ದೆಹಲಿಯಲ್ಲಿ ಆಮ್ ಆದ್ಮಿ ಗೆಲುವು ಸಾಧಿಸಿದ 24 ಗಂಟೆಯಲ್ಲಿ ಪಕ್ಷಕ್ಕೆ ಹೊಸದಾಗಿ 1 ದಶಲಕ್ಷ ಜನ ಸೇರ್ಪಡೆ

ದೆಹಲಿ ಗದ್ದುಗೆಗೆ ಏರಲು ಬಿಜೆಪಿ ತನ್ನ ಎಲ್ಲಾ ಬಲಗಳನ್ನೂ ಉಪಯೋಗಿಸಿತ್ತು. 300ಕ್ಕೂ ಹೆಚ್ಚು ಸಂಸದರು ಪ್ರಚಾರಕ್ಕಾಗಿ ರಸ್ತೆಗೆ ಇಳಿದಿದ್ದರು. ಇನ್ನೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಸಹ ಹಲವೆಡೆ ಪ್ರಚಾರ ರ್ಯಾಲಿ ನಡೆಸಿದ್ದರು. ಈ ಹೈವೋಲ್ಟೇಜ್ ಅಭಿಯಾನದ ನಡುವೆಯೂ ದೆಹಲಿಯಲ್ಲಿ ತನ್ನ ಅಧಿಕಾರವನ್ನು ಉಳಿಸಿಕೊಳ್ಳುವಲ್ಲಿ ಆಮ್ ಆದ್ಮಿ ಸಫಲವಾಗಿತ್ತು.

ಎಎಪಿ ಕಾರ್ಯಕರ್ತರ ದೆಹಲಿ ಗೆಲುವಿನ ಸಂಭ್ರಮಾಚರಣೆ.

ಎಎಪಿ ಕಾರ್ಯಕರ್ತರ ದೆಹಲಿ ಗೆಲುವಿನ ಸಂಭ್ರಮಾಚರಣೆ.

  • Share this:
ನವ ದೆಹಲಿ (ಫೆಬ್ರವರಿ 13); ಅರವಿಂದ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಅಭುತಪೂರ್ವ ಗೆಲುವು ದಾಖಲಿಸುತ್ತಿದ್ದಂತೆ ಕಳೆದ 24 ಗಂಟೆಯ ಒಳಗಾಗಿ ದೇಶದಾದ್ಯಂತ ಸುಮಾರು ಒಂದು ದಶ ಲಕ್ಷಕ್ಕೂ ಹೆಚ್ಚು ಜನ ಆಮ್ ಆದ್ಮಿ ಪಕ್ಷಕ್ಕೆ ಹೊಸದಾಗಿ ಸೇರ್ಪಡೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಕುರಿತು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಟ್ವಿಟ್ ಮೂಲಕ ಮಾಹಿತಿ ನೀಡಿರುವ ಆಮ್ ಆದ್ಮಿ ಪಕ್ಷ, “ನಮ್ಮ ಪಕ್ಷದ ಭಾರೀ ವಿಜಯದ ನಂತರ ಕಳೆದ 24 ಗಂಟೆಯಲ್ಲಿ ದೇಶದಾದ್ಯಂತ ಸುಮಾರು 1 ದಶ ಲಕ್ಷಕ್ಕೂ ಅಧಿಕ ಜನ ಎಎಪಿಗೆ ಹೊಸದಾಗಿ ಸೇರ್ಪಡೆಯಾಗಿದ್ದಾರೆ” ಎಂದು ಮಾಹಿತಿ ನೀಡಿದೆ.70 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ದೆಹಲಿಯಲ್ಲಿ 62 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಆಮ್ ಆದ್ಮಿ ಪಕ್ಷ ಸತತಲ ಮೂರನೇ ಬಾರಿಗೆ ದೆಹಲಿ ಗದ್ದುಗೆಗೆ ಏರಿದೆ. ದೆಹಲಿ ಗದ್ದುಗೆಗೆ ಏರಲು ಬಿಜೆಪಿ ತನ್ನ ಎಲ್ಲಾ ಬಲಗಳನ್ನೂ ಉಪಯೋಗಿಸಿತ್ತು. 300ಕ್ಕೂ ಹೆಚ್ಚು ಸಂಸದರು ಪ್ರಚಾರಕ್ಕಾಗಿ ರಸ್ತೆಗೆ ಇಳಿದಿದ್ದರು. ಇನ್ನೂ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಸಹ ಹಲವೆಡೆ ಪ್ರಚಾರ ರ್ಯಾಲಿ ನಡೆಸಿದ್ದರು. ಈ ಹೈವೋಲ್ಟೇಜ್ ಅಭಿಯಾನದ ನಡುವೆಯೂ ದೆಹಲಿಯಲ್ಲಿ ತನ್ನ ಅಧಿಕಾರವನ್ನು ಉಳಿಸಿಕೊಳ್ಳುವಲ್ಲಿ ಆಮ್ ಆದ್ಮಿ ಸಫಲವಾಗಿತ್ತು.

ಇಷ್ಟೆಲ್ಲಾ ಪ್ರಚಾರ ನಡೆಸಿದ ಹೊರತಾಗಿಯೂ ಬಿಜೆಪಿ ಕೇವಲ 8 ಸ್ಥಾನಗಳಿಗೆ ಮಾತ್ರ ಸೀಮಿತವಾಗಿದೆ. ದೆಹಲಿಯಲ್ಲಿ ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿದ್ದು ಹಾಗೂ ಕುಡಿಯುವ ನೀರು, ವಿದ್ಯುತ್, ಶಿಕ್ಷಣ, ವೈದ್ಯಕೀಯ ಸೌಲಭ್ಯ ಸೇರಿದಂತೆ ಮೂಲಭೂತ ಸೌಲಭ್ಯಗಳ ಕಡೆಗೆ ಹೆಚ್ಚು ಗಮನವಹಿಸಿದ್ದು ಅರವಿಂದ ಕೇಜ್ರಿವಾಲ್ ಅವರ ಗೆಲುವಿಗೆ ಮುಖ್ಯ ಕಾರಣ ಎನ್ನಲಾಗುತ್ತಿದೆ.

ಇದೇ ಫೆಬ್ರವರಿ 16ರ ಭಾನುವಾರ 51 ವರ್ಷದ ಅರವಿಂದ ಕೇಜ್ರಿವಾಲ್ ಮೂರನೇ ಬಾರಿಗೆ ದೆಹಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಮಲೀಲಾ ಮೈದಾನದಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ ಯಾವುದೇ ರಾಜ್ಯದ ಮುಖ್ಯಮಂತ್ರಿಗಳಾಗಲಿ ಅಥವಾ ಇತರೆ ರಾಜ್ಯಗಳ ರಾಜಕೀಯ ಮುಖಂಡರುಗಳಾಗಲಿ ಭಾಗವಹಿಸುವುದಿಲ್ಲ ಎಂದು ಪಕ್ಷದ ಹಿರಿಯ ಮುಖಂಡ ಗೋಪಾಲ್ ರೈ ತಿಳಿಸಿದ್ದಾರೆ.

ಇದನ್ನೂ ಓದಿ : ಸರೋಜಿನಿ ಮಹಿಷಿ ವರದಿ ಜಾರಿಗೆ ಆಗ್ರಹಿಸಿ ಬಂದ್; ಇಷ್ಟಕ್ಕೂ ವರದಿಯಲ್ಲಿನ ಶಿಫಾರಸ್ಸುಗಳೇನು? ಕನ್ನಡಿಗರಿಗೇನು ಲಾಭ?
First published: