ಭ್ರಷ್ಟಾಚಾರ ಪ್ರಕರಣ: ಪಾಕ್​ ಪ್ರಧಾನಿ ನವಾಜ್​ ಶರೀಫ್​ಗೆ 7 ವರ್ಷ ಜೈಲು

ಕಳೆದ ವಾರ ಈ ಕುರಿತು ತೀರ್ಪು ಕಾಯ್ದಿರಿಸಿದ್ದ  ಅಕೌಂಟಬಿಲಿಟಿ ನ್ಯಾ. ಮಹಮ್ಮದ್​ ಆರ್ಶದ್​ ಮಲ್ಲಿಕ್​ ಇಂದು ತೀರ್ಪು ನೀಡಿದ್ದಾರೆ

Seema.R | news18
Updated:December 24, 2018, 4:39 PM IST
ಭ್ರಷ್ಟಾಚಾರ ಪ್ರಕರಣ: ಪಾಕ್​ ಪ್ರಧಾನಿ ನವಾಜ್​ ಶರೀಫ್​ಗೆ 7 ವರ್ಷ ಜೈಲು
ನವಾಜ್​ ಶರೀಫ್​
  • News18
  • Last Updated: December 24, 2018, 4:39 PM IST
  • Share this:
ಇಸ್ಲಾಮಾಬಾದ್​ (ಡಿ.24):  ಆಲ್​ ಆಜಿಜ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ವಿರೋಧಿ ನ್ಯಾಯಾಲಯ ಪಾಕ್​ ಮಾಜಿ ಪ್ರಧಾನಿ ನವಾಜ್​ ಶರೀಫ್​ ಅವರಿಗೆ  ಏಳು ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ. ಇದೇ ವೇಳೆ ಫ್ಲಗ್​ ಶಿಪ್​ ಪ್ರಕರಣದಲ್ಲಿ ಅವರನ್ನು ನಿರ್ದೋಷಿ ಎಂದು ತೀರ್ಮಾನಿಸಿದೆ.

ಫ್ಲಗ್​ ಶಿಪ್​ ಹಾಗೂ ಆಲ್​ ಆಜಿಜ್​ ಪ್ರಕರಣವನ್ನು ಸೋಮವಾರದೊಳಗೆ ಇತ್ಯರ್ಥ ಪಡಿಸಬೇಕೆಂದು ಸುಪ್ರೀಂ ಕೋರ್ಟ್​ ಡೆಡ್​ಲೈನ್​ ನೀಡಿತು.

ಕಳೆದ ವಾರ ಈ ಕುರಿತು ತೀರ್ಪು ಕಾಯ್ದಿರಿಸಿದ್ದ  ಅಕೌಂಟಬಿಲಿಟಿ ನ್ಯಾ. ಮಹಮ್ಮದ್​ ಆರ್ಶದ್​ ಮಲ್ಲಿಕ್​ ಇಂದು ತೀರ್ಪು ನೀಡಿದ್ದಾರೆ.

ತೀರ್ಪಿಗೆ ಮುಂಚೆ ಮಾತನಾಡಿದ ಶರೀಫ್​​ ನನಗೆ ಯಾವುದೇ ಭಯವಿಲ್ಲ. ಇದರಲ್ಲಿ ನನ್ನ ಯಾವುದೇ ತಪ್ಪು ಇಲ್ಲ. ನಾನು ದೇಶಕ್ಕಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದು, ನನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ಕಾರ್ಯನಿರ್ವಹಿಸಿದ್ದೇವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧ ಯಾವುದೇ ಸಾಕ್ಷ್ಯಗಳು ಇಲ್ಲ ಎಂದಿದ್ದರು.

ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದರು ಅವರು, ಈ ಶಿಕ್ಷೆಗೆ ಕಾರಣವಾದ ಆರೋಪಗಳನ್ನು ರಾಜಕೀಯವಾಗಿ ಪ್ರೇರೆಪಿಸಲಾಗಿದೆ ಎಂದಿದ್ದಾರೆ.

ಇದನ್ನು ಓದಿ: 21 ವರ್ಷಗಳ ಬಳಿಕ ಉದ್ಘಾಟನೆಯಾಗಲಿದೆ ದೇಶದ ಅತಿ ಉದ್ದದ ರೈಲು, ರಸ್ತೆ ಮಾರ್ಗದ ಸೇತುವೆ

ಈ ಹಿಂದೆ ಪನಾಮ ಪೇಪರ್​ನಲ್ಲಿ ಶರೀಫ್​ ಅಕ್ರಮ ಹಣಗಳಿಸಿ ಲಂಡನ್​ನಲ್ಲಿ ಐಷಾರಾಮಿ ಬಂಗಲೆ ಮತ್ತು ಆಸ್ತಿ ಮಾಡಿದ್ದಾರೆ ಎಂಬ ಆರೋಪದ ಮೇಲೆ ಇದೇ ನ್ಯಾಯಾಲಯ ಅವರಿಗೆ 10 ವರ್ಷ ಸೆರೆವಾಸ ಶಿಕ್ಷೆ ವಿಧಿಸಿತು.
First published: December 24, 2018, 4:05 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading