HOME » NEWS » National-international » OUTRAGE AGAINST PETROL PRICE HIKE PEOPLE IN TELANGANA PROTESTING THROWING THEIR BIKES INTO THE LAKE MAK

ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಆಕ್ರೋಶ; ಬೈಕನ್ನು ಕೆರೆಗೆ ಎಸೆದು ಪ್ರತಿಭಟಿಸಿದ ತೆಲಂಗಾಣದ ಜನ

ಹೈದ್ರಾಬಾದ್‌ ನ ಯುವ ಕಾಂಗ್ರೆಸ್‌ ಘಟಕವು ಪೆಟ್ರೋಲ್‌ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆಯನ್ನು ತೀವ್ರಗೊಳಿಸಿ ಸಮೀಪದ ಹುಸೇನ್‌ ಸಾಗರ್‌ ಸರೋವರಕ್ಕೆ ದ್ವಿ ಚಕ್ರವಾಹನವೊಂದನ್ನು ಎಸೆದಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ

news18-kannada
Updated:June 13, 2021, 11:18 PM IST
ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಆಕ್ರೋಶ; ಬೈಕನ್ನು ಕೆರೆಗೆ ಎಸೆದು ಪ್ರತಿಭಟಿಸಿದ ತೆಲಂಗಾಣದ ಜನ
ಬೈಕನ್ನು ಕೆರೆಗೆ ಎಸೆದು ಪ್ರತಿಭಟಿಸುತ್ತಿರುವ ಜನ.
  • Share this:
ತೆಲಂಗಾಣ: ಕೊರೋನಾ ಮತ್ತು ಲಾಕ್​ಡೌನ್​ ಸಮಸ್ಯೆಯ ನಡುವೆಯೂ ಪೆಟ್ರೋಲ್ ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ತೈಲ ಬೆಲೆ ಏರಿಕೆ ದಿನೋಪ ಯೋಗಿ ವಸ್ತುಗಳ ಬೆಲೆ ಏರಿಕೆಗೂ ಕಾರಣವಾಗಿದ್ದು, ಜನ ಸಾಮಾನ್ಯರು ಸಂಕಷ್ಟ ಎದುರಿಸುವಂತಾಗಿದೆ. ಪೆಟ್ರೋಲ್ ಬೆಲೆ ದೇಶದಲ್ಲಿ ಈಗಾಗಲೇ 100 ರೂ ಗಡಿ ದಾಟಿ ದೇಶದ ಅನೇಕ ಕಡೆ 110 ರೂ ವರೆಗೆ ತಲುಪಿದೆ. ಪೆಟ್ರೋಲ್‌ ಡಿಸೇಲ್‌ ಬೆಲೆ ಏರಿಕೆ ವಿರುದ್ಧ ದೇಶದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. 100 ನಾಟೌಟ್‌ ಹೆಸರಿನಲ್ಲಿ ಕಾಂಗ್ರೆಸ್‌ ಕೂಡ ರಾಜ್ಯದಲ್ಲಿ ಪ್ರತಿಭಟನೆ ನಡೆಸಿದೆ. ಆದರೆ ವಿನೂತನ ಅಥವಾ ವಿಚಿತ್ರ ಎನ್ನುವ ರೀತಿಯಲ್ಲಿ ಹೈದರಾಬಾದ್‌ನಲ್ಲಿ ಪ್ರತಿಭಟನೆಯೊಂದು ನಡೆದಿದೆ. ಅದರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ.

ಈ ನಡುವೆ ತೆಲಂಗಾಣದ ಯುವ ಕಾಂಗ್ರೆಸ್‌ ಕಾರ್ಯಕರ್ತರು ಸಾಮಾಜಿಕ ಜಾಲತಾಣದಲ್ಲಿ ಪೆಟ್ರೋಲ್‌ ಬೆಲೆ ಹೆಚ್ಚಳದ ಪ್ರತಿಭಟನೆಯ ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ. ತೆಲಂಗಾಣ ಯುವ ಕಾಂಗ್ರೆಸ್‌ ಕಾರ್ಯಕರ್ತರು ದ್ವಿ ಚಕ್ರ ವಾಹನವೊಂದನ್ನು ಕೆರೆಗೆ ಎಸೆಯುವ ಮೂಲಕ ಪೆಟ್ರೋಲ್‌ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಹೈದ್ರಾಬಾದ್‌ ನ ಯುವ ಕಾಂಗ್ರೆಸ್‌ ಘಟಕವು ಪೆಟ್ರೋಲ್‌ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆಯನ್ನು ತೀವ್ರಗೊಳಿಸಿ ಸಮೀಪದ ಹುಸೇನ್‌ ಸಾಗರ್‌ ಸರೋವರಕ್ಕೆ ದ್ವಿ ಚಕ್ರವಾಹನವೊಂದನ್ನು ಎಸೆದಿದ್ದಾರೆ. ಈ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ

ಇದನ್ನೂ ಓದಿ: Petrol Price: ಪೆಟ್ರೋಲ್‌ ದರ ಹೆಚ್ಚಳಕ್ಕೆ ಕಾರಣವೇನು?; ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಸ್ಪಷ್ಟನೆ!ಈ ಪ್ರತಿಭಟನೆಯ ಸಂದರ್ಭದಲ್ಲಿ ತೆಲೆಂಗಾಣ ಕಾಂಗ್ರೆಸ್‌ನ ಹಿರಿಯ ನಾಯಕರಾದ ಎನ್‌. ಉತ್ತಮಕುಮಾರ್‌ ರೆಡ್ಡಿ, ರವೀಶ್‌ಕುಮಾರ್‌ ರೆಡ್ಡಿ ಸೇರಿ ಹಲವರು ಉಪಸ್ಥಿತರಿದ್ದರು. ಕಾಂಗ್ರೆಸ್‌ ದೇಶಾದ್ಯಂತ ತೈಲ ಬೆಲೆ ಏರಿಕೆ ವಿರುದ್ಧ ಪ್ರತಿುಭಟನೆ ಹಮ್ಮಿಕೊಂಡಿದೆ. ಅದರ ಭಾಗವಾಗಿ ಈ ಬೈಕ್‌ ಎಸೆದು ಆಕ್ರೋಶ ಹೊರಹಾಕಿದ್ದೇವೆ ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ.

ಇದನ್ನೂ ಓದಿ: ಲಾಂಗ್ ಕೋವಿಡ್ ಅಂದರೆ ಏನು..? ಆ್ಯಸಿಡಿಟಿ, ಹಸಿವಿನ ಕೊರತೆಯನ್ನು ಏಕೆ ನಿರ್ಲಕ್ಷಿಸಬಾರದು?; ಇಲ್ಲಿದೆ ಮಾಹಿತಿ

ಕೆರೆಗೆ ಬೈಕ್‌ ಎಸೆದಿರುವುದು ಸರಿಯಲ್ಲ. ನದಿ, ಕೆರೆಗಳಿಗೆ ತ್ಯಾಜ್ಯವನ್ನು ಎಸೆಯುವುದರಿಂದ ಪರಿಸರಕ್ಕೆ ಹಾನಿಯಾಗಲಿದೆ. ಬೇರೆ ರೀತಿಯಲ್ಲಿ ಪೆಟ್ರೋಲ್‌ ವಾಹನಗಳ ಬದಲಿಗೆ ಸೈಕಲ್‌ ಬಳಕೆ ಆರಂಭಿಸಿ ಬೆಲೆ ಏರಿಕೆ ವಿರುದ್ಧ ಪ್ರತಿಭಟಿಸಬೇಕು. ಅದರಿಂದ ಪರಿಸರ ಮಾಲಿನ್ಯ ಕಡಿಮೆ ಮಾಡಬಹುದು ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
Youtube Video

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by: MAshok Kumar
First published: June 13, 2021, 11:18 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories