ನವದೆಹಲಿ: ಉಕ್ರೇನ್ (Ukrain) ಮೇಲೆ ರಷ್ಯಾ (Russia) ದಾಳಿ ನಡೆಸಿದ್ದಂತೆಯೇ ಮುಂದೊಂದು ದಿನ ಭಾರತದ (India) ಮೇಲೆ ಚೀನಾ (China) ದಾಳಿ ನಡೆಸುವ ಅಪಾಯವಿದೆ ಎಂದು ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಹೇಳಿದ್ದಾರೆ. ದುರ್ಬಲ ಆರ್ಥಿಕತೆ, ದೂರದೃಷ್ಟಿಯಿಲ್ಲದ ಗೊಂದಲಮಯ ದೇಶ, ದ್ವೇಷ ಮತ್ತು ಕೋಪ ಹಾಗೂ ನಮ್ಮ ಪ್ರದೇಶದಲ್ಲಿ ಚೀನೀಯರು (China) ಕುಳಿತಿರುವಂತಹ ಸಂಗತಿಗಳ ನಡುವೆ ಸಂಬಂಧವಿದೆ. ಉಕ್ರೇನ್ ಬೇರೆ ರಾಷ್ಟ್ರಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವುದನ್ನು ಸಹಿಸದ ರಷ್ಯಾ ಉಕ್ರೇನ್ ವಿರುದ್ಧ ದಾಳಿ ನಡೆಸಿತು. ಪಾಶ್ಚಿಮಾತ್ಯ ರಾಷ್ಟ್ರದೊಂದಿಗೆ ಉತ್ತಮ ಸಂಬಂಧ ಹೊಂದಿದ್ದಕ್ಕೆ ದಾಳಿ ಮಾಡಿರುವುದನ್ನು ನೋಡಿದ ನಾವು ಎಚ್ಚರಿಕೆಯಿಂದ ಇರಬೇಕಾಗುತ್ತದೆ ಎಂದಿದ್ದಾರೆ.
"The West can’t take on the Chinese, only India can..." catch the most awaited and unmissable conversation between @RahulGandhi and @ikamalhaasan - their shared love for history, language, culture and most of all India. January 2, 10 am on https://t.co/gqsPY44TPB pic.twitter.com/cpCbbsay9K
— Congress (@INCIndia) January 1, 2023
ಕಮಲ್ ಹಾಸನ್ ನಡೆಸಿದ ಸಂದರ್ಶನದಲ್ಲಿ ರಾಹುಲ್ ಗಾಂಧಿ
ಕಾಲಿವುಡ್ ನಟ ಸೂಪರ್ ಸ್ಟಾರ್ ಕಮಲ್ ಹಾಸನ್ ನಡೆಸಿದ ಸಂದರ್ಶನವೊಂದರಲ್ಲಿ ಮಾತನಾಡಿದ ರಾಹುಲ್ ಗಾಂಧಿ ಅವರು, ಇದು ಭಾರತಕ್ಕೂ ಅನ್ವಯವಾಗುತ್ತದೆ. ಚೀನಿಯರು ನಮಗೆ ಏನು ಹೇಳಲು ಮತ್ತು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬುವುದರ ಬಗ್ಗೆ ಜಾಗರೂಕರಾಗಿರಬೇಕು.
ಭಾರತಕ್ಕೆ ಚೀನೀಯರು ಪರೋಕ್ಷ ಎಚ್ಚರಿಕೆ ನೀಡ್ತಿದ್ದಾರೆ
ಕಳೆದ ಮೂರು ವರ್ಷದಿಂದ ಗಡಿ ಸಂಘರ್ಷದ ಮೂಲಕ ಭಾರತಕ್ಕೆ ಚೀನೀಯರು ಪರೋಕ್ಷ ಎಚ್ಚರಿಕೆ ನೀಡುತ್ತಿದ್ದಾರೆ. ನಿಮ್ಮ ಗಡಿ ಹಾಗೂ ಭೌಗೋಳಿಕ ಸರಹದ್ದು ಬದಲಿಸುತ್ತೇವೆ. ಲಡಾಕ್ಅರುಣಾಚಲ ಪ್ರದೇಶಕ್ಕೆ ನುಗ್ಗಿ ಬರುತ್ತೇವೆ ಎಂದು ಹೆದರಿಸುತ್ತಿದ್ದಾರೆ. ಇದಕ್ಕಾಗಿ ಗಡಿಯಲ್ಲಿ ಚೀನಿ ಸೈನಿಕರು ವೇದಿಕೆ ನಿರ್ಮಿಸಿಕೊಳ್ಳುತ್ತಿದ್ದಾರೆ. ಆದರೂ ಭಾರತ ಸರ್ಕಾರ ಮೌನವಾಗಿದೆ ಎಂದು ಹರಿಹಾಯ್ದರು.
ಎಲ್ಲರೂ ಒಗ್ಗಟ್ಟಿನಿಂದ ಇರಬೇಕು ಆದ್ರೆ ಸರ್ಕಾರ ಲೆಕ್ಕಾಚಾರ ತಪ್ಪಾಗಿದೆ
21ನೇ ಶತಮಾನದಲ್ಲಿಯೂ ಭದ್ರತೆಯು ಮುಖ್ಯ ವಿಚಾರವಾಗಿದೆ. ಎಲ್ಲರೂ ಒಗ್ಗಟ್ಟಿನಿಂದ ಇರಬೇಕು. ಆದರೆ ಈ ಬಗ್ಗೆ ನಮ್ಮ ಸರ್ಕಾರ ತಪ್ಪಾಗಿ ಲೆಕ್ಕಾಚಾರ ಹಾಕಿದೆ ಎಂದು ನಾನು ಭಾವಿಸುತ್ತೇನೆ. ಮೊದಲೆಲ್ಲಾ ಗಡಿಯಲ್ಲಿ ಒಬ್ಬರು ಹೋರಾಡುತ್ತಿದ್ದರು, ಆದರೀಗ ಎಲ್ಲರೂ ಹೋರಾಟ ನಡೆಸಬೇಕಾಗಿದೆ ಎಂದು ಹೇಳಿದ್ದಾರೆ.
‘Hey Ram’, Khadi, Films and how only India, not the West, can take on China!
My conversation with @ikamalhaasan on what shapes Indian politics and culture.https://t.co/RiUNzGdE1k pic.twitter.com/lWUtiTd2xx
— Rahul Gandhi (@RahulGandhi) January 2, 2023
ದೇಶದಲ್ಲಿ ಶಾಂತಿ ಮೂಡಿಸುವುದು ಅಗತ್ಯ
21ನೇ ಶತಮಾನದಲ್ಲಿ ಅತಿ ಹೆಚ್ಚು ಮುಖ್ಯವಾದ ಸಂಗತಿ ಎಂದರೆ, ದೇಶವು ಆಂತರಿಕ ಒಗ್ಗಟ್ಟನ್ನು ಹೊಂದಿರುವುದು. ದೇಶದಲ್ಲಿ ಸೌಹಾರ್ದತೆ ನೆಲೆಸುವ ಅಗತ್ಯವಿದೆ. ಜನರು ಪರಸ್ಪರ ಕಾದಾಟ ನಡೆಸಬಾರದು. ಶಾಂತಿ ಮೂಡಿಸುವುದು ಅಗತ್ಯವಾಗಿದೆ. ಜತೆಗೆ ದೇಶಕ್ಕೂ ಒಂದು ದೃಷ್ಟಿಕೋನ ಬೇಕಿದೆ ಎಂದು ತಿಳಿಸಿದ್ದಾರೆ.
ನಾವು ದಾಳಿಗೆ ಒಳಗಾಗಬಾರದು
ನಾವು ಯುದ್ಧಕ್ಕೆ ಹೋಗದೆ ಇರುವುದು ಮುಖ್ಯವಾದ ಸಂಗತಿ ಅಲ್ಲ, ನಾವು ದಾಳಿಗೆ ಒಳಗಾಗದೇ ಇರುವುದು ಬಹಳ ಮುಖ್ಯ. ದುರ್ಬಲ ಆರ್ಥಿಕತೆ, ದೂರದೃಷ್ಟಿಯಿಲ್ಲದ ಗೊಂದಲಮಯ ದೇಶ, ದ್ವೇಷ ಮತ್ತು ಕೋಪ ಹಾಗೂ ನಮ್ಮ ಪ್ರದೇಶದಲ್ಲಿ ಚೀನೀಯರು ಕುಳಿತಿರುವಂತಹ ಸಂಗತಿಗಳ ನಡುವೆ ಸಂಬಂಧವಿದೆ
ರಾಹುಲ್ ಹೇಳಿಕೆಗೆ ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ರಿಯಾಕ್ಷನ್
ಇನ್ನೂ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಅವರು, ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ವೇಳೆ ಗೊಂದಕ್ಕೊಳಗಾಗಿದ್ದಾರೆ.
ದೇಶಾದ್ಯಂತ ಸಂಚರಿಸೋದ್ರಿಂದ ಭಾರತವನ್ನು ಅರ್ಥಮಾಡಿಕೊಳ್ಳೋಕೆ ಆಗೋಲ್ಲ
ದೇಶಾದ್ಯಂತ ಸಂಚರಿಸುವುದರಿಂದ ಮಾತ್ರ ಭಾರತವನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಮೊದಲು ಭಾರತೀಯತೆನ್ನು ಅರ್ಥ ಮಾಡಿಕೊಳ್ಳಬೇಕು. ಭಾರತದ ಅನ್ವೇಷಣೆಯನ್ನು ನಾಲ್ಕು ತಲೆ ಮಾರುಗಳಿಂದಲೂ (ಗಾಂಧಿ ಕುಟುಂಬ) ನಡೆಸಲಾಗುತ್ತಿದೆ ಎಂದು ಜವಾಹರಲಾಲ್ ನೆಹರು ಅವರ 'ಡಿಸ್ಕವರಿ ಆಫ್ ಇಂಡಿಯಾ' ಬಗ್ಗೆ ಉಲ್ಲೇಖಿಸಿದ್ದಾರೆ.
ಚೀನಾ ಮುಂದೆ ಭಾರತ ಶರಣಾಗಬೇಕು ಅಂತ ರಾಹುಲ್ ಬಯಸ್ತಿದ್ದಾರೆ
ರಾಹುಲ್ ಗಾಂಧಿ ಅವರು ತಮ್ಮ ಪಕ್ಷದ ಸರ್ಕಾರದ ಅವಧಿಯಲ್ಲಿ ನಡೆದಂತೆಯೇ ಚೀನಾದ ಮುಂದೆ ಭಾರತ ಶರಣಾಗಬೇಕು ಎಂದು ರಾಹುಲ್ ಗಾಂಧಿ ಅವರು ಬಯಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ