಹಾಸದಲ್ಲೇ ಅತಿಘೋರ ಮೂರು ಮಾರಣಾಂತಿಕ ಅಂತರರಾಜ್ಯ ಅಪಘಾತಗಳು ಸಂಭವಿಸಿ ದಶಕಗಳೇ ಕಳೆದಿವೆ.


* ಮೇ 14, 1988 ರಂದು, ಕೆಂಟುಕಿಯ ಕ್ಯಾರೊಲ್ಟನ್ ಬಳಿ ಕುಡಿದು ಚಾಲಕ 24 ಮಕ್ಕಳು ಸೇರಿದಂತೆ 27 ಜನರು ಬಲಿಯಾಗಿದ್ದರು.


* ಇದೇ ರೀತಿ, ಡಿಸೆಂಬರ್ 11, 1990 ರಂದು, ಟೆನ್ನೆಸ್ಸೀಯ ಕ್ಯಾಲ್ಹೌನ್ನಲ್ಲಿ ಇಂಟರ್ಸ್ಟೇಟ್ 75 ರಲ್ಲಿ ಮಂಜು ಅಪಘಾತಕ್ಕೆ ಕಾರಣವಾಯಿತು. ಇದರಲ್ಲಿ 12 ಜನರು ಮೃತಪಟ್ಟಿದ್ದರು.

top videos


  * ನವೆಂಬರ್ 29, 1991 ರಂದು, ಕ್ಯಾಲಿಫೋರ್ನಿಯಾದ ಕೋಲಿಂಗಾ ಬಳಿ ಇಂಟರ್​ಸ್ಟೇಟ್ 5 ರಲ್ಲಿ ಒಂದು ಕುರುಡು ಧೂಳಿನ ಚಂಡಮಾರುತವು ಅಪಘಾತಕ್ಕೆ ಕಾರಣವಾಯಿತು, 17 ಜನರು ಸಾವನ್ನಪ್ಪಿದರು.

  First published: